ವಿಶ್ವಸಂಸ್ಥೆ : ಕೋವಿಡ್-19 ಲಸಿಕೆಯನ್ನು ಕೆಲವು ದೇಶಗಳು ಸಾಕಷ್ಟು ಸಂಗ್ರಹಣೆಗೆ ಮುಂದಾಗಿರುವುದು ಹಾಗೂ ರಾಷ್ಟ್ರೀಯತೆಯೆಂದು ಘೋಷಿರುವುದನ್ನು ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆಂಟೊನಿಯೊ ಗುಟೆರಸ್ ಖಂಡಿಸಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆ ಕೋವಿಡ್-19ನ್ನು ಒಂದು ಅತಿದೊಡ್ಡ ಸಾಂಕ್ರಾಮಿಕ ರೋಗವೆಂದು ಘೋಷಿಸಿ ಒಂದು ವರ್ಷವಾಯಿತು. ಇಡೀ ವಿಶ್ವಕ್ಕೆ ಹರಡಿರುವ ಸಾಂಕ್ರಾಮಿಕ ರೋಗವು ವಿಶ್ವ ಜನಸಮೂಹಕ್ಕೆ ಗಂಭೀರ ಪರಿಣಾಮ ಬೀರಿದೆ. ಹೀಗಿದ್ದೂ ಹಲವು ದೇಶಗಳು ಲಸಿಕೆಗಳನ್ನು ದೊಡ್ಡಪ್ರಮಾಣದಲ್ಲಿ ಅಕ್ರಮ ಸಂಗ್ರಹಣೆಯಲ್ಲಿ ತೊಡಗಿವೆ ಎಂದು ಹೇಳಿದರು.
ಲಸಿಕೆ ರಾಷ್ಟ್ರೀಕತೆ ಮತ್ತು ಅಧಿಕ ಸಂಗ್ರಹಣೆಯಿಂದಾಗಿ ವಿಶ್ವದ ಎಲ್ಲಾ ಜನರಿಗೆ ಲಭ್ಯವಾಗದಂತೆ ಮಾಡುವುದು, ಲಸಿಕೆಗಾಗಿ ತಯಾರಿಕರೊಂದಿಗೆ ಒಪ್ಪಂದಗಳನ್ನು ಏರ್ಪಡಿಸುವುದನ್ನು ಸಹ ಟೀಕಿಸಿದರು.ʻʻಎಲ್ಲರಿಗೂ ಬೇಕಾಗುವಷ್ಟು ಲಸಿಕೆಗಳನ್ನು ತಯಾರಿಸಲು ಮತ್ತು ವಿತರಿಸಲು ಇಡೀ ಜಗತ್ತು ಒಂದಾಗಬೇಕಿದೆ. ಲಸಿಕೆಯ ಉತ್ಪಾದನೆಯನ್ನು ದ್ವಿಗುಣಗೊಳಿಸಲು ಈಗಿನಿಂದಲೇ ಕಾರ್ಯಪ್ರವೃತ್ತರಾಗಿʼʼ ಅವರು ಕರೆ ನೀಡಿದರು.
ಇಂದಿಗೂ ವಿಶ್ವದಲ್ಲಿ ಹಲವು ದೇಶಗಳಲ್ಲಿ ಮೊದಲ ಹಂತದ ವ್ಯಾಕ್ಸಿನೇಷನ್ ಸಹ ಬಹುಸಂಖ್ಯಾತ ಜನತೆ ಸ್ವೀಕರಿಸಲು ಸಾಧ್ಯವಾಗಿಲ್ಲ. ಜಾಗತಿಕವಾಗಿ ಆರ್ಥಿಕತೆ ಬೆಳವಣಿಗೆಗೆ ಕೋವಿಡ್ ಸಾಂಕ್ರಾಮಿಕ ರೋಗವನ್ನು ಎದುರಿಸುವ ಗುರಿ ನಮ್ಮ ಮುಂದಿರುವ ಸವಾಲು. ಇಡೀ ಸಮಾಜವೇ ಲಾಕ್ ಮಾಡಿರುವ ವೈರಸನ್ನೇ ಲಾಕ್ ಮಾಡಲು ಜಗತ್ತು ಸಹಕರಿಸಬೇಕೆಂದು ಕರೆ ನೀಡಿದರು.
ಜನಶಕ್ತಿ ಮೀಡಿಯಾ ವಾಟ್ಸಪ್ ಸೇರಿಕೊಳ್ಳಲು ಈ ಲಿಂಕ್ ಕ್ಲಿಕ್ ಮಾಡಿ
ಸಾಂಕ್ರಾಮಿಕತೆಯಿಂದಾಗಿ ಅನೇಕ ಜೀವಿಗಳು ಕಳೆದುಹೋಗಿವೆ. ಇಂದಿಗೂ ದುರ್ಬಲರು ಹೆಚ್ಚು ಬಳಲುತ್ತಿದ್ದಾರೆ. ಹಿಂದುಳಿದ ಜನತೆ ಮತ್ತಷ್ಟು ಹಿಂದೆ ಉಳಿದಿದ್ದಾರೆ. ಸುಮಾರು 117 ದಶಲಕ್ಷ ಜನರಿಗೆ ಕೊರೊನಾ ಸೋಂಕು ಹರಡಿದಿರುವು ದೃಢಪಟ್ಟಿದೆ. 2.6 ದಶಲಕ್ಷದಷ್ಟು ಜನತೆ ಸಾವನ್ನಪ್ಪಿದ್ದಾರೆ.
ಜಾಗತೀಕವಾಗಿ ಕೊರೊನಾ ಪ್ರಕರಣದ ನಂತರ ಮಹಿಳೆಯರು, ಪುರುಷರು, ಯುವಜನರು ಎಲ್ಲೆಡೆ ಕೆಲಸ ಮಾಡಲು ಮತ್ತು ಕಲಿಯಲು, ಹೊಸತನದೊಂದಿಗೆ ಬದಕಲು ಹೊಂದಿಕೊಂಡಿರುವುದಕ್ಕೆ ಪ್ರಶಂಸಿದರು.
ವಿಶ್ವದ ಎಲ್ಲಾ ಜನತೆಗೆ ಕೈಗೆಟುಕುವ ದರದಲ್ಲಿ ಲಸಿಕೆ ಸಿಗುವಂತಾಗಬೇಕು ಮತ್ತು ಆರ್ಥಿಕತೆ ಚೇತರಿಕೆಯ ಬಗ್ಗೆ ವಿಶ್ವಸಂಸ್ಥೆಯು ಒತ್ತಡ ಹೇರುತ್ತಿದೆ ಎಂದು ಹೇಳಿದರು.
ಇಡೀ ವಿಶ್ವದಲ್ಲಿ ಕೋವಿಡ್-19ರ ವಿರುದ್ಧ ಆರೋಗ್ಯ ಕಾರ್ಯಕರ್ತರು ಹಾಗೂ ಕಾರ್ಮಿಕರಿಗೆ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೊನಿಯೊ ಗುಟೆರಸ್ ಗೌರವ ಸಲ್ಲಿಸಿದರು.ವಿಶ್ವದ ಜನತೆ ರಕ್ಷಣೆಗೆ ಮತ್ತು ಸುರಕ್ಷತೆಗಾಗಿ ಕೋವಿಡ್ ಲಸಿಕಾ ಅಭಿಯಾನ ಹಾಗೂ ಜಾಗೃತಿಯಲ್ಲಿ ತೊಡಗಿರುವ ಹೆಚ್ಚಿನ ಶ್ರಮವಹಿಸಿದ ವಿಜ್ಞಾನಿಗಳು, ವೈದ್ಯರುಗಳು ಹಾಗೂ ಸುರಕ್ಷತಾ ವಿಭಾಗದ ಕಾರ್ಯಕರ್ತರಿಗೆ ಅಭಿನಂದನೆಯನ್ನು ಸಲ್ಲಿಸಿದರು.
ಇದನ್ನು ಓದಿ : ಕೋವಿಡ್-19 ಲಸಿಕೆಯ ಸುತ್ತ ಪ್ರಶ್ನೆಗಳ ಹುತ್ತ ಏಕೆ? ಏನು? ಎಷ್ಟು? ಯಾವಾಗ? ಹೇಗೆ? ಭಾಗ-1 ದೇಹ ರಕ್ಷಣಾ ವ್ಯೂಹ ಮತ್ತು ಲಸಿಕೆಯ ವಿಜ್ಞಾನ