ಹೊನ್ನಾವರ : ಜಾತಿ, ಧರ್ಮ, ಬಣ್ಣ, ಆಹಾರಗಳ ಕಾರಣಕ್ಕೆ ನಮ್ಮ ನಡುವಿನ ಸಂಬಂಧಗಳು ಕೆಟ್ಟು ಹೋಗಿವೆ. ಇದೆಲ್ಲದರ ನಡುವೆ ಎಲ್ಲರೊಂದಾಗಿ ನಾಳುವುದೇ ನಿಜವಾದ ಮಾನವ ಧರ್ಮ ಎಂದು ಹಿರಿಯ ಸಾಹಿತಿ ಆರ್.ಜಿ. ಹಳ್ಳಿ ನಾಗರಾಜ ನುಡಿದರು.
ಅವರು ಕೆರೆಕೋಣದಲ್ಲಿ ನಡೆದ ಡಾ. ವಿಠ್ಠಲ್ ಭಂಡಾರಿ ನೆನಪಿನ ಕಾರ್ಯಕ್ರಮದ ಸಮಕಾಲಿನ ಸಂವಾದ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು
ಇದನ್ನು ಓದಿ:ಬಹುತ್ವ ಭಾರತ ಮರೆತು ‘ಏಕ’ ಸಿದ್ದಾಂತದ ದೇಶ ಕಟ್ಟಲು ಸಾಧ್ಯವಿಲ್ಲ- ಸಿದ್ದರಾಮಯ್ಯ
ವಿಠ್ಟಲ್ ಭಂಡಾರಿ ಈ ನಾಡಿನ ಪ್ರಗತಿಪರ ಮನಸ್ಸಿನ ಹೋರಾಟಗಾರನಾಗಿದ್ದ. ಅವರ ಹೋರಾಟ ಸಾಂಸ್ಕೃತಿಕ ಸ್ವರೂಪದಲ್ಲಿದ್ದು ಈ ನಾಡಿನ ಅಗತ್ಯವಾಗಿತ್ತು. ಅದನ್ನು ಮುಂದುವರಿಸುವ ಕೆಲಸ ಆಗಬೇಕು ಎಂದರು.
ಬೆಂಗಳೂರಿನ ಸಾಹಿತಿ ಸುರಭಿ ರೇಣುಕಾಂಬಿಕೆ , ಕಾರವಾರ ಕಸಾಪ ಅಧ್ಯಕ್ಷ ರಮಾ ನಾಯ್ಕ, ವಿಶ್ರಾಂತ ಪ್ರಾಚಾರ್ಯ ಜಿ.ಡಿ. ಮನೋಜೆ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದರು .
ಚಿನ್ಮಯ ಹೆಗಡೆ, ಹೆಬಸೂರು ರಂಜಾನ್ ಕಾವ್ಯ ವಾಚನ ಮಾಡಿದರು. ನವೀನ್ ಕುಮಾರಹಾಸನ್ ಸ್ವಾಗತಿಸಿ ನಿರೂಪಿಸಿದರು. ಗೀತಾ ನಾಯ್ಜ ವಂದಿಸಿದರು. ಯಮುನಾ ಗಾಂವಕರ, ಮಾಧವಿ ಭಂಡಾರಿ ಉಪಸ್ಥಿತರಿದ್ದರು.
ನಂತರ ಯಕ್ಷಗಾನ ನೃತ್ಯ ಕಾರ್ಯಕ್ರಮ ನಡೆಯಿತು.