ಲೋಪಗಳನ್ನು ಸರಿಪಡಿಸುವುದರ ಜತೆಗೆ ಐಐಟಿ, ಐಐಎಂ ಹಾಗೂ ಏಮ್ಸ್ಗಳಿಗೂ ವಿಸ್ತರಿಸಬೇಕು
ಕಾಲೇಜು ಕ್ಯಾಂಪಸ್ಗಳಲ್ಲಿ ಜಾತಿ ಆಧಾರಿತ ತಾರತಮ್ಯ ತಡೆಯಲು ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ರೂಪಿಸಿರುವ ಹೊಸ ನಿಯಮ “ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಉತ್ತೇಜನೆ ನಿಯಮಗಳು, 2026” ರರಲ್ಲಿನ ಲೋಪಗಳನ್ನು ಸರಿಪಡಿಸುವುದರ ಜತೆಗೆ ಐಐಟಿ, ಐಐಎಂ ಹಾಗೂ ಏಮ್ಸ್ಗಳಿಗೂ ವಿಸ್ತರಿಸಬೇಕು. ಯುಜಿಸಿ
ವಿಜಯಕುಮಾರ ಟಿ.ಎಸ್
ವಿಶ್ವವಿದ್ಯಾನಿಲಯ ಅನುದಾನ ಆಯೋಗ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಉತ್ತೇಜನೆ) ನಿಯಮಗಳು, 2026 (Promotion of Equity in Higher Education Institutions Regulations, 2026) ಇದರಅಧಿಸೂಚನೆಯನ್ನುಜನವರಿ 13, 2026 ರಂದು ಹೊರಡಿಸಲಾಯ್ತು.ರೋಹಿತ್ ವೇಮುಲಾ ಹಾಗೂ ಪಾಯಲ್ ಸಲೀಂ ತದ್ವಿ ಅವರ ಸಾಂಸ್ಥಿಕ (ವ್ಯವಸ್ಥಿತ ಕೊಲೆ) ಹತ್ಯೆ ಹಾಗೂ ವಿಶ್ವವಿದ್ಯಾಲಯಗಳಲ್ಲಿನ ಜಾತಿ ತಾರತಮ್ಯವನ್ನು ಪರಿಹರಿಸಲು ಸರ್ವೋಚ್ಚ ನ್ಯಾಯಾಲಯದಲ್ಲಿ ನ್ಯಾಯಾಂಗ ಅರ್ಜಿಗಳನ್ನು ಸಲ್ಲಿಸಲಾಯಿತು. ಯುಜಿಸಿ
ಇದಕ್ಕೆ ಸಂಬಂದಿಸಿದಂತೆ ಸುಪ್ರೀಂ ಕೋರ್ಟ್ ಉನ್ನತ ಶಿಕ್ಷಣ ಸಂಸ್ಥೆ ಹಾಗೂ ವಿಶ್ವ ವಿದ್ಯಾಲಯಗಳಲ್ಲಿ ಎಲ್ಲರೂ ಪಾಲಿಸಬೇಕಾದ ಕಡ್ಡಾಯ ನಿಯಮಗಳನ್ನು, ಕಾರ್ಯಸೂಚಿಗಳನ್ನು ರಚಿಸುವಂತೆ ಯುಜಿಸಿ (UGC) ಗೆಸೂಚಿಸಿತು. ಈ ಹಿನ್ನೆಲೆಯಲ್ಲಿಯುಜಿಸಿ ಈ ಹೊಸನಿಯಮಕ್ಕೆಸಂಬಂಧಿಸಿದಅಧಿಸೂಚನೆಹೊರಡಿಸಿತು.
ಇದನ್ನೂ ಓದಿ: ಧಾರವಾಡ | ಪೀಠಿಕೆ ಪಠಣ ಸಾಕಾಗದು, ಸಂವಿಧಾನ ಪಾಲನೆಯೇ ಆಡಳಿತದ ಕರ್ತವ್ಯ
ಹೊಸ ನಿಯಮಗಳಲ್ಲಿನ ಲೋಪಗಳನ್ನು ಸರಿಪಡಿಸಬೇಕು
ಕಾಲೇಜು ಕ್ಯಾಂಪಸ್ಗಳಲ್ಲಿ ಜಾತಿ ಆಧಾರಿತ ತಾರತಮ್ಯ ತಡೆಯಲು ವಿಶ್ವ ವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ರೂಪಿಸಿರುವ ಹೊಸ ನಿಯಮಗಳಲ್ಲಿನ ಲೋಪಗಳನ್ನು ಸರಿಪಡಿಸುವುದರ ಜತೆಗೆ ಐಐಟಿ, ಐಐಎಂ ಹಾಗೂ ಏಮ್ಸ್ಗಳಿಗೂ ವಿಸ್ತರಿಸಬೇಕುಎಂದುಭಾರತವಿದ್ಯಾರ್ಥಿಫೆಡರೇಶನ್ (ಎಸ್ ಎಫ್ ಐ) ಒತ್ತಾಯಿಸಿದೆ. ಯುಜಿಸಿ
ಅಲ್ಲದೇ, ವಿ.ವಿಗಳಲ್ಲಿ ಸಮಾನತೆ ಸಮಿತಿಗಳನ್ನು ರಚಿಸುವ ನಿರ್ಧಾರವನ್ನು ಸಂಸ್ಥೆಯ ಮುಖ್ಯಸ್ಥರ ಸುಪರ್ದಿಗೆ ಮಾತ್ರ ವಹಿಸದೆ, ಪ್ರಜಾಪ್ರಭುತ್ವ ಪ್ರಕ್ರಿಯೆಗಳ ಮೂಲಕ ನಿರ್ಧಾರ ಕೈಗೊಳ್ಳಬೇಕು. ನಿಯಮಗಳಲ್ಲಿರುವ ಗಂಭೀರ ಲೋಪಗಳನ್ನು ಯುಜಿಸಿ ತಕ್ಷಣವೇ ಸರಿಪಡಿಸಬೇಕು. ವಿಶೇಷವಾಗಿ ಸಮಾನತೆ ಸಮಿತಿ ರಚನೆಗೆ ಸಂಬಂಧಿಸಿದ ನಿರ್ಧಾರವನ್ನು ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ವಿದ್ಯಾರ್ಥಿ ಪ್ರತಿನಿಧಿಗಳು, ಅಧ್ಯಾಪಕರು ಹಾಗೂ ಬೋಧಕೇತರ ಸಿಬ್ಬಂದಿಗೆ ವಹಿಸಬೇಕು. ಉನ್ನತ ಶಿಕ್ಷಣ ಸಂಸ್ಥೆಯ ಆಡಳಿತದಿಂದ ಸ್ವತಂತ್ರವಾದ, ಬಹುಪಾಲುಎಸ್ ಸಿ/ಎಸ್ ಟಿ/ ಒಬಿಸಿ ಪ್ರಾತಿನಿಧ್ಯವನ್ನು ಹೊಂದಿರುವ ಬಾಹ್ಯ, ಶಾಸನಬದ್ಧ ಸಮಿತಿಯಾಗಬೇಕು.
ಜತೆಗೆ ಒಂಬುಡ್ಸ್ಮನ್ ನೇಮಕದ ಅಧಿಕಾರವನ್ನು ಯುಜಿಸಿ ತಾನೇ ಉಳಿಸಿಕೊಂಡಿದೆ. ಆದರೆ, ರಾಜ್ಯ ಶಾಸಕಾಂಗಗಳು ರೂಪಿಸಿರುವ ಕಾಯ್ದೆಗಳ ಅಡಿಯಲ್ಲಿ ಗಣನೀಯ ವಿಶ್ವ ವಿದ್ಯಾಲಯಗಳನ್ನು ಸ್ಥಾಪಿಸಲಾಗಿದೆ ಎಂಬ ಅಂಶವನ್ನು ಪರಿಗಣಿಸಿ, ಈ ಅಧಿಕಾರವನ್ನು ಆಯಾ ರಾಜ್ಯ ಸರ್ಕಾರಗಳಿಗೆ ವಹಿಸಬೇಕುಎಂದುಎಸ್ ಎಫ್ ಐ ಹೇಳಿದೆ.
ಪ್ರಕರಣಗಳ ಹಿನ್ನಲೆ:
ನನ್ನ ಹುಟ್ಟೇ ನನ್ನ ಮಾರಕ ಅಪಘಾತ – ರೋಹಿತ್ ವೇಮುಲ್ಲಾ
ರೋಹಿತ್ ವೇಮುಲಾ ಅವರು ಹೈದ್ರಾಬಾದ್ ಸೆಂಟ್ರಲ್ ವಿಶ್ವ ವಿದ್ಯಾಲಯದಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿದ್ದು, ಅಂಬೇಡ್ಕರ್ ವಿದ್ಯಾರ್ಥಿ ಸಂಘದ ಸದಸ್ಯರಾಗಿದ್ದರು. ಭಾರತದ ಆಡಳಿತಾರೂಢ ಭಾರತೀಯ ಜನತಾ ಪಕ್ಷ (ಬಿಜೆಪಿ)ದ ವಿದ್ಯಾರ್ಥಿ ವಿಭಾಗವಾದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಸದಸ್ಯರ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪವನ್ನು ರೋಹಿತ್ ವೇಮುಲಾ ಜೊತೆ ನಾಲ್ಕು ವಿದ್ಯಾರ್ಥಿಗಳ ಮೇಲೆ ಮಾಡಿದರು.
ರೋಹಿತ್ ವೇಮುಲಾ ಸೇರಿದಂತೆ ಅವರೆಲ್ಲರೂ ಆರೋಪವನ್ನು ನಿರಾಕರಿಸಿದರು. ಆಗಸ್ಟ್ 17, 2015 ರಂದು, ಬಿಜೆಪಿ ಸಂಸದ ಮತ್ತು ಕೇಂದ್ರ ಸಚಿವ ಬಂಡಾರು ದತ್ತಾತ್ರೇಯ ಅವರು ಮಾನವ ಸಂಪನ್ಮೂಲ ಸಚಿವರಿಗೆ ಪತ್ರ ಬರೆದು, “ಹೈದರಾಬಾದ್ ವಿಶ್ವವಿದ್ಯಾಲಯವು ಇತ್ತೀಚಿನ ದಿನಗಳಲ್ಲಿ ಜಾತಿವಾದಿ, ಉಗ್ರಗಾಮಿ ಮತ್ತು ರಾಷ್ಟ್ರವಿರೋಧಿ ರಾಜಕೀಯದ ತಾಣವಾಗಿದೆ” ಎಂದು ಆರೋಪಿಸಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು .

ರೋಹಿತ್ ವೇಮುಲ್ಲಾಗೆ ನೀಡುತ್ತಿದ್ದ 25,000 ರೂ ಫೆಲೋಶಿಪ್ ನೀಡುವುದನ್ನು ನಿಲ್ಲಿಸಲಾಯಿತು ಹಾಗೂ ಐದು ವಿದ್ಯಾರ್ಥಿಗಳನ್ನು ವಿದ್ಯಾರ್ಥಿನಿಲಯದಿಂದ ಹೊರಹಾಕಲಾಯಿತು ನಂತರ ಜಾತಿ ತಾರತಮ್ಯ ಹಾಗೂ ಕಿರುಕುಳಕ್ಕೆ ಬೆಸತ್ತು 17 ಜನವರಿ 2016 ರಂದು ರೋಹಿತ್ ವೇಮುಲ್ಲಾ ಆತ್ಮಹತ್ಯೆ ಮಾಡಿಕೊಂಡರು. ದೇಶಾದ್ಯಂತ ವಿದ್ಯಾರ್ಥಿಗಳ ಪ್ರತಿಭಟನೆಗಳು ನಡೆದು ಇದನ್ನು ಸಾಂಸ್ಥಿಕ ಕೊಲೆ ಎಂದು ವ್ಯಾಪಕ ಆಕ್ರೋಶ ವ್ಯಕ್ತಪಡಿಸಲಾಯಿತು.
ಮಹಾರಾಷ್ಟ್ರದ ಪಾಯಲ್ ಸಲೀಂ ತದ್ವಿ ಅವರು 26 ವರ್ಷದ ಬಿವೈಎಲ್ ನಾಯರ್ ಆಸ್ಪತ್ರೆಯಲ್ಲಿ ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆಯುತ್ತಿರುವ ಎರಡನೇ ವರ್ಷದ ವಿದ್ಯಾರ್ಥಿಯಾಗಿದ್ದರು. ಬಿವೈಎಲ್ ನಾಯರ್ ಆಸ್ಪತ್ರೆಯಲ್ಲಿ ತನ್ನ ಮೂವರು ಹಿರಿಯ ವಿದ್ಯಾರ್ಥಿಗಳಿಂದ ಕಿರುಕುಳ ಅನುಭವಿಸಿದ ನಂತರ ಮೇ 22, 2019 ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು.
ಸಮಾನತೆಯನ್ನು ಉತ್ತೇಜಸುವ ನಿಯಮದ ಉದ್ದೇಶ ಹಾಗೂ ಕಾರ್ಯವಿಧಾನ
ಉದ್ದೇಶ: ಧರ್ಮ, ಜನಾಂಗ, ಲಿಂಗ, ಜನ್ಮಸ್ಥಳ, ಜಾತಿ ಅಥವಾ ಅಂಗವೈಕಲ್ಯದ ಆಧಾರದ ಮೇಲೆ ಮಾತ್ರ ತಾರತಮ್ಯವನ್ನು ನಿರ್ಮೂಲನೆ ಮಾಡುವುದು.ವಿಶೇಷವಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸದಸ್ಯರು, ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳು (OBC) ಆರ್ಥಿಕವಾಗಿ ದುರ್ಬಲ ವರ್ಗಗಳು (EWS) ಅಂಗವಿಕಲ ವ್ಯಕ್ತಿಗಳು (PWD) ಉನ್ನತ ಶಿಕ್ಷಣ ಸಂಸ್ಥೆಯಲ್ಲಿ ಸಂಪೂರ್ಣ ಸಮಾನತೆ ಉತ್ತೇಜಿಸುವುದು.
ಸಮಾನ ಅವಕಾಶ ಕೇಂದ್ರ (EOC)
ಉನ್ನತ ಶಿಕ್ಷಣ ಸಂಸ್ಥೆಯು ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಹಾಗೂ ಇತರೆ ವಿಷಯಗಳಿಗೆ ಸಂಬಂದಿಸಿದಂತೆ ಮಾರ್ಗದರ್ಶನ ಹಾಗೂ ಸಮಾಲೋಚನೆಯನ್ನು ನಡೆಸಲು ಕ್ಯಾಂಪಸ್ ನೊಳಗೆ ವೈವಿಧ್ಯತೆಯನ್ನು ಹೆಚ್ಚಿಸಲು ಸಮಾನ ಅವಕಾಶ ಕೇಂದ್ರ ಸ್ಥಾಪಿಸಬೇಕು. ಸಮಾನ ಅವಕಾಶ ಕೇಂದ್ರವು, ಕೇಂದ್ರದ ಕಾರ್ಯನಿರ್ವಹಣೆಯನ್ನು ನಿರ್ವಹಿಸಲು ಮತ್ತು ತಾರತಮ್ಯದ ದೂರುಗಳನ್ನು ವಿಚಾರಣೆ ಮಾಡಲು ಸಂಸ್ಥೆಯ ಮುಖ್ಯಸ್ಥರು ಸಮಾನತಾ ಸಮಿತಿಯನ್ನು ರಚಿಸಬೇಕು
ಸಮಾನತೆಯ ಸಮಿತಿ
ಸಂಸ್ಥೆಯ ಮುಖ್ಯಸ್ಥರು ಸಮಿತಿಯ ಅಧ್ಯಕ್ಷರಾಗಿರುತ್ತಾರೆ.ಉಳಿದಂತೆ ಮೂವರು ಹಿರಿಯ ಪ್ರಧ್ಯಾಪಕರು, ಶಿಕ್ಷಣ ಸಂಸ್ಥೆಯ ಒಬ್ಬರು ಸಿಬ್ಬಂದಿ, ಇಬ್ಬರು ನಾಗರೀಕ ಸಮಾಜದ ಪ್ರತಿನಿಧಿಗಳು, ಸಂಸ್ಥೆ ನಾಮನಿರ್ದೇಶನ ಮಾಡುವ ಇಬ್ಬರು ವಿಶೇಷ ಅಹ್ವಾನಿತ ವಿದ್ಯಾರ್ಥಿಗಳು ಈ ಸಮಿತಿಯ ಸದಸ್ಯರಾಗಿರುತ್ತಾರೆ. ಸಮಿತಿಯು ಇತರ ಹಿಂದುಳಿದ ವರ್ಗಗಳು, ಅಂಗವಿಕಲ ವ್ಯಕ್ತಿಗಳು, ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳು ಮತ್ತು ಮಹಿಳೆಯರ ಪ್ರಾತಿನಿಧ್ಯವನ್ನು ಹೊಂದಿರಬೇಕು.
ಸದಸ್ಯರ ಅವಧಿಯು ಎರಡು ವರ್ಷ ಇರಲಿದೆ ಹಾಗೂ ನಾಮ ನಿರ್ದೇಶನಗೊಂಡ ವಿದ್ಯಾರ್ಥಿಗಳು 1 ವರ್ಷ ಅವಧಿ ಇರಲಿದೆ. ಈ ಸಮಿತಿ ವರ್ಷಕ್ಕೆ 2 ಬಾರಿ ಸಭೆ ನಡೆಸಬೇಕು.ಈ ಸಭೆಯಲ್ಲಿ 6 ತಿಂಗಳಲ್ಲಿ ಸ್ವೀಕರಿಸಿದ ದೂರುಗಳ ಮೇಲೆ ತೆಗೆದುಕೊಂಡ ಕ್ರಮಗಳ ಬಗ್ಗೆ ಪರಿಶೀಲನೆಯನ್ನು ಈ ಸಮಿತಿ ಮಾಡಬೇಕು.
ಸಮಾನತೆಯ ಸಹಾಯವಾಣಿ:
ಪ್ರತಿಯೊಂದು ಉನ್ನತ ಶಿಕ್ಷಣ ಸಂಸ್ಥೆಯು 24 ಗಂಟೆಗಳು ಕಾರ್ಯನಿರ್ವಹಿಸುವ ಸಮಾನತೆಯ ಸಹಾಯವಾಣಿಯನ್ನು ಸ್ಥಾಪಿಸಿ ನಿರ್ವಹಿಸಬೇಕು.ಈ ಸಹಾಯವಾಣಿಯ ಮೂಲಕ ಯಾವುದೇ ತಾರತಮ್ಯ ಹಾಗೂ ಕಿರುಕುಳದ ಕುರಿತು ಮಾಹಿತಿ ನೀಡಬಹುದು .
ಸಮಾನತೆಯ ಸಮಿತಿಯ ಕಾರ್ಯ ವಿಧಾನ
ಎ) ನೊಂದ ವ್ಯಕ್ತಿಯು ಯಾವುದೇ ತಾರತಮ್ಯದ ಘಟನೆಯನ್ನು ಆನ್ಲೈನ್ ಪೋರ್ಟಲ್ನಲ್ಲಿ, ಲಿಖಿತವಾಗಿ ಅಥವಾ ಸಮಾನ ಅವಕಾಶ ಕೇಂದ್ರದ ಸಂಯೋಜಕರಿಗೆ ಇಮೇಲ್ ಕಳುಹಿಸುವ ಮೂಲಕ ವರದಿ ಮಾಡಬಹುದು. ವಿನಂತಿಸಿದರೆ ನೊಂದ ವ್ಯಕ್ತಿಯ ಗುರುತನ್ನು ಗೌಪ್ಯವಾಗಿಡಬೇಕು
ಬಿ) ನೊಂದ ವ್ಯಕ್ತಿಗೆ ಘಟನೆಯನ್ನು ಸಮಾನತೆಯ ಸಹಾಯವಾಣಿಗೆ ವರದಿ ಮಾಡುವ ಆಯ್ಕೆಯೂ ಇರುತ್ತದೆ. ಸಹಾಯವಾಣಿಯಲ್ಲಿ ಸ್ವೀಕರಿಸಿದ ಮಾಹಿತಿಯನ್ನು,ಮೇಲ್ನೋಟಕ್ಕೆಭಾರತೀಯ ನ್ಯಾಯ ಸಂಹಿತಾ (BNS) ಕಾನೂನುಗಳ ಅಡಿಯಲ್ಲಿ ಪ್ರಕರಣ ನಡೆದರೆ, ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳಿಗೆ ರವಾನಿಸಬೇಕು
ಸಿ) ಅಂತಹ ಮಾಹಿತಿಯನ್ನು ಸ್ವೀಕರಿಸಿದ ನಂತರ, ಸಮಾನತೆಯ ಸಮಿತಿಯು ಸೂಕ್ತ ಕ್ರಮ ಕೈಗೊಳ್ಳಲು 24 ಗಂಟೆಗಳ ಒಳಗೆ ಸಭೆ ಸೇರಬೇಕು.
ಡಿ) ಸಮಾನತೆಯ ಸಮಿತಿಯ ಸಭೆಯ ನಂತರ ಕೆಲಸ ನಿರ್ವಹಿಸುವ 15 ದಿನಗಳಲ್ಲಿ ತನಿಖೆನಡೆಸಿಸಂಸ್ಥೆಯ ಮುಖ್ಯಸ್ಥರಿಗೆ ತನ್ನ ವರದಿಯನ್ನು ಸಲ್ಲಿಸಬೇಕು. ಸಮಿತಿಯ ವರದಿಯ ಪ್ರತಿಯನ್ನು ಬಾಧಿತ ವ್ಯಕ್ತಿಗೆ ಕಳುಹಿಸಬೇಕು.
ಇ) ಸಮಾನತೆಯ ಸಮಿತಿಯಿಂದ ವರದಿ ಬಂದ ನಂತರ, ಸಂಸ್ಥೆಯ ಮುಖ್ಯಸ್ಥರು 7 ಕೆಲಸದ ದಿನಗಳಲ್ಲಿ ಉನ್ನತ ಶಿಕ್ಷಣ ಸಂಸ್ಥೆಯ ನಿಯಮಗಳ ಪ್ರಕಾರ ಮುಂದಿನ ಕ್ರಮ ಕೈಗೊಳ್ಳಬೇಕು. ಆದಾಗ್ಯೂ, ಭಾರತೀಯ ನ್ಯಾಯ ಸಂಹಿತಾ (BNS) ಕಾನೂನುಗಳ ಅಡಿಯಲ್ಲಿ ಪ್ರಕರಣ ನಡೆದರೆ, ಪೊಲೀಸ್ ಅಧಿಕಾರಿಗಳಿಗೆ ತಕ್ಷಣವೇ ತಿಳಿಸಬೇಕು.
ಸಂಸ್ಥೆಯ ಮುಖ್ಯಸ್ಥರ ವಿರುದ್ಧ ಯಾವುದೇ ದೂರು ಬಂದಲ್ಲಿ, ಸಮಾನತೆಯ ಸಮಿತಿಯ ಸಭೆಯನ್ನು EOC ಯ ಸಂಯೋಜಕರು ಅಧ್ಯಕ್ಷತೆ ವಹಿಸುತ್ತಾರೆ ಮತ್ತು ಸಮಾನತೆಯ ಸಮಿತಿಯ ವರದಿಯನ್ನು ಸಂಸ್ಥೆಯ ಮುಖ್ಯಸ್ಥರ ಮುಂದಿನ ಉನ್ನತ ಅಧಿಕಾರಿಗಳಿಗೆ ಕಳುಹಿಸಬೇಕು.
ಮೇಲ್ಮನವಿ
ಸಮಾನತೆಯ ಸಮಿತಿಯ ವರದಿಯಿಂದ ಬಾಧಿತರಾದ ವ್ಯಕ್ತಿಯು ಅಂತಹ ವರದಿಯನ್ನು ಸ್ವೀಕರಿಸಿದ ದಿನಾಂಕದಿಂದ 30 ದಿನಗಳ ಒಳಗೆ ಒಂಬುಡ್ಸ್ಮನ್ ಮುಂದೆ ಮೇಲ್ಮನವಿ ಸಲ್ಲಿಸಬಹುದು. ಒಂಬುಡ್ಸ್ಮನ್ 30 ದಿನಗಳ ಒಳಗೆ ತೀರ್ಮಾನಿಸಬೇಕು. ಈ ಒಂಬುಡ್ಸ್ಮನ್ ಅನ್ನು UGC ನೇಮಕ ಮಾಡುತ್ತದೆ.
ಸಮಾನತೆಯ ರಾಯಭಾರಿ:
ಪ್ರತಿಯೊಂದು ಉನ್ನತ ಶಿಕ್ಷಣ ಸಂಸ್ಥೆಯು ಸಮಾನತೆಯ ರಾಯಭಾರಿ ನೇಮಕ ಮಾಡಬೇಕು. ಸಮಾನತೆಯ ರಾಯಭಾರಿಗಳಾದವರು ಕ್ಯಾಂಪಸ್ನಲ್ಲಿ ಪರದರ್ಶಕವಾಗಿ ಕಾರ್ಯನಿರ್ವಹಿಸುತ್ತಾರೆ ಮತ್ತು ಸಮಾನ ಅವಕಾಶ ಕೇಂದ್ರದ ಸಂಯೋಜಕರೊಂದಿಗೆ ಸಂಪರ್ಕದಲ್ಲಿರುತ್ತಾರೆ. ಸಮಾನ ಅವಕಾಶ ಕೇಂದ್ರವು ತಮ್ಮ ಘಟಕಗಳಲ್ಲಿ ಯೋಜಿಸಿರುವ ಕಾರ್ಯಕ್ರಮ ಅಥವಾ ಚಟುವಟಿಕೆಗಳನ್ನು ಕಾರ್ಯಗತಗೊಳಿಸಲು ಸಮಾನತೆಯ ರಾಯಭಾರಿ ನೋಡಲ್ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಾರೆ ಮತ್ತು ಯಾವುದೇ ಸಮಾನತೆ ಉಲ್ಲಂಘನೆಯನ್ನು ವಿಳಂಬವಿಲ್ಲದೆ ಸಮಾನ ಅವಕಾಶ ಕೇಂದ್ರಕ್ಕೆ ವರದಿ ಮಾಡಬೇಕು.
ಸಮಾನತೆ ಸ್ಕ್ವಾಡ್ :
ಪ್ರತಿಯೊಂದು ಉನ್ನತ ಶಿಕ್ಷಣ ಸಂಸ್ಥೆಯು ‘ಸಮಾನತೆ ಸ್ಕ್ವಾಡ್ಗಳನ್ನು ಅಗತ್ಯಕ್ಕೆ ಅನುಗುಣವಾಗಿ ಕ್ಯಾಂಪಸ್ನಲ್ಲಿ ಜಾತಿ ತಾರತಮ್ಯವನ್ನು ತಡೆಯಲು ಅಗತ್ಯವಿರುವ ಸಂಖ್ಯೆಯಲ್ಲಿ ಇಕ್ವಿಟಿ ಸ್ಕ್ವಾಡ್ಗಳನ್ನು ರಚಿಸಬಹುದು ಮತ್ತು ಅಂತಹ ಸ್ಕ್ವಾಡ್ಗಳು ಸಂಸ್ಥೆ, ಹಾಸ್ಟೆಲ್, ಲೈಬ್ರರಿ, ಕಚೇರಿಗಳಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ತಮ್ಮ ವರದಿಗಳನ್ನು ಸಮಾನ ಅವಕಾಶ ಕೇಂದ್ರದ ಸಂಯೋಜಕರಿಗೆ ಸಲ್ಲಿಸಬೇಕು.
ಸುಪ್ರೀಂ ಕೋರ್ಟ್ ತಡೆಯಾಜ್ಞೆ ರದ್ದುಗೊಳಿಸುವಂತೆ ಎಸ್ ಎಫ್ ಐ ಒತ್ತಾಯ
ಕ್ಯಾಂಪಸ್ಗಳಲ್ಲಿ ತಾರತಮ್ಯ ನಿವಾರಣೆಗೆ ಸಂಬಂಧಿಸಿದಂತೆ, ಯುಜಿಸಿ ಅನುಷ್ಠಾನಗೊಳಿಸಿರುವ ನೂತನ ನಿಯಮಗಳನ್ನು ಪ್ರಶ್ನಿಸಿರುವ ಅರ್ಜಿಯ ವಿಚಾರಣೆಗೆ ಸುಪ್ರೀಂ ಕೋರ್ಟ್ ಜನವರಿ 28, 2026 ರಂದುಒಪ್ಪಿಗೆ ನೀಡಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಜಾಯ್ಮಾಲ್ಯ ಬಾಗ್ಚಿ ಅವರನ್ನೊಳಗೊಂಡ ಪೀಠವು ವಿಶ್ವವಿದ್ಯಾಲಯ ಧನಸಹಾಯ ಆಯೋಗ (UGC) ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ತಾರತಮ್ಯ ತಡೆಯಲು ಮತ್ತು ಸಮಾನತೆ ಉತ್ತೇಜಿಸಲು ಹೊಸ ನಿಯಮಗಳನ್ನು (UGC Equity Regulations 2026) ಹೊಸ ನೀತಿಗೆ ಸುಪ್ರೀಂ ತಡೆಯಾಜ್ಞೆ ನೀಡಿದೆ. ಸರ್ವೋಚ್ಚ ನ್ಯಾಯಾಲಯ ನೀಡಿರುವ ತಡೆಯಾಜ್ಞೆಯನ್ನು ರದ್ದುಗೊಳಿಸಬೇಕಾಗಿ ಎಸ್ ಎಫ್ ಐ ಒತ್ತಾಯ ಮಾಡುತ್ತದೆ.
ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರದ ಮೇಲೆ ದೌರ್ಜನ್ಯ ಹಾಗೂ ಕಿರುಕುಳ ಪ್ರಮಾಣ ಹೆಚ್ಚಾಗುತ್ತಿವೆ. ಕಳೆದ ಒಂದು ದಶಕದಲ್ಲಿಜಾತಿ ತಾರತಮ್ಯದ ದೂರುಗಳುಶೇ. 118ರಷ್ಟುಹೆಚ್ಚಾಗಿವೆ ಎಂದು ವರದಿಯಾಗಿದೆ. ಹಾಗೂ ಕ್ಯಾಂಪಸ್ ಗಳಲ್ಲಿ ಜಾತಿ ತಾರತಮ್ಯದಿಂದಾಗಿ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿದೆ. ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ವರ್ಣ ವ್ಯವಸ್ಥೆಯನ್ನು ಹಾಗೂ ಜಾತಿ ವ್ಯವಸ್ಥೆಯನ್ನು ಪ್ರತಿಪ್ರದಿಸುತ್ತಾ ಬಂದಿದೆ. ಆರ್ ಎಸ್ ಎಸ್ ಸಂವಿಧಾನದ ಮೌಲ್ಯಗಳಿಗೆ ನಿರಂತರ ದಕ್ಕೆತರುವ ಮೂಲಕ ಮನುಸ್ಮೃತಿಯನ್ನು ವ್ಯವಸ್ಥಿತವಾಗಿ ಜಾರಿಗೊಳಿಸುವ ಪ್ರಯತ್ನ ನಡೆಸುತ್ತಿದೆ. ವಿದ್ಯಾರ್ಥಿಗಳ ನಡುವೆ ಕೋಮುವಾದ, ಜಾತಿವಾದದಂತಹ ದ್ವೇಷವನ್ನು ಹುಟ್ಟುಹಾಕುತ್ತಿವೆ. ಈ ನಡುವೆ ಜಾತಿ ವ್ಯವಸ್ಥೆಯಿಂದ ಸಾವಿರಾರು ವಿದ್ಯಾರ್ಥಿಗಳು ತಮ್ಮ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.
ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ, ವಿಶ್ವ ವಿದ್ಯಾಲಯಗಳಲ್ಲಿ ಜಾತಿ ತಾರತಮ್ಯ ಹೆಚ್ಚಾಗುತ್ತಿವೆ. ವಿಪರ್ಯಾಸವೆಂದರೆ ಅಧ್ಯಾಪಕರು / ಸಿಬ್ಬಂದಿ ವರ್ಗದವರು ಸಹ ಜಾತಿ ತಾರತಮ್ಯದಿಂದ ಶೋಷಣೆಗೆ ಒಳಗಾಗುತ್ತಿದ್ದಾರೆ. ಸಮಾಜದಲ್ಲಿ ಜಾತಿ ವ್ಯವಸ್ಥೆಯನ್ನು ನಿರ್ಮೂಲನೆ ಮಾಡಬೇಕಾಗಿದೆ. ಆದರಿಂದ ಕಠಿಣ ನಿಯಮಗಳ ಅವಶ್ಯಕತೆ ಇದೆ. ಆದರಿಂದ ಯುಜಿಸಿಯ ಸಮಾನತೆಯ ಉತ್ತೇಜನ ನಿಯಮಗಳನ್ನು ಸ್ವಾಗತಿಸುತ್ತದೆ ಹಾಗೂ ನಿಯಮಗಳಲ್ಲಿನ ಲೋಪಗಳನ್ನು ಸರಿಪಡಿಸಬೇಕೆಂದು ಎಸ್ ಎಫ್ ಐ ಒತ್ತಾಯಿಸುತ್ತದೆ.
ಇದನ್ನೂ ನೋಡಿ: “ರೈತ–ಕಾರ್ಮಿಕ–ಕೂಲಿಕಾರರ ಮುಷ್ಕರ | ಕೆಲಸ ಸ್ಥಗಿತ, ಬೀದಿಗಿಳಿಯಲಿದ್ದಾರೆ ದುಡಿಯುವ ಜನ” | Janashakthi Media
