ಬೆಂಗಳೂರು: ನಮ್ಮ ಮೆಟ್ರೋ ದರವನ್ನು ಶೇ.47 ರಷ್ಟು ಏರಿಕೆ ಮಾಡಿದ್ದನ್ನು ಸಿಪಿಐ(ಎಂ) ದಕ್ಷಣ ಜಿಲ್ಲಾ ಸಮಿತಿ, ಉತ್ತರ ಜಿಲ್ಲಾ ಸಮಿತಿ ವ್ಯಾಪಕವಾಗಿ ಖಂಡಿಸಿವೆ. ಮತ್ತು ಆದೇಶ ವಾಪಸ್ಸು ಪಡೆಯುವಂತೆ ಆಗ್ರಹಿಸಿವೆ. ನಮ್ಮ ಮೆಟ್ರೋ
ಈ ಕುರಿತು ಕಾರ್ಯದರ್ಶಿಗಳಾದ ಬಿಎನ್ ಮಂಜುನಾಥ್, ಪ್ರತಾಪಸಿಂಹ ಜಂಟಿ ಹೇಳಿಕೆ ನೀಡಿದ್ದು, ಮೆಟ್ರೋ ರೈಲ್ವೆ ಕಾಯ್ದೆ 2002 ರ ಅನ್ವಯ ದರ ನಿಗದಿ ಸಮಿತಿ ರಚಿಸಲಾಗಿದ್ದು, ಅದರ ಶಿಫಾರಸ್ಸಿನಂತೆ ಕೇಂದ್ರ ರೈಲ್ವೆ ಸಚಿವಾಲಯದ ಕಾರ್ಯದರ್ಶಿ ನೇತೃತ್ವದಲ್ಲಿ ನಡೆದ ಮಂಡಳಿ ಸಭೆಯು ದರ ಏರಿಕೆಗೆ ಒಪ್ಪಿಗೆ ನೀಡಿದೆ. ಆದರೆ ಈ ಸಮಿತಿ ಅವೈಜ್ಞಾನಿಕವಾಗಿ ದರ ಹೆಚ್ಚಳಕ್ಕೆ ಸಮ್ಮಿತಿಸಿದೆ. ಯಾವುದೇ ಸಾರ್ವಜನಿಕ ಸಾರಿಗೆ ಸಂಸ್ಥೆ ಸಾಮಾಜಿಕ ಕಳಕಳಿಗಳೊಂದಿಗೆ ದರ ನಿಗದಿ ಮಾಡಬೇಕು. ಸತತವಾಗಿ 2023-2024 ರ ಆರ್ಥಿಕ ವರ್ಷದಲ್ಲಿ 130 ಕೋಟಿ ಕಾರ್ಯಾಚರಣೆಯ ಲಾಭದೊಂದಿಗೆ ನಮ್ಮ ಮೆಟ್ರೋ ನಡೆಯುತ್ತಿದ್ದರು, ಪ್ರಯಾಣ ದರ ಏರಿಕೆಯು ಜನ ವಿರೋಧಿಯಾಗಿದೆ. ಅತ್ಯಂತ ದುಬಾರಿ ನಗರಗಳಲ್ಲಿ ಒಂದಾದ ಬೆಂಗಳೂರು ನಿವಾಸಿಗಳಿಗೆ ಈ ಮೆಟ್ರೋ ರೈಲ್ವೆ ದರ ಏರಿಕೆಯು ತೀವ್ರ ಹೊಡೆತವನ್ನು ನೀಡಲಿದೆ. ಸಾರ್ವಜನಿಕ ಸಾರಿಗೆ ಜನರಿಗೆ ಸೇವೆ ಸಲ್ಲಿಸಲು ಇರಬೇಕೆಯೇ ಹೊರತು ಲಾಭ ಗಳಿಸುವ ಉದ್ದೇಶದಿಂದ ಮೆಟ್ರೋ ಪ್ರಯಾಣ ದರವನ್ನು ಹೆಚ್ಚಿಸಿರುವುದು ಜನವಿರೋಧಿ ನಡೆಯಾಗಿದೆ ಎಂದು ಆರೋಪಿಸಿದ್ದಾರೆ. ನಮ್ಮ ಮೆಟ್ರೋ
ಇದನ್ನೂ ಓದಿ : ‘ಉಪ್ಪಿಟ್ಟು ಬೇಡ.. ಬಿರಿಯಾನಿ, ಚಿಕನ್ ಫ್ರೈ ಬೇಕು’: ಅಂಗನವಾಡಿ ಬಾಲಕನ ಬೇಡಿಕೆಗೆ ಸ್ಪಂದಿಸಿದ ಎಡರಂಗ ಸರ್ಕಾರ
ಬೆಂಗಳೂರು ಜಾಗತಿಕವಾಗಿ ಬೆಳೆಯುತ್ತಿರುವ ನಗರವಾಗಿದ್ದು, ಪ್ರಸ್ತುತ ಬೆಂಗಳೂರು ನಗರದಲ್ಲಿ 1 ಕೋಟಿ 40 ಲಕ್ಷ ಜನಸಂಖ್ಯೆ ಇದೆ ಎಂದು ಅಂದಾಜಿಸಲಾಗಿದೆ. ಬೆಂಗಳೂರು ವಾಣಿಜ್ಯ ನಗರವಾಗಿರುವ ಕಾರಣ ಪ್ರತಿದಿನ ಸಾವಿರಾರು ಜನ ಉದ್ಯೋಗಕ್ಕಾಗಿ ನಗರಕ್ಕೆ ವಲಸೆ ಬರುತ್ತಿದ್ದಾರೆ. ಹೆಚ್ಚುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಈಗ ಇರುವ ಸಾರಿಗೆ ವ್ಯವಸ್ಥೆ ಸಾಲದಾಗಿದೆ. ಸಂಚಾರ ನಿಯಂತ್ರಣದ ಸಮಸ್ಯೆಗಳಿಂದ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ಪ್ರಯಾಣ ಮಾಡಲು ಗಂಟೆಗಟ್ಟಲೆ ಸಮಯ ವ್ಯರ್ಥವಾಗುತ್ತಿದೆ. 2011 ರಲ್ಲಿ ಬೆಂಗಳೂರಿನಲ್ಲಿ ಪ್ರಾರಂಭವಾದ ನಮ್ಮ ಮೆಟ್ರೋ, ಸಾರಿಗೆ ಸಮಸ್ಯೆಯನ್ನು ಸ್ವಲ್ಪ ಸುಧಾರಿಸಲು ಸಹಕಾರಿಯಾಗಿದೆ. ಮೆಟ್ರೋ ರೈಲುಗಳಲ್ಲಿ ಪ್ರಯಾಣ ಮಾಡುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಿದೆ. 2019-20 ರಲ್ಲಿ ಪ್ರತಿದಿನ ಸರಾಸರಿಯಂತೆ 4.80 ಲಕ್ಷ ಪ್ರಯಾಣಿಕರು ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದರೆ, 2023-24 ರಲ್ಲಿ ಪ್ರತಿದಿನ ಪ್ರಯಾಣಿಸುವವರ ಸಂಖ್ಯೆ ಸರಾಸರಿ 6.36 ಲಕ್ಷಕ್ಕೆ ಏರಿದೆ. ಹಾಗಾಗಿ ಮೆಟ್ರೋ ಮೇಲೆ ಜನರ ಅವಲಂಬನೆ ಹೆಚ್ಚುತ್ತಿರುವಾಗ ಈಗಾಗಲೇ ಬೆಲೆಏರಿಕೆಯಿಂದ ಜನತೆ ತತ್ತರಿಸುತ್ತಿರುವ ಸಂದರ್ಭದಲ್ಲಿ ಮೆಟ್ರೋ ಪ್ರಯಾಣ ದರ ಏರಿಕೆ ಕ್ರಮವು ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದಿದ್ದಾರೆ. ನಮ್ಮ ಮೆಟ್ರೋ
ಕೇAದ್ರ ಮತ್ತು ರಾಜ್ಯದ ಎರಡು ಸರ್ಕಾರಗಳು ಮೆಟ್ರೋ ದರ ಏರಿಕೆ ವಿಚಾರದಲ್ಲಿ ರಾಜಕಾರಣ ಮಾಡುತ್ತಿವೆ. ಜನರ ಅಗತ್ಯಕ್ಕೆ ತಕ್ಕಂತೆ ಮೆಟ್ರೋ ಬೋಗಿಗಳು ಹೆಚ್ಚಿಸುತ್ತಿಲ್ಲ. ಹೊಸ ಮಾರ್ಗಗಳಲ್ಲಿ ಕಾಮಗಾರಿ ವಿಳಂಬ, ಅಗತ್ಯ ಮೆಟ್ರೋ ರೈಲು ಬೋಗಿ ಒದಗಿಸದಿರುವುದು, ಇನ್ನಿತರ ಆಡಳಿತಾತ್ಮಕ ಸಮಸ್ಯೆಗಳಿಂದ ಅನಗತ್ಯ ಅಧಿಕ ವೆಚ್ಚಕ್ಕೆ ಕಾರಣವಾಗಿವೆ. ಎರಡು ಸರ್ಕಾರಗಳು ಸಾರ್ವಜನಿಕ ಸಾರಿಗೆಯನ್ನು ಖಾಸಗೀಕರಣ ಮಾಡಲು ನಿರತವಾಗಿದೆ. ಈ ಮೂಲಕ ಸಾರಿಗೆ ದರ ಹೆಚ್ಚಿಸಿ ಜನರ ಮೇಲೆ ಹೊರೆ ಹಾಕುತ್ತಿರುವುದನ್ನು ಸಿಪಿಐ(ಎಂ) ಖಂಡಿಸಿದೆ.
ಈ ಹಿನ್ನಲೆಯಲ್ಲಿ ಹೆಚ್ಚಿಸಿರುವ ಮೆಟ್ರೋ ಪ್ರಯಾಣ ದರವನ್ನು ವಾಪಸ್ಸು ಪಡೆಯಬೇಕು ಹಾಗೂ ಜನಸ್ನೇಹಿಯಾಗಿ ಮೆಟ್ರೋ ಪ್ರಯಾಣ ದರವನ್ನು ನಿಗದಿಪಡಿಸಬೇಕೆಂದು ಸಿ.ಪಿ.ಐ(ಎಂ) ಬೆಂಗಳೂರು ಜಿಲ್ಲಾ ಸಮಿತಿಗಳು ಆಗ್ರಹಿಸುತ್ತವೆ.
ಇದನ್ನೂ ನೋಡಿ : ಭೂ ಸುಧಾರಣಾ ಕಾಯ್ದೆ ತಿದ್ದುಪಡಿ 2020ರ ರದ್ದತಿ ಮತ್ತು ಕಾಂಗ್ರೆಸ್ ಸರ್ಕಾರದ ವೈಫಲ್ಯ…. Janashakthi Media