ಬೆಂಗಳೂರು : ಪ್ರಜ್ವಲ್ ರೇವಣ್ಣ ಲೈಂಗಿಕ ಪ್ರಕರಣ ಸಂಬಂಧಿಸಿದಂತೆ ಸಂತ್ರಸ್ತ ಮಹಿಳೆಯರಿಗೆ ಎಸ್ಐಟಿ ಹೆಸರಿನಲ್ಲಿ ಜೀವ ಬೆದರಿಕೆ ಹಾಕಲಾಗುತ್ತಿದೆ ಎನ್ನುವ ಸುದ್ದಿ ಬಗ್ಗೆ ತಮಗೆ ಮಾಹಿತಿ ಇಲ್ಲ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ಹೇಳಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಪರಮೇಶ್ವರ್, ಸಂತ್ರಸ್ತೆಯರು ಸಾಕ್ಷಿಯನ್ನು ಹೇಳಬಾರದು ಎಂದು ಯಾರೋ ಜೀವ ಬೆದರಿಕೆ ಹಾಕುತ್ತಿದ್ದಾರಂತೆ ಅದು ಯಾರು ಅಂತ ಗೊತ್ತಿಲ್ಲ. ಆದರೆ, ಈ ಬಗ್ಗೆ ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಹಾಗೂ ಎಸ್‌ಐಟಿ ಅಧಿಕಾರಿಗಳಿಗೆ ದೂರು ನೀಡಲಿ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ವಿಡಿಯೊಗಳ ಮಾರ್ಫಿಂಗ್ ಆರೋಪ; ಇಬ್ಬರಿಗೆ ನೋಟಿಸ್ ಜಾರಿ
ಪ್ರಕರಣವನ್ನು ಎಸ್‌ಐಟಿಗೆ ವರ್ಗಾಯಿಸಿದ್ದು ಕಾನೂನು ಪ್ರಕಾರ ಎಲ್ಲವೂ ನಡೆಯುತ್ತಿದೆ.
ಅವರ ಕೆಲಸ ಅವರು ಮಾಡುತ್ತಾರೆ.ಎಸ್‌ಐಟಿಯಿಂದ ಡೈಲಿ ಅಪ್ಡೇಟ್ ಪಡೆಯಲು ಆಗುವುದಿಲ್ಲ. ಅಪರಾಧಿಗಳಿಕೆ ಶಿಕ್ಷೆ ನೀಡುತ್ತಾರೆ ಎಂದರು.
ದೇವರಾಜೇಗೌಡರ ವೈರಲ್ ವಿಡೀಯೋ ಬಗ್ಗೆ ಮಾತನಾಡಿದ್ದು, ದೇವರಾಜೇ ಗೌಡರ ಪ್ರತಿ ವಿಡಿಯೋ, ಅವರ ಹೇಳಿಕೆ, ದೂರು ಎಲ್ಲವನ್ನು ಅಧಿಕಾರಿಗಳು ಗಮನಿಸುತ್ತಾರೆ. ಅದರ ಬಗ್ಗೆ ಏನು ಕ್ರಮ ತೆಗೆದುಕೊಳ್ಳಬೇಕು ಅದನ್ನು ಅಧಿಕಾರಿಗಳು ತೆಗೆದುಕೊಳ್ಳುತ್ತಾರೆ ಎಂದರು.
ಇದನ್ನೂ ನೋಡಿ: 90 ದಿನ ವಿದೇಶದಲ್ಲಿ ಇರ್ತಾರಾ ಪ್ರಜ್ವಲ್ ರೇವಣ‍್ಣ!ಇಂಟರ್ ಪೋಲ್ ಬಂಧಿಸಿ ಭಾರತಕ್ಕೆ ಕರೆ ತರುತ್ತಾ?