ಬೀದರ್ : ಬೈಕ್ ಗೆ ಅಪರಿಚಿತ ಕಾರು ಡಿಕ್ಕಿಯಾಗಿ ಇಬ್ಬರು ಕಾರ್ಮಿಕರು ಸಾವನ್ನಪ್ಪಿದ ಘಟನೆ ಬೀದರ್ ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ಸಿಂಧನಕೇರಾ ಗ್ರಾಮದಲ್ಲಿ ಬಳಿ ನಡೆದಿದೆ. ಅಪರಿಚಿತ
30 ವರ್ಷದ ಸಂಜೀವಕುಮಾರ್ ಮೇತ್ರಿ ಹಾಗೂ 32 ವರ್ಷದ ಸುಧಾಕರ ಹಾದಿಮನಿ ಸಾವನ್ನಪ್ಪಿದ ದುರ್ದೈವಿ ಕಾರ್ಮಿಕರಾಗಿದ್ದಾರೆ.
ಇದನ್ನು ಓದಿ: ವೃತ್ತಿಪರ ವಿಶ್ವವಿದ್ಯಾಲಯಗಳಲ್ಲಿ ಕನ್ನಡ ಪಠ್ಯ ಬೋಧನೆ ಅನ್ಯ ವಿಷಯ ತಜ್ಞರು ನಿರ್ವಹಿಸುವುದು ಬೇಡ- ಡಾ. ಪುರುಷೋತ್ತಮ ಬಿಳಿಮಲೆ
ಕೂಲಿ ಕೆಲಸ ಮುಗಿಸಿ ಬೈಕ್ ಮೇಲೆ ಸ್ವ ಗ್ರಾಮಕ್ಕೆ ವಾಪಸಾಗುತ್ತಿದ್ದಾಗ ಎದುರಿನಿಂದ ವೇಗವಾಗಿ ಬಂದು ಕಾರು ಬೈಕ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸಾವನ್ನಪ್ಪಿದ್ದಾರೆ.
ಕಾರು ಡಿಕ್ಕಿಯಾದ ರಭಸಕ್ಕೆ ಸ್ಥಳದಲ್ಲೇ ಓರ್ವ ಕಾರ್ಮಿಕ ಸಾವನ್ನಪ್ಪಿದ್ರೆ ಅಪಘಾತದಲ್ಲಿ ಚಿಂತಾಜನಕ ಸ್ಥಿತಿಯಲ್ಲಿ ಇದ್ದ ಸುಧಾಕರನ್ನು ಕಲಬುರಗಿ ಆಸ್ಪತ್ರೆ ರವಾನೆ ಮಾಡಿದ್ರು ಚಿಕಿತ್ಸೆ ಫಲಕಾರಿಯಾಗದೆ ಕಾರ್ಮಿಕ ಸಾವನ್ನಪ್ಪಿದ್ದಾನೆ. ಈ ಕುರಿತು ಹುಮ್ನಾಬಾದ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಾಗಿ ಬಲೆ ಬಿಸಿದ್ದಾರೆ.
ಇದನ್ನು ನೋಡಿ: ಮಾದೇಶ್ವರ ಮತ್ತು ಮಂಟೇಸ್ವಾಮಿ ಬಗ್ಗೆ ನಮಗೆಷ್ಟು ಗೊತ್ತು? Janashakthi Media