ತುಮಕೂರು| ವಿದ್ಯುತ್‌ ಕ್ಷೇತ್ರದ ಖಾಸಗೀಕರಣಕ್ಕೆ ವಿರೋಧ

ತುಮಕೂರು: ವಿದ್ಯುತ್‌ ಖಾಸಗೀಕರಣ ವಿರೋಧಿಸಿ, ನಿರಂತರ ವಿದ್ಯುತ್‌ ಪೂರೈಕೆಗೆ ಆಗ್ರಹಿಸಿ ನಗರದ ಬೆಸ್ಕಾಂ ಕಚೇರಿ ಮುಂಭಾಗ ಸೋಮವಾರ ಅಕ್ಟೋಬರ್-30 ವಿದ್ಯುತ್‌ ಬಳಕೆದಾರರ ಹೋರಾಟ ಸಮಿತಿ, ಸಿಐಟಿಯು, ಕರ್ನಾಟಕ ಪ್ರಾಂತ ರೈತ ಸಂಘಗಳು ಜಂಟಿಯಾಗಿ ಪ್ರತಿಭಟನೆ ನಡೆಸಿದವು. ತುಮಕೂರು

ವಿದ್ಯುತ್ ಇಲ್ಲದೆ ಜನರ ಬದುಕು, ವಿದ್ಯಾಭ್ಯಾಸ, ಆರೋಗ್ಯ, ವ್ಯಾಪಾರ, ಕೈಗಾರಿಕಾತ್ಪಾ ಉದನೆ, ಕೃಷಿ ಎಲ್ಲವೂ ಮುಂದೆ ಸಾಗುವುದಿಲ್ಲ. ಪ್ರತಿಯೊಬ್ಬರ ಜೀವನದ ಅವಿಭಾಜ್ಯ ಅಂಗವಾಗಿರುವ ವಿದ್ಯುತ್‌ ಕ್ಷೇತ್ರವನ್ನು ಕೇಂದ್ರ ಸರ್ಕಾರ ಬಹುರಾಷ್ಟ್ರೀಯ ಕಂಪನಿಗಳಿಗೆ ವಹಿಸಲು ಮುಂದಾಗಿದೆ ಎಂದು ಕಟ್ಟಡ ಕಾರ್ಮಿಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಉಮೇಶ್‌ ದೂರಿದರು.

ಇದನ್ನೂ ಓದಿ:ಸಾಲಬಾಧೆಗೆ ಬೇಸತ್ತು| ರೈಲಿಗೆ ತಲೆಕೊಟ್ಟು ಒಂದೇ ಕುಟುಂಬದ ಮೂವರು ಆತ್ಮಹತ್ಯೆ

ವಿದ್ಯುತ್‌ ಕ್ಷೇತ್ರದ ಖಾಸಗೀಕರಣವು ದೇಶದ ಜನತೆ, ರೈತರು ಮತ್ತು ಉದ್ದಿಮೆದಾರರು ಸೇರಿದಂತೆ ಒಟ್ಟಾರೆ ಸಮಾಜಕ್ಕೆ ಮಾರಕವಾಗಿದೆ. ಖಾಸಗೀಕರಣಕ್ಕೆ ಸಹಕಾರಿಯಾಗಿರುವ ‘ವಿದ್ಯುತ್ ತಿದ್ದುಪಡಿ ಮಸೂದೆ- 2022’ಅನ್ನು ಹಿಂದಕ್ಕೆ ಪಡೆಯಬೇಕು. ರೈತರ ಪಂಪ್‌ಸೆಟ್‌ಗೆ ಸಿಗುತ್ತಿರುವ ಉಚಿತ ವಿದ್ಯುತ್‌ ಮುಂದುವರಿಸಬೇಕು ಎಂದು ಒತ್ತಾಯಿಸಿದ್ದಾರೆ.

ಆರ್.ಆರ್‌ ನಂಬರ್‌ಗೆ ಆಧಾರ್ ಜೋಡಣೆ ಕಾರ್ಯ ನಿಲ್ಲಿಸಬೇಕು. ಸರ್ಕಾರವೇ ವಿದ್ಯುತ್ ಉತ್ಪಾದನೆ ಮತ್ತು ವಿತರಣೆಯ ಜವಾಬ್ದಾರಿ ವಹಿಸಿಕೊಳ್ಳಬೇಕು. ಪ್ರೀಪೇಯ್ಡ್‌ ಮೀಟರ್ ಅಳವಡಿಕೆ, ಉತ್ಪಾದನೆಯ ವೆಚ್ಚಕ್ಕೆ ಅನುಗುಣವಾಗಿ ವಿದ್ಯುತ್ ದರ ನಿಗದಿ ಮಾಡುವ ನೀತಿ ಕೈಬಿಡಬೇಕು ಎಂದು ಆಗ್ರಹಿಸಿದರು.

ಸಿಐಟಿಯು ಜಿಲ್ಲಾ ಘಟಕದ ಅಧ್ಯಕ್ಷ ಸೈಯದ್‌ ಮುಜೀಬ್, ಕಾರ್ಯದರ್ಶಿ ಎನ್.ಕೆ.ಸುಬ್ರಮಣ್ಯ, ಪದಾಧಿಕಾರಿಗಳಾದ ಕಲ್ಪನಾ, ಎ.ಲೋಕೇಶ್, ಇನಾಫ್‌, ರಫೀಕ್‌ ಪಾಷಾ, ಲಕ್ಷ್ಮಿಕಾಂತ್, ಕುಮಾರ್, ಮಾರುತಿ, ರಾಜು, ವಸೀಂ, ರಾಮು, ಟಿ.ಜಿ.ಶಿವಲಿಂಗಯ್ಯ, ಮಂಜು, ಸಿದ್ದರಾಜು, ಮಂಜುನಾಥ್‌, ದೊಡ್ಡಸಿದ್ದಯ್ಯ, ಗಂಗಾಧರ್‌ ಇತರರು ಭಾಗವಹಿಸಿದ್ದರು.

ವಿಡಿಯೋ ನೋಡಿ:ಕರ್ನಾಟಕ ರಾಜ್ಯೋತ್ಸವ : ಜನರ ಬದುಕಿನ‌ ಪ್ರಶ್ನೆಗಳು ಯಾಕಿಲ್ಲ? – ಜಿ.ಎನ್ ನಾಗರಾಜ ಅವರ ವಿಶ್ಲೇಷಣೆ Janashakthi Media

Donate Janashakthi Media

Leave a Reply

Your email address will not be published. Required fields are marked *