ಪ್ಯಾಲೆಸ್ತೀನ್‌ನ ಗಾಜಾ ಪಟ್ಟಿಯಲ್ಲಿ ಹಮಸ್ ಮತ್ತು ಇಸ್ರೇಲಿ ಪಡೆಗಳ ನಡುವೆ ದಾಳಿಗಳು ಮತ್ತು ಪ್ರತಿದಾಳಿಗಳು ನಡೆಯುತ್ತಿದ್ದು ಇವನ್ನು ಸಿಪಿಐ(ಎಂ) ಪೊಲಿಟ್ ಬ್ಯೂರೋ ಬಲವಾಗಿ ಖಂಡಿಸಿದೆ. ಈಗಾಗಲೇ ಹಲವು ಮಾನವ ಜೀವಗಳು ಬಲಿಯಾಗಿದ್ದು, ಇನ್ನಷ್ಟು ಸಾವು, ನೋವುಗಳಿಗೆ ಕಾರಣವಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಘರ್ಷಣೆ ಕೊನೆಗೊಳ್ಳಬೇಕು ಎಂದು ಅದು ಹೇಳಿದೆ. ಸಂಘರ್ಷ
ಇಸ್ರೇಲ್‌ನ ಅತ್ಯಂತ ಬಲಪಂಥೀಯ ನೆತನ್ಯಾಹು ಸರ್ಕಾರವು ಪ್ಯಾಲೆಸ್ಟೈನ್ ನೆಲಗಳನ್ನು ಬೇಕಾಬಿಟ್ಟಿಯಾಗಿ ಆಕ್ರಮಿಸಿಕೊಂಡಿದೆ ಮತ್ತು ಪಶ್ಚಿಮ ದಂಡೆಯಲ್ಲಿ ಯಹೂದಿ ವಸಾಹತುಗಳನ್ನು ಸ್ಥಾಪಿಸುತ್ತಿದೆ. ಈ ವರ್ಷ ಇಲ್ಲಿಯವರೆಗೆ, ಈ ಸಂಘರ್ಷದ ಮೊದಲು, 40 ಮಕ್ಕಳು ಸೇರಿದಂತೆ 248 ಪ್ಯಾಲೆಸ್ತೀನಿಯನ್ನರು ಜೀವ ಕಳೆದುಕೊಂಡಿದ್ದಾರೆ.
ಇದನ್ನೂ ಓದಿ: ನ್ಯೂಸ್ ಕ್ಲಿಕ್ ಮೇಲೆ ದಾಳಿ: ರೈತ, ಕಾರ್ಮಿಕರ ಧ್ವನಿ ಅಡಗಿಸುವ ಯತ್ನ: ಸಂಯುಕ್ತ ಹೋರಾಟ ಕರ್ನಾಟಕ ತೀವ್ರ ಖಂಡನೆ
ವಿಶ್ವಸಂಸ್ಥೆಯು ಪ್ಯಾಲೇಸ್ಟಿನಿಯನ್ ಜನರ ನೆಲೆನಾಡು ಹೊಂದುವ ಹಕ್ಕನ್ನು ಖಾತರಿಪಡಿಸಬೇಕು, ಎಲ್ಲಾ ಇಸ್ರೇಲಿ ಅಕ್ರಮ ವಸಾಹತುಗಳನ್ನು ಮತ್ತು ಪ್ಯಾಲೆಸ್ಟೈನ್ ಭೂಮಿಯನ್ನು ವಶಪಡಿಸಿಕೊಳ್ಳುವುದನ್ನು ಹಿಂತೆಗೆದುಕೊಳ್ಳುವಂತೆ ಮಾಡಬೇಕು ಮತ್ತು ಎರಡು ರಾಷ್ಟ್ರಗಳ ಪರಿಹಾರದ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯದ ಅನುಷ್ಠಾನವನ್ನು ಖಚಿತಪಡಿಸಬೇಕು ಎಂದು ಪೊಲಿಟ್‍ಬ್ಯುರೊ ಕೇಳಿದೆ. ವಿಶ್ವಸಂಸ್ಥೆಯ ಈ ನಿರ್ಣಯದ ಅನುಸಾರವಾಗಿ ಪ್ಯಾಲೆಸ್ತೀನ್ ಪೂರ್ವ ಜೆರುಸಲೇಮ್ ಅನ್ನು ರಾಜಧಾನಿಯಾಗಿ ಹೊಂದಿರಬೇಕು.
ವಿಶ್ವಸಂಸ್ಥೆ ಮತ್ತು ಭಾರತ ಸರ್ಕಾರ ಸೇರಿದಂತೆ ಅಂತರಾಷ್ಟ್ರೀಯ ಸಮುದಾಯ ಈ ಸಂಘರ್ಷ ತಕ್ಷಣ ನಿಲ್ಲುವಂತೆ ಖಚಿತಪಡಿಸಬೇಕು ಮತ್ತು ವಿಶ್ವಸಂಸ್ಥೆಯ ನಿರ್ಣಯದ ಜಾರಿಗೆ ಕೆಲಸ ಮಾಡಬೇಕು ಎಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ ಕರೆ ನೀಡಿದೆ.
ವಿಡಿಯೋ ನೋಡಿ: ಸೌಜನ್ಯ ಪ್ರಕರಣ : ಯಾವ ಬಾಯಿಂದ ಮುಗಿದ ಪ್ರಕರಣ ಅಂತ ಹೇಳ್ತೀರಿ? Janashakthi Media