ಬೆಂಗಳೂರು | ರಂಗಭೂಮಿಯ ಮೌನ ಆತಂಕಕಾರಿ ನಾಗರಾಜಮೂರ್ತಿ

ಬೆಂಗಳೂರು : ಸಮುದಾಯ 50 ನಾಟಕೋತ್ಸವ ಉದ್ಘಾಟಸಿ ಮಾತನಾಡಿದ ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷರಾದ ಕೆ ವಿ ನಾಗರಾಜ ಮೂರ್ತಿ  ಸಮಾಜ ಎದುರಿಸುತ್ತಿರುವ ಆತಂಕಗಳ ಬಗ್ಗೆ ಕನ್ನಡ ರಂಗಭೂಮಿ ಮೌನವಾಗಿರುವುದು ವಿಷಾದಕರ ಎಂದು  ಅವರು ಆತಂಕ ವ್ಯಕ್ತಪಡಿಸಿದರು.

ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಸಮುದಾಯ  50 ರ ಸಂಭ್ರಮದ ಅಂಗವಾಗಿ ಹಮ್ಮಿಕೊಂಡಿರುವ ನಾಟಕೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇದನ್ನೂ ಓದಿ: ಮೈಸೂರು ಸ್ಯಾಂಡಲ್‌ ಸೋಪಿನ ಜಾಹೀರಾತಿಗೆ ಸರ್ಕಾರದ ಹಣ ಖರ್ಚು ಮಾಡಿಲ್ಲ: ಎಂ.ಬಿ.ಪಾಟೀಲ್‌ ಬೆಂಗಳೂರು

ರಂಗಭೂಮಿ ಈ ಹಿಂದೆ ಒಂದು ಚಳವಳಿಯಾಗಿತ್ತು. ಸಮಾಜದ ಪ್ರತಿಯೊಂದು ಸಮಸ್ಯೆಗೂ ಸ್ಪಂದಿಸುತ್ತಿತ್ತು. ಅಸಮಾನತೆ ವಿರೋಧಿಸಲು, ಕೋಮು ಆತಂಕವನ್ನು ಎದುರಿಸಲು ಕಾರಣವಾಗಿತ್ತು. ಆದರೆ ಇತ್ತೀಚೆಗೆ ರಂಗಭೂಮಿ ಈ ಜವಾಬ್ದಾರಿಯಿಂದ ಹಿಂದೆ ಸರಿಯುತ್ತಿದೆ ಬೇಸರ ವ್ಯಕ್ತಪಡಿಸಿದರು.

ನಾಲ್ಕು ಗೋಡೆಗಳ ನಡುವೆ ಇದ್ದ ನಾಟಕವನ್ನು ಜನಸಾಮಾನ್ಯರ ಬಳಿಗೆ ಕರೆದುಕೊಂಡು ಹೋದ ಸಮುದಾಯ ಸುವರ್ಣ ಸಂಭ್ರಮದಲ್ಲಿರುವಾಗ ರಂಗಭೂಮಿ ಮತ್ತೆ ತನ್ನನ್ನು ವಿಮರ್ಶಿಸಿಕೊಂಡು ಜನಪರವಾಗಲಿ ಎಂದು ಆಶಿಸಿದರು.

ಬೆಂಗಳೂರು |ರಂಗಭೂಮಿಯ ಮೌನ ಆತಂಕಕಾರಿ ನಾಗರಾಜಮೂರ್ತಿ

ಈ ಸಂದರ್ಭದಲ್ಲಿ ಸಾಂಸ್ಕೃತಿಕ ಲೋಕದ ಹಿರಿಯರಾದ ಬೊಳುವಾರು ಮಹಮದ್ ಕುಂಞಿ, ಸಿ ಬಸವಲಿಂಗಯ್ಯ, ಲಕ್ಷ್ಮಿ ಚಂದ್ರಶೇಖರ್, ರಘುನಂದನ್, ಶ್ರೀನಿವಾಸ ಜಿ ಕಪ್ಪಣ್ಣ, ಜಿ ಲೋಕೇಶ್, ಎಲ್ ಕೃಷ್ಣಪ್ಪ ಅವರನ್ನು ಸನ್ಮಾನಿಸಲಾಯಿತು.

ಸಮುದಾಯದ ಅಧ್ಯಕ್ಷರಾದ ಬಂಜಗೆರೆ ಜಯಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು. ಪದ್ಮಾ ಶಿವಮೊಗ್ಗ ಕಾರ್ಯಕ್ರಮ ನಿರೂಪಿಸಿದರು.

ಇದನ್ನೂ ನೋಡಿ: ಪಿಚ್ಚರ್‌ ಪಯಣ‌ – 161 – ‘ಸು ಫ್ರಾಮ್‌ ಸೋ’ ಜನಪ್ರಿಯತೆ ಏನನ್ನು ಸೂಚಿಸುತ್ತದೆ?.. ಕೆ.ಫಣಿರಾಜ್ Janashakthi Media

Donate Janashakthi Media

Leave a Reply

Your email address will not be published. Required fields are marked *