ವಿಜಯಪುರ| ಮಾಲೀಕನಿಂದ ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ

ವಿಜಯಪುರ: ಕೂಲಿ ಕಾರ್ಮಿಕರನ್ನು ಮಾಲೀಕನೊಬ್ಬ ಹಿಗ್ಗಾಮುಗ್ಗ ಥಳಿಸಿರುವ ಘಟನೆ ವಿಜಯಪುರದ ಸಿಂದಗಿ ರಸ್ತೆಯಲ್ಲಿರುವ ಇಟ್ಟಂಗಿ ಬಟ್ಟೆಯಲ್ಲಿ ನಡೆದಿದೆ. ಭಟ್ಟಿ ಮಾಲೀಕ ಈ ಒಂದು ರಾಕ್ಷಸಿಯ ಕೃತ್ಯ ಎಸಗಿದ್ದಾನೆ. ಮಾಲಿಕ ಖೇಮು ರಾಠೋಡ್ ಎಂಬಾತ ಕಾರ್ಮಿಕರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾನೆ.

ವಿಜಯಪುರ ನಗರದ ಸಿಂದಗಿ ರಸ್ತೆಯಲ್ಲಿರುವ ಇಟ್ಟಂಗಿ ಭಟ್ಟಿ ಮಾಲೀಕ ಖೇಮು ರಾಠೋಡ ಎಂಬಾತನಿಂದ ಕೃತ್ಯ ನಡೆದಿದೆ. ಸದಾಶಿವ ಬಸಪ್ಪ ಮಾದರ (27), ಸದಾಶಿವ ಚಂದ್ರಪ್ಪ ಬಬಲಾದಿ (38), ಉಮೇಶ ಮಾಳಪ್ಪ ಮಾದರ (25) ಎಂಬಾತರ ಮೇಲೆ ಮಾರಣಾಂತಿಕ ಹಲ್ಲೆ ಮಾಡಲಾಗಿದೆ.

ಭಟ್ಟಿಯಲ್ಲಿದ್ದ ಪೈಪ್ ಗಳಿಂದ ಮಾಲೀಕ ಮನಬಂದಂತೆ ಹಲ್ಲೆ ನಡೆಸಿದ್ದಾನೆ. ವಿಜಯಪುರ ನಗರದ ಸಿಂದಿಗೆ ರಸ್ತೆಯಲ್ಲಿರುವ ಇಟ್ಟಂಗಿ ಬಟ್ಟೆಯಲ್ಲಿ ಈ ಒಂದು ಘಟನೆ ನಡೆದಿದೆ. ಕಾರ್ಮಿಕರಾದಂತಹ ಸದಾಶಿವ ಹಾಗೂ ಉಮೇಶ್ ನನ್ನು ಕೆಳಗೆ ಕೂಡಿಸಿ ಅಂಗಾಲಿಗೆ ಇಬ್ಬರು ವ್ಯಕ್ತಿಗಳು ಫೈಬರ್ ಪೈಪ್ ನಿಂದ ಭೀಕರವಾಗಿ ಹಲ್ಲೆ ನಡೆಸಿದ್ದಾರೆ.

ಇದನ್ನೂ ಓದಿ: ಸುವರ್ಣಸೌಧ ಗಾಂಧಿ ಪ್ರತಿಮೆ ಅನಾವರಣ; ಸ್ವಾತಂತ್ರ್ಯ ಹೋರಾಟಗಾರರಿಗೂ ಆಹ್ವಾನ: ಡಿಸಿಎಂ ಡಿ.ಕೆ. ಶಿವಕುಮಾರ್

ಹಲ್ಲೆಗೆ ಒಳಗಾದವರು ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಚಿಕ್ಕಲಕಿ ಗ್ರಾಮದ ನಿವಾಸಿಗಳು ಎಂದು ತಿಳಿದುಬಂದಿದೆ. ಕಾರ್ಮಿಕರು ಎಷ್ಟೇ ಬೇಡಿಕೊಂಡರು ಕೂಡ ಖೇಮು ರಾಠೋಡ್ ಹಲ್ಲೆ ನಡೆಸಿದ್ದಾನೆ.

ಕಾರ್ಮಿಕರು ಬಾಯಿ ಬಡೆದುಕೊಳ್ಳುತ್ತಿರುವ ದೃಶ್ಯ ನಿಜಕ್ಕೂ ಮನಕಲಕುವಂತಿದೆ. ಎಷ್ಟೇ ಬಾಯಿ ಬಡೆದುಕೊಂಡರು ಮಾಲೀಕನಿಗೆ ಕನಿಕರ ಬಾರದೆ ಮತ್ತೆ ಹಲ್ಲೆ ನಡೆಸಲಾಗಿದೆ ಈ ಕುರಿತು ವಿಜಯಪುರ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸರು ಘಟನೆ ಕುರಿತು ಮಾಹಿತಿ ಪಡೆದುಕೊಂಡು ಮಾಲೀಕನ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.

 

ಇದನ್ನೂ ನೋಡಿ: APS ಹೈಸ್ಕೂಲ್ ನೆನಪುಗಳನ್ನು ಕನ್ನಡದಲ್ಲಿ ಹಂಚಿಕೊಂಡ ರಜನೀಕಾಂತ್ Janashakthi Media

Donate Janashakthi Media

Leave a Reply

Your email address will not be published. Required fields are marked *