ಮುಕ್ಕಾಲು ಪಾಲು ಶಾಸಕರು ದಶಕೋಟ್ಯಾಧಿಪತಿಗಳು

ಈ ಬಾರಿ ಚುನಾಯಿತರಾದ ಶಾಸಕರ ಸರಾಸರಿ ಆಸ್ತಿ ಮೊತ್ತ 64.39 ಕೋಟಿರೂ. ಎಂದು ಎಡಿಆರ್(ಅಸೋಸಿಯೇಷನ್ ಫಾರ್‌ ಡೆಮಾಕ್ರಟಿಕ್‌ ರಿಫಾರ್ಮ್ಸ್) ಬಿಡುಗಡೆ ಮಾಡಿರುವ ವರದಿ ಹೇಳಿದೆ. ಅಭ್ಯರ್ಥಿಗಳು ಚುನಾವಣಾಆಯೋಗಕ್ಕೆ ಸಲ್ಲಿಸುವ ವಿವರಗಳ ಆಧಾರದಲ್ಲಿ 97% ಶಾಸಕರು ಕೋಟ್ಯಾಧಿಪತಿಗಳು, 5 ಕೋಟಿರೂ.ಗಿಂತ ಹೆಚ್ಚು ಆಸ್ತಿ ಇರುವವರ ಪ್ರಮಾಣ 81 %  ಎಂದು ಅದು ಲೆಕ್ಕ ಹಾಕಿದೆ. ಇದು ನಮ್ಮ ಚುನಾವಣೆಗಳಲ್ಲಿ ಹಣದ ಹೆಚ್ಚುತ್ತಿರುವ ಪ್ರಭಾವದ ಒಂದು ಆತಂಕಕಾರಿ ನೋಟವನ್ನು ಕಟ್ಟಿಕೊಡುತ್ತಿದೆ.

ಕೆಲವು ವಿವರಗಳನ್ನು ನೋಡಿ:

ರೂ,50 ಲಕ್ಷ.ಕ್ಕಿಂತ ಕಡಿಮೆ                    2              1%
ರೂ. 50 ಲಕ್ಷದಿಂದ 2 ಕೋಟಿ               10            4%
ರೂ.2 ಕೋಟಿಯಿಂದ 5ಕೋಟಿ            31            14%
ರೂ.5  ಕೋಟಿಗಿಂತ ಹೆಚ್ಚು                  180        81%

ರಾಜ್ಯದ ಮೂರು ಪ್ರಮುಖ ಪಕ್ಷಗಳ ಪಕ್ಷವಾರು ಸರಾಸರಿ ಹೀಗಿದೆ:
ಕಾಂಗ್ರೆಸ್ :ರೂ. 67.13 ಕೋಟಿ ಬಿಜೆಪಿ: ರೂ.44.36   ಕೋಟಿ ಜೆಡಿ(ಎಸ್): ರೂ..46.01 ಕೋಟಿ
2018 ರಲ್ಲಿ ಆರಿಸಿ ಬಂದವರಲ್ಲಿ ಈ ಬಾರಿಯೂ ಸ್ಪರ್ಧಿಸಿದವರ ಸಂಖ್ಯೆ189. ಕಳೆದ 5 ವರ್ಷಗಳಲ್ಲಿ ಅವರ ಆಸ್ತಿಗಳಲ್ಲಿ ಸರಾಸರಿ 29ಕೋಟಿರೂ.ನಿಂದ 48

ಕೊಟಿರೂ. ಅಂದರೆ ಸರಾಸರಿ 67% ಏರಿಕೆಆಗಿದೆ. ಮೂರು ಪ್ರಮುಖ ಪಕ್ಷಗಳ ಶಾಸಕರ ಸರಾಸರಿ ಆಸ್ತಿ ಲೆಕ್ಕಾಚಾರ ಹೀಗಿದೆ:

ಪಕ್ಷ               ಸಂಖ್ಯೆ        ಸರಾಸರಿ ಆಸ್ತಿ 2023      ಸರಾಸರಿ ಆಸ್ತಿ 2018         ಏರಿಕೆ                           %
ಕಾಂಗ್ರೆಸ್          51              ರೂ.73.21.85.524         ರೂ.43.65.12.305           ರೂ.29,56,73,219            67.74

ಬಿಜೆಪಿ              38             ರೂ.35.17.60098          ರೂ. 20.77.28.989          ರೂ.14,40,31,109           69.34

ಜೆಡಿ(ಎಸ್)       4              ರೂ.36.68.58.925        ರೂ.24.18.99.358          ರೂ.12,49,59,567               51.66

ಇವರಲ್ಲಿ ಈ ಬಾರಿಯೂಚುನಾಯಿತರಾದ 93 ಶಾಸಕರ ಆಸ್ತಿಗಳಲ್ಲಿ ಸರಾಸರಿ 29 ಕೋಟಿರೂ., ಅಂದರೆ 68% ಏರಿಕೆಯಾಗಿದೆ. ಪಕ್ಷವಾರು ವಿವರ ಹೀಗಿದೆ:

ಪಕ್ಷ                 ಸಂಖ್ಯೆ            ಸರಾಸರಿ ಆಸ್ತಿ 2023          ಸರಾಸರಿ ಆಸ್ತಿ 2018           ಏರಿಕೆ                 %
ಕಾಂಗ್ರೆಸ್            51                    ರೂ.66ಕೋಟಿ+                    ರೂ.52 ಕೋಟಿ+             ರೂ.37ಕೋಟಿ+       71.21
ಬಿಜೆಪಿ                38                    ರೂ.95 ಕೋಟಿ +                  ರೂ. 27 ಕೋಟಿ +           ರೂ.18 ಕೋಟಿ+      66.88
ಜೆಡಿ(ಎಸ್)         4                      ರೂ.26 ಕೋಟಿ +                  ರೂ.53 ಕೋಟಿ+             ರೂ.21 ಕೋಟಿ+       39.68

ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ, ಮರುಆಯ್ಕೆ ಪಡೆದ ಪ್ರಮುಖ ರಾಜಕೀಯ ಪಕ್ಷಗಳ ಅಭ್ಯರ್ಥಿಗಳ ಸರಾಸರಿ ಆಸ್ತಿಮೌಲ್ಯ, ಮರುಆಯ್ಕೆ ಬಯಸಿದ ಒಟ್ಟು ಅಭ್ಯರ್ಥಿಗಳ ಸರಾಸರಿಗಿಂತ ಹೆಚ್ಚು- ಅನುಕ್ರಮವಾಗಿ 1.23 ಪಟ್ಟು(ಕಾಂಗ್ರೆಸ್), 1.28 ಪಟ್ಟು(ಬಿಜೆಪಿ) ಮತ್ತು 2 ಪಟ್ಟು(ಜೆಡಿ-ಎಸ್). ಮತ್ತು ಈ ಚುನಾವಣೆಯಲ್ಲಿ ಸ್ಪರ್ಧಿಸಿರುವ ಒಟ್ಟು 2586 ಅಭ್ಯರ್ಥಿಗಳ ಸರಾಸರಿ ಆಸ್ತಿ ರೂ.12.26 ಕೋಟಿಯಾದರೆ, ಗೆದ್ದ 224 ಅಭ್ಯರ್ಥಿಗಳ ಸರಾಸರಿ ಆಸ್ತಿ ಮೊತ್ತ 64.39 ಕೋಟಿರೂ. ಅಂದರೆ 5 ಪಟ್ಟಿಗಿಂತಲೂ ಹೆಚ್ಚು! ಅಂದರೆ ಆಸ್ತಿ ಹೆಚ್ಚಿದ್ದಷ್ಟು ಶಾಸಕರಾಗುವ ಅವಕಾಶ/ಸಾಧ್ಯತೆಹೆಚ್ಚು .

ಹೆಚ್ಚೆಚ್ಚು ಶ್ರೀಮಂತ ಶಾಸಕರು ಇನ್ನೊಂದು ಮೂಲದ ಪ್ರಕಾರ ಈ ಬಾರಿ ಪಕ್ಷವಾರು ಅಭ್ಯರ್ಥಿಗಳು ಮತ್ತುಗೆದ್ದವರ ನಿವ್ವಳ ಸರಾಸರಿ ಆಸ್ತಿಗಳ ಹೋಲಿಕೆಯನ್ನು ನೋಡಿ:

ಪಕ್ಷ          ಅಭ್ಯರ್ಥಿಗಳು      ಶಾಸಕರು
ಕಾಂಗ್ರೆಸ್      36.03 ಕೋಟಿ     46.52ಕೋಟಿ
ಬಿಜೆಪಿ        31.07 ಕೋಟಿ     34.56 ಕೋಟಿ
ಜೆಡಿ(ಎಸ್)    19.50 ಕೋಟಿ     33.61 ಕೋಟಿ

ಹೆಚ್ಚಿನ ರಾಜ್ಯಗಳಲ್ಲಿ ಶಾಸಕರುತಮ್ಮ ನಿಜವಾದ ವೃತ್ತಿಯನ್ನುರಾಜಕೀಯಅಥವ ಸಾಮಾಜಿಕ ಸೇವೆ ಎಂದು ಹೇಳಿ ಮರೆಮಾಚುತ್ತಾರೆ.
ಆದರೆಕರ್ನಾಟಕದಲ್ಲಿ ಹಾಗಾಗಿಲ್ಲ. ಅಭ್ಯರ್ಥಿಗಳು ಸಲ್ಲಿಸಬೇಕಾದ ಅಫಿಡವಿಟ್‌ಗಳ ಪ್ರಕಾರ, ಈಗ ಚುನಾಯಿತರಾಗಿರುವ ಶಾಸಕರಲ್ಲಿ
44.2% ವ್ಯಾಪಾರ-ವಹಿವಾಟುಗಳಲ್ಲಿ ತೊಡಗಿರುವವರು, 21.9% ಕೃಷಿಯಲ್ಲಿತೊಡಗಿರುವವವರು. ರಾಜಕೀಯಅಥವ ಸಾಮಾಜಿಕ ಸೇವೆಯಲ್ಲಿ
ತೊಡಗಿದ್ದೇವೆ ಎಂದು ಹೇಳಿರುವವರ ಪ್ರಮಾಣ 11.2% ಮಾತ್ರ. ಪಕ್ಷವಾರಾಗಿಕೂಡ, ವ್ಯಾಪಾರ ವಹಿವಾಟುಗಳಲ್ಲಿ ತೊಡಗಿದ್ದೇನೆ 
ಎಂದು ಹೇಳಿರುವ ಚುನಾಯಿತಕಾಂಗ್ರೆಸ್ ಶಾಸಕರ ಪ್ರಮಾಣ 45%, ಬಿಜೆಪಿ ಶಾಸಕರಲ್ಲಿ 47% ಮತ್ತುಜೆಡಿ(ಎಸ್) ಶಾಸಕರಲ್ಲಿ 42%, 
ಕೃಷಿಯಲ್ಲಿತೊಡಗಿರುವವರುಅನುಕ್ರಮವಾಗಿ 20%, 24% ಮತ್ತು 32%. ಮತ್ತು ‘ಸಾಮಾಜಿಕ ಸೇವೆ’ಯಲ್ಲಿತೊಡಗಿರುವವರು 
9%(ಕಾಂಗ್ರೆಸ್),6% (ಬಿಜೆಪಿ)ಮತ್ತು 5% (ಜೆಡಿ-ಎಸ್) (ಪೌಲೋಮಿ ಘೋಷ್ ಮತ್ತಿತರರು, ಸ್ಕಾçಲ್.ಇನ್, ಮೇ 16).
ಅವರು ಮೇಲೆ ಉಲ್ಲೇಖಿಸಿದ ಎಡಿಆರ್ ದತ್ತಾಂಶಗಳಿಂದ 2008 ರಿಂದ 2023ರ ನಡುವೆ ಕರ್ನಾಟಕದ ಚುನಾಯಿತ ಶಾಸಕರ ಸರಾಸರಿ 
ನಿವ್ವಳ ಆಸ್ತಿಗಳ ಈ ತಖ್ತೆಯನ್ನುಕೊಡುತ್ತಾರೆ(ಕೋಟಿ ರೂ.ಗಳಲ್ಲಿ):

ಪಕ್ಷ        2008    2013    2018    2023
ಕಾಂಗ್ರೆಸ್     5.5    10.7    15.1    46.5
ಬಿಜೆಪಿ       4.5    11.1    13.2    34.5
ಜೆಡಿ(ಎಸ್)   2.9    8.5     12.1    33.6       
          

ಕರ್ನಾಟಕದ ಶಾಸಕರು ಹೆಚ್ಚೆಚ್ಚು ಶ್ರೀಮತರಾಗುತ್ತಿರುವಂತೆ ಕಾಣುತ್ತಿದೆಎಂದುಅವರು ಹೇಳುತ್ತಾರೆ. ರಾಜಕೀಯದಲ್ಲಿ ಹೆಚ್ಚುತ್ತಿರುವ ಹಣ ಬಲದ ಈ ಸಂಕೇತ ಅತ್ಯಂತ ಆತಂಕಕಾರಿ ಎನ್ನುತ್ತಾರೆ ಅವರು.ಇದರೊಂದಿಗೆ ಎರಡು ಸುದ್ದಿಗಳು ಈ ಆತಂಕವನ್ನು ಮತ್ತಷ್ಟು ಹೆಚ್ಚಿಸಿವೆ. ಒಂದು, ಮತದಾರರಿಗೆ ಆಮಿಷ ಒಡ್ಡುವ ಚುನಾವಣಾ ಅಕ್ರಮದಲ್ಲಿ ಹೊಸ-ಹೊಸ ದಾಖಲೆಗಳು ನಿರ್ಮಾಣವಾಗುತ್ತಿವೆ. ಮಾರ್ಚ್ 29 ರಿಂದ ಮೇ 9ರ ನಡುವೆ ಚುನಾವಣಾ ಆಯೋಗ ವಶಪಡಿಸಿಕೊಂಡ ನೋಟುಗಳ ಒಟ್ಟು ಮೌಲ್ಯ ರೂ.379 ಕೋಟಿ ,ಜತೆಗೆ ಸುಮಾರು 100 ಕೋಟಿರೂ. ಮೌಲ್ಯದ ಚಿನ್ನಾಭರಣಗಳು, ‘ಉಡುಗೊರೆ’ ಸಾಮಗ್ರಿಗಳನ್ನು ಕೂಡ ವಶಪಡಿಸಿಕೊಳ್ಳಲಾಗಿದೆ ಎಂದು ವರದಿಯಾಗಿದೆ. ಎರಡು, ಈ ಚುನಾವಣೆಯ ಹಿನ್ನೆಲೆಯಲ್ಲಿಎಪ್ರಿಲ್ 3ರಿಂದ 12 ರ ನಡುವೆ ತೆರೆದಿಟ್ಟಿದ್ದ ಚುನಾವಣಾ ಬಾಂಡ್ ಸ್ಕೀಮಿನ  29ನೇ  ಆವೃತ್ತಿಯಲ್ಲಿ ಮಾರಾಟ 9 ಪಟ್ಟು ಏರಿಕೆ ಕಂಡಿದೆ, ಒಟ್ಟು 970.50 ಕೋಟಿರೂ. ಮೌಲ್ಯದ ಬಾಂಡುಗಳ ಮಾರಾಟವಾಗಿದೆ ಎಂಬ ಸುದ್ದಿ.


Donate Janashakthi Media

Leave a Reply

Your email address will not be published. Required fields are marked *