ವಾರದಲ್ಲಿ 70ಗಂಟೆ ದುಡಿಯಬೇಕಂತೆ!

ಪಲ್ಲವಿ ಇಡೂರ್

ದ್ದ ಒಬ್ಬನೇ ತಮ್ಮನನ್ನು ಮಾನಸಿಕ ಒತ್ತಡದಿಂದ, ಹೈ ಬಿಪಿ ಯಾಗಿ ಬ್ರೈನ್ ಹ್ಯಾಮರೇಜ್‌ನಿಂದ 41ರ ವಯಸ್ಸಿನಲ್ಲಿ ನಿನ್ನೆಯಷ್ಟೇ ಕಳೆದುಕೊಂಡೆ! ಉಳಿಸಿಕೊಳ್ಳುವುದಕ್ಕೆ ಒಂದು ಚಿಕ್ಕ ಅವಕಾಶವೂ ಇಲ್ಲದೆ ಕೈಚೆಲ್ಲಿದ್ದು ನೆನೆಸಿಕೊಂಡರೆ ಮೈ ನಡುಗುತ್ತದೆ! ಈ ಪರಿ ಕೆಲಸ ಮಾಡಿಸಿಕೊಂಡ ಕಂಪೆನಿಗಳಾಗಲಿ, ಆ ಹಣವಾಗಲಿ, ಅಥವಾ ಯಾವುದೇ ಇನ್ಶೂರೆನ್ಸ್‌ಗಳಾಗಲಿ ಅವನನ್ನು ವಾಪಾಸ್ ತಂದುಕೊಡಲಾರವು. ವಾರದಲ್ಲಿ

ದಿನಕ್ಕೆ 16-17ಗಂಟೆ ಯಾರೋ ಕಟ್ಟಿದ ಕಂಪೆನಿಯಲ್ಲಿ ಕಲ್ಪಿಸಿದ ದೊಡ್ಡ ಹುದ್ದೆ, ದೊಡ್ಡ ಸಂಬಳವೆಂಬ ಆಮಿಷಕ್ಕೆ ಬಿದ್ದು ದುಡಿಯುವುದಲ್ಲದೆ, ಕೋವಿಡ್ ನಂತರ ಈ ಕಂಪೆನಿಗಳು ಕೊಡುವ ಕೆಲಸದ ಒತ್ತಡ, ಮಾನಸಿಕ ಹಿಂಸೆ ಅನುಭವಿಸಿದವರಿಗೇ ಗೊತ್ತು. ಮೇಲೆ ಇವರ ದುಡ್ಡು ಉಳಿತಾಯದ ಆಸೆಗೆ ಯಾರು ಮಾತಾಡದೇ ಕೆಲಸ ಮಾಡುತ್ತಾರೊ ಅವರುಗಳಿಗೆ ಮೇಲಿಂದ ಮೇಲೆ ಟಾರ್ಗೆಟ್ ಸೆಟ್ ಮಾಡಿ, ಓವರ್ ಲೋಡ್ ಆಗುವಷ್ಟು ಕೆಲಸ ಕೊಟ್ಟು ಅವರಿಂದ ಜೀತ ಮಾಡಿಸಿಕೊಳ್ಳುತ್ತಾರೆ. ಇದರ ಮುಂದೆ ವಾರಕ್ಕೆ 70ಗಂಟೆ ಯಾವ ಲೆಕ್ಕವೂ ಅಲ್ಲ. ಇವತ್ತಿಲ್ಲಿ ಬಾಯಿ ಬಡಿದುಕೊಳ್ಳುತ್ತಿರುವವರು ಆ ನಿಜವಾದ ಪ್ರೆಶರ್ ಅನುಭವಿಸಿಲ್ಲ!! ವಾರದಲ್ಲಿ

ಇದ್ದ ಒಬ್ಬನೇ ತಮ್ಮನನ್ನು ಮಾನಸಿಕ ಒತ್ತಡದಿಂದ, ಹೈ ಬಿಪಿ ಯಾಗಿ ಬ್ರೈನ್ ಹ್ಯಾಮರೇಜ್‌ನಿಂದ 41ರ ವಯಸ್ಸಿನಲ್ಲಿ ನಿನ್ನೆಯಷ್ಟೇ ಕಳೆದುಕೊಂಡೆ! ಉಳಿಸಿಕೊಳ್ಳುವುದಕ್ಕೆ ಒಂದು ಚಿಕ್ಕ ಅವಕಾಶವೂ ಇಲ್ಲದೆ ಕೈಚೆಲ್ಲಿದ್ದು ನೆನೆಸಿಕೊಂಡರೆ ಮೈ ನಡುಗುತ್ತದೆ! ಈ ಪರಿ ಕೆಲಸ ಮಾಡಿಸಿಕೊಂಡ ಕಂಪೆನಿಗಳಾಗಲಿ, ಆ ಹಣವಾಗಲಿ, ಅಥವಾ ಯಾವುದೇ ಇನ್ಶೂರೆನ್ಸ್‌ಗಳಾಗಲಿ ಅವನನ್ನು ವಾಪಾಸ್ ತಂದುಕೊಡಲಾರವು.. ವಾರದಲ್ಲಿ

ಇದನ್ನೂ ಓದಿ: ನಳಸಂಪರ್ಕ ಕಾಮಗಾರಿಗಳ ಗುಣಮಟ್ಟದಲ್ಲಿ ಸುಧಾರಣೆ ತರಲು ತಪಾಸಣೆ| ಸಚಿವ ಪ್ರಿಯಾಂಕ್ ಖರ್ಗೆ

ಅತಿಯಾಗಿ ಕೆರಿಯರ್‌ನ ಚಿಂತೆಗೆ ಬಿದ್ದು ಹೈಬಿಪಿಯಂತಹ ಪ್ರಾಣಾಂತಿಕ ಸಮಸ್ಯೆಗಳನ್ನು ತಂದುಕೊಳ್ಳದಿರಿ. ಸಮಸ್ಯೆಗಳು ಶುರುವಾಗುವ ಹಂತದಲ್ಲೇ ಗಮನಿಸಿ ಸರಿಪಡಿಸಿಕೊಂಡರೆ, ಒಳ್ಳೆಯ ಜೀವನಶೈಲಿ, ಆಹಾರ ಪದ್ಧತಿ ರೂಪಿಸಿಕೊಂಡರೆ ಬಹುತೇಕ ಸಮಸ್ಯೆಗಳನ್ನು ತಡೆಗಟ್ಟಬಹುದು. ಅದರ ಕಡೆ ಗಮನ ಹರಿಸಿ. ಚಿಂತೆ ಚಿತೆಯೊರೆಗೂ ಕೊಂಡೊಯ್ಯುತ್ತದೆ! ಬಿಪಿ, ಕೊಲೆಸ್ಟರಾಲ್ ಇವೆಲ್ಲ ಧುತ್ತೆಂದು ಎದುರಾಗಿ ಎಳೆದುಕೊಂಡು ಹೋಗುವಂತವುಗಳು. ಆಗಾಗ ಹೆಲ್ತ್‌ಚೆಕ್ ಅಪ್‌ಗಳು, ಬ್ಲಡ್ ಚೆಕ್ ಅಪ್ ಮಾಡಿಸ್ತಿರಿ. ಯಾವತ್ತಿಗೂ ನಿರ್ಲಕ್ಷಿಸಬೇಡಿ.

ಇಂತಹ ಮಲ್ಟಿ ಮಿಲಿಯನೇರ್ ವ್ಯವಹಾರಸ್ಥರಿಗೆ ನೀವು ದುಡಿದಷ್ಟೂ ಲಾಭ. ಆ ಆಮಿಷಕ್ಕೆ ಜೀವನ ಬಲಿಕೊಡದಿರಿ. ಬದುಕುವುದಕ್ಕಾಗಿ ದುಡಿಯಬೇಕೇ ಹೊರತು ದುಡಿಯುವುದಕ್ಕಾಗಿ ಬದುಕುವುದಲ್ಲ!!

ವಿಡಿಯೋ ನೋಡಿ:“ಇಸ್ರೇಲ್ ಪ್ಯಾಲಿಸ್ಟೈನ್ ಯುದ್ಧ”ದ ಹಿನ್ನೆಲೆ ಏನು? Janashakthi Media

Donate Janashakthi Media

Leave a Reply

Your email address will not be published. Required fields are marked *