ನಿರ್ಮಲಾ ಲೆಕ್ಕವೇನು? ಯಾವುದೆಲ್ಲ ಅಗ್ಗ! ಯಾವುದೆಲ್ಲ ತುಟ್ಟಿ?

ನವದೆಹಲಿ :  ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಇಂದು 2022-23 ನೇ ಸಾಲಿನ ಬಜೆಟ್‌ ಮಂಡಿಸುತ್ತಿದ್ದಾರೆ. ನಿರ್ಮಲಾ ಸೀತಾರಾಮನ್‌ ಅವರು ಮಂಡಿಸುತ್ತಿರುವ ನಾಲ್ಕನೇ ಬಜೆಟ್‌ ಇದಾಗಿದ್ದು, ಪಂಚರಾಜ್ಯಗಳ ಚುನಾವಣೆ ನಡುವೆ ಮಂಡನೆಯಾಗುತ್ತಿರುವ ಈ ಬಜೆಟ್‌ ಸಹಜವಾಗಿಯೇ ಎಲ್ಲ ವರ್ಗದ ಜನತೆಯ ಕುತೂಹಲಕ್ಕೆ ಕಾರಣವಾಗಿದೆ.

ಮಹಾಮಾರಿ ಕೊರೊನಾ ಕಳೆದ ಮೂರು ವರ್ಷಗಳಿಂದ ಜನಸಾಮಾನ್ಯರನ್ನು ಆರ್ಥಿಕವಾಗಿ ಹೈರಾಣು ಮಾಡಿದ್ದು, ಇದರ ಮಧ್ಯೆ ಮಂಡನೆಯಾಗುತ್ತಿರುವ ಈ ಬಜೆಟ್‌ ನಲ್ಲಿ ಜನಸಾಮಾನ್ಯರಿಗೆ ಬಿಗ್‌ ರಿಲೀಫ್‌ ಸಿಗಬಹುದು ಎಂದು ಭಾವಿಸಲಾಗಿತ್ತು. ಆದರೆ ಸಾಮಾನ್ಯ ಜನರಿಗೆ ಸಾಕಷ್ಟು ನಿರಾಸೆಯಾಗಿದ್ದು, ಉಳ್ಳವರ ಪರ ಬಜೆಟ್ ಎಂದು ಆರೋಪಿಸಲಾಗುತ್ತಿದೆ.

ಇದನ್ನೂ ಓದಿ : ಕೇಂದ್ರ ಬಜೆಟ್ 2022 ರ ಮುಖ್ಯಾಂಶಗಳು

ಈ ಬಾರಿಯ ಬಜೆಟ್ ಗಾತ್ರ 39.54 ಲಕ್ಷ ಕೋಟಿ ರೂಪಾಯಿ ಆಗಿದೆ. ಈ ಬಾರಿಯ ಬಜೆಟ್​​ನಲ್ಲಿ ಆದಾಯ ತೆರಿಗೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂಬುದು ಇಲ್ಲಿ ಗಮನಾರ್ಹ ಸಂಗತಿಯಾಗಿದೆ.

ಬಜೆಟ್​​ನಲ್ಲಿ ಮಧ್ಯಮ ವರ್ಗಕ್ಕೆ  ಸಿಹಿಗಿಂತ  ಕಹಿ ಸಿಕ್ಕಿದೆ ಜಾಸ್ತಿ. ಪ್ರಮುಖವಾಗಿ ಯಾವೆಲ್ಲಾ ವಸ್ತುಗಳ ಬೆಲೆ ಕಡಿತವಾಗಿದೆ? ಮತ್ಯಾವ ವಸ್ತುಗಳ ಬೆಲೆ ಏರಿಕೆಯಾಗಿದೆ ಎಂಬುದು ಇಲ್ಲಿ ಮುಖ್ಯವಾಗುತ್ತದೆ. ಆ ಪಟ್ಟಿಯನ್ನು ನೋಡುವುದಾದರೆ,

ಯಾವೆಲ್ಲಾ ವಸ್ತುಗಳ ಬೆಲೆ ಇಳಿಕೆ?

ಚಿನ್ನ, ವಜ್ರಾಭರಣಗಳು
ಎಲೆಕ್ಟ್ರಾನಿಕ್ಸ್​ ಉಪಕರಣಗಳು
ಮೊಬೈಲ್​, ಮೊಬೈಲ್​ ಚಾರ್ಜರ್​​ಗಳು
ಕೃಷಿ ಉಪಕರಣಗಳು
ವಿದೇಶಿ ಉತ್ಪನ್ನಗಳು
ಬಟ್ಟೆ, ಚಪ್ಪಲಿ, ಚರ್ಮದ ಉತ್ಪನ್ನಗಳು

ಯಾವುದೆಲ್ಲಾ ತುಟ್ಟಿ?

ಇಂಧನ ಬೆಲೆ ಮತ್ತಷ್ಟು ಏರಿಕೆ ಸಾಧ್ಯತೆ, ಅನ್‌ ಬ್ಲೆಂಡೆಡ್‌ ಇಂಧನಕ್ಕೆ 2 ರೂ. ಹೆಚ್ಚುವರಿ ತೆರಿಗೆ ವಿಧಿಸಲಾಗಿದೆ. ಹಾಗಾಗಿ ಇವುಗಳ ಬೆಲೆ ಏರಿಕೆ ಆಗುವ ಸಂಭವ ಇದೆ.

Donate Janashakthi Media

Leave a Reply

Your email address will not be published. Required fields are marked *