ಎನ್ ಚಿನ್ನಸ್ವಾಮಿ ಸೋಸಲೆ
ಬಹು ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ಪ್ರಾಣಿ ಧರ್ಮದ ಅನ್ವಯ ‘ ಮಾಂಸಹಾರ ಪ್ರಾಣಿಗಳು ಸಸ್ಯಹಾರ ಪ್ರಾಣಿಯನ್ನು ತಿಂದು ಬದುಕುತ್ತಿವೆ – ಸಸ್ಯ ಆಹಾರ ಪ್ರಾಣಿಗಳು ಮಾಂಸ ಆಹಾರ ಪ್ರಾಣಿಗಳನ್ನು ಕಂಡರೆ ಭಯದಲ್ಲಿ ಬದುಕುತ್ತಿವೆ. ಆದರೆ ಮನುಷ್ಯ ತನ್ನ ಅಧರ್ಮ ನೀತಿಯ ಹಿನ್ನೆಲೆಯಿಂದ ಮಾಂಸ ತಿನ್ನುವ ಮನುಷ್ಯರನ್ನೇ ಸಸ್ಯ ಆಹಾರ ಸೇವಿಸುವವರೆಂದು ಹೇಳಿಕೊಳ್ಳುವ ಮನುಷ್ಯರು ಆಳ್ವಿಕೆ ಮಾಡುತ್ತಿದ್ದಾರೆ. ಇದು ಅಧರ್ಮ ರಾಜಕಾರಣದ ಸ್ವರೂಪವೇ ಆಗಿದೆ. ಆಹಾರದ ಸೇವನೆಯ ಮೂಲಕ ಜನರನ್ನು ಹೊಡೆದಾಳುವ ರಾಜಕೀಯ ಮಾಡದೇ ಮಾನವ ಮಾನವರು ಮನುಷ್ಯತ್ವದಿಂದ ಮಾನವ ಧರ್ಮದ ಆಧಾರದಲ್ಲಿ ಸ್ವಾತಂತ್ರ್ಯ ಸಮಾನತೆ ಭಾತೃತ್ವದ ಅಡಿಗಲ್ಲಿನಲ್ಲಿ ಜೀವಿಸಬೇಕಾಗಿದೆ.
ಪ್ರಪಂಚದಲ್ಲಿ ಸಸ್ಯ ಆಹಾರ ಹಾಗೂ ಪ್ರಾಣಿ ಆಹಾರವನ್ನೇ ಸೇವಿಸುವ ಎರಡು ವರ್ಗದ ಪ್ರಾಣಿ ಸಂಕುಲಗಳು ಇವೆ. ಇವು ಯಾವುದೇ ಹಸಿವಿನ ಕ್ಲಿಷ್ಟಕರ ಸಂದರ್ಭದಲ್ಲಿಯೂ ಸಹ ತಮ್ಮದಲ್ಲದ ಆಹಾರಗಳನ್ನು ಸೇವಿಸುವುದೇ ಇಲ್ಲ. ಏಕೆಂದರೆ ಇವರ ಆಹಾರದಲ್ಲಿ ಧರ್ಮ ಇದೆ. ಎಂತದ್ದೇ ಕ್ಲಿಷ್ಟಕರ ಸಂದರ್ಭ ಒದಗಿದರೂ ಸಹ ಈ ವಿಷಯದಲ್ಲಿ ಮಾತ್ರ ಧರ್ಮರಾಜಕಾರಣ ಮಾಡುವುದಿಲ್ಲ. ಇದು ಅವುಗಳ ಬದ್ಧತೆ ಹಾಗೂ ಜೀವನ-ಬದುಕಿಗಾಗಿನ ಹೋರಾಟ. ಇದೇ ವಾಸ್ತವ.
ಆದರೆ ಮನುಷ್ಯ ಪ್ರಾಣಿ ಮಾತ್ರ ಏಕೆ ಮಾಂಸಾಹಾರಿಯೂ ಆದ – ಸಸ್ಯಹಾರಿಯೂ ಆದ. ಏಕೆಂದರೆ, ಇವನು ಧರ್ಮರಾಜಕಾರಣದ ಹಿನ್ನೆಲೆ ಹಾಗೂ ಮುನ್ನೆಲೆಯಿಂದಲೇ ಜೀವನ ಹಾಗೂ ಬದುಕನ್ನು ಉಜ್ವಲಗೊಳಿಸಿಕೊಳ್ಳಲು ಮಾಡಿಕೊಂಡ ಬಹುದೊಡ್ಡ ಅಧರ್ಮ ನೀತಿಯ ಹುನ್ನಾರ. ಇದೂ ಸಹ ವಾಸ್ತವ.
ಏಕೆಂದರೆ ಪ್ರಾಣಿಗಳು ತಾವು ಜೀವಿಸಲು ಪ್ರಕೃತಿದತ್ತವಾಗಿ ಸ್ವಾವಲಂಬಿಗಳಾದ ಮೇಲೆ ಇನ್ನೊಬ್ಬರನ್ನು ಅವಲಂಬಿತರಾಗಲಿಲ್ಲ. ತಮ್ಮ ಶಕ್ತಿ ಸಾಮರ್ಥ್ಯದ ಮೇಲೆ ತಾವೇ ನಿಂತು ಬದುಕಿನ ಆಗು ಹೋಗುಗಳಿಗೆ ತಮ್ಮ ತಮ್ಮನ್ನು ತಾವೇ ಹೊಣೆಯನ್ನಾಗಿ ಮಾಡಿಕೊಂಡು ಸ್ವಾಭಿಮಾನದಿಂದ ಬದುಕುತ್ತವೆ . ಆದ ಕಾರಣಕ್ಕಾಗಿ ಅವುಗಳಲ್ಲಿ ಆಹಾರದ ಹೆಸರಿನಲ್ಲಿ ಯಾವುದೇ ಧರ್ಮರಾಜಕಾರಣ ಬರಲೇ ಇಲ್ಲ. ಇದು ಪ್ರಕೃತಿಯ ನಿಯಮ ಹಾಗೂ ವಾಸ್ತವ.
ಇದನ್ನೂ ಓದಿ:ಸಂವೇದನಾರಹಿತ ನಿಂದನೆ-ಸಮುದಾಯದ ತೇಜೋವಧೆ ಕೊಳಕು ರಾಜಕಾರಣಕ್ಕೆ ಸಮ: ನಿರಂಜನಾರಾಧ್ಯ ವಿ ಪಿ
ಆದರೆ ಮನುಷ್ಯ ಪ್ರಾಣಿ ಹಾಗಲ್ಲ. ತಾನು ಯಾವುದೇ ಶ್ರಮಪಡದೆ ಶ್ರೇಷ್ಠ ಕುಲದವನೆಂದು ಹೇಳಿಕೊಂಡು ದೇವರ ಹೆಸರಿನಲ್ಲಿ ಬದುಕಲು – ಮುಂದುವರೆದು, ತಾನು ಮನುಷ್ಯ ಕುಲದಲ್ಲಿಯೇ ಶ್ರೇಷ್ಠ ಕುಲದ ಮನುಷ್ಯ ಎಂದು ಗುರುತಿಸಿಕೊಳ್ಳಲು ಸೃಷ್ಟಿಸಿದ ಬಹುದೊಡ್ಡ ಧರ್ಮರಾಜಕಾರಣ ಎಂದರೆ ಇದೆ. ಸಸ್ಯಹಾರಿ ಹಾಗೂ ಮಾಂಸಹಾರಿ ಬೇದ ಭಾವದ ಹಿನ್ನೆಲೆಯಲ್ಲಿ ಸಸ್ಯಹಾರಿ ಶ್ರೇಷ್ಠ ಮಾಂಸಾಹಾರಿ ಕನಿಷ್ಠ ಎಂಬ ಬಹುದೊಡ್ಡ ಧಾರ್ಮಿಕ ಹಿನ್ನೆಲೆಯ ಸಾಮಾಜಿಕ ಅಸಮಾನತೆಯನ್ನು. ಈ ಕಾರ್ಯ ಸಾಧನೆಗೆ ಕಣ್ಣಿಗೆ ಕಾಣದ ದೇವರನ್ನೇ ಮೇಟಿಯನ್ನಾಗಿಸಿಕೊಂಡು ಬದುಕಲು ಆಹಾರದ ವಿಷಯದಲ್ಲಿ ಶ್ರೇಷ್ಠ- ಕನಿಷ್ಠ ಎಂಬ ಬಹುದೊಡ್ಡ ಭೇದ- ಭಾವನೆಯನ್ನು ಸೃಷ್ಟಿಸಿ ಧರ್ಮರಾಜಕರಣವನ್ನೇ ಪುರಾಣದ ಮೂಲಕ ನಿರ್ಮಾಣ ಮಾಡಿದ ಮನುಷ್ಯ ಇತರೆ ಧರ್ಮ ಪಾಲನೆಯ ಪ್ರಾಣಿಗಳಿಗಿಂತ ಅಧರ್ಮ ಪಾಲನೆಯನ್ನೇ ಬೈಗೂಡಿಸಿಕೊಂಡು ಕನಿಷ್ಠ ನಾಗಿದ್ದಾನೆ.
ಇಲ್ಲಿ ಬಹು ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ಪ್ರಾಣಿ ಧರ್ಮದ ಅನ್ವಯ ‘ ಮಾಂಸಹಾರ ಪ್ರಾಣಿಗಳು ಸಸ್ಯಹಾರ ಪ್ರಾಣಿಯನ್ನು ತಿಂದು ಬದುಕುತ್ತಿವೆ – ಸಸ್ಯ ಆಹಾರ ಪ್ರಾಣಿಗಳು ಮಾಂಸ ಆಹಾರ ಪ್ರಾಣಿಗಳನ್ನು ಕಂಡರೆ ಭಯದಲ್ಲಿ ಬದುಕುತ್ತಿವೆ. ಆದರೆ ಮನುಷ್ಯ ತನ್ನ ಅಧರ್ಮ ನೀತಿಯ ಹಿನ್ನೆಲೆಯಿಂದ ಮಾಂಸ ತಿನ್ನುವ ಮನುಷ್ಯರನ್ನೇ ಸಸ್ಯ ಆಹಾರ ಸೇವಿಸುವವರೆಂದು ಹೇಳಿಕೊಳ್ಳುವ ಮನುಷ್ಯರು ಆಳ್ವಿಕೆ ಮಾಡುತ್ತಿದ್ದಾರೆ. ಇದು ಅಧರ್ಮ ರಾಜಕಾರಣದ ಸ್ವರೂಪವೇ ಆಗಿದೆ. ಆಹಾರದ ಸೇವನೆಯ ಮೂಲಕ ಜನರನ್ನು ಹೊಡೆದಾಳುವ ರಾಜಕೀಯ ಮಾಡದೇ ಮಾನವ ಮಾನವರು ಮನುಷ್ಯತ್ವದಿಂದ ಮಾನವ ಧರ್ಮದ ಆಧಾರದಲ್ಲಿ ಸ್ವಾತಂತ್ರ್ಯ ಸಮಾನತೆ ಭಾತೃತ್ವದ ಅಡಿಗಲ್ಲಿನಲ್ಲಿ ಜೀವಿಸಬೇಕಾಗಿದೆ.
ಇಂತಹ ಧರ್ಮರಾಜಕಾರದ ಬದುಕಿನ ಶ್ರೇಷ್ಠ ಕನಿಷ್ಠ ಕುಲದವರು ಎಂಬ ಮನುಷ್ಯ ಮನುಷ್ಯರಲ್ಲಿನ ಬಹುದೊಡ್ಡ ಅಂತರದ ( ಜಾತಿ) ನಿರ್ಮಾಣದ ಚಲನಶೀಲನೆ ಗೊಳಿಸದ ಹೋರಾಟ ಭೂತ- ವರ್ತಮಾನ- ಭವಿಷ್ಯತ್ ಗಳಲ್ಲಿಯೂ ಪುರಾಣದ ಮೂಲಕ ಪಾಲನೆ ಆಗುತ್ತಿರುವುದು ನಮ್ಮ ನಡುವಿನ ಬಹು ದೊಡ್ಡ ದುರಂತ ಹಾಗೂ ಅದೇ ವಾಸ್ತವ.
ಪ್ರಾಣಿಗಳು ಧರ್ಮ ಪಾಲನೆ ಮಾಡುವ ಹಿನ್ನೆಲೆಯಿಂದಲೇ, ಅವುಗಳನ್ನು ವೈರತ್ವದ ಹಿನ್ನೆಲೆಯಿಂದ ನೋಡುವ ಅಧರ್ಮ ಪಾಲನೆಯ ಮನುಷ್ಯ ಪ್ರಾಣಿ – ಯಾವುದಾದರೂ ಸಂದರ್ಭದಲ್ಲಿ ಇತರೆ ಮನುಷ್ಯ ಪ್ರಾಣಿಯನ್ನು ಬೈಯ್ಯುವಾಗ ಧರ್ಮ ಪಾಲನೆಯ ಪ್ರಾಣಿಗಳಿಗೆ ಹೋಲಿಸಿ ಅವುಗಳ ಧರ್ಮ ಪಾಲನೆಯನ್ನು ಹೀಯಾಳಿಸಿಕೊಳ್ಳುತ್ತಾನೆ. ಈ ಏಳು ಸಿಟಿಯು ಸಹ ಮನುಷ್ಯ ಪ್ರಾಣಿಯ ಸ್ವಾಭಾವಿಕ ಅಧರ್ಮ ನೀತಿ ಪಾಲನೆಯೇ ಆಗಿದೆ.
ಇದಾಗಬಾರದು.. ಮನುಷ್ಯ ಇನ್ನೊಬ್ಬ ಮನುಷ್ಯರನ್ನು ಸಮಾನಾಗಿ ಕಾಣುವ ಮನುಷ್ಯತ್ವವನ್ನು ಮೈಗೂಡಿಸಿಕೊಂಡು ಅದನ್ನು ಪಾಲನೆ ಮಾಡುವ ಮೂಲಕ ಗೌರವಿಸಿಕೊಳ್ಳಬೇಕು. ಮನುಷ್ಯ ಪ್ರಾಣಿಗಳಲ್ಲಿ ಸಸ್ಯ ಆಹಾರ ಹಾಗೂ ಮಾಂಸಹಾರ ಎಂದಿನಿಂದ ಆರಂಭವಾಯಿತು ಎಂಬ ಚರ್ಚೆಗೆ ಚರಿತ್ರೆಯಲ್ಲಿ ಉತ್ತರವಿದೆ. ಶತಶತಮಾನಗಳ ಚರಿತ್ರೆಯನ್ನು ತನ್ನ ಒಡಲಲ್ಲಿ ಹಮ್ಮಿಕೊಂಡಿರುವ ಅವರವರ ಆಹಾರಗಳು ಅವರವರಿಗೆ ಶ್ರೇಷ್ಠವಾದದ್ದೇ. ಆಹಾರ ಸೇವನೆಯ ಮೂಲಕ ಶ್ರೇಷ್ಠ – ಕನಿಷ್ಠ ಎಂಬ ಭಾವನೆ ಎಂದಿಗೂ ಬರಬಾರದು. ಇದನ್ನೇ ಧರ್ಮರಾಜಕಾರಣವನ್ನು ಬದಿಗಿರಿಸಿ – ಸಮ ಸಂಸ್ಕೃತಿಗೆ ಮಾನವ ಧರ್ಮವನ್ನು ಪ್ರತಿಪಾದನೆ ಮಾಡಿದ ಬುದ್ಧ- ಬಸವ- ಅಂಬೇಡ್ಕರ್ ಅವರು ಹೇಳಿದ್ದು, ಬದುಕಿದ್ದು, ಯುಗಯುಗಗಳಿಂದಲೂ ನಮ್ಮೊಂದಿಗೇ ತಮ್ಮ ತತ್ವ ಸಿದ್ಧಾಂತದ ಮೂಲಕ ಜೀವಿಸುತ್ತಾ ಅಮರವಾಗಿರುವುದು. ಇದೆ ಭಾರತ ಹಾಗು ಭಾರತೀಯತ್ವದ ವಾಸ್ತವ ಚರಿತ್ರೆ.