ದ್ವಿತೀಯ ಹಾಗೂ ತೃತೀಯ ಸೆಮಿಸ್ಟರ್ ಪದವಿ ವಿದ್ಯಾರ್ಥಿಗಳ ದಾಖಲಾತಿ ಶುಲ್ಕ ಹೆಚ್ಚಳ ಖಂಡಿಸಿ | ಎಸ್‌ಎಫ್‌ಐ ಮನವಿ

ಹೊಸಪೇಟೆ:  ದ್ವಿತೀಯ ಹಾಗೂ ತೃತೀಯ ಸೆಮಿಸ್ಟರ್ ಪದವಿ ವಿದ್ಯಾರ್ಥಿಗಳ ದಾಖಲಾತಿ ಶುಲ್ಕ ಹೆಚ್ಚಳ ಮಾಡಿರುವುದನ್ನು ಖಂಡಿಸಿ  ಭಾರತ ವಿದ್ಯಾರ್ಥಿ ಫೆಡರೇಷನ್ ( ಎಸ್‌ಎಫ್‌ಐ ) ಹೊಸಪೇಟೆ ತಾಲೂಕು ಸಂಚಾಲಕ ಸಮಿತಿ ನೇತೃತ್ವದಲ್ಲಿ ಶ್ರೀ ಶಂಕರ್ ಆನಂದ್ ಸಿಂಗ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಿ ಪ್ರಾಂಶುಪಾಲರಾದ ಕೆ. ಶಿವಪ್ಪ, ಅವರ ಮುಖಾಂತರ ವಿಜಯನಗರ ಕುಲಸಚಿವರು ( ಆಡಳಿತ ವಿಭಾಗ ) ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ ಬಳ್ಳಾರಿ ಇವರಿಗೆ ಮನವಿ ಪತ್ರವನ್ನು ನೀಡುವ ಮೂಲಕ  ಒತ್ತಾಯಿಸಿದ್ದಾರೆ.  ಹೆಚ್ಚಳ

ಇದನ್ನೂ ಓದಿ:ಸಂಶೋಧನಾ ವಿದ್ಯಾರ್ಥಿಯ ನೊಂದಣಿ ರದ್ದು ಪ್ರಕರಣ : ಕುಲಸಚಿವರೊಂದಿಗೆ ಎಸ್‌ಎಫ್‌ಐ ಸಭೆ

ಸಂಚಾಲಕ ಸಮಿತಿಯ ಮುಖಂಡ ಲೋಕೇಶ್ ಮಾತನಾಡಿ, ರಾಜ್ಯದ ಇತರ ಭಾಗಗಳಿಗೆ ಹೋಲಿಕೆ ಮಾಡಿದರೆ ,ಕಲ್ಯಾಣ ಕರ್ನಾಟಕ ಭಾಗದಲ್ಲಿ ಉನ್ನತ ಶಿಕ್ಷಣ ಕಲಿಯುವವರ ಸಂಖ್ಯೆ ತುಂಬಾ ವಿರಳ ಇದೆ ಸಂಖ್ಯೆ ವಿರಳ ಆಗಿದ್ದಕ್ಕೆ ಕಾರಣ ಏನೆಂದರೆ ಈ ಭಾಗದ ಜನರ ಆರ್ಥಿಕವಾಗಿ ತುಂಬಾ ಬಡವರು ಹಾಗೂ ಕಡುಬಡವರು ಇರುತ್ತಾರೆ ಬಡತನದಿಂದ ಅನೇಕ ವಿದ್ಯಾರ್ಥಿಗಳು ಪದವಿ ಕೋರ್ಸ್ ನ್ನು ಅರ್ಧಕ್ಕೆ ಬಿಟ್ಟು ಬೆಂಗಳೂರು ಅಂತಹ ನಗರಕ್ಕೆ ದುಡಿಯಲು ಹೋದ ಉದಾಹರಣೆ ಸಾಕಷ್ಟು ಇವೆ, ಇಂತಹ ಕಠಿಣ ಪರಿಸ್ಥಿತಿಯಲ್ಲಿ ಬರಗಾಲದ ಸಮಯದಲ್ಲಿ ಮನೆಯಲ್ಲಿ ಹಣ ಕೊಡದಿದ್ದರೂ ಓದುಬೇಕೆಂಬ ಹಂಬಲದಿಂದಾಗಿ ವಿದ್ಯಾರ್ಥಿಗಳಾದ ನಾವುಗಳು ಪದವಿ ದಾಖಲಾತಿ ಮಾಡಿಸಿದ್ದೇವೆ ಎಂದರು.  ಶುಲ್ಕ 

ಆದರೆ ಕಳೆದ ವರ್ಷ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ 940 ರೂಪಾಯಿ ಮತ್ತು 2000 ಸಾವಿರ ರೂಪಾಯಿ ಮಾತ್ರ ಇದ್ದ ದಾಖಲಾತಿ ಶುಲ್ಕ ಒಂದೇ ವರ್ಷದಲ್ಲಿ ದಿಡೀರನೆ 3720 ಹಾಗೂ 4660 ರೂಪಾಯಿ ಆಗಲು ಹೇಗೆ ಸಾಧ್ಯ? ಅಂದರೆ ಕಳೆದ ವರ್ಷಕ್ಕಿಂತ ಈ ವರ್ಷ ಅದೇ ದ್ವಿತೀಯ ಹಾಗೂ ತೃತೀಯ ಸೆಮಿಸ್ಟರ್ ನ OBC ವಿದ್ಯಾರ್ಥಿಗಳಿಗೆ 2660 ರೂಪಾಯಿ ಹೆಚ್ಚಳ ಮಾಡಿದ್ದಿರಿ SC/ST ವಿದ್ಯಾರ್ಥಿಗಳಿಗೆ 940 ರೂಪಾಯಿ ಇದ್ದಿದ್ದು ಈ ವರ್ಷ 3720 ರೂಪಾಯಿ ಮಾಡಿದ್ದಿರಿ ಅಂದರೆ 2720 ರೂಪಾಯಿ ಹಣ ಹೆಚ್ಚಳ ಮಾಡಿರುವುದನ್ನು ನಾವು ವಿರೋಧ ಮಾಡತ್ತೇವೆ ಮತ್ತು ಕಳೆದ ವರ್ಷ ಎಷ್ಟು ಶುಲ್ಕ ಇತ್ತು ಅಷ್ಟು ಮಾತ್ರ ತೆಗೆದುಕೊಳ್ಳಬೇಕು ಎಂದು ವಿದ್ಯಾರ್ಥಿಗಳ ಪರವಾಗಿ ನಮ್ಮ ಸಂಘಟನೆಯು ಮನವಿ ಪತ್ರ ಸಲ್ಲಿಸುವುದರ ಮೂಲಕ ಒತ್ತಾಯ ಮಾಡುತ್ತೇವೆ ಇಲ್ಲದಿದ್ದರೆ ನೂರಾರು ವಿದ್ಯಾರ್ಥಿಗಳೊಂದಿಗೆ ವಿಶ್ವವಿದ್ಯಾಲಯಕ್ಕೆ ಮುತ್ತಿಗೆ ಹಾಕುತ್ತೇವೆ ಎಂದು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಎಸ್‌ಎಫ್‌ಐ ರಾಜ್ಯ ಸಮಿತಿ ಸದ್ಯಸರು ಶಿವರೆಡ್ಡಿ, ಎಸ್‌ಎಫ್‌ಐ ಜಿಲ್ಲಾ ಮುಖಂಡರು ಪವನ್ ಕುಮಾರ್ರ, ಎಸ್‌ಎಫ್‌ಐ ತಾಲೂಕು ಮುಖಂಡರು ಲಕ್ಷ್ಮಿಮತ್ತು ವಿದ್ಯಾರ್ಥಿಗಳಾದ, ಮಂಜು, ನಿಂಗೇಶ್, ರಾಜೇಶ್, ಪ್ರವೀಣ್, ಆಕಾಶ್, ಕೃಷ್ಣ, ಮತ್ತು ಇತರರು ಭಾಗವಹಿಸಿದ್ದರು. ಶುಲ್ಕ 

ವಿಡಿಯೋ ನೋಡಿ:

Donate Janashakthi Media

Leave a Reply

Your email address will not be published. Required fields are marked *