ಕೇರಳ ಸ್ಥಳೀಯ ಸಂಸ್ಥೆ ಚುನಾವಣಾ ಫಲಿತಾಂಶಗಳು: ಅನಿರೀಕ್ಷಿತ ಹಿನ್ನಡೆ, ವಿರೋಧಿಗಳ ಬೆಳವಣಿಗೆ ಅಲ್ಲ!

ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡ ಪ್ರಜಾಸತ್ತಾತ್ಮಕ ರಂಗ (ಎಲ್‌ಡಿಎಫ್) ಅನುಭವಿಸಿದ ಹಿನ್ನಡೆಯ ಬಗ್ಗೆ ರಾಜಕೀಯ ವಿರೋಧಿಗಳು ಕೂಗಾಡಲು ಆರಂಭಿಸಿದ್ದಾರೆ. ಎಲ್‌ಡಿಎಫ್ ನ ರಾಜಕೀಯ ಭವಿಷ್ಯ ಮುಗಿದಿದೆ ಎಂಬ ಅವರ ಹೇಳಿಕೆಯನ್ನು ಅಂಕಿಅಂಶಗಳ ವಿವಿಧ ಅಂಶಗಳೊಂದಿಗೆ ಹೋಲಿಸಬೇಕಾಗಿದೆ. ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶಗಳನ್ನು “ಅನಿರೀಕ್ಷಿತ ಹಿನ್ನಡೆ” ಎಂದು ಸಿಪಿಎಂ ಕೇರಳ ರಾಜ್ಯ ಕಾರ್ಯಕಾರಿ ಸಮಿತಿ ಕರೆದಿದ್ದು, ಈ ಕುರಿತು ಆಳವಾಗಿ ಪರಿಶೀಲನೆ ಮಾಡುವ ಎಲ್‌ಡಿಎಫ್‌, ಮತ್ತಷ್ಟು ಪ್ರಗತಿ ಸಾಧಿಸಲಿದೆ ಎಂದೂ ಹೇಳಿದೆ. 2026ರ ವಿಧಾನಸಭಾ ಚುನಾವಣೆಯಲ್ಲಿ ಎಲ್‌ಡಿಎಫ್ ಸೋಲುತ್ತದೆ ಎಂದು ಹೇಳುತ್ತಿರುವವರಿಗೆ, ಪಕ್ಷವು 2010ರ ಸ್ಥಳೀಯ ಸಂಸ್ಥೆ ಚುನಾವಣಾ ಫಲಿತಾಂಶಗಳನ್ನು ನೆನಪಿಸಿದೆ. 2010ರಲ್ಲಿಇದಕ್ಕಿಂತ ದೊಡ್ಡ ಹಿನ್ನಡೆ ಅನುಭವಿಸಿದ್ದ ಎಲ್‌ಡಿಎಫ್, 2011ರ ವಿಧಾನಸಭಾ ಚುನಾವಣೆಯಲ್ಲಿ ಬಹುತೇಕ ಗೆದ್ದಿತು. ಆದ್ದರಿಂದ, ಕಮ್ಯುನಿಸ್ಟರು ತಮ್ಮದೇ ಆದ ದೌರ್ಬಲ್ಯವನ್ನು ನಿವಾರಿಸಿಕೊಂಡು ಮುಂದುವರಿಯುವ ಸಾಮರ್ಥ್ಯವನ್ನು ಕಡಿಮೆ ಅಂದಾಜು ಮಾಡುವುದು ಸರಿಯಲ್ಲ.

-ಎಂ..ಬೇಬಿ

-ಕನ್ನಡಕ್ಕೆ: ಸಿ ಸಿದ್ದಯ್ಯ

ಕೇರಳದ ಉಬಯಧಾರ್ಮಿಕ ಮೂಲಭೂತವಾದದ ಅಪಾಯ:

ಎಲ್‌ಡಿಎಫ್‌ನ ಹಿನ್ನಡೆಗೆಕೇರಳದ ವಿಶಿಷ್ಟ ಸಾಮಾಜಿಕ ಪರಿಸರಮತ್ತುಧಾರ್ಮಿಕ ಮೂಲಭೂತ ವಾದದ ಅಪಾಯವೂ ಒಂದು ಪ್ರಮುಖ ಕಾರಣವಾಗಿದೆ. ಕೇರಳದ ಜನಸಂಖ್ಯೆಯಲ್ಲಿ ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರು ಗಣನೀಯ ಪ್ರಮಾಣದಲ್ಲಿದ್ದಾರೆ. ಈ ಪರಿಸ್ಥಿತಿ, ಆರ್‌ಎಸ್‌ಎಸ್‌ ನಂತಹ ಬಹುಸಂಖ್ಯಾತ ಧಾರ್ಮಿಕ ಮೂಲಭೂತವಾದಿಗಳಿಗೆ, ಪಾಪ್ಯುಲರ್ ಫ್ರಂಟ್, ಜಮಾ ಅತೆ ಇಸ್ಲಾಮಿಯಂತಹ ಅಲ್ಪಸಂಖ್ಯಾತ ಮೂಲಭೂತವಾದಿ ಸಂಘಟನೆಗಳಿಗೆ ತಮ್ಮ ಚಟುವಟಿಕೆಗಳನ್ನು ಕೈಗೊಳ್ಳಲು ಅವಕಾಶಗಳನ್ನು ಸೃಷ್ಟಿಸಿದೆ. ಆರ್‌ಎಸ್‌ಎಸ್ ಹೇಗೆ ಕಮ್ಯುನಿಸ್ಟ್ ವ್ಯವಸ್ಥೆಯನ್ನು ತನ್ನ ಶತ್ರು ಎಂದು ನೋಡುತ್ತದೆಯೋ, ಅದೇ ರೀತಿ, ಅಲ್ಪಸಂಖ್ಯಾತ ಧಾರ್ಮಿಕ ಸಂಘಟನೆಗಳು ಸಹ “ಕೇಸರಿ ಮತ್ತು ಕೆಂಪು ಬಣ್ಣಕ್ಕೆ ವ್ಯತ್ಯಾಸವಿಲ್ಲ” ಎಂದು ಜಪಿಸುವ ಮೂಲಕ ಅವರು ಕಮ್ಯುನಿಸ್ಟರ ವಿರುದ್ಧ ಕೆಲಸ ಮಾಡುತ್ತಿವೆ.

ಕಾಂಗ್ರೆಸ್‌ ನ ರಾಜಿ ರಾಜಕೀಯ:

ಕೇರಳದ ಅತಿದೊಡ್ಡ ಜಾತ್ಯತೀತ ರಚನೆಯಾಗಿರುವ ಕಾಂಗ್ರೆಸ್, ಎಲ್‌ಡಿಎಫ್ ಅನ್ನು ಸೋಲಿಸುವ ಮೂಲಕ ಅಧಿಕಾರಕ್ಕೆ ಬರಲು ಬಯಸುವ ಕಾಂಗ್ರೆಸ್‌ ನ ರಾಜಕೀಯ ನಿಲುವಿನ ಕಾರಣದಿಂದಾಗಿ,ಇಸ್ಲಾಮಿಕ್ ಮೂಲಭೂತವಾದಿ ಸಂಘಟನೆಗಳ ಜೊತೆ ಮತ್ತುಸಂಘ ಪರಿವಾರದ ಜೊತೆ ರಾಜಿ ಮಾಡಿಕೊಳ್ಳಲು ಕಾಂಗ್ರೆಸ್‌ ಹಿಂಜರಿಯುವುದಿಲ್ಲ.

ಇದನ್ನೂ ಓದಿ: ಬೆಳಗಾವಿ | ಚಳಿಗಾಲದ ಅಧಿವೇಶನದ ಅವಧಿ ಒಂದು ವಾರ ವಿಸ್ತರಣೆಗೆ ಸ್ಪೀಕರ್‌ ಗೆ ಪತ್ರ ಬರೆದ ಆರ್‌.ಅಶೋಕ್‌

ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ನೇತೃತ್ವವಹಿಸಿರುವ ಕಾಂಗ್ರೆಸ್, ಈ ಸ್ಥಳೀಯ ಚುನಾವಣೆಗಳಲ್ಲಿ, ಹಲವು ಸ್ಥಳಗಳಲ್ಲಿ ಬಿಜೆಪಿಯೊಂದಿಗೆ, ನೇರವಾಗಿ ಎಸ್‌ಡಿಪಿಐ ಮತ್ತು ಜಮಾತ್‌-ಎ-ಇಸ್ಲಾಮಿಯಂತಹ ಧಾರ್ಮಿಕ ಸಂಸ್ಥೆಗಳೊಂದಿಗೆ ಮೈತ್ರಿ ಮಾಡಿಕೊಂಡಿತು. ಅಲ್ಪಸಂಖ್ಯಾತ ಧಾರ್ಮಿಕ ಸಂಘಟನೆಗಳ ಪ್ರಚಾರವು ಮುಸ್ಲಿಂ ಜನರಲ್ಲಿ ಗೊಂದಲವನ್ನು ಸೃಷ್ಟಿಸಿತು, ಮತ್ತೊಂದೆಡೆ, ಈ ಅಭಿಯಾನವು ಹಿಂದುತ್ವ ಶಕ್ತಿಗಳಿಗೆ ಮತ್ತಷ್ಟು ಅನುಕೂಲ ನೀಡಿದೆ. ಈ ಎರಡೂ ಧಾರ್ಮಿಕ ಮೂಲಭೂತವಾದಿಗಳ ಆಪಾಯದ ಬಗ್ಗೆ ಮತ್ತು ಎಲ್ಲಾ ರೀತಿಯ ಕೋಮುವಾದದ ವಿರುದ್ಧ ಬಲವಾದ ಅಭಿಯಾನವನ್ನು ಪ್ರಾರಂಭಿಸಬೇಕು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕೂಡ ಎಚ್ಚರಿಸಿದ್ದಾರೆ.

ಸಂಘ ಪರಿವಾರದ ಪಿತೂರಿ :

ಬಿಜೆಪಿ ಮತ್ತು ಅದನ್ನು ಮುನ್ನಡೆಸುವ ಸಂಘ ಪರಿವಾರವು ಕೇರಳದಲ್ಲಿ ಮುಸ್ಲಿಮರ ವಿರುದ್ಧ ಕ್ರಿಶ್ಚಿಯನ್ನರ ಒಂದು ವಿಭಾಗವನ್ನು ಸಜ್ಜುಗೊಳಿಸಲು ಪಿತೂರಿ ನಡೆಸಿದೆ. ಲವ್ ಜಿಹಾದ್ ಎಂಬುದನ್ನು ಕ್ರಿಶ್ಚಿಯನ್-ಇಸ್ಲಾಮಿಕ್ ನಡುವಿನ ಸಂಘರ್ಷವೆಂದು ಬಿಂಬಿಸಲು ಸಂಘ ಪರಿವಾರವು ಪ್ರಯತ್ನಿಸುತ್ತಿದೆ. ಈ ನಡವಳಿಕೆಗಳು ಕೆಲವು ಕ್ರಿಶ್ಚಿಯನ್ ಸಮುದಾಯದ ಬೆಂಬಲವನ್ನು ಪಡೆಯಲು ಬಿಜೆಪಿಗೆ ಸಹಾಯವಾಗಿದೆ. ಬಿಜೆಪಿಯ ಏಕೈಕ ಗುರಿ ಎಲ್‌ಡಿಎಫ್ ಅನ್ನು ಸೋಲಿಸುವುದು. ಅದಕ್ಕಾಗಿ, ಯುಡಿಎಫ್ ಗೆದ್ದರೂ ಪರವಾಗಿಲ್ಲ. ಏಕೆಂದರೆ, ಯುಡಿಎಫ್ ಅನ್ನು ಪ್ರತ್ಯೇಕಿಸುವುದು ಅಥವಾ ಅವರನ್ನು ಖರೀದಿಸುವುದು ಸುಲಭ ಎಂದು ಅವರುಭಾವಿಸುತ್ತಾರೆ.

ಬಿಜೆಪಿಯ ಗೆಲುವಿನ ಚಿತ್ರಣ ಮತ್ತು ವಾಸ್ತವ

ಕೇರಳದಲ್ಲಿ ಬಿಜೆಪಿ ಭಾರಿ ಗೆಲುವು ಸಾಧಿಸಿದೆ ಎಂಬ ಚಿತ್ರಣವನ್ನು ಸೃಷ್ಟಿಸಲಾಗುತ್ತಿದೆ. ತಿರುವನಂತಪುರಂ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರುವುದು ಕಳವಳಕಾರಿ ವಿಷಯ. ಆದಾಗ್ಯೂ, ಒಟ್ಟಾರೆ ಅಂಕಿಅಂಶಗಳು ಬಿಜೆಪಿಯ ಹೇಳಿಕೆಯನ್ನು ಸುಳ್ಳಾಗಿಸುತ್ತದೆ.

ಬಿಜೆಪಿ ಗೆದ್ದ ಸ್ಥಳೀಯ ಸಂಸ್ಥೆಗಳು

  • ಮಹಾನಗರಪಾಲಿಕೆ:‌ 6 ರಲ್ಲಿ 1
  • ಪುರಸಭೆ: 87 ರಲ್ಲಿ 2
  • ಗ್ರಾಮ ಪಂಚಾಯಿತಿಗಳು: 941 ರಲ್ಲಿ 26
  • ಬ್ಲಾಕ್ ಪಂಚಾಯತ್: 152 ರಲ್ಲಿ 0
  • ಜಿಲ್ಲಾ ಪಂಚಾಯತ್: 14 ರಲ್ಲಿ 0

ಅಯ್ಯಪ್ಪನ ಹೆಸರಿನಲ್ಲಿ ಬಲವಾದ ಪ್ರಚಾರದ ಹೊರತಾಗಿಯೂ, ಶಬರಿಮಲೆ ಇರುವ ಪಟ್ಟಣಂತಿಟ್ಟ ಜಿಲ್ಲೆಯ ಪಂದಳಂ ಪುರಸಭೆಯನ್ನು ಎಲ್‌ಡಿಎಫ್ ಗೆದ್ದಿದೆ.

ಮರೆಮಾಚಲ್ಪಟ್ಟಎಲ್‌ ಡಿಎಫ್‌ ಗೆಲುವು :

ವೈಶಿಷ್ಟ್ಯವೆಂದರೆ, ತಿರುವನಂತಪುರಂ ಕಾರ್ಪೊರೇಷನ್ ಅನ್ನು ಬಿಜೆಪಿ ವಶಪಡಿಸಿಕೊಂಡಿದೆ ಎಂಬ ಅಬ್ಬರದ ಪ್ರಚಾರ ನಡೆಯುತ್ತಿರುವಾಗಲೇ, ತಿರುವನಂತಪುರಂ ಜಿಲ್ಲಾ ಪಂಚಾಯಿತಿಯನ್ನು ಎಲ್‌ಡಿಎಫ್ ವಶಪಡಿಸಿಕೊಂಡಿರುವುದು. ಅದೇ ರೀತಿ, 4 ಪುರಸಭೆಗಳು ಮತ್ತು 73 ಪಂಚಾಯತ್ ಸಂಸ್ಥೆಗಳಲ್ಲಿ 36 ಅನ್ನು ಎಲ್‌ಡಿಎಫ್ ಗೆದ್ದಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ತವರು ಜಿಲ್ಲೆ ಕಣ್ಣೂರಿನಲ್ಲಿ ಎಲ್‌ಡಿಎಫ್ ಸೋತಿದೆ ಎಂದು ಕೆಲವರು ಪ್ರಚಾರ ಮಾಡುತ್ತಿದ್ದಾರೆ.

ಆದರೆ, ಎಲ್‌ಡಿಎಫ್ ಕಣ್ಣೂರು ಜಿಲ್ಲಾ ಪಂಚಾಯಿತಿಯನ್ನು ವಶಪಡಿಸಿಕೊಂಡಿದೆ ಮಾತ್ರವಲ್ಲದೆ, ತನ್ನ ಬಲವನ್ನು ಹೆಚ್ಚಿಸಿಕೊಂಡಿದೆ. ಇದಲ್ಲದೆ, 8 ಪುರಸಭೆಗಳಲ್ಲಿ 5 ಮತ್ತು 71 ಗ್ರಾಮ ಪಂಚಾಯತ್‌ ಗಳಲ್ಲಿ 48 ಸ್ಥಾನಗಳನ್ನು ಎಲ್‌ಡಿಎಫ್ ಗೆದ್ದಿದೆ. ಆದ್ದರಿಂದ, ಕಣ್ಣೂರುʼಕೆಂಪುʼ ಕಡೆಗೆ ಇದೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಅದೇ ರೀತಿ, ಪಾಲಕ್ಕಾಡ್ ಜಿಲ್ಲಾ ಪಂಚಾಯತ್ ಅನ್ನು ಎಲ್‌ಡಿಎಫ್ ಗೆದ್ದಿದೆ. ಇಲ್ಲಿ, ಎಲ್‌ಡಿಎಫ್ 13 ಬ್ಲಾಕ್ ಪಂಚಾಯತ್‌ ಗಳಲ್ಲಿ 9ನ್ನು, 88 ಗ್ರಾಮ ಪಂಚಾಯತ್‌ ಗಳಲ್ಲಿ 46 ನ್ನು ಮತ್ತು 6 ಪುರಸಭೆಗಳಲ್ಲಿ ಮೂರು ಸ್ಥಾನಗಳನ್ನು ವಶಪಡಿಸಿಕೊಂಡಿದೆ.

ಎಲ್‌ಡಿಎಫ್‌ನ ಮತಗಳು ಶೇ. 8ರಷ್ಟು ಹೆಚ್ಚಾಗಿದೆ :

2024ರ ಸಂಸತ್ ಚುನಾವಣೆಗೆ ಹೋಲಿಸಿದರೆ, ಎಲ್‌ಡಿಎಫ್‌ನ ಮತಗಳು ಶೇ. 8ರಷ್ಟು ಹೆಚ್ಚಾಗಿದೆ ಎಂದು ವರದಿಗಳು ಸೂಚಿಸುತ್ತವೆ, ಆದರೆ ಯುಡಿಎಫ್ ಶೇ. 2.5ರಷ್ಟು ಮತಗಳನ್ನು ಕಳೆದುಕೊಂಡಿದೆ ಮತ್ತು ಬಿಜೆಪಿ ಸುಮಾರು ಶೇ. 10ರಷ್ಟು ಕಳೆದುಕೊಂಡಿದೆ. ಕಮ್ಯೂನಿಸ್ಟರು ತಮ್ಮ ದೌರ್ಬಲ್ಯಗಳನ್ನು ಸರಿಪಡಿಸಿಕೊಂಡು ಮುಂದುವರಿಯಲು ಸಮರ್ಥರಾಗಿದ್ದಾರೆ ಎಂದು ಕೇರಳದಲ್ಲಿ ಮತ್ತೊಮ್ಮೆ ಸಾಬೀತುಪಡಿಸುವುದು ಖಚಿತ. ಎಲ್‌ಡಿಎಫ್‌ನ ಮತ ಹಂಚಿಕೆ ಶೇ. 8ರಷ್ಟು ಹೆಚ್ಚಾಗಿದೆಎಂದೂ, ಯುಡಿಎಫ್ ಶೇ.2.5ರಷ್ಟು ಮತಗಳನ್ನು ಕಳೆದುಕೊಂಡಿದೆ ಮತ್ತು ಬಿಜೆಪಿ ಶೇ.10 ರಷ್ಟು ಮತಗಳನ್ನು ಕಳೆದುಕೊಂಡಿದೆ ಎಂದು ವರದಿಗಳು ಸೂಚಿಸುತ್ತವೆ. ಕಮ್ಯುನಿಸ್ಟರು ತಮ್ಮ ದೌರ್ಬಲ್ಯಗಳನ್ನು ಸರಿಪಡಿಸಿಕೊಂಡು ಮುನ್ನಡೆಯಲು ಸಮರ್ಥರು ಎಂಬುದನ್ನು ಕೇರಳದಲ್ಲಿ ಮತ್ತೊಮ್ಮೆ ಸಾಬೀತುಪಡಿಸುವುದು ಖಚಿತ.

ಇದನ್ನೂ ನೋಡಿ: ಏನಿದು ದ್ವೇಷ ಅಪರಾಧಗಳ ಮಸೂದೆ? ದ್ವೇಷಾಪರಾಧಕ್ಕೆ ಶಿಕ್ಷೆಯೇನು? Janashakthi Media

Donate Janashakthi Media

Leave a Reply

Your email address will not be published. Required fields are marked *