ಬೆಂಗಳೂರು: ಮಹಾನಗರದಲ್ಲಿ ಮನೆ ಬಾಡಿಗೆ ದರ ದಿನೇ ದಿನೇ ಏರುತ್ತಲೇ ಇದ್ದು, ಮನೆ ಇಲ್ಲದೆ ಬಾಡಿಗೆ ಮನೆಗಳನ್ನು ಆಶ್ರಿಸಿರುವವರ ಸ್ಥಿತಿ ಹೇಳತೀರದಾಗಿದೆ. ಇನ್ನು ನಗರಕ್ಕೆ ದುಡಿಯಲು ಬಂದಿರುವವರು, ಕಡಿಮೆ ಆದಾಯದವರು ಬಾಡಿಗೆಗೆ ಮನೆ ಹುಡುಕಲು ಹೈರಾಣಾಗುತ್ತಿದ್ದಾರೆ. ಹೆಚ್ಚಳ
ಇತ್ತೀಚಿನ ವರ್ಷಗಳಲ್ಲಿ ಮನೆ ಬಾಡಿಗೆ ದರಗಳು ಬೆಂಗಳೂರು ನಗರದಲ್ಲಿ ಏರಿಕೆಯಾಗುತ್ತಿದೆ. ಇದಕ್ಕೆ ಹಲವಾರು ಪ್ರಮುಖ ಕಾರಣಗಳಿವೆ. ಹೊಸ ಕಂಪನಿಗಳು ನಗರದಲ್ಲಿ ಕಚೇರಿಗಳನ್ನು ಪ್ರಾರಂಭಿಸುತ್ತಿರುವುದು, ಕಂಪೆನಿಗಳಿಂದ ವರ್ಕ್ ಫ್ರಮ್ ಆಫೀಸ್ ಆದೇಶದಿಂದ ನಗರಕ್ಕೆ ವಾಪಸ್ ಬರುತ್ತಿರುವವರಿಂದ ಬಾಡಿಗೆ ಮನೆಗಳ ಬೇಡಿಕೆ ಹೆಚ್ಚಾಗಿದೆ. ಮನೆ ಬಾಡಿಗೆಯ ಏರಿಕೆಯು ವೃತ್ತಿಪರರಷ್ಟೇ ಅಲ್ಲದೆ ವಿದ್ಯಾರ್ಥಿಗಳು ಮತ್ತು ಹೊಸದಾಗಿ ಕೆಲಸಕ್ಕೆ ಸೇರಿಕೊಂಡವರ ಮೇಲೂ ಪರಿಣಾಮ ಬೀರುತ್ತಿದೆ.
ಶೇರ್ ಮಾಡಿಕೊಳ್ಳುವ ಅಪಾರ್ಟ್ಮೆಂಟ್:
ಅವರು ಸಾಮಾನ್ಯ ಪಿಜಿಗಳಲ್ಲಿ ಉಳಿದುಕೊಳ್ಳುವ ಬದಲು ಶೇರ್ ಮಾಡಿಕೊಳ್ಳುವ ಅಪಾರ್ಟ್ಮೆಂಟ್ಗಳ ಕಡೆ ಹೆಚ್ಚು ಒಲವು ತೋರುತ್ತಿದ್ದಾರೆ. ಅಪಾರ್ಟ್ಮೆಂಟ್ ಗಳನ್ನು ಹಂಚಿಕೊಳ್ಳುವುದು ಹೊಸದಾಗಿ ಪದವಿ ಪಡೆದ ವಿದ್ಯಾರ್ಥಿಗಳಲ್ಲಿ ಜನಪ್ರಿಯತೆ ಗಳಿಸಿವೆ. ಇವು ಹೆಚ್ಚು ಸ್ವಾತಂತ್ರ್ಯ ಮತ್ತು ಗೌಪ್ಯತೆಯನ್ನು ನೀಡುವುದರಿಂದ ಅವರನ್ನು ಸೆಳೆದಿವೆ.
ಇದನ್ನೂ ಓದಿ: ಮುಡಾ ಪ್ರಕರಣ| ಸಿಎಂ ರಾಜೀನಾಮೆ ಪ್ರಶ್ನೆಯೇ ಇಲ್ಲ: ಕಾಂಗ್ರೆಸ್ ಹೈಕಮಾಂಡ್
ಬೆಂಗಳೂರು ನಗರದ ಪಿಜಿಗಳಿಗಿಂತ ಅಪಾರ್ಟ್ಮೆಂಟ್ಗಳು ಕಠಿಣ ನಿರ್ಬಂಧಗಳು ಹಾಗೂ ನಿಗದಿತ ಆಹಾರ ಮೆನುಗಳಿಲ್ಲದೆ ಶೇರ್ ಮಾಡಿಕೊಂಡ ಅಪಾರ್ಟ್ಮೆಂಟ್ಗಳಲ್ಲಿ ಅವರಿಗೆ ತಮ್ಮ ದಿನನಿತ್ಯದ ಚಟುವಟಿಕೆಗಳ ಮೇಲೆ ಹೆಚ್ಚಿನ ಗಮನವಿಡಲು ಅವಕಾಶ ಸಿಗುತ್ತದೆ. ಈ ಸ್ವಾತಂತ್ರವು ಶೇರ್ ಮಾಡಿಕೊಂಡ ಅಪಾರ್ಟ್ಮೆಂಟ್ಗಳನ್ನು ಹೆಚ್ಚಿದ ದರವಿದ್ದರೂ ಸಹ ಮೊದಲ ಆರಿಸಿಕೊಳ್ಳುವಂತೆ ಮಾಡುತ್ತದೆ. ಶೇರ್ ಮಾಡಿಕೊಂಡ ಅಪಾರ್ಟ್ಮೆಂಟ್ನಲ್ಲಿ ಬದುಕುವವರು ಸಾಮಾನ್ಯವಾಗಿ ಬಾಡಿಗೆ ಹಾಗೂ ನಿರ್ವಹಣಾ ವೆಚ್ಚಗಳನ್ನು ಹಂಚಿಕೊಳ್ಳುತ್ತಾರೆ. ಇದರಿಂದಾಗಿ ಇದು ಹೆಚ್ಚು ಅನುಕೂಲಕರವಾಗಿ ಅವರಿಗೆ ಕಂಡು ಬರುತ್ತದೆ.
ನಗರದಲ್ಲಿ ವಿದ್ಯಾರ್ಥಿಗಳು ಹಾಗೂ ಹೊಸದಾಗಿ ಕೆಲಸಕ್ಕೆ ನೇಮಕವಾದವರು ಅಪಾರ್ಟ್ಮೆಂಟ್ಗಳನ್ನು ಹಂಚಿಕೊಳ್ಳುವ ವ್ಯವಸ್ಥೆಯು ಗೊಂದಲವಿಲ್ಲದೆ ಇರಲಿಕ್ಕಿಲ್ಲ. ಅನೇಕ ಅಪಾರ್ಟ್ಮೆಂಟ್ ಗಳು ಒಬ್ಬರೇ ಒಂದು ವಿಭಾಗವನ್ನು ಹೊಂದಿರುವ ಹೆಚ್ಚಿನ ಸಂಖ್ಯೆಯ ಜನರ ಬಗ್ಗೆ ಕಳವಳಗಳು ಶುರುವಾಗಿವೆ. ಇದರಿಂದ ಈಗಾಗಲೇ ಅಪಾರ್ಟ್ಮೆಂಟ್ಗಳಲ್ಲಿ ಬಹಳ ವರ್ಷಗಳಿಂದ ವಾಸಿಸುತ್ತಿರುವವರಿಂದ ದೂರುಗಳು ಬರುತ್ತಿವೆ. ಆದರೆ ಇದೆಲ್ಲವನ್ನು ಆಸ್ತಿ ಮಾಲೀಕರು ತೆಲೆಕಡಿಸಿಕೊಳ್ಳದೆ ಅವರು ಲಾಭವನಷ್ಟೇ ಬಯಸುತ್ತಿರುತ್ತಾರೆ.
ಕಚೇರಿಗಳ ಪ್ರಾರಂಭ ಹೆಚ್ಚಳ:
ಬೆಂಗಳೂರಿನಲ್ಲಿ ಮನೆ ಬಾಡಿಗೆ ಏರುಗತಿಗೆ ಅನೇಕ ಕಾರಣಗಳು ನಮಗೆ ಸಿಗುತ್ತವೆ. ನಗರದಲ್ಲಿ ಬಹುರಾಷ್ಟ್ರೀಯ ಕಂಪನಿಗಳ ಜಾಗತಿಕ ಸಾಮರ್ಥ್ಯ ಕೇಂದ್ರ (ಜಿಸಿಸಿ) ಕಚೇರಿಗಳ ಪ್ರಾರಂಭವು ಹೆಚ್ಚಾಗುತ್ತಿದೆ. ಇದರಿಂದ ನೂರಾರು ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತಿವೆ. ಇದೇ ವೇಳೆ ಬಹುತೇಕ ಕಂಪನಿಗಳು ಈಗ ತಮ್ಮ ನೌಕರರನ್ನು ಕಚೇರಿಯಿಂದ ಕೆಲಸ ಮಾಡಬೇಕು ಎಂದು ಹೇಳುತ್ತಿವೆ. ಕೋವಿಡ್ ಸಾಂಕ್ರಮಿಕ ಸಂದರ್ಭದಲ್ಲಿ ವರ್ಕ್ ಫ್ರಮ್ ಹೋಮ್ ಮಾದರಿಯನ್ನು ಎಲ್ಲ ಕಂಪೆನಿಗಳು ಹಿಂತೆಗೆದುಕೊಳ್ಳುತ್ತಿವೆ. ಇದರಿಂದಾಗಿ ನಗರದಲ್ಲಿ ಬಾಡಿಗೆ ಮನೆಗಳಿಗೆ ಎಲ್ಲಿಲ್ಲದ ಬೇಡಿಕೆ ಹೆಚ್ಚಾಗಿ ಬಾಡಿಗೆ ದರವೂ ಗಗನಮುಖಿಯಾಗುತ್ತಿದೆ. ಬೆಂಗಳೂರಿನ ಮಹಾನಗರದ ಪೂರ್ವ ಭಾಗ ಹಾಗೂ ಉತ್ತರ ಭಾಗದಲ್ಲಿ ಐಟಿ ಪಾರ್ಕಗಳಂತಹ ಸಮೀಪವಿರುವ ಏರಿಯಾಗಳಲ್ಲಿ ಇದು ಏರಿಕೆಯಾಗಿದೆ.
ಬೆಂಗಳೂರಿನ ಮನೆ ಬಾಡಿಗೆ ಏರಿಕೆ ಇತರ ಭಾರತೀಯ ಐಟಿ ನಗರಗಳಿಗಿಂತ ಹೆಚ್ಚಳವಾಗಿದೆ. ಬೆಂಗಳೂರಿನ ಸರ್ಜಾಪುರ ರಸ್ತೆಯಲ್ಲಿ ಎರಡು ರೂಮ್ ಹೊಂದಿರುವ ಅಪಾರ್ಟ್ಮೆಂಟ್ ಅಂದರೆ ಸುಮಾರು 1,000 ಚದರ ಅಡಿ ಮನೆಯ ಬಾಡಿಗೆಯು 2021 ಕೊನೆಯಿಂದ 2024 ಮಧ್ಯದವರೆಗೆ ತಿಂಗಳಿಗೆ 21000 ರೂಪಾಯಿಗಳಿಂದ 35,000 ರೂಪಾಯಿವರೆಗೂ ಹೆಚ್ಚಳವಾಗಿದೆ. ಇದು ಸಹಜವಾಗಿ ವಾರ್ಷಿಕ ಬಾಡಿಗೆ ಹೆಚ್ಚಳವು ಶೇಕಡಾ 5ರಿಂದ 10ರಷ್ಟು ಇದ್ದೆಇದೆ. ಆದರೆ ಕಳೆದ ಎರಡು ವರ್ಷಗಳಲ್ಲಿ ಈ ದರಗಳು ಕೆಲವು ಪ್ರದೇಶಗಳಲ್ಲಿ ಡಬಲ್ ತ್ರಿಬಲ್ ಆಗಿದೆ ಎಂದು ಪ್ರಾಪರ್ಟಿ ಸಲಹಾ ಸಂಸ್ಥೆ ಅನಾರಾಕ್ ಸಂಸ್ಥೆಯು ತಿಳಿಸಿದೆ.
ಕಂಪೆನಿಯ ಪ್ರದೇಶದಿಂದ ದೂರ:
ನಗರದಲ್ಲಿ ಗಗನಮುಖಿಯಾಗಿರುವ ಮನೆ ಬಾಡಿಗೆ ಹೆಚ್ಚಳದಿಂದಾಗಿ ಅನೇಕ ಜನರು ತಮ್ಮ ಕಂಪೆನಿಯ ಪ್ರದೇಶದಿಂದ ದೂರದಲ್ಲಿಯೇ ಮನೆಯನ್ನು ಹುಡುಕುತ್ತಿದ್ದಾರೆ. ಈ ನಡೆಯಿಂದ ನಗರದಲ್ಲಿ ದಿನನಿತ್ಯ ಅವರ ಪ್ರಯಾಣದ ಸಮಯ ಹೆಚ್ಚಾಗುತ್ತಿದೆ. ಆದರೆ ಬ್ರೋಕರ್ಗಳು ಹೇಳುವ ಪ್ರಕಾರ, ಹೊಸ ಹೊಸ ಮನೆಗಳು ಏಳುತ್ತಿರುವುದರಿಂದ ಈ ಸಮಸ್ಯೆ ಮುಂದಿನ ಹಲವು ವರ್ಷಗಳಲ್ಲಿ ಬಾಡಿಗೆ ಏರಿಕೆ ಇಳಿಕೆಯಾಗಬಹುದು ಎಂದು ಅಂದಾಜಿಸಲಾಗಿದೆ.
ಇದನ್ನೂ ನೋಡಿ: ಪಿಚ್ಚರ್ ಪಯಣ – 150 | ನಾಜಿ, ಫ್ಯಾಸಿ ಕಾಲಘಟ್ಟದಲ್ಲಿ ಪ್ರೊಪಗ್ಯಾಂಡ ಸಿನೆಮಾ – ಕೆ.ಫಣಿರಾಜ್ ಮುರಳಿ ಕೃಷ್ಣ ಮಾತುಕತೆ