ಕಲಬುರಗಿ: ಸಿಬ್ಬಂದಿ ಓರ್ವ ಕರ್ತವ್ಯನಿರತ ವೇಳೆ ಹೃದಯಾಘಾತದಿಂದ ಮೃತಪಟ್ಟ ಕಾರ್ಮಿಕನ ಮೃತದೇಹವನ್ನು ಪ್ರಾಣಿ ತರಹ ಎಳೆದೊಯ್ದ ಘಟನೆ ಕಲಬುರಗಿ ಜಿಲ್ಲೆ ಸೇಡಂ ತಾಲೂಕಿನ ಕೊಡ್ಲಾ ಗ್ರಾಮದಲ್ಲಿನ ಶ್ರೀ ಸಿಮೆಂಟ್ ಕಂಪನಿಯಲ್ಲಿ ನಡೆದಿದ್ದೂ, ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಸಾಕಷ್ಟು ಆಕ್ರೋಶ ವ್ಯಕ್ತವಾಗಿದೆ.
ಮೃತರನ್ನು ಬಿಹಾರ ಮೂಲದ ಚಂದನಸಿಂಗ್ (35) ಎಂದು ಗುರುತಿಸಲಾಗಿದೆ. ಚಂದನಸಿಂಗ್ ಶ್ರೀ ಸಿಮೆಂಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಮಂಗಳವಾರ ಕರ್ತವ್ಯನಿರತ ವೇಳೆ ಲೋ ಬಿಪಿಯಾಗಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಇದನ್ನೂ ಓದಿ: ಆನಂದ ವಿಕಟನ್ ವೆಬ್‌ಸೈಟ್ ಮೇಲಿನ ನಿರ್ಬಂಧ: ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಸರ್ವಾಧಿಕಾರಿ ದಾಳಿ
ಮೃತ ಕಾರ್ಮಿಕ ಚಂದನಸಿಂಗ್ ತದೇಹವನ್ನು ಸಿಬ್ಬಂದಿ ದರದರನೇ ಎಳೆದುಕೊಂಡು ಹೋಗಿದ್ದಾರೆ. ಶ್ರೀ ಸಿಮೆಂಟ್ ಕಂಪನಿ ಆಡಳಿತ ಮಂಡಳಿ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸೇಡಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ವಿಡಿಯೋ ವೈರಲ್ ಆಗುತ್ತಿದ್ದಂತೆ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡ ಸೇಡಂ ಪೊಲೀಸರು, 6 ಮಂದಿ ಕಾರ್ಮಿಕರನ್ನು ಬಂಧಸಿದ್ದಾರೆ. ಆರೋಪಿಗಳಾದ ಹೈದರ್ ಅಲಿ, ರವಿಶಂಕರ್, ಹರಿಂದರ್ ನಿಶಾದ್, ಅಜಯ್, ರಮೇಶಚಂದ್ರ ಅಖಿಲೇಶ್ ಬಂಧಿತ ಆರೋಪಿಗಳು.
ಬಿಎನ್ಎಸ್ ಕಾಯ್ದೆಯ 129(ಇ) ಮತ್ತು 129(ಡಿ) ಅಡಿ ಕೇಸ್ ದಾಖಲಾಗಿದೆ. ಬಂಧಿತ 6 ಮಂದಿ ಕಾರ್ಮಿಕರನ್ನು ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಇದನ್ನೂ ನೋಡಿ: SCSP/TSP ಯೋಜನೆಯ ದುರ್ಬಳಕೆ: ಈ ದಶಕದ ವಂಚನೆ Janashakthi Media |SCSP/TS |ವಾರದ ನೋಟ