ಬೆಂಗಳೂರು: ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ತರಗತಿಗಳಿಗೆ ನಿಯಮಿತವಾಗಿ ತಿಗದೆ ಶೇ 75ರಷ್ಟು ಹಾಜರಾತಿ ಕೊರತೆ ಎದುರಿಸುತ್ತಿರುವ ವಿದ್ಯಾರ್ಥಿಗಳು ಬರೆಯುವಂತಿಲ್ಲ. ಇಲ್ಲ
ಎಸ್‌ಎಸ್‌ಎಲ್‌ಸಿಗೆ ಮೂರು ಪರೀಕ್ಷೆಗಳನ್ನು 2024ನೇ ಸಾಲಿನಲ್ಲಿ ಪರಿಚಯಿಸಿದ್ದು, ಮೊದಲ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದವರು, ಇನ್ನಷ್ಟು ಅಂಕಗಳನ್ನು ಪಡೆಯಲು ಬಯಸುವವರು ಹಾಗೂ ಅನುತ್ತೀರ್ಣರಾದವರು ಉಳಿದ ಎರಡು ಪರೀಕ್ಷೆಗಳನ್ನು ಬರೆಯಬಹುದು. ಇಲ್ಲ
ಹಾಗೆಯೇ, ಹಾಜರಾತಿ ಕೊರತೆ ಕಾರಣಕ್ಕೆ ಮೊದಲ ಪರೀಕ್ಷೆಯಿಂದ ವಂಚಿತರಾದವರಿಗೆ ಉಳಿದ ಎರಡು ಪರೀಕ್ಷೆ ತೆಗೆದುಕೊಳ್ಳಲು ಕಳೆದ ವರ್ಷ ಅವಕಾಶ ನೀಡಲಾಗಿತ್ತು.
ಇದನ್ನೂ ಓದಿ: ವಲಸೆ ಭಾರತೀಯರು ಮತ್ತು ಕೊಮಗಾಟಮಾರು
ಈ ಬಾರಿ ಶೇ 75ರಷ್ಟು ಹಾಜರಾತಿ ಕೊರತೆ ಇರುವವರಿಗೆ ಮೂರೂ ಪರೀಕ್ಷೆ ಬರೆಯಲು ಅವಕಾಶ ನಿರಾಕರಿಸಲಾಗಿದೆ. 10ನೇ ತರಗತಿಯಲ್ಲಿ ಕಡಿಮೆ ಹಾಜರಾತಿ ಇರುವ ಮಕ್ಕಳ ಆಂತರಿಕ ಮೌಲ್ಯಮಾಪನದ ಅಂಕಗಳನ್ನೂ ಎಸ್‌ಎಟಿಎಸ್ ತಂತ್ರಾಂಶದಲ್ಲಿ ದಾಖಲಿಸದಂತೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಸುತ್ತೋಲೆ ಹೊರಡಿಸಿದೆ.
ಮರು ದಾಖಲಾತಿಗೆ ಸೂಚನೆ
ಹಾಜರಾತಿ ಕೊರತೆಯಿಂದ ಪರೀಕ್ಷೆ ಬರೆಯಲು ಸಾಧ್ಯವಾಗದ ವಿದ್ಯಾರ್ಥಿಗಳು ಹಾಗೂ ಅನುತ್ತೀರ್ಣರಾದವರನ್ನು 2025-26ನೇ ಸಾಲಿನಲ್ಲಿ 10ನೇ ತರಗತಿಗೆ ಮರುದಾಖಲು ಮಾಡುವಂತೆ ಮಂಡಳಿ ಸೂಚಿಸಿದೆ.
2024ರ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳಲ್ಲಿ ಹಾಜರಾತಿ ಕೊರತೆ ಇದ್ದ 15 ಸಾವಿರ ವಿದ್ಯಾರ್ಥಿಗಳು ಎರಡನೇ ಮತ್ತು ಮೂರನೇ ಪರೀಕ್ಷೆ ಬರೆದಿದ್ದರು. 2025ರ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮಾರ್ಚ್ 21ರಿಂದ ಏ.4ರವರೆಗೆ ನಡೆಯಲಿದೆ.
ಇದನ್ನೂ ನೋಡಿ: ಸಾಮಾಜಿಕ ನ್ಯಾಯವನ್ನು ಜಾರಿ ಮಾಡಬೇಕಿರುವ ಸಂಸತ್ತು ಮಾಡುತ್ತಿರುವುದೇನು? ದಿನೇಶ್ ಅಮಿನ್ ಮಟ್ಟು Janashakthi Media