ನವದೆಹಲಿ: ವೈಜ್ಞಾನಿಕವಾದ ತಳಮಟ್ಟದ ವರದಿ ಆಧರಿಸಿ ಮಾತ್ರ ತಜ್ಞರ ಸಮಿತಿಯು ಯೋಜನೆಗಳನ್ನು ಪರಿಗಣಿಸಬಹುದು’ ಅರಾವಳಿಯನ್ನು ಮಟ್ಟಲು ಯಾರಿಗೂ ಅವಕಾಶ ಕೊಡುವುದಿಲ್ಲ. ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.
ಎಲ್ಲಾ ಅಂಶಗಳನ್ನು ಪರಿಗಣಿಸಿ, ಸಮಗ್ರ ದೃಷ್ಟಿಯನ್ನು ಪರಿಗಣಿಸಿಯೇ ನಿರ್ಧಾರ ತೆಗೆದುಕೊಳ್ಳುತ್ತೇವೆ ಅರಾವಳಿಯು ಪೂರ್ಣ ಶ್ರೇಣಿಯನ್ನು ಹೊಂದಿದೆ ಎಂದು ತಿಳಿಸಿದೆ.
ಇದನ್ನೂ ಓದಿ : ಬೆಂಗಳೂರು| ‘ಕರಾವಳಿಯ ರಕ್ತ-ಕಣ್ಣೀರು’ ಪುಸ್ತಕ ಬಿಡುಗಡೆ ಫೆಬ್ರವರಿ 15ರಂದು
ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾ.ಜಾಯ್‌ಮಾಲ್ಯ ಬಾಗ್ಚಿ, ನ್ಯಾ. ವಿಪುಲ್ ಎಂ. ಪಂಚೋಲಿ ಅವರಿದ್ದ ಪೀಠವು, 1995 ಬಾಕಿ ಇರುವ ‘ಇನ್ ರೆ– ಟಿಎ.ನ್. ಗೋದವರ್ಮನ್ ಥಿರುಮುಲ್ಪಡ್’ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಮಧ್ಯಂತರ ವಿಚಾರಣೆಯಲ್ಲಿ ಈ ವಿಷಯ ಸ್ಪಷ್ಟಪಡಿಸಿದ್ದಾರೆ.
ಅರಾವಳಿಯು ಮೃಗಾಲಯದ ಸಫಾರಿಗೆ ಸಂಬಂಧಿಸಿದ ಯೋಜನೆಯಾಗಿದೆ.ಪರಿಷ್ಕೃತ ವಿಸ್ತೃತ ಯೋಜನಾ ವರದಿಯನ್ನು ಇನ್ನಷ್ಟೇ ಪರಿಶೀಲಿಸಬೇಕಾಗಿದೆ ಎಂದು ಹರಿಯಾಣದ ಪರ ವಕೀಲರು ನ್ಯಾಯಾಲಯದ ಗಮನಸೆಳೆದರು. ಸಫಾರಿ ಯೋಜನೆಯನ್ನು 3,300 ಎಕರೆಗೆ ಸೀಮಿತಗೊಳಿಸಲಾಗಿದೆ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ನ್ಯಾಯಪೀಠ, ‘ನಾವು ನಿಮಗೆ ಇಂದಿನಿಂದ ಒಂದು ಇಂಚಿಗೂ ಅವಕಾಶ ನೀಡುವುದಿಲ್ಲ’ ಎಂದು ಹೇಳಿದೆ.
ಇದನ್ನೂ ನೋಡಿ : ಅಖಿಲ ಭಾರತ ಮುಷ್ಕರ| ಪೊಲೀಸರ ದರ್ಪ – ಮಾನವೀಯತೆ ಕಳೆದುಕೊಂಡ ಸರಕಾರ Janashakthi Media
