ತ್ಯಾಜ್ಯ ನಿರ್ವಹಣೆ ಶುಲ್ಕ ಪಾವತಿ: ಬಿಬಿಎಂಪಿ ಪ್ರಸ್ತಾಪಕ್ಕೆ ಮಾಲಿನ್ಯ ನಿಯಂತ್ರಣ ಮಂಡಳಿ ಒಪ್ಪಿಗೆ

ಬೆಂಗಳೂರು: 2021-22ರ ರಾಜ್ಯ ಆರ್ಥಿಕ ಸಮೀಕ್ಷೆಯ ‘ಕರ್ನಾಟಕದಲ್ಲಿ ತ್ಯಾಜ್ಯ ನಿರ್ವಹಣೆ, ನೈಜತೆಗಳು ಮತ್ತು ಅವಕಾಶಗಳು ಅಧ್ಯಯನದಲ್ಲಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಕಸ ಸಂಗ್ರಹಣೆಗೆ ಬಳಕೆದಾರ ಶುಲ್ಕವನ್ನು ವಿಧಿಸುವ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಪ್ರಸ್ತಾಪವನ್ನು ಅನುಮೋದಿಸಿದೆ.

ಬಿಬಿಎಂಪಿ ಇಂತಹ ಒಂದು ಯೋಜನೆಯು ಸೂಕ್ತ ರೀತಿಯಲ್ಲಿ ಅನುಷ್ಠಾನವಾದರೆ, ಘನ ತ್ಯಾಜ್ಯ ನಿರ್ವಹಣೆ ಸರ್ಕಾರದ ಆದಾಯದ ಮೂಲಗಳಲ್ಲಿ ಒಂದಾಗಲಿದೆ ಎಂದು ಕೆಎಸ್‌ಪಿಸಿಬಿ ಹೇಳಿದೆ. ಬೆಂಗಳೂರಿನಲ್ಲಿ ಉತ್ಪತ್ತಿಯಾಗುವ 2,399 ಟಿಪಿಡಿ ಸಾವಯವ ತ್ಯಾಜ್ಯವನ್ನು ಗೊಬ್ಬರ ಮಾಡಿದರೆ ಅದು 218 ಟಿಪಿಡಿ ಗೊಬ್ಬರವನ್ನು ಉತ್ಪಾದಿಸಿ ಪ್ರತಿದಿನ ರೂ.11 ಲಕ್ಷ ಆದಾಯ ಗಳಿಸಬಹುದು.

ಅಲ್ಲದೇ, ಬೆಂಗಳೂರು ಮಿತಿಯನ್ನು ಹೊರತುಪಡಿಸಿ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಉತ್ಪತ್ತಿಯಾಗುವ 3,344 ಟಿಪಿಡಿ ಹಸಿ ತ್ಯಾಜ್ಯದಿಂದ ಸುಮಾರು 300 ಟಿಪಿಡಿ ಗೊಬ್ಬರವನ್ನು ಉತ್ಪಾದಿಸಿ ಪ್ರತಿದಿನ 15 ಲಕ್ಷ ರೂ. ಆದಾಯ ಗಳಿಸಬಹುದು. ರಾಜ್ಯದಲ್ಲಿ ಶೇಕಡಾ  55ರಷ್ಟು ಹಸಿ ತ್ಯಾಜ್ಯವನ್ನು ಗೊಬ್ಬರವನ್ನಾಗಿ ಪರಿವರ್ತಿಸಲಾಗುತ್ತಿದೆ. ಇದನ್ನು ಸುಧಾರಿಸಲು ಸಾಕಷ್ಟು ಅವಕಾಶವಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ರಾಜ್ಯದಲ್ಲಿ ಉತ್ಪತ್ತಿಯಾಗುವ ಸುಮಾರು 3,237 ಟಿಪಿಡಿ ಒಣ ತ್ಯಾಜ್ಯ ಪೈಕಿ 1,114 .8 ಟಿಪಿಡಿಯಷ್ಟು ಸಂಸ್ಕರಿಸಲಾಗುತ್ತಿದೆ. 215 ಟನ್ ತ್ಯಾಜ್ಯವನ್ನು ಇಂಧನವನ್ನಾಗಿ ಪರಿವರ್ತಿಸಲಾಗುತ್ತಿದೆ. 118 ಟಿಡಿಪಿಯನ್ನು ಸಿಮೆಂಟ್ ಕೈಗಾರಿಕೆಗಳಲ್ಲಿ ಸಹ-ಸಂಸ್ಕರಣೆಗಾಗಿ ಕಳುಹಿಸಲಾಗುತ್ತದೆ. ತ್ಯಾಜ್ಯವನ್ನು ಬೇರ್ಪಡಿಸುವುದರಿಂದ ಮತ್ತು ಅದನ್ನು ಗೊಬ್ಬರ, ಶಕ್ತಿ ಮುಂತಾದ ವಸ್ತುಗಳಾಗಿ ಪರಿವರ್ತಿಸುವುದರಿಂದ ಸ್ಥಳೀಯ ಸಂಸ್ಥೆಗಳ ಆದಾಯವನ್ನು ಹೆಚ್ಚಿಸುವ ನಿರೀಕ್ಷೆಯಿದೆ ಎಂದು ವರದಿಯು ಗಮನಿಸಿದೆ.

ಸೆಸ್ ಅಥವಾ ಶುಲ್ಕವನ್ನು ಕಟ್ಟಡ ಮತ್ತು ಅವಶೇಷಗಳ ತ್ಯಾಜ್ಯಕ್ಕೂ ವಿಸ್ತರಿಸಬೇಕು ಎಂದು ಕೆಎಸ್‌ಪಿಸಿಬಿ ಸದಸ್ಯ ಕಾರ್ಯದರ್ಶಿ ಶ್ರಿನಿವಾಸಲು ತಿಳಿಸಿದರು.

Donate Janashakthi Media

Leave a Reply

Your email address will not be published. Required fields are marked *