ಎರಡು ಲಕ್ಷಕ್ಕೂ ಹೆಚ್ಚು ಮೌಲ್ಯದ ಸೀಸ ಜಾತಿಯ ವಶಕ್ಕೆ- ಮೂವರು ಕಾಡುಗಳ್ಳರ ಬಂಧನ

ಕಾರವಾರ:- ಅಕ್ರಮವಾಗಿ ಸಾಗುವಾನಿ ಹಾಗೂ ಸೀಸಂ ಜಾತಿಯ ಮರದ‌ ತುಂಡಗಳ ಸಾಗಾಟ ಮಾಡುತಿದ್ದ ಮೂವರು ಆರೋಪಿಗಳನ್ನು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಇಡಗುಂದಿ ವಲಯದ ಅರಣ್ಯ ಅಧಿಕಾರಿಗಳು ಬಂಧಿಸಿದ್ದಾರೆ.

ಯಲ್ಲಾಪುರ ಪ್ರಾದೇಶಿಕ ವಿಭಾಗದ ಇಡಗುಂದಿ ವಲಯದ ಅರಬೈಲ್ ಪ್ರದೇಶ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು,ರಾಷ್ಟ್ರೀಯ ಹೆದ್ದಾರಿ-63 ರ ಅರಬೈಲ್- ಇಡಗುಂದಿ ಮಾರ್ಗದಲ್ಲಿ ನಅರಣ್ಯದಿಂದ‌ ಅಕ್ರಮವಾಗಿ 4 ಸಾಗುವಾನಿ ಮರಗಳು 1 ಸೀಸಂ ಜಾತಿಯ ಮರಗಳನ್ನು ಕತ್ತರಿಸಿ ಸಾಗಾಟ ಮಾಡುತಿದ್ದರು.

ಇದನ್ನು ಓದಿ :-“ ಒಕ್ಕೂಟ ತತ್ವ ಭಾರತದ ಶಕ್ತಿ” – ಮಹಾಧಿವೇಶನದ ಸಂದರ್ಭದಲ್ಲಿ ವಿಶೇಷ ವಿಚಾರ ಸಂಕಿರಣ

ಆರೋಪಿಗಳಾದ ಮಹಾಬಲೇಶ್ವ‌ರ್ ಬೀರಪ್ಪ ಹರಿಕಂತ್ರ, ಸಂದೀಪ ಸದಾನಂದ ನಾಯ್ಕ ಹಾಗೂ ಸುರೇಶ್ ತುಳಸು ಗೌಡ ಬಂದನಕ್ಕೊಳಗಾದವರಾಗಿದ್ದು 2,50,000ರೂ. ಮೌಲ್ಯದ ಒಟ್ಟು 2.161 ಕ್ಯೂಬಿಕ್ ಮೀಟರ್ ನಷ್ಟು ತುಂಡುಗಳು ವಶಕ್ಕೆ ಪಡೆಯಲಾಗಿದೆ.

ಕಾರ್ಯಾಚರಣೆಯಲ್ಲಿ ಇಡಗುಂದಿ ವಲಯ ಅರಣ್ಯಾಧಿಕಾರಿ ಮಂಜುನಾಥ್ ನಾಯಕ್, ಅಧಿಕಾರಿಗಳಾದ ಸೋಮಶೇಖರ್ ನಾಯಕ್,ಸಂತೋಷ್ ಪವಾರ್, ಚಂದ್ರಹಾಸ ಪಟಗಾರ, ಅರಣ್ಯ ಪಾಲಕ ಕಾಶಿನಾಥ್ ಯಂಕಂಚಿ ಭಾಗಿಯಾಗಿದ್ದರು.

ಇದನ್ನು ಓದಿ :-ಕೆಪಿಸಿಸಿ ಅಧ್ಯಕ್ಷರ ಆಯ್ಕೆಯ ಮಾನದಂಡ ಬಗ್ಗೆ ಮಾಹಿತಿ ಇಲ್ಲ- ಸತೀಶ್ ಜಾರಕಿಹೊಳಿ

ಆರೋಪಿ ಮಹಾಬಲೇಶ್ವರ್ ಬೀರಪ್ಪ ಹರಿಕಂತ್ರ ಎಂಬಾತ ನಟೋರಿಯಸ್ ಕಾಡುಗಳ್ಳನಾಗಿದ್ದು ,ಈತನ ಮೇಲೆ ಅರಣ್ಯ ಇಲಾಖೆಯ ವಿವಿಧ ವಲಯಗಳಲ್ಲಿ ಹಲವು ಎಫ್.ಐ.ಆರ್ ಗಳು ದಾಖಲಾಗಿದೆ.

ಪ್ರತೀ ಬಾರಿ ಪರಾರಿಯಾಗುತ್ತಿದ್ದ ಆರೋಪಿ ಕೊನೆಗೂ ಅರಣ್ಯ ಇಲಾಖೆಯ ವಶಕ್ಕೆ ಪಡೆಯುವಲ್ಲಿ ಸಫಲರಾಗಿದ್ದು,ಮೂವರು ಆರೋಪಿಗಳ ವಿರುದ್ಧ ಇಡಗುಂಡಿ ಅರಣ್ಯ ಇಲಾಖಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Donate Janashakthi Media

Leave a Reply

Your email address will not be published. Required fields are marked *