ಉದ್ಯೋಗ ಖಾತ್ರಿ ಯೋಜನೆಗೆ ಬೇಡಿಕೆ ಹೆಚ್ಚಾಗುತ್ತಿದೆ – ಇತ್ತ ಕೇಂದ್ರ ಹಣ ಕಡಿತ ಮಾಡಿದೆ

ಬೆಂಗಳೂರು ಫೆ 18:  ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಬೇಡಿಕೆಯು ಲಾಕ್‌ಡೌನ್ ಸರಾಗವಾದ ನಂತರವೂ ಹೆಚ್ಚಿನ ತಿಂಗಳುಗಳವರೆಗೆ ಮುಂದುವರೆದಿದೆ.  2020 ರ ಡಿಸೆಂಬರ್ ಮತ್ತು 2021 ರ ಜನವರಿಯಲ್ಲಿ ಈ ಯೋಜನೆಯನ್ನು ಅವಲಂಬಿಸಿ ಗ್ರಾಮೀಣ ಕುಟುಂಬಗಳು ಉದ್ಯೋಗಕ್ಕಾಗಿ ತಮ್ಮನ್ನು ತಾವು  ತೊಡಗಿಸಿಕೊಳ್ಳಲು ಕಾಯುತ್ತಿವೆ.

2020 ರ ಆಗಸ್ಟ್ ಮತ್ತು ಸೆಪ್ಟಂಬರ್ ನಲ್ಲಿಹೆಚ್ಚುತ್ತಿರುವ COVID-19 ಪ್ರಕರಣಗಳು ಉತ್ತುಂಗದಲ್ಲಿದ್ದವು. ಆ ವೇಳೆ ಕೇಂದ್ರ ಸರಕಾರ ಮಂಡಿಸಿದ ವಿಶೇಷಾರ್ಥಿಕ ಪ್ಯಾಕೇಜ್ ನಲ್ಲಿ  ನಲ್ಲೂ ಉದ್ಯೋಗ ಖಾತ್ರಿಯನ್ನು ಬಲಗೊಳಿಸುವ ಯೋಜನೆ ಇರಲಿಲ್ಲ. ಮೊನ್ನೆ ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ರವರು ಮಂಡಿಸಿದ 2021-22 ರ ಬಜೆಟ್‌ನಲ್ಲಿ ಈ ಯೋಜನೆಗೆ  73,000 ಕೋಟಿ ರೂ. ನೀಡಲಾಗುವುದ ಎಂದಿದ್ದರು. ಆದರೆ ಕಳೆದ ಬಜೆಟ್ ನಲ್ಲಿ ಅಂದರೆ  2020-21 ರ ಪರಿಷ್ಕೃತ ಅಂದಾಜು ಬಜೆಟ್ ನಲ್ಲಿ 1,11,500 ಕೋಟಿ ರೂ. ಮೀಸಲಿಡಲಾಗಿತ್ತು. 42,500 ರೂ ಹಣವನ್ನು ಕಡಿತ ಮಾಡಲಾಗಿದೆ.  34.52% ನಷ್ಟು ಹಣ ಕಡಿತವಾಗಿದೆ.  ಸಾಂಕ್ರಾಮಿಕ ರೋಗದ ನಂತರದ ಚೇತರಿಕೆ ಪ್ಯಾಕೇಜಿನ ಭಾಗವಾಗಿ ಎಂಜಿಎನ್‌ಆರ್‌ಇಜಿಎಸ್ ಅಡಿಯಲ್ಲಿ ಸರ್ಕಾರ ಘೋಷಿಸಿದ ಹೆಚ್ಚುವರಿ 40,000 ಕೋಟಿ ರೂ. 2020-21ರ ಬಜೆಟ್ ಅಂದಾಜು 61,500 ಕೋಟಿ ರೂ.ಗಳಾಗಿದ್ದರೆ, 2019-20ರಲ್ಲಿ ಎಂಜಿಎನ್‌ಆರ್‌ಇಜಿಎಸ್‌ಗಾಗಿ  71,686.70 ಕೋಟಿ ರೂ. ತೆಗೆದಿಡಲಾಗಿತ್ತು.

ಇದನ್ನೂ ಓದಿ : ನಗರ ಉದ್ಯೋಗ ಖಾತ್ರಿ ಯೋಜನೆ ಕೊನೆಗೂ ಬರಬಹುದೇ?

2006 ರಲ್ಲಿ ತರಲಾದ ಈ ಯೋಜನೆಯು ಏಪ್ರಿಲ್ 1, 2020 ಮತ್ತು ಫೆಬ್ರವರಿ 17, 2021 ರ ನಡುವೆ  ಈ ಯೋಜನೆಯಲ್ಲಿ 10.51 ಕೋಟಿ ವ್ಯಕ್ತಿಗಳು (ಜಾಬ್ ಕಾರ್ಡ್) ಅಥವಾ 7.17 ಕೋಟಿ ಕುಟುಂಬಗಳು ತಮ್ಮನ್ನು ತಾವು ತೊಡಗಿಸಿಕೊಂಡಿವೆ. ಇದು ಆರ್ಥಿಕ ವರ್ಷದಲ್ಲಿ ಸಾರ್ವಕಾಲಿಕ ಗರಿಷ್ಠವಾಗಿದೆ. COVID-19 ಲಾಕ್‌ಡೌನ್‌ನಲ್ಲಿ ಲಕ್ಷಾಂತರ ವಲಸೆ ಕಾರ್ಮಿಕರು ನಗರಗಳಿಂದ ಹಳ್ಳಿಗಳಿಗೆ ಮರಳಿದರು. ಲಾಕ್‌ಡೌನ್‌ನ ಪ್ರವೃತ್ತಿಗಳಿಗೆ ಅನುಗುಣವಾಗಿ ಉದ್ಯೋಗ ಖಾತ್ರಿ ಯೋಜನೆಗೆ ಬೇಡಿಕೆ ಹೆಚ್ಚಾಯಿತು. ಉದಾಹರಣೆಗೆ, ಜೂನ್ 2019 ರಿಂದ ಜೂನ್  20202 ರ  ಅವಧಿಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಕೆಲಸದ ಬೇಡಿಕೆಯಲ್ಲಿ 80% ಹೆಚ್ಚಳ ಕಂಡಿದೆ. ಆಗಸ್ಟ್, ಸೆಪ್ಟೆಂಬರ್ ಮತ್ತು ಅಕ್ಟೋಬರ್ ನಲ್ಲಿ ಹೆಚ್ಚಳಕ್ಕೆ ಹೋಲಿಸಿದರೆ ನವೆಂಬರ್ ನಲ್ಲಿ ಈ ಸಂಖ್ಯೆಗಳು ಸ್ವಲ್ಪ ಕಡಿಮೆಯಾಗಿದೆ. ಆಗಲೂ ಅದು 2019 ರ ನವೆಂಬರ್ ಗಿಂತ 47% ಹೆಚ್ಚಾಗಿದೆ.

ಜನಶಕ್ತಿ ಮೀಡಿಯಾ ವಾಟ್ಸಪ್ ಸೇರಿಕೊಳ್ಳಲು ಈ ಲಿಂಕ್ ಕ್ಲಿಕ್ ಮಾಡಿ

ಕರ್ನಾಟಕ ಸೇರಿದಂತೆ ತಮಿಳುನಾಡು, ಪಶ್ಚಿಮ ಬಂಗಾಳ, ರಾಜಸ್ಥಾನ, ಉತ್ತರ ಪ್ರದೇಶ ಮತ್ತು ಮಧ್ಯ ಪ್ರದೇಶ,ದಂತಹ ರಾಜ್ಯಗಳಿಂದ ಹೆಚ್ಚಿನ ಬೇಡಿಕೆ ದಾಖಲಾಗಿದೆ”  ಎಂದು ಕೇಂದ್ರದ ಅಂಕಿ ಅಂಶಗಳು ಹೇಳುತ್ತವೆ.  ಉದ್ಯೋಗ ಖಾತ್ರಿ ಯೋಜನೆಯ ಅಡಿಯಲ್ಲಿ ಉದ್ಯೋಗವನ್ನು ಕೋರುವ ಎಲ್ಲಾ ಮನೆಗಳಿಗೆ ಗರಿಷ್ಠ 100 ದಿನಗಳ ಉದ್ಯೋಗವನ್ನು ಪಡೆಯಲು ಅರ್ಹತೆ ಇದೆ. ಇಂತಹ ಮಹತ್ವದ ಯೋಜನೆಗೆ ಹಣವನ್ನು ಕಡಿತ ಮಾಡಿರುವುದ ಸರಿಯಾದ ಬೆಳವಣಿಗೆಯಲ್ಲ. ಗ್ರಾಮೀಣ ಪ್ರದೇಶದ ಜನರ ಅಭಿವೃದ್ಧಿಗೆ ಸಹಕಾರಿಯಾದ ಯೋಜನೆಯಾಗಿದೆ. ಗ್ರಾ.ಪಂ ಚುನಾವಣೆ ಮುಗಿಯುವ ವರೆಗೂ ಈ ಯೋಜನೆ ಬಿಜೆಪಿಯವರ ಕೈಯಲ್ಲಿ ಇತ್ತು. ಗ್ರಾ.ಪಂ ಗಳ ಚುನಾವಣೆ ಮುಗಿದು ಎರಡು ತಿಂಗಳು ಕಳಿಯುತ್ತಾ ಬಂದಿವೆ ಇನ್ನೂ ಅನೇಕ ಕಡೆಗಳಲ್ಲಿ ಗ್ರಾಪಂನ ಕ್ರೀಯಾ ಯೋಜನೆ ರಚಿಸಲಾಗಿಲ್ಲ. ಹಾಗಾಗಿ ಕಳೆದ ಎರಡು ತಿಂಗಳಿಂದ  ಈ ಯೋಜನೆ ಅವಲಂಬಿತ ಕುಟುಂಬಗಳಿಗೆ ಸಂಕಷ್ಟ ತಂದಿದೆ. ಇದಕ್ಕೆ ಸರಕಾರಗಳೆ ಹೊಣೆ ಎಂದು ರೈತ ಮುಖಂಡ ಶಬ್ಬೀರ್ ಜಾಲಹಳ್ಳಿ ಆರೋಪಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *