ಟರ್ಕಿ : 250ಕ್ಕೂ ಅಧಿಕ ಪ್ರಯಾಣಿಕರನ್ನೊಳಗೊಂಡ ಲಂಡನ್- ಮುಂಬೈ ವಿಮಾನ ಕಳೆದ 40ಗಂಟೆಗಿಂತಲೂ ಅಧಿಕ ಕಾಲ ಟರ್ಕಿಯ ಡಿಯಾರ್ ಬಾಕಿರ್ ವಿಮಾನ ನಿಲ್ದಾಣದಲ್ಲಿ ಸ್ಥಗಿತಗೊಂಡಿದ್ದು, ಪ್ರಯಾಣಿಕರು ಪರದಾಡುವಂತಾಗಿದೆ ಎಂದು ವರದಿ ತಿಳಿಸಿದೆ. ಟರ್ಕಿ
ಏಪ್ರಿಲ್ 2ರಂದು ಲಂಡನ್ ನಿಂದ ಮುಂಬೈಗೆ ತೆರಳಬೇಕಿದ್ದ ವಿಎಸ್358 ವಿಮಾನ ತುರ್ತು ವೈದ್ಯಕೀಯ ಕಾರಣದಿಂದ ಮಾರ್ಗ ಬದಲಾವಣೆಯಿಂದಾಗಿ ರದ್ದುಗೊಳಿಸಲಾಗಿತ್ತು ಎಂದು ವಿಮಾನಯಾನ ಸಂಸ್ಥೆಯ ವಕ್ತಾರರು ತಿಳಿಸಿದ್ದಾರೆ.
ಆದರೆ ವಿಮಾನ ಟರ್ಕಿಯ ಡಿಯಾರ್ ಬಾಕಿರ್ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆದ ನಂತರ ತಾಂತ್ರಿಕ ದೋಷ ಕಂಡುಬಂದಿದ್ದು, ಅದನ್ನು ಪರಿಶೀಲಿಸಲಾಗುತ್ತಿದೆ ಎಂದು ವರದಿ ವಿವರಿಸಿದೆ.
ಇದನ್ನೂ ಓದಿ : ಅಮೆರಿಕದ ‘ಸುಂಕ ಯುದ್ಧ’ – ಎಲ್ಲಿ ಹೋಯಿತು ‘ಮುಕ್ತ ವ್ಯಾಪಾರ’ದ ಕಲ್ಪನೆ? ಟರ್ಕಿ
“ಪ್ರಯಾಣಿಕರ ಮತ್ತು ಸಿಬಂದಿಗಳ ರಕ್ಷಣೆ ಹಾಗೂ ಭದ್ರತೆ ನಮ್ಮ ಪ್ರಮುಖ ಆದ್ಯತೆಯಾಗಿದೆ. ಪ್ರಯಾಣಿಕರಿಗಾದ ಅನಾನುಕೂಲಕ್ಕಾಗಿ ನಾವು ವಿನಮ್ರವಾಗಿ ಕ್ಷಮೆಯಾಚಿಸುತ್ತೇವೆ. ತಾಂತ್ರಿಕ ದೋಷ ಸರಿಪಡಿಸಿದ ನಂತರ ಡಿಯಾರ್ ಬಾಕಿರ್ ವಿಮಾನ ನಿಲ್ದಾಣದಿಂದ ವಿಮಾನ ಮುಂಬೈಗೆ ತೆರಳಲಿದೆ ಎಂದು” ವರ್ಜಿನ್ ಅಟ್ಲಾಂಟಿಕ್ ವಕ್ತಾರ ತಿಳಿಸಿದ್ದಾರೆ.
“ಒಂದು ವೇಳೆ ಅನುಮತಿ ಸಿಗದಿದ್ದರೆ, ನಾವು ಪ್ರಯಾಣಿಕರಿಗೆ ಟರ್ಕಿ ವಿಮಾನ ನಿಲ್ದಾಣದಿಂದ ಬೇರೊಂದು ವಿಮಾನದ ವ್ಯವಸ್ಥೆ ಮಾಡುವ ಮೂಲಕ ಮುಂಬೈಗೆ(ಏ.05) ಪ್ರಯಾಣಿಸಬಹುದಾಗಿದೆ ಎಂದು” ವಿಮಾನ ಸಂಸ್ಥೆ ತಿಳಿಸಿದೆ.
ಇದನ್ನೂ ನೋಡಿ : ಏಪ್ರಿಲ್ 14ರೊಳಗೆ ‘ರೋಹಿತ್ ಕಾಯ್ದೆ’ ಜಾರಿಯಾಗಲಿ Janashakthi Media ಟರ್ಕಿ