ಬೆಂಗಳೂರು: ವಿಜಯಪುರದಲ್ಲಿ ವಕ್ ಬೋರ್ಡ್ ಆಸ್ತಿ ಕಬಳಿಕೆ ವಿಚಾರ ಈಗ ರಾಜಕೀಯ ವಲಯದಲ್ಲಿ ತೀವು ಚರ್ಚೆಗೆ ಗುರಿಯಾಗಿದೆ. ಹಾಗಿದ್ದರೆ ಅಲ್ಲಿ ವಕ್ಸ್ ಬೋರ್ಡ್ ಒಟ್ಟು ಎಷ್ಟು ಆಸ್ತಿ ಹೊಂದಿದೆ ಎಂಬ ವಿಚಾರಗಳನ್ನು ಕಂದಾಯ ಸಚಿವ ಕೃಷ್ಣ ಭೈರೇಗೌಡ, ಈಗ ಬಹಿರಂಗಪಡಿಸಿದ್ದಾರೆ.
ಅಂಕಿ ಅಂಶ ಸಮೇತ ವಕ್ಸ್ ಬೋರ್ಡ್ ಮತ್ತು ಮುಸ್ಲಿಂ ಸಂಸ್ಥೆಗಳ ಅಧೀನದಲ್ಲಿರುವ ಆಸ್ತಿ ವಿವರ ಬಹಿರಂಗಪಡಿಸಿದ್ದಾರೆ. 1973-74 ರಲ್ಲಿ ವಿಜಯಪುರ ಜಿಲ್ಲೆಯಲ್ಲಿ ಒಟ್ಟು 14,201 ಎಕರ ವಕ್ಸ್ ಬೋರ್ಡ್ ಹೆಸರಿನಲ್ಲಿ ನೋಟಿಫಿಕೇಷನ್ ಆಗಿದೆ ಎಂದಿದ್ದಾರೆ.
ಈಗಾಗಲೇ ಪ್ರತಿಪಕ್ಷಗಳು ವಿಜಯಪುರದಲ್ಲಿ 15 ಸಾವಿರ ಎಕರೆ ವಕ್ಸ್ ಬೋರ್ಡ್ ತನ್ನದು ಎಂದು ಹೇಳಿಕೊಳ್ಳುತ್ತಿದೆ ಎಂದಿತ್ತು. ಇದು ಹೆಚ್ಚು ಕಡಿಮೆ ನಿಜವಾಗಿದೆ. ಆದರೆ 14,201 ಎಕರೆ ಪೈಕಿ 700 ಎಕರೆ ಮಾತ್ರ ವಕ್ಸ್ ಬೋರ್ಡ್ ಸ್ವಾಧೀನದಲ್ಲಿದೆ. ಉಳಿದ ಆಸ್ತಿಗಳು ಕೆಲವು ಮುಸ್ಲಿಂ ಸಂಸ್ಥೆಗಳ ಕೈವಶದಲ್ಲಿವೆ. ಕೆಲವು ಆಸ್ತಿ ಇದ್ಯಾ, ಕೆಲವು ದರ್ಗಾ ಆಗಿವೆ. ಉಳಿದಂತೆ 1319 ಎಕರೆ ಯಾವುದೇ ವೈಯಕ್ತಿಕ ಅನುಭೋಗದಲ್ಲಿಲ್ಲ.
ಇದನ್ನೂ ಓದಿ: ಮಾದರಿ ಅಟೋ ಚಾಲಕ| ಪ್ರಯಾಣದ ವೇಳೆ ಪರಭಾಷಿಕರಿಗೆ ಕನ್ನಡ ಕಲಿಸುವ ಅಟೋ!
ಇವುಗಳನ್ನು ಇಂದೀಕರಣ ಮಾಡಲು ತೀರ್ಮಾನಿಸಲಾಗಿದೆ. ಇದರಿಂದ ಯಾರಿಗೂ ಸಮಸ್ಯೆಯಾಗುವುದಿಲ್ಲ. 11,835 ಎಕರೆ ಉಳುವವನೇ ಭೂಮಿಯ ಒಡೆಯ ಅಡಿಯಲ್ಲಿ ಮಂಜೂರಾಗಿದೆ. ಬೇರೆ ಬೇರೆ ಯೋಜನೆಗಾಗಿ ಭೂ ಸ್ವಾಧೀನ ಮಾಡಲಾಗಿದೆ. ಇದು ಯಾವುದಕ್ಕೂ ನೋಟಿಸ್ ಕೊಟ್ಟಿಲ್ಲ ರೈತರಿಗೆ ಮಂಜೂರಾದ ಜಮೀನಿಗೆ ಯಾವುದೇ ನೋಟಿಸ್ ನೀಡಲ್ಲ. ಆದರೆ 121 ನೋಟಿಸ್ ನೀಡಿರುವುದು ನಿಜ ಎಂದಿದ್ದಾರ.
1977 ರ ಹೊನವಾಡ ಗ್ರಾಮವನ್ನು ವಕ್ಸ್ ಬೋರ್ಡ್ ನಿಂದ ತೆಗೆದು ಹಾಕಲಾಗಿದೆ. ಹೊನವಾಡ ಗ್ರಾಮದಲ್ಲಿ ಕೇವಲ 11 ಎಕರೆ ಸ್ವಾಧೀನದಲ್ಲಿದೆ. ಈ ಗ್ರಾಮದ ಯಾರಿಗೂ ನೋಟಿಸ್ ನೀಡದಿದ್ದರೂ ಬೇಕೆಂದೇ ಗಲಭೆ ಹುಟ್ಟಿಸುವ ಉದ್ದೇಶದಿಂದ ಈಗ ಪ್ರತಿಪಕ್ಷದವರು ಇದನ್ನು ವಿವಾದ ಮಾಡುತ್ತಿದ್ದಾರೆ ಎಂದು ಕೃಷ್ಣಭೈರೇಗೌಡ ಆರೋಪಿಸಿದ್ದಾರೆ.
ಇದನ್ನೂ ನೋಡಿ: ಖಾಲಿ ಹುದ್ದೆ 18 ಸಾವಿರ | ನೇಮಕಾತಿ ಆದೇಶ ಐದು ಸಾವಿರು|ನಾವೆಲ್ಲಿಗೆ ಹೋಗೋಣ ಹೇಳಿ ಸಿಎಂ ಸರ್ -ಉದ್ಯೋಗಾಕಾಂಕ್ಷಿಗಳ ಅಳಲು