ಫ್ಯಾಸಿಸಂನ್ನು ಹಿಂದುತ್ವಕ್ಕೆ ಹೋಲಿಕೆ ಮಾಡಿದ್ದ ಪ್ರಶ್ನೆ: ಶಾರದಾ ವಿವಿಯ ಉಪನ್ಯಾಸಕ ಅಮಾನತ್ತು

ನವದೆಹಲಿ: ಶಾರದ ವಿಶ್ವವಿದ್ಯಾಲಯದಲ್ಲಿ ನೆನ್ನೆ (ಮೇ 09) ಪರೀಕ್ಷೆಯಲ್ಲಿ ನೀಡಿದ್ದ “ಆಕ್ಷೇಪಾರ್ಹ” ಪ್ರಶ್ನೆಯಾದ ಫ್ಯಾಸಿಸಂ ಮತ್ತು ಹಿಂದುತ್ವ ಎರೆಡರಲ್ಲಿರುವ ಸಾಮ್ಯತೆ ಕುರಿತು ಪ್ರಶ್ನಿಸಿದ್ದನ್ನು ವಿಶ್ವವಿದ್ಯಾಲಯ ಧನಸಹಾಯ ಆಯೋಗ(ಯುಜಿಸಿ) ವಿವರಣೆ ನೀಡುವಂತೆ ತಿಳಿಸಿದೆ.

ಉನ್ನತ ಶಿಕ್ಷಣ ನಿಯಂತ್ರಕ ಗ್ರೇಟರ್ ನೋಯ್ಡಾ ಮೂಲದ ಖಾಸಗಿ ವಿಶ್ವವಿದ್ಯಾಲಯ ಮುಂದೆಂದು ಈ ರೀತಿಯ ಪ್ರಶ್ನೆಗಳನ್ನು ಕೇಳಬಾರದೆಂದು ಇದಕ್ಕಾಗಿ ಸರಿಯಾದ ಕ್ರಮಕೈಗೊಳ್ಳಬೇಕೇಂದು ಎಚ್ಚರಿಸಿದೆ.

“ವಿಶ್ವವಿದ್ಯಾಲಯದ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ಈ ಪ್ರಶ್ನೆಯನ್ನು ಕುರಿತು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದೊಂದು ಅವಶ್ಯಕತೆ ಇಲ್ಲದ ಪ್ರಶ್ನೆ, ದೇಶದ ಹುಮ್ಮಸ್ಸು ಹಾಗೂ ನೈತಿಕತೆಯ ವಿರುದದ್ಧವಾಗಿದೆಯೆಂದು ಹೇಳಬೇಕಾಗಿಲ್ಲ. ಇದು ಒಳಗೊಳ್ಳುವಿಕೆಗೆ ಮತ್ತು ಏಕರೂಪತೆಗಾಗಿ ಇಂತಹ ಪ್ರಶ್ನೆಗಳನ್ನು ಕೇಳಲಾಗಿಲ್ಲ” ಎಂದು ಶಾರದಾ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿದ ಸಮಯದಲ್ಲಿ ತಿಳಿದುಬಂದಿದೆಯೆಂದು ಯುಜಿಸಿ ತಿಳಿಸಿದೆ.

“ಹಿಂದುತ್ವ ಮತ್ತು ಫ್ಯಾಸಿಸಂ” ಕುರಿತು ಬಿ.ಎ. ಪ್ರಥಮ ವರ್ಷದ ರಾಜ್ಯಶಾಸ್ತ್ರ ಪ್ರಶ್ನೆಪತ್ರಿಕೆಯಲ್ಲಿ ಪ್ರಶ್ನೆಯನ್ನು ಕೇಳಲಾಗಿದೆ. ʻʻಫ್ಯಾಸಿಸಂ/ನಾಜಿಸಂ ಮತ್ತು ಹಿಂದೂ ಬಲಪಂಥೀಯ ನಡುವೆ ಇರುವ ಸಾಮ್ಯತೆಯ ಬಗ್ಗೆ ಏನು ಕಂಡುಕೊಂಡಿದ್ದೀರಾ? – ನಿಮ್ಮ ವಾದಗಳೊಂದಿಗೆ ವಿವರಿಸಿ” ಎಂದು ಕೇಳಲಾಗಿತ್ತು. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾದ ನಂತರ ವಿಶ್ವವಿದ್ಯಾಲಯದ ಮೂವರು ಸದಸ್ಯರನ್ನು ನೇಮಿಸಿ ಪ್ರಶ್ನೆಗಳಲ್ಲಿರುವ ಪಕ್ಷಪಾತದ ಸಾಧ್ಯತೆಯನ್ನು ಪರಿಶೀಲಿಸಲು ಸೂಚಿಸಲಾಗಿದೆ.

ವಿಶ್ವವಿದ್ಯಾನಿಲಯವು ರಚಿಸಿರುವ ತ್ರಿಸದಸ್ಯ ಸಮಿತಿಯು ಸಭೆ ಸೇರಿ, ಸಮಸ್ಯೆಗಳನ್ನು ಆಲಿಸಿದ ನಂತರ ಸಂಬಂಧಪಟ್ಟ ಅಧ್ಯಾಪಕ ವಕಾಸ್ ಫಾರೂಕ್ ಕುಟ್ಟಾಯ್ ಅವರಿಗೆ ಶೋ-ಕಾಸ್ ನೋಟಿಸ್ ನೀಡಿ, ಕೆಲಸದಿಂದ ಅಮಾನತುಗೊಳಿಸಲಾಗಿದೆ.

ಮೇ 07ರಂದು ನೀಡಿದ ಹೇಳಿಕೆಯಲ್ಲಿ, ಸಮಿತಿಯು ಪ್ರಶ್ನೆಯನ್ನು ಆಕ್ಷೇಪಾರ್ಹವೆಂದು ಕಂಡುಹಿಡಿದಿದೆ ಮತ್ತು ಪ್ರಶ್ನೆಪತ್ರಿಕೆಯಲ್ಲಿ ಆ ಪ್ರಶ್ನೆಯನ್ನು ಮೌಲ್ಯಮಾಪಕರು ನಿರ್ಲಕ್ಷಿಸಬಹುದು ಎಂದು ಶಾರದಾ ವಿಶ್ವವಿದ್ಯಾಲಯವು ಹೇಳಿಕೆ ನೀಡಿದೆ. ಪ್ರಶ್ನೆ ಪತ್ರಿಕೆಯನ್ನು ಸಿದ್ಧಪಡಿಸಿದ ಅಧ್ಯಾಪಕರಿಗೆ ಕಾರಣ ಕೇಳಿ ವಿವರಣೆ ನೀಡುವಂತೆ ಎಂದು ಪತ್ರ ಬರೆದಿದೆ.

 

ಇದನ್ನೂ ಓದಿ :ಟಿಪ್ಪುವಿನ ರಾಕೆಟ್ ತಂತ್ರಜ್ಞಾನ, ಶೃಂಗೇರಿ ಮಠಕ್ಕೆ ದೇಣಿಗೆ, ರೇಷ್ಮೆ ವ್ಯವಸಾಯ ಪಾಠಾಂಶ ಕೈಬಿಟ್ಟ ಚಕ್ರತೀರ್ಥ ಸಮಿತಿ

Donate Janashakthi Media

Leave a Reply

Your email address will not be published. Required fields are marked *