ಜೂನ್ 1ರಿಂದ ರೈಲುಗಳ ವೇಳಾಪಟ್ಟಿ ಬದಲಾವಣೆ

ಹುಬ್ಬಳ್ಳಿ: ನೈಋತ್ಯ ರೈಲ್ವೆ ವಲಯವು ಜೂ. 1ರಿಂದ ಕೆಲ ರೈಲುಗಳ ವೇಗವೃದ್ಧಿ ಮತ್ತು ವೇಳೆ ಪರಿಷ್ಕರಣೆ ಮಾಡಲು ನಿರ್ಧರಿಸಲಾಗಿದೆ. ಬೆಂಗಳೂರು-ಕಾರವಾರ ನಿತ್ಯ ಸಂಚಾರ ಎಕ್ಸ್‌ಪ್ರೆಸ್‌ (16595) ರೈಲು ಸಂಜೆ 6:40ರ ಬದಲು 6:50 ಕ್ಕೆ ಬೆಂಗಳೂರಿನಿಂದ ಹೊರಡಲಿದೆ. ಅದೇ ರೀತಿ ಕಾರವಾರ-ಬೆಂಗಳೂರು (16596) ರೈಲು ಬೆಳಗ್ಗೆ 8ರ ಬದಲು 7:15 ಗಂಟೆಗೆ ಬೆಂಗಳೂರು ತಲುಪಲಿದೆ. ಹಾಸನ-ಕಾರವಾರ-ಹಾಸನ ರೈಲಿನ ಸಮಯದಲ್ಲಿ ಯಾವುದೇ ಬದಲಾವಣೆಯಾಗಿಲ್ಲಎಂದು ಮಾಹಿತಿ ನೀಡಲಾಗಿದೆ.

ಮಿರಜ್‌-ಬೆಂಗಳೂರು ನಿತ್ಯ ಸಂಚಾರ ಎಕ್ಸ್‌ಪ್ರೆಸ್‌ (16590) ರೈಲು ಬೆಂಗಳೂರಿಗೆ ಬೆಳಗ್ಗೆ 6:30ರ ಬದಲು 6:15 ಗಂಟೆಗೆ ತಲುಪಲಿದೆ.  ಮಿರಜದಿಂದ ಯಶವಂತಪುರ ಕ್ಕೆ ಹೊರಡುವ ರೈಲಿನ ಸಮಯದಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

ಮೇ 31ರಿಂದ ಚಂಡಿಗಢ-ಯಶವಂತಪುರ ವಾರದಲ್ಲಿ ಎರಡು ದಿನ ಸಂಚಾರದ ಎಕ್ಸ್‌ಪ್ರೆಸ್‌ (22686) ರೈಲು ಯಶವಂತಪುರಕ್ಕೆ ಬೆಳಗ್ಗೆ 6:05ರ ಬದಲು 5:45 ಗಂಟೆಗೆ ತಲುಪಲಿದೆ. ಜೂ. 1ರಿಂದ ಯಶವಂತಪುರ-ಚಂಡಿಗಢ ವಾರದಲ್ಲಿ ಎರಡು ದಿನ ಸಂಚಾರದ ಎಕ್ಸ್‌ ಪ್ರಸ್‌ (22685) ರೈಲು ಮಧ್ಯಾಹ್ನ 1:55ರ ಬದಲು 2:30 ಗಂಟೆಗೆ ಯಶವಂತಪುರದಿಂದ ಹೊರಟು ತುಮಕೂರು (3:20), ಅರಸೀಕೆರೆ (ಸಂಜೆ 4:37), ದಾವಣಗೆರೆ (6:38) ಮಾರ್ಗವಾಗಿ ಚಂಡಿಗಢ ತಲುಪಲಿದೆ. ದಾವಣಗೆರೆ-ಚಂಡಿಗಂಢ-ದಾವಣಗೆರೆ ರೈಲಿನ ವೇಳಾಪಟ್ಟಿ ಬದಲಾವಣೆಯಾಗಿಲ್ಲ.

ವಿಜಯಪುರ-ಮಂಗಳೂರು ಜಂಕ್ಷನ್‌ ನಿತ್ಯ ಸಂಚಾರ ಎಕ್ಸ್‌ಪ್ರೆಸ್‌ ಸ್ಪೇಶಲ್‌ (07377) ರೈಲು ಸಂಜೆ 6:15ರ ಬದಲು 6:35 ಗಂಟೆಗೆ ವಿಜಯಪುರದಿಂದ ಹೊರಟು ಬಸವನ ಬಾಗೇವಾಡಿ ರೋಡ್‌ (7:12), ಆಲಮಟ್ಟಿ (7:30), ಬಾಗಲಕೋಟೆ (ರಾತ್ರಿ 8:18), ಗುಳೇದಗುಡ್ಡ ರೋಡ್‌ (8:33), ಬಾದಾಮಿ (8:47), ಹೊಳೆಆಲೂರು (9:11), ಮಲ್ಲಾಪೂರ (9:31), ಗದಗ (10:30), ಹುಬ್ಬಳ್ಳಿ (11:55) ಮಾರ್ಗವಾಗಿ ಮಂಗಳೂರು ಜಂಕ್ಷನ್‌ ತಲುಪಲಿದೆ. ಕರ್ಜಗಿಯಿಂದ ಮಂಗಳೂರು ಜಂಕ್ಷನ್‌ ರೈಲುಗಳ ವೇಳೆ ಬದಲಾವಣೆಯಾಗಿಲ್ಲ.

ಬೆಂಗಳೂರು-ಕನ್ನೂರ ನಿತ್ಯ ಸಂಚಾರ ಎಕ್ಸ್‌ಪ್ರೆಸ್‌ (16511) ರೈಲು ರಾತ್ರಿ 9:30ರ ಬದಲು 9:35 ಗಂಟೆಗೆ ಬೆಂಗಳೂರಿನಿಂದ ಹೊರಡಲಿದೆ. ಅದೇ ರೀತಿ ಕನ್ನೂರ-ಬೆಂಗಳೂರು (16512) ರೈಲು ಬೆಳಗ್ಗೆ 6:50ರ ಬದಲು 6:30 ಗಂಟೆಗೆ ಬೆಂಗಳೂರು ತಲುಪಲಿದೆ. ಹಾಸನ-ಕನ್ನೂರ-ಹಾಸನ ನಡುವೆ ವೇಳೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

ಅರಸೀಕೆರೆ-ಹುಬ್ಬಳ್ಳಿ ನಿತ್ಯ ಸಂಚಾರ ಪ್ಯಾಸೆಂಜರ್‌ ಸ್ಪೇಶಲ್‌ (07367) ರೈಲು ಅರಸೀಕೆರೆಯಿಂದ ಬೆಳಗ್ಗೆ 5:10ರ ಬದಲು 5:30 ಗಂಟೆಗೆ ಹೊರಟು ವೇಳೆ ಪರಿಷ್ಕರಣೆಯೊಂದಿಗೆ ಬಾಣಾವರ, ಕಡೂರು, ಬಿರೂರು, ಚಿಕ್ಕಜಾಜೂರು, ದಾವಣಗೆರೆ, ಹರಿಹರ, ರಾಣಿಬೆನ್ನೂರು, ಹಾವೇರಿ, ಸವಣೂರು ಮಾರ್ಗವಾಗಿ ಎಂದಿನಂತೆ ಮಧ್ಯಾಹ್ನ 12:15 ಗಂಟೆಗೆ ಹುಬ್ಬಳ್ಳಿ ತಲುಪಲಿದೆ.

ಜೂ. 1ರಿಂದ ಹಜರತ್‌ ನಿಜಾಮುದ್ದೀನ-ಯಶವಂತಪುರ ವಾರದಲ್ಲಿ ಎರಡು ದಿನ ಸಂಚಾರ ಸೂಪರ್‌ಫಾಸ್ಟ್‌ ಎಕ್ಸಪ್ರೆಸ್(12630) ರೈಲು ಯಶಂತಪುರಕ್ಕೆ ಬೆಳಗ್ಗೆ 6:05ರ ಬದಲು 5:45 ಗಂಟೆಗೆ ತಲುಪಲಿದೆ. ಮಾರ್ಗ ನಡುವಿನ ಇನ್ನುಳಿದ ನಿಲ್ದಾಣಗಳಲ್ಲಿ ಸಮಯದಲ್ಲಿ ಯಾವುದೇ ಬದಲಾವಣೆಯಿಲ್ಲ.

ಜೂ. 2ರಿಂದ ಯಶವಂತಪುರ-ಹಜರತ್‌ ನಿಜಾಮುದ್ದೀನ (12629) ರೈಲು ಯಶವಂತಪುರದಿಂದ ಮಧ್ಯಾಹ್ನ 1:55ರ ಬದಲು 2:30 ಗಂಟೆಗೆ ಹೊರಟು ತುಮಕೂರು (3:20), ಅರಸೀಕೆರೆ (ಸಂಜೆ 4:37), ದಾವಣಗೆರೆ (6:38), ಹಾವೇರಿ (7:45) ಮಾರ್ಗವಾಗಿ ಹಜರತ್‌ ನಿಜಾಮುದ್ದೀನ ತಲುಪಲಿದೆ. ಹಾವೇರಿ-ಹಜರತ್‌ ನಿಜಾಮುದ್ದೀನ-ಹಾವೇರಿ ನಡುವೆ ವೇಳೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

ಜೂ. 4ರಿಂದ ಹುಬ್ಬಳ್ಳಿ-ಯಶವಂತಪುರ ವಾರದ ಎಕ್ಸ್‌ಪ್ರೆಸ್‌ (16544) ರೈಲು ಹುಬ್ಬಳ್ಳಿಯಿಂದ ಬೆಳಗ್ಗೆ 11:20ರ ಬದಲು 11:30 ಗಂಟೆಗೆ ಹೊರಡಲಿದೆ. ಹಾವೇರಿಯಿಂದ ಯಶವಂತಪುರ ನಡುವೆ ಹೊರಡು ರೈಲಿನ ಸಮಯ ಬದಲಾವಣೆಯಾಗಿಲ್ಲ.

ಜೂ. 3ರಿಂದ ಪಂಢರಪುರ-ಯಶವಂತಪುರ ವೀಕ್ಲಿ ಎಕ್ಸ್‌ಪ್ರೆಸ್‌ನ (16542) ರೈಲು ಯಶವಂತಪುರದಿಂದ ಬೆಳಗ್ಗೆ 6:05ಕ್ಕೆ ಹೊರಡುವ ಬದಲು 5:45 ಕ್ಕೆ ಹೊರಡಲಿದೆ. ಮಾರ್ಗ ನಡುವಿನ ಇನ್ನುಳಿದ ನಿಲ್ದಾಣಗಳಲ್ಲಿ ವೇಳೆಯಲ್ಲಿ ಯಾವುದೇ ಬದಲಾವಣೆಗಳಿಲ್ಲವೆಂದು ನೈಋತ್ಯ ರೈಲ್ವೆ ವಲಯ ಪ್ರಕಟಣೆ ತಿಳಿಸಿದೆ.

 

Donate Janashakthi Media

Leave a Reply

Your email address will not be published. Required fields are marked *