ಉಡುಪಿ: ಇತ್ತೀಚೆಗೆ ಜಿಲ್ಲೆಯ ನೇಜಾರಿನಲ್ಲಿ ನಡೆದ ತಾಯಿ ಮತ್ತು ಮೂವರು ಮಕ್ಕಳ ಹತ್ಯೆಯ ಆರೋಪಿ ಪ್ರವೀಣ್ ಚೌಗುಲೆಗೆ ಪ್ರಧಾನ ಸಿವಿಲ್ ಹಾಗೂ ಜೆಎಂಎಫ್ ಸಿ ನ್ಯಾಯಾಲಯ ಬುಧವಾರ 14 ದಿನ ನ್ಯಾಯಾಂಗ ಬಂಧನ ವಿಧಿಸಿದೆ. ನಾಲ್ವರನ್ನು ಕಗ್ಗೋಲೆ ಮಾಡುವ ದಿನ ಆರೋಪಿಯು ಸ್ನಾಪ್ ಚಾಟ್ ಮೂಲಕ ಯುವತಿಯ ಸ್ಥಳವನ್ನು ಕಂಡುಹಿಡಿದಿದ್ದ ಎಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ. ಈ ನಡುವೆ ಪ್ರಕರಣದ ವಿಚಾರಣೆಯ ವೇಳೆ ಮತ್ತಷ್ಟು ಮಾಹಿತಿಗಳು ಹೊರಬಂದಿದ್ದು, ಕನ್ನಡ ಮಾಧ್ಯಮಗಳು ಮಾಡಿದ ಊಹಾಪೋಹದ ಸುಳ್ಳು ವರದಿಗಳು ಕೂಡಾ ಬಯಲಾಗಿದೆ.
ಹತ್ಯೆಯ ನಂತರ ಯಾವುದೇ ಸುಳಿವು ಲಭಿಸದಂತೆ ಅರೋಪಿಯು ಮಾಸ್ಟರ್ ಪ್ಲ್ಯಾನ್ ಮಾಡಿಕೊಂಡಿದ್ದ ಎಂದು ವಾರ್ತಾಭಾರತಿ ಪೊಲೀಸ್ ಮೂಲವನ್ನು ಉಲ್ಲೇಖಿಸಿ ವರದಿ ಮಾಡಿದೆ. ಅಲ್ಲದೆ, ಕೊಲೆಯಾದ ನಂತರ ಕನ್ನಡದ ಹಲವಾರು ಮಾಧ್ಯಮಗಳು ಕೊಲೆಯಾದವರಲ್ಲಿ ಒಬ್ಬರಾದ ಐನಾಝ್ ಎಂಬವರೊಂದಿಗೆ ಪ್ರೇಮದಲ್ಲಿದ್ದ ಹಾಗೂ ಕೃತ್ಯಕ್ಕೂ ಒಂದು ವಾರದ ಮುಂಚೆ ಅವರ ಮನೆಗೆ ಬಂದು ಅವರಿಗೆ ಉಂಗುರ ತೊಡಿಸಿದ್ದ ಎಂದು ವರದಿ ಮಾಡಿದ್ದವು. ಉಡುಪಿ
ಇದನ್ನೂ ಓದಿ: ದೇಶದಲ್ಲಿ ಪ್ರಜಾಪ್ರಭುತ್ವ ಅಂತಿಮ ಘಟ್ಟತಲುಪುತ್ತಿರುವುದು ಕಳವಳಕಾರಿ: ಪ್ರೊ. ರಾಜೇಂದ್ರ ಚೆನ್ನಿ
ಅದಾಗ್ಯೂ, ಕನ್ನಡ ಮಾಧ್ಯಮಗಳ ಈ ವರದಿಗಳನ್ನು ಪೊಲೀಸರು ನಿರಾಕರಿಸಿದ್ದಾರೆ. ಆರೋಪಿ ಪ್ರವೀಣ್ ಇದೇ ಮೊದಲ ಬಾರಿಗೆ ನೇಜಾರಿಗೆ ತೆರಳಿದ್ದು, ಸ್ನಾಪ್ ಚಾಟ್ ಮೂಲಕ ಮನೆಯ ಲೊಕೇಶನ್ ಕಂಡು ಹಿಡಿದು ಕೃತ್ಯ ನಡೆಸಿದ್ದ ಎಂದು ವಾರ್ತಾಭಾರತಿ ಉಲ್ಲೇಖಿಸಿದೆ. ಉಡುಪಿ
ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನಲ್ಲಿ ಕೆಸಲ ಮಾಡುತ್ತಿದ್ದ ಐನಾಝ್ ಅವರನ್ನು ಅದೇ ಕಂಪೆನಿಯಲ್ಲಿ ಸಿಬ್ಬಂದಿಯಾಗಿದ್ದ ಪ್ರವೀಣ್‌ಗೆ ತಿಳಿದಿತ್ತು ಮತ್ತು ಆತ ಐನಾಝ್ ಅವರಿಗೆ ವಿವಿಧ ರೀತಿಯಲ್ಲಿ ಕಿರುಕುಳ ಕೊಟ್ಟಿದ್ದ ಎಂದು ತಿಳಿದು ಬಂದಿದ್ದು, ಹೀಗಾಗಿ ಹತ್ಯೆಗೊಳಗಾದ ಯುವತಿ ಆರೋಪಿಯ ಮೊಬೈಲ್ ಸಂಖ್ಯೆಯನ್ನು ಬ್ಲಾಕ್ ಮಾಡಿದ್ದರು ಎಂದು ವರದಿ ಹೇಳಿದೆ.
ಅಲ್ಲದೆ ಹತ್ಯೆ ನಡೆದ ಮುನ್ನಾದಿನ ಯುವತಿಯು ಮನೆಯಲ್ಲಿ ಇದ್ದಿದ್ದು, ಅದೇ ಕಂಪೆನಿಯಲ್ಲಿ ಕೆಲಸ ಮಾಡಿಕೊಂಡಿದ್ದ ಆರೋಪಿಗೆ ತಿಳಿದಿತ್ತು, ಹೀಗಾಗಿ ಹತ್ಯೆಗೆ ಯೋಜನೆ ಮಾಡಿಕೊಂಡಿದ್ದನು ಎಂದು ವರದಿ ಉಲ್ಲೇಖಿಸಿದೆ. ಆರೋಪಿಯು ನಾಲ್ವರನ್ನು ಕೇವಲ 15 ನಿಮಿಷಗಳಲ್ಲಿ ಬರ್ಬರವಾಗಿ ಕೊಂದು, ಹೆಜಮಾಡಿಯಿಂದ ಮಂಗಳೂರಿಗೆ ಪರಾರಿಯಾಗುವಾಗ ತನ್ನ ರಕ್ತಸಿಕ್ತ ಬಟ್ಟೆಯನ್ನು ಸುಟ್ಟು ಹಾಕಿದ್ದನು. ಪೊಲೀಸರು ಸುಟ್ಟ ಬಟ್ಟೆಯ ಕುರುಹುಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ಪೊಲೀಸ್ ಮೂಲವನ್ನು ಉಲ್ಲೇಖಿಸಿ ಪತ್ರಿಕೆ ವರದಿ ಮಾಡಿದೆ.
ಅಷ್ಟೆ ಅಲ್ಲದೆ, ಹತ್ಯೆಯಾದ ಐನಾಝ್ ಅವರು ವಾಸ ಮಾಡಿಕೊಂಡಿದ್ದ ಮಂಗಳೂರಿನ ಬಾಡಿಗೆ ಮನೆಯ ಸಮೀಪ ಆರೋಪಿ ತನ್ನ ಸ್ಕೂಟರ್ ಅನ್ನು ನಿಲ್ಲಿಸಿದ್ದ ಕೂಡಾ ವರದಿಯಾಗಿದೆ. ಇದನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಈ ಬಗ್ಗೆ ತನಿಖೆ ಮುಂದುವರಿಸಿದ್ದಾರೆ.
ವಿಡಿಯೊ ನೋಡಿ: ವಿಶ್ವಕಪ್ ಮೇಲೆ ಕಾಲಿಟ್ಟಾಗ ಚುರ್ ಎಂದ ಹೃದಯ ದಲಿತರಿಗೆ ಮೂತ್ರ ಕುಡಿಸಿದಾಗ ಯಾಕೆ ಮಿಡಿಯಲಿಲ್ಲ? #worldcup2023