ವಿಪಕ್ಷಗಳ ಜೊತೆ ನಂಟಿದೆ ಎಂದು ಒಪ್ಪಲು ವಿದ್ಯುತ್ ಶಾಕ್ ನೀಡಿ ಚಿತ್ರಹಿಂಸೆ | ನ್ಯಾಯಾಲಯಕ್ಕೆ ತಿಳಿಸಿದ ಸಂಸತ್‌ ಭದ್ರತಾ ಲೋಪ ಪ್ರಕರಣದ ಆರೋಪಿಗಳು

ಹೊಸದಿಲ್ಲಿ: ಸಂಸತ್ತಿನ ಭದ್ರತಾ ಉಲ್ಲಂಘನೆ ಪ್ರಕರಣದಲ್ಲಿ ಬಂಧಿತರಾಗಿರುವ ಆರೋಪಿಗಳಿಗೆ ವಿರೋಧ ಪಕ್ಷಗಳ ಜೊತೆಗೆ ನಂಟಿದೆ ಎಂದು ಒಪ್ಪಿಕೊಳ್ಳುವಂತೆ ಒತ್ತಾಯಿಸಿ ದೆಹಲಿ ಪೊಲೀಸರು ಚಿತ್ರಹಿಂಸೆ ನೀಡಿದ್ದಾರೆ ಎಂದು ಪ್ರಕರಣದಲ್ಲಿ ಬಂಧಿತರಾಗಿರುವ ಆರು ಜನರಲ್ಲಿ ಐವರು ನ್ಯಾಯಾಲಯದಲ್ಲಿ ಬುಧವಾರ ಹೇಳಿದ್ದಾರೆ.ಭದ್ರತಾ ಲೋಪ

ಆರೋಪಿಗಳ ಹೇಳಿಕೆಯನ್ನು ದಾಖಲಿಸಿಕೊಂಡಿರುವ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಹರ್ದೀಪ್ ಕೌರ್ ಅವರು ಈ ವಿಷಯದಲ್ಲಿ ಪೊಲೀಸರಿಂದ ಪ್ರತಿಕ್ರಿಯೆ ಕೋರಿದ್ದಾದ್ದು, ಅರ್ಜಿಯ ವಿಚಾರಣೆಯನ್ನು ಫೆಬ್ರವರಿ 17ಕ್ಕೆ ನಿಗದಿಪಡಿಸಿದ್ದಾರೆ. ಅದೇ ವೇಳೆ ನ್ಯಾಯಾಲಯವು ಎಲ್ಲಾ ಆರು ಆರೋಪಿಗಳ ನ್ಯಾಯಾಂಗ ಬಂಧನವನ್ನು ಮಾರ್ಚ್ 1 ರವರೆಗೆ ವಿಸ್ತರಿಸಿದೆ.ಭದ್ರತಾ ಲೋಪ

ಇದನ್ನೂ ಓದಿ: ನ್ಯೂಸ್‌ಕ್ಲಿಕ್ ಪ್ರಕರಣ | ಸಂಸ್ಥಾಪಕ & ಮಾನವ ಸಂಪನ್ಮೂಲ ಮುಖ್ಯಸ್ಥರ ಕಸ್ಟಡಿ ಫೆಬ್ರವರಿ 17 ರವರೆಗೆ ವಿಸ್ತರಣೆ

ಪೊಲೀಸರು ಸುಮಾರು 70 ಖಾಲಿ ಕಾಗದಗಳಿಗೆ ಬಲವಂತವಾಗಿ ಸಹಿ ಹಾಕಿಸಿದ್ದಾರೆ ಎಂದು ಐವರು ಆರೋಪಿಗಳಾದ ಮನೋರಂಜನ್ ಡಿ, ಸಾಗರ್ ಶರ್ಮಾ, ಲಲಿತ್ ಝಾ, ಅಮೋಲ್ ಶಿಂಧೆ ಮತ್ತು ಮಹೇಶ್ ಕುಮಾವತ್ ಅವರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಪ್ರಕರಣದ ಆರನೇ ಆರೋಪಿ ನೀಲಂ ಆಜಾದ್ ಎಂಬ ಮಹಿಳೆಯಾಗಿದ್ದಾರೆ.ಭದ್ರತಾ ಲೋಪ

“ಯುಎಪಿಎ ಅಡಿಯಲ್ಲಿ ಅಪರಾಧ ಮಾಡಿರುವುದಾಗಿ ತಪ್ಪೊಪ್ಪಿಕೊಳ್ಳಲು ಮತ್ತು ರಾಷ್ಟ್ರೀಯ ರಾಜಕೀಯ ಪಕ್ಷಗಳೊಂದಿಗೆ ತಮಗೆ ಸಂಬಂಧವಿದೆ ಎಂದು ಸಹಿ ಹಾಕಲು ವಿದ್ಯುತ್ ಶಾಕ್ ನೀಡಿ ಚಿತ್ರಹಿಂಸೆ ನೀಡಲಾಯಿತು” ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

2001 ರಂದು ನಡೆದ ಸಂಸತ್ತಿನ ಭಯೋತ್ಪಾದಕ ದಾಳಿಯ ದಿನದಂದೆ ಸಂಸತ್ತಿನಲ್ಲಿ ಭಾರಿ ಭದ್ರತಾ ಲೋಪವಾಗಿತ್ತು. ಮೈಸೂರಿನ ಸಾಗರ್ ಶರ್ಮಾ ಮತ್ತು ಮನೋರಂಜನ್ ಡಿ. ಕಳೆದ ವರ್ಷ ಡಿಸೆಂಬರ್ 13 ರಂದು ಸಂಸತ್ತಿನ ಶೂನ್ಯ ವೇಳೆಯಲ್ಲಿ ಸಾರ್ವಜನಿಕ ಗ್ಯಾಲರಿಯಿಂದ ಲೋಕಸಭೆಯ ಕೊಠಡಿಗೆ ಜಿಗಿದು, ಹಳದಿ ಹೊಗೆ ಸೂಸುವ ಬಾಂಬ್ ಎಸೆದಿದ್ದರು. ಈ ವೇಳೆ ಅವರು ಕೆಲವು ಘೋಷಣೆ ಕೂಡಾ ಕೂಗಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: 16 ನೇ ಹಣಕಾಸು ಆಯೋಗಕ್ಕೆ 4 ಸದಸ್ಯರನ್ನು ನೇಮಿಸಿದ ಕೇಂದ್ರ ಸರ್ಕಾರ

ಅದೇ ಸಮಯದಲ್ಲಿ, ಇತರ ಇಬ್ಬರು ಆರೋಪಿಗಳಾದ ಅಮೋಲ್ ಶಿಂಧೆ ಮತ್ತು ನೀಲಂ ಆಜಾದ್ ಅವರ ಸಂಸತ್ತಿನ ಆವರಣದ ಹೊರಗೆ “ತನಾಶಾಹಿ ನಹೀ ಚಲೇಗಿ” ಎಂದು ಕೂಗುತ್ತಾ ಬಣ್ಣದ ಬಾಂಬ್‌ಗಳನ್ನು ಬೀಸಿದ್ದಾರೆ. ಅಲ್ಲಿಂದ ಭದ್ರತಾ ಸಿಬ್ಬಂದಿಗಳು ಅವರನ್ನು ಬಂಧಿಸಿದ್ದಾರೆ. ಈ ನಾಲ್ವರನ್ನು ಸ್ಥಳದಿಂದ ವಶಕ್ಕೆ ಪಡೆಯಲಾಗಿದ್ದು, ಇತರ ಆರೋಪಿಗಳಾದ ಲಲಿತ್ ಝಾ ಮತ್ತು ಮಹೇಶ್ ಕುಮಾವತ್ ಅವರನ್ನು ನಂತರ ಬಂಧಿಸಲಾಗಿತ್ತು.

ಆರೋಪಿ ಮನೋರಂಜನ್ ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರ ಕಚೇರಿಯಿಂದ ಪಡೆದ ಪಾಸ್ ಮೂಲಕ ಸಂಸತ್ತು ಪ್ರವೇಶಿಸಿದ್ದರು. ಅಲ್ಲದೆ, ಅವರು ಪ್ರಧಾನಿ ಮೋದಿ ಅವರ ಅಭಿಮಾನಿಯಾಗಿದ್ದರು ಎಂದು ಅವರ ತಂದೆ ನಂತರ ಮಾಧ್ಯಮಗಳಿಗೆ ಹೇಳಿದ್ದರು. ಜೊತೆಗೆ ತಾವು ಪ್ರತಾಪ್ ಸಿಂಹ ಅವರ ಆಪ್ತ ವಲಯದವರು ಎಂದು ಹೇಳಿದ್ದರು.

ಭದ್ರತಾ ಲೋಪದ ಬಗ್ಗೆ ಸಂಸತ್ತಿನಲ್ಲಿ ಉತ್ತರಿಸಬೇಕು ಎಂದು ವಿಪಕ್ಷಗಳು ಘಟನೆಯ ನಂತರ ಪಟ್ಟು ಹಿಡಿದಿದ್ದವು. ಆದರೆ ಸರ್ಕಾರ ಇದಕ್ಕೆ ಕಿವಿಗೊಡದೆ ಪ್ರತಿಭಟನೆ ನಡೆಸಿದ ಸಂಸದರನ್ನು ಸಾಮೂಹಿಕವಾಗಿ ಅಮಾನತು ಮಾಡಿತ್ತು. ಜೊತೆಗೆ ವಿಪಕ್ಷಗಳ ಸಂಸದರ ಉಪಸ್ಥಿತಿಯಿಲ್ಲದೆ ಅನೇಕ ಮಸೂದೆಗಳನ್ನು ಮಂಡಿಸಿತ್ತು.

ವಿಡಿಯೊ ನೋಡಿ: ಓ! ಹಾಗಾದರೆ ನೀವೂ ನಮ್ಹಾಗೆ…! ಮೂಲ : ಫಾಹ್ಮಿದಾ ರಿಯಾಜ್, ಭಾವಾನುವಾದ – ಬಿ.ಸುರೇಶ್ Janashakthi Media

Donate Janashakthi Media

One thought on “ವಿಪಕ್ಷಗಳ ಜೊತೆ ನಂಟಿದೆ ಎಂದು ಒಪ್ಪಲು ವಿದ್ಯುತ್ ಶಾಕ್ ನೀಡಿ ಚಿತ್ರಹಿಂಸೆ | ನ್ಯಾಯಾಲಯಕ್ಕೆ ತಿಳಿಸಿದ ಸಂಸತ್‌ ಭದ್ರತಾ ಲೋಪ ಪ್ರಕರಣದ ಆರೋಪಿಗಳು

  1. ಸಂಸತ್ ನೊಳಗೆ ಪ್ರವೇಶಿಸಿದವರು ‘ಹೊಗೆ ಬಾಂಬ್ ಸಿಡಿಸಿದರು’ ಎನ್ನುವುದನ್ನು ಬಿಜೆಪಿ ಪರವಾದ ಪತ್ರಿಕೆಗಳು ಘಟನೆಗೆ ಭಯೋತ್ಪಾದಕ ಪ್ರಕರಣದ ತಿರುವು ಕೊಡಲು ಬಳಸುತ್ತಿವೆ. ಆದರೆ ಅದೊಂದು ಹೊಗೆ ಉಗುಳುವ ಡಬ್ಬಿಯಾಗಿತ್ತಷ್ಟೆ ಹೊರತು, ಯಾರನ್ನೋ ಕೊಲ್ಲುವ ಉದ್ದೇಶದಿಂದ ಮಾಡಿಸಿ ತಂದ ಬಾಂಬ್ ಆಗಿರಲಿಲ್ಲ. ಅಲ್ಲಿ ಯಾವ ಡಬ್ಬಿಗಳೂ ಸ್ಫೋಟಿಸಿ ಸಾವುನೋವುಗಳನ್ನು ಉಂಟು ಮಾಡಿರಲಿಲ್ಲ. ಅದು ಅವರ ಉದ್ದೇಶವೂ ಆಗಿರಲಿಲ್ಲ. ಅವರೇ ಹೇಳಿಕೊಂಡಿರುವಂತೆ ಗಮವ ಸೆಳೆಯಲಷ್ಟೇ ಬಳಸಲಾಗಿದೆ.

    ಹಾಗೆ ನಾವೂ ಸಹ ಬಳಸಿದರೆ ಇಲ್ಲದ ಭಯೋತ್ಪಾದನೆಯನ್ನು ಇರುವಂತೆ ಚಿತ್ರಿಸಿದಂತಾಗುವುದಿಲ್ಲವೆ? ಭಾರತದಲ್ಲಿ ನಿರುದ್ಯೋಗಿಗಳ ಸ್ಷೋಟಗೊಳ್ಳಲು ರಡಿ ಇರುವ ಧ್ವನಿಯನ್ನು ಅದುಮಿ ಹಿಡಿಯಲಾಗಿದೆ. ಅದು ಹೀಗೆಯೇ ಸ್ಫೋಟಿಸಬಹುದು ಎನ್ನಲಾಗದು. ಅವರೆಲ್ಲ ನಿರುದ್ಯೋಗಿಗಳೇ ಆಗಿದ್ದು ಪ್ರತಿಭಟಿಸಿ ದೇಶದ ಆಳುವ ವರ್ಗದ ಗಮನ ಸೆಳೆಯಲು ಈ ಮಾರ್ಗ ಅನುಸರಿಸಿದ್ದಾರೆ. ಆ ಮೂಲಕ ದೇಶದ ನಿರುದ್ಯೋಗಿಗಳ ಪರ ಧ್ವನಿ ಎತ್ತಿದ್ದಾರೆ.

    ಆದ್ದರಿಂದ ಈ ಶಬ್ದವನ್ನು ಬಳಸುವಾಗ ‘ಹೊಗೆ ಉಗುಳುವ ಬಣ್ಡದ ಡಬ್ಬಿ’ ಎಂದಷ್ಟೆ ಬಳಸಿದರೆ ಸಾಕು ಎನ್ನುವುದು ನನ್ನ ಅನಿಸಿಕೆ.

    ದಯಾನಂದ ಮೂರ್ತಿ ಕುಕ್ಕರಹಳ್ಳಿ
    ದಿನಾಂಕ ೮.೨.೨೪

Leave a Reply

Your email address will not be published. Required fields are marked *