ಹಾರೋಹಳ್ಳಿ ರವೀಂದ್ರ
ಯುಗಾದಿ ಹಬ್ಬವು ಭಾರತದ ಇತಿಹಾಸದಲ್ಲೆ ಬಹುದೊಡ್ಡ ಹಿನ್ನೆಲೆಯನ್ನು ಹೊಂದಿರುವಂತಹ ಮೂಲ ನಿವಾಸಿಗಳ ಮೂಲ ಪರಂಪರೆಯನ್ನು ಸಾರುವಂತಹ ಸಂಭ್ರಮಾಚರಣೆಯ ಹಬ್ಬ…
ಯುಗಾದಿ ಹಬ್ಬವು ಅದು ಯುಗಾದಿ ಅಲ್ಲ ಅದನ್ನು ಉಗಾದಿ ಎಂದು ಕರೆಯುತ್ತಿದ್ದರು. ಉಗಾದಿ ಎಂದರೆ ವರ್ಷದ ಆರಂಭ ಅಥವಾ ಋತು ಬದಲಾವಣೆ ಎಂದರ್ಥ, ಈ ಹಬ್ಬವನ್ನು ಆಚರಿಸ್ಪಟ್ಟವರು ಕೃಷಿಕರು ಇಲ್ಲಿನ ಕೃಷಿಕ ಮತ್ತು ಶ್ರಮಿಕ ಜನ ಮಳೆಗಾಲದ ಸಂಧರ್ಬವನ್ನು ನೋಡಿಕೊಂಡು ಫಸಲು ಬೆಳೆ ಉತ್ತಮವಾಗಿ ಬರಲೇಂದು ಮಳೆ ಬೀಳುವ ಮುನ್ನ ಭೂಮಿಗೆ ಪೂಜಿಸುವ ಒಂದು ಪರಂಪರೆಯ ಸಾಂಸ್ಕತಿಕ ಸಂಭ್ರಮ. ಉಗಾದಿಯನ್ನು ಕೃಷಿಕರು ವರ್ಷದ ಆರಂಭದ ಹಬ್ಬವಾಗಿ ಆಚರಣೆಗೆ ತಂದರೆ ಸಂಕ್ರಾಂತಿಯನ್ನು ಸುಗ್ಗಿಯ ಸಂಭ್ರಮವಾಗಿ ಆಚರಿಸಲ್ಪಡುತ್ತಾರೆ. ಗ್ರಾಮ ದೇವತೆಗಳ ಹಬ್ಬವನ್ನು ವರ್ಷದ ಕೊನೆಯಲ್ಲಿ ಆಚರಿಸುತ್ತಾರೆ.
ಉಗಾದಿಯ ಹಬ್ಬದ ಸೊಗಡು ಗ್ರಾಮೀಣ ಭಾಗದ ಮಕ್ಕಳಿಗೆ ಚೆನ್ನಾಗಿ ಗೊತ್ತಿದೆ ಮೈಸೂರು ಭಾಗವನ್ನು ಉದಾಹರಣೆಯಾಗಿ ತೆಗೆದುಕೊಂಡರೆ ಮೈಸೂರಿನಲ್ಲಿ ಪ್ರತಿಯೊಂದು ಹಳ್ಳಿಯಲ್ಲು ಕೃಷಿಕರು ಈ ಹಬ್ಬದ ದಿನ ಹೊನ್ನೇರು ಕಟ್ಟುತ್ತಾರೆ. ಹೊನ್ನೇರು ಎಂದರೆ ಚಿನ್ನದ ನೇಗಿಲು ಎಂದರ್ಥ. ಹಾಗಾದರೆ ಇಲ್ಲಿನ ಜನ ಚಿನ್ನದ ನೇಗಿಲು ಕಟ್ಟಿ ಉಳುತ್ತಿದ್ದರೆ? ಚಿನ್ನದ ನೇಗಿಲಿನಿಂದ ಉಳುತ್ತಿದ್ದ ಇತಿಹಾಸವನ್ನು ಕೆದಕಿದರೆ ಕೆ.ಎಸ್. ಭಗವಾನ್ ಅವರು ಬರೆದಿರುವ ‘ಭಾರತದ ಬೇಸಾಯಗಾರರೆಲ್ಲ ಬೌದ್ದರು’ ಎಂಬ ಕೃತಿಯಲ್ಲಿ ಉಗಾದಿ ಆಚರಣೆಯ ಮೂಲ ಪರಂಪರೆಯ ಇತಿಹಾಸ ಬೆಳಕು ಚೆಲ್ಲುತ್ತದೆ. ಹೊನ್ನೇರು ಎಂದರೆ ಮುಂಗಾರಿನ ಮೊಟ್ಟ ಮೊದಲ ಉಳುಮೆ, ಮೊದಲು ಕಟ್ಟುವ ಆರು ಎಂಬ ಅರ್ಥವನ್ನು ಕೊಡುತ್ತದೆ. ಹೊನ್ನಾರು ಅಥವಾ ಹೊನ್ನೇರು (ಹೊನ್ನು+ಆರು) ಎಂದರೆ ಅಕ್ಷರಶಃ ಅರ್ಥ ಚಿನ್ನದ ನೇಗಿಲು ಬಹುತೇಕ ಜನ ಬಡವರಾಗಿರುವ ನಮ್ಮ ರೈತರು ಹೇಗೆ ಚಿನ್ನದ ನೇಗಿಲಿನಲ್ಲಿ ಉಳುಮೆ ಮಾಡಲು ಸಾಧ್ಯ? ಹಾಗಾಗಿ ಎಲ್ಲರೂ ಮರದ ಅಥವಾ ಕಬ್ಬಣದ ನೇಗಿಲಿನಿಂದ ಉಳುತ್ತಾರೆ. ಆದರೆ ಚಿನ್ನದ ನೇಗಿಲಿಗೆ ಬಹಳಷ್ಟು ಇತಿಹಾಸ ಇದೆ. ಚಿನ್ನದ ನೇಗಿಲಿಂದ ಉಳುತ್ತಿದ್ದ ಒಬ್ಬ ಏಕೈಕ ರಾಜನೆಂದರೆ ಎದು ಶುದ್ದೋಧನ ಅಂದರೆ ಗೌತಮ ಬುದ್ದನ ತಂದೆ. ಕಪಿಲ ವಸ್ತುವಿನಲ್ಲಿ ದೊಡ್ಡ ವಾರ್ಷಿಕ ಉತ್ಸವ ನಡೆಯುತ್ತಿತ್ತು. ಅದೇ ಹೊನ್ನೇರಿನ ಉತ್ಸವ ಮುಂಗಾರಿಗೂ ಮುನ್ನ ಚಿನ್ನ ಬೆಳ್ಳಿ ನೇಗಿಲುಗಳಿಂದ ಉಳುತ್ತಿದ್ದರು ಅದನ್ನು ನೆರವೇರಿಸುತ್ತಿದ್ದವನೆ ಶುದ್ದೋಧನ. ಹಾಗಾಗಿ ಈ ಹೊನ್ನೇರು ಮತ್ತು ಉಗಾದಿಯ ಸಂಸ್ಕೃತಿಯು ಬೌದ್ದ ಪರಂಪರೆಯನ್ನು ಸಾರುತ್ತದೆ.
ತದನಂತರ ಈ ಆಚರಣೆಯನ್ನು ವಿರೂಪಗೊಳಿಸಲಾಗಿದೆ. ಉಗಾದಿಯ ಬೌದ್ಧ ಸಂಸ್ಕೃತಿಯ ಆಚರಣೆಗಳನ್ನು ಕಸೀಮಾಡಲಾಗಿದೆ. ನೌದ್ಅದರ ಮೊದಲ ವರ್ಷವನ್ನು ವೈದಿಕರ ಮೊದಲ ವರ್ಷವಾಗಿ ಮಾರ್ಪಾಡುಕೊಂಡಿದ್ದು, ಅದರೊಳಗೆ ಜೂಜಿನಾಟವನ್ನು ಜಾರಿಗೆ ತಂದಿದ್ದು ಇದೆಲ್ಲವೂ ಅವರು ಮೂಲ ಬೌದ್ಧರ ಹಬ್ಬವನ್ನು ಹತ್ತಿಕ್ಕಲು ಮಾಡಿದ ಷಡ್ಯಂತ್ರ. ಇನ್ನಾದರೂ ನೈಜ ಸಾಂಸ್ಕೃತಿಕ ವಿಶ್ಲೇಷಣೆಯತ್ತ ನಡೆಯೊಣ.