ಅಮೆರಿಕ ಮತ್ತು ಚೀನಾ ನಡುವಿನ ವ್ಯಾಪಾರ ಯುದ್ಧವು ಇತ್ತೀಚೆಗೆ ಮತ್ತಷ್ಟು ತೀವ್ರಗೊಂಡಿದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಡಳಿತವು ಚೀನಾದಿಂದ ಆಮದು ಮಾಡುವ ಕೆಲವು ಉತ್ಪನ್ನಗಳ ಮೇಲೆ 245% ರಷ್ಟು ಭಾರೀ ತೆರಿಗೆಗಳನ್ನು ವಿಧಿಸಿದೆ. ಈ ಕ್ರಮವು ಚೀನಾದ ಪ್ರತಿಕ್ರಿಯಾತ್ಮಕ ಕ್ರಮಗಳ ಪರಿಣಾಮವಾಗಿ ತೆಗೆದುಕೊಳ್ಳಲಾಗಿದೆ ಎಂದು ಶ್ವೇತಭವನದ ಅಧಿಕೃತ ಪತ್ರದಲ್ಲಿ ತಿಳಿಸಲಾಗಿದೆ.
ಈ ತೆರಿಗೆಗಳು ಚೀನಾದಿಂದ ಆಮದು ಮಾಡುವ ನಿಡಲ್-ಸಿರಿಂಜ್‌ಗಳು, ಬ್ಯಾಟರಿಗಳು, ಲ್ಯಾಪ್‌ಟಾಪ್‌ಗಳು ಮುಂತಾದ ಉತ್ಪನ್ನಗಳ ಮೇಲೆ ವಿಧಿಸಲಾಗಿದ್ದು, ನಿಡಲ್-ಸಿರಿಂಜ್‌ಗಳ ಮೇಲೆ 245%, ಬ್ಯಾಟರಿಗಳ ಮೇಲೆ 173% ಮತ್ತು ಲ್ಯಾಪ್‌ಟಾಪ್‌ಗಳ ಮೇಲೆ 20% ರಷ್ಟು ತೆರಿಗೆಗಳು ವಿಧಿಸಲಾಗಿದೆ .
ಇದನ್ನು ಓದಿ:-ಗುಜರಾತ್| ಅಂಚೆ ಸೇವೆಯ ಮೂಲಕ ಮದ್ಯ ಮಾರಾಟ
ಈ ಕ್ರಮವು ಚೀನಾದಿಂದ ಅಮೆರಿಕಕ್ಕೆ ಆಮದು ಮಾಡುವ ಉತ್ಪನ್ನಗಳ ಬೆಲೆಯಲ್ಲಿ ಗಣನೀಯ ಏರಿಕೆಗೆ ಕಾರಣವಾಗಲಿದೆ. ಚೀನಾದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಈ ಕ್ರಮವನ್ನು ತೀವ್ರವಾಗಿ ವಿರೋಧಿಸಿದ್ದು, “ತೆರಿಗೆಗಳು ಮತ್ತು ವ್ಯಾಪಾರ ಯುದ್ಧಗಳಲ್ಲಿ ಗೆದ್ದವರು ಯಾರೂ ಇಲ್ಲ” ಎಂಬುದಾಗಿ ಹೇಳಿದೆ. ಅವರು ಈ ಕ್ರಮವನ್ನು ಅಮೆರಿಕದ ಬೆದರಿಕೆ ಮತ್ತು ಬ್ಲಾಕ್‌ಮೇಲ್ ಎಂದು ವೀಕ್ಷಿಸಿದ್ದಾರೆ.
ಇದನ್ನು ಓದಿ:-ಕಲ್ಯಾಣ ಕರ್ನಾಟಕ ಉದ್ಯೋಗ ಮೇಳ: ಉಮೇದಿನೊಂದಿಗೆ ಹರಿದು ಬಂದ ಯುವ ಜನರು
ವ್ಯಾಪಾರ ತಜ್ಞರು ಮತ್ತು ಆರ್ಥಿಕ ತಜ್ಞರು ಈ ಕ್ರಮವು ಜಾಗತಿಕ ಆರ್ಥಿಕತೆಯ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಎಚ್ಚರಿಸಿದ್ದಾರೆ. ಅಮೆರಿಕದ ಈ ಕ್ರಮವು ಜಾಗತಿಕ ಸರಬರಾಜು ಸರಣಿಗಳಲ್ಲಿ ವ್ಯತ್ಯಯ ಉಂಟುಮಾಡಬಹುದು ಮತ್ತು ಅಮೆರಿಕದ ಗ್ರಾಹಕರಿಗೆ ಬೆಲೆ ಏರಿಕೆಗೆ ಕಾರಣವಾಗಬಹುದು.