ವಾಷಿಂಗ್ಟನ್: ಉಕ್ರೇನ್ ಗೆ ಮಿಲಿಟರಿ ನೆರವು ಬಂದ್ ಮಾಡಿದ ಬೆನ್ನಲ್ಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ರಷ್ಯಾದ ಮೇಲೆ ಹೊಸ ನಿರ್ಬಂಧ ಮತ್ತು ಸುಂಕದ ಬೆದರಿಕೆ ಹಾಕಿದ್ದಾರೆ.
ಹೌದು. “ರಷ್ಯಾ ಇದೀಗ ಯುದ್ಧಭೂಮಿಯಲ್ಲಿ ಉಕ್ರೇನ್ ಅನ್ನು ಸಂಪೂರ್ಣವಾಗಿ ‘ಬಡಿಯುತ್ತಿದೆ’ ಎಂಬ ಅಂಶವನ್ನು ಆಧರಿಸಿ, ಕದನ ವಿರಾಮ ಮತ್ತು ಶಾಂತಿಯ ಅಂತಿಮ ಇತ್ಯರ್ಥ ಒಪ್ಪಂದ ಆಗುವವರೆಗೆ ನಾನು ರಷ್ಯಾದ ಮೇಲೆ ದೊಡ್ಡ ಪ್ರಮಾಣದ ಬ್ಯಾಂಕಿಂಗ್ ನಿರ್ಬಂಧಗಳು, ನಿರ್ಬಂಧಗಳು ಮತ್ತು ಸುಂಕಗಳನ್ನು ಹಾಕಲಾಗುವುದು ಎಂದು ಟ್ರಂಪ್ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. “ರಷ್ಯಾ ಮತ್ತು ಉಕ್ರೇನ್ ಈಗ ತಡಮಾಡದೆ ಮಾತುಕತೆ ನಡೆಸಿ ಎಂದು ಅವರು ಹೇಳಿದ್ದಾರೆ.
ಇದನ್ನು ಓದಿ :ಅಂಗನವಾಡಿ ಶಿಕ್ಷಕಿಯರು ಮತ್ತು ಸಹಾಯಕಿಯರಿಗೆ ಸಿಹಿಸುದ್ದಿ ನೀಡಿದ ಸಿಎಂ
ಉಕ್ರೇನ್‌ನ ಇಂಧನ ಮೂಲಸೌಕರ್ಯದ ಮೇಲೆ ರಷ್ಯಾ ಶುಕ್ರವಾರ ಪ್ರಮುಖ ಡ್ರೋನ್ ಮತ್ತು ಕ್ಷಿಪಣಿ ದಾಳಿಯನ್ನು ನಡೆಸಿದ ನಂತರ ಟ್ರಂಪ್ ಬೆದರಿಕೆ ಹಾಕಿದ್ದಾರೆ.
ಕೆಲದಿನಗಳ ಹಿಂದೆ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಜೊತೆಗಿನ ವಾಕ್ಸಮರದ ನಂತರ ಟ್ರಂಪ್ ಆಡಳಿತ ಉಕ್ರೇನ್ ಗೆ ಸೇನಾ ನೆರವನ್ನು ಸ್ಥಗಿತಗೊಳಿಸಿತು. ಆಗಿನಿಂದ ಮಿತ್ರರಾಷ್ಟ್ರಗಳು ಹಾಗೂ ದೇಶಿಯ ವಿರೋಧಿಗಳಿಂದ ಟ್ರಂಪ್ ತೀವ್ರ ಟೀಕೆಗಳನ್ನು ಎದುರಿಸುತ್ತಿದ್ದಾರೆ. ಟ್ರಂಪ್ ರಷ್ಯಾದ ಪರವಾಗಿದ್ದರೆ ಎಂಬ ಆರೋಪವೂ ಕೇಳಿಬಂದಿತ್ತು. ಆದರೆ ಇದೀಗ ರಷ್ಯಾದ ಮೇಲೆ ಹೊಸ ನಿರ್ಬಂಧ ಹಾಗೂ ಸುಂಕದ ಬೆದರಿಕೆ ಹಾಕಿರುವುದು ಕುತೂಹಲ ಮೂಡಿಸಿದೆ.
ಟ್ರಂಪ್ ಕಳೆದ ತಿಂಗಳಷ್ಟೇ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಟೆಲಿಫೋನ್ ಮೂಲಕ ಮಾತನಾಡಿದ್ದ ಟ್ರಂಪ್ ಸಂಬಂಧಗಳನ್ನು ಪುನರಾರಂಭಿಸುವ ಮತ್ತು ಮಾಜಿ ಅಧ್ಯಕ್ಷ ಜೋ ಬೈಡನ್ ಹೇರಲಾದ ವ್ಯಾಪಕ ನಿರ್ಬಂಧಗಳನ್ನು ರದ್ದುಗೊಳಿಸುವ ಕುರಿತು ಚರ್ಚಿಸಿದ್ದರು.
ಇದನ್ನು ಓದಿ :Karnataka State Budget 2025 : ಬೆಂಗಳೂರು ವಿವಿಗೆ ಪ್ರಧಾನಿ ಮನಮೋಹನ್ ಸಿಂಗ್ ಎಂದು ಮರುನಾಮಕರಣ