ಅದೇಕೋ ಸುಳ್ಳು ಸುದ್ಧಿಗಳು ಬಹಳ ಬೇಗ ಪ್ರಸಾರವಾಗುತ್ತವೆ. ನಿನ್ನೆಯಿಂದ ಸುದ್ಧಿ ಪತ್ರಿಕೆ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಕೋಳಿ ತತ್ತಿಯಲ್ಲಿ ಕ್ಯಾನ್ಸರ್ ಅಂಶ ಪತ್ತೆ: ಆತಂಕ ಪಟ್ಟ ಜನತೆ ಎಂಬ ಸುದ್ಧಿ ಹರಿದಾಡುತ್ತಿದೆ. ಟ್ರಸ್ಟಿಫೈಡ್ ಎಂಬ ಪ್ರಯೋಗಾಲಯ ಎಗ್ಗೊಜ್ ಕಂಪನಿಯ ಒಂದಿಷ್ಟು ಮೊಟ್ಟೆಗಳನ್ನು ಪರೀಕ್ಷೆ ಮಾಡಿ ಅದರಲ್ಲಿ ಭಾರತದಲ್ಲಿ ಕೋಳಿಗಳಲ್ಲಿ ಉಪಯೋಗಿಸಲು ಬ್ಯಾನ್ ಆದ ನೈಟ್ರೊಫ್ಯುರಾನ್ ಎಂಬ ಜೀವನಿರೋಧಕದ ಅಂಶವಿರುತ್ತಿದ್ದು, ಇದು ಕ್ಯಾನ್ಸರ್ ಉಂಟು ಮಾಡುತ್ತದೆ ಅಂದಿದ್ದೇ ತಡ ಸಹಸ್ರಾರು ಯುಟ್ಯೂಬ್ ಮತ್ತು ವಾಟ್ಸಪ್ ವಿಶ್ವವಿದ್ಯಾಲಯಗಳ ವಿಜ್ಞಾನಿಗಳು ಇದ್ದ ಬದ್ದ ಕೋಳಿ ಮೊಟ್ಟೆಗಳಲ್ಲಿ ಜೀವ ನಿರೋಧಕದ ಅಂಶ ಸಿಕ್ಕಾ ಪಟ್ಟೆ ಹೆಚ್ಚಿದ್ದು, ಇದರಿಂದಲೇ ಜನರಲ್ಲಿ ಕ್ಯಾನ್ಸರ್ ಬರುತ್ತದೆ ಎಂಬ ತರ ಬೊಬ್ಬಿರಿದರು.
ಡಾ. ಎನ್.ಬಿ. ಶ್ರೀಧರ
ಇದಕ್ಕೆ ಪುಂಖಾನುಪುಂಕ ರೆಕ್ಕೆ ಪುಕ್ಕ ಕಟ್ಟಿಕಟ್ಟಿಸಿ ಕೋಳಿಗಳಲ್ಲಿಯೂ ಸಹ ಹಾರ್ಮೋನು ಚುಚ್ಚಿ ಅವುಗಳನ್ನು 4-6 ವಾರಕ್ಕೆ ವೇಗವಾಗಿ ಬೆಳೆಯುವಂತೆ ಮಾಡ್ತಾರೆ.. ಜಾಸ್ತಿ ತತ್ತಿ ಪಡೆಯಲು ಔಷಧ ಚುಚ್ಚಿ ಅದರ ಅಂಶವೆಲ್ಲಾ ತತ್ತಿಯಲ್ಲಿ ಬಂದು ತತ್ತಿ ತಿಂದಲ್ಲಿ ಅದರ ವಿಷವೆಲ್ಲಾ ಮನುಷ್ಯನ ದೇಹ ಸೇರುತ್ತದಂತೆ..ಅದರಲ್ಲಿಯೂ ಸಹ ದೇಹದ ಬೆಳವಣಿಗೆ ಹೆಚ್ಚಿಸಲು “ಗ್ರೋಥ್ ಹಾರ್ಮೋನು” ಚುಚ್ಚಿ ಮನುಷ್ಯರಿಗೆ ಅಪಾಯವಾಗುವ ಹಾಗೇ ಮಾಡುತ್ತಾರೆ. ಹಾರ್ಮೋನು ಕೊಟ್ಟಾಗ ಪಕ್ಷಿ ವೇಗವಾಗಿ ಬೆಳೆಯುತ್ತದೆ.
ಅದಕ್ಕೆ ಆಗ ಭಾರಿ ಕಾಯಿಲೆಗಳು ಬರುತ್ತವೆ. ಅವುಗಳನ್ನು ನಿಯಂತ್ರಿಸಲು ಜೀವನಿರೋಧಕ ಕೊಡುತ್ತಾರೆ. ಈ ಎರಡೂ ಮಾರಕ ಅಂಶಗಳು ಮನುಷ್ಯನ ದೇಹ ಸೇರಿ ಅವನ ಆರೋಗ್ಯವನ್ನೇ ಕೆಡಿಸುತ್ತವೆ. ಇದರಿಂದ ಬಹು ಜೀವನಿರೋಧಕಗಳಿಗೆ ನಿರೋಧಕತೆ ಬರುತ್ತದೆ. ಜಾಸ್ತಿ ದುಡ್ಡು ಮಾಡಲು ಕೋಳಿ ಸಾಕಣೆಗಾರರು ಮಾಡುವ ಷಡ್ಯಂತ್ರದ ಒಂದು ಭಾಗ ಎನ್ನುತ್ತಾರೆ ವಿದ್ಯಾವಂತರೆನಿಸಿದ, ದೊಡ್ಡ ದೊಡ್ಡ ಬಿರುದು ಬಾವಲಿಗಳನ್ನು ಗಳಿಸಿದಂತ ಮೇಧಾವಿಗಳು. ಇವರಲ್ಲಾ ಸೇರಿ ಸಾಮಾನ್ಯ ಜನರ ತಲೆಯಲ್ಲಿ ತುಂಬಿದ ಮಿಥ್ಯಗಳು ಇವು.
ಇದನ್ನೂ ಓದಿ: ಮುಂಬೈ-ಗೋವಾ ಹೆದ್ದಾರಿಯಲ್ಲಿನ ಸಮಸ್ಯೆ ಮನವರಿಕೆ ಮಾಡಲು 490 ಕಿ.ಮೀ. ದೂರ ನಡೆದು ಪಾದಯಾತ್ರೆ
ಹಾಗಿದ್ದರೆ ಏನು ಸತ್ಯ?
ನೈಟ್ರೋಫ್ಯುರಾನ್ ಅಂಶ ಮನುಷ್ಯನಲ್ಲಿ ಕ್ಯಾನ್ಸರ್ ಮಾಡುವುದೂ ಸತ್ಯ ಮತ್ತು ಅದನ್ನು ಕೋಳಿಗಳಲ್ಲಿ ಉಪಯೋಗಕ್ಕೆ ಬ್ಯಾನ್ ಮಾಡುವುದೂ ಸತ್ಯ. ನೈಟ್ರೋಫುರಾನ್ ಅಂಶಗಳು ಕ್ಯಾನ್ಸರ್ ಜನಕವಾಗಿರುವುದರಿಂದ ಅವುಗಳನ್ನು ನಿಷೇಧಿಸಲಾಗಿದೆ. ಈ ಬಗ್ಗೆ ಇಂತಿಷ್ಟೇ ದಿನಕ್ಕೆ ಕ್ಯಾನ್ಸರ್ ಮಾಡುತ್ತವೆ ಎಂಬ ಯಾವುದೇ ಅಧ್ಯಯನಗಳಿಲ್ಲ. ಆದರೆ ಈ ವರದಿಯಲ್ಲಿ ಅದರ ಪ್ರಮಾಣ ೦.೭೩ ಮೈಕ್ರೋಗ್ರಾಮ್/ಪ್ರತಿ ಕಿಲೋ ತತ್ತಿಯಲ್ಲಿದೆ ಎಂದಿದೆ.ಅಂದರೆ ಒಂದು ಕಿಲೋ ತತ್ತಿ ಎಂದರೆ ಸುಮಾರು 20 ತತ್ತಿ ತಿಂದರೆ ಕೇವಲ ೦.೭೩ ಮೈಕ್ರೋಗ್ರಾಂ ಪ್ರಮಾಣದಲ್ಲಿ ಮಾತ್ರ ನೈಟ್ರೋಫ್ಯುರಾನ್ ಅಂಶ ಶರೀರ ಸೇರುತ್ತದೆ.
ಆದರೆ ಕ್ಯಾನ್ಸರ್ ಉಂಟುಮಾಡಲು ಈ ಅಂಶ ಹೊಂದಿದ ಮೊಟ್ಟೆಯನ್ನು 1.0 ಮೈಕ್ರೋಗ್ರಾಂ/ಕಿಲೊ ಅಂದರೆ ಒಬ್ಬ ಮನುಷ್ಯ 20 ತತ್ತಿಗಳನ್ನು ಒಮ್ಮೆಯೇ 1-2 ತಿಂಗಳ ಕಾಲ ತಿಂದಲ್ಲಿ ಆತನಲ್ಲಿ ಕ್ಯಾನ್ಸರ್ ಬರುವ ಸಾಧ್ಯತೆ ಇರಬಹುದು. ಈ ಸಾಧ್ಯತೆ ಇಲ್ಲವೇ ಇಲ್ಲ. ಇಲ್ಲಿ ಬ್ಯಾನ್ ಆದ ಅಂಶ ತತ್ತಿಗಳಲ್ಲಿ ಹೇಗೆ ಬಂದಿತು ಎಂಬುದು ತನಿಖೆಯಾಗ್ೇಕಾದ ವಿಷಯವಾದರೂ ಸಹ ಈ ಕಾರಣಾದಿಂದ ಇಡೀ ಕುಕ್ಕುಟ ಉಧ್ಯಮವನ್ನೇ ದೂಶಿಸುವ ಕೆಲಸ ಪ್ರಾರಂಭವಾಗಿ ಇದನ್ನು ಅವಲಂಭಿಸಿದ ಲಕ್ಷಾಂತರ ಜನರ ಜೀವನಾಲಂಭನೆ ಮತ್ತು ಕೋಟ್ಯಾಂತರ ಜನ ತತ್ತಿಪ್ರಿಯರ ತಲೆ ಕೆಡಿಸಿ ಅವರ ಉತ್ತಮ ಪ್ರೊಟೀನ್ ಮೂಲವನ್ನು ಹಾಳುಮಾಡಿದ್ದು ಕೇವಲ ವದಂತಿಗಳು ಮಾತ್ರ. ನಮ್ಮ ಭಾರತದಲ್ಲಿ ಇದು ಹೊಸದೇನೂ ಅಲ್ಲ.

ಅಸಲಿಗೆ ಮೊಟ್ಟೆಯಲ್ಲಿ ಜೀವನಿರೋಧಕದ ಆಂಶ ಪತ್ತೆಯಾದರೂ ಸಹ ಅದರ ಪ್ರಮಾಣ ಬಹಳ ಕಡಿಮೆ. ವ್ಯಾಪಾರವೆಂದರೆ ದುಡ್ಡು ಮಾಡುವುದಕ್ಕೆ. ದುಡ್ಡು ಮನುಷ್ಯನ ಜೀವನಕ್ಕೆ ಬೇಕು. ವಿಜ್ಞಾನದ ಯಾವುದೇ ಆವಿಷ್ಕಾರಗಳು ಮನುಷ್ಯನ ಉದ್ಧಾರಕ್ಕೆ ಹೊರತು ಅವು ಪರಿಸ್ನೇಹಿಯಾಗಿದ್ದಿಲ್ಲ. ಹಾಗೆಂದ ಮಾತ್ರಕ್ಕೆ ಎಲ್ಲರೂ ಮೋಸವನ್ನೇ ಮಾಡುತ್ತಾರೆ ಎಂಬ ನಂಬಿಕೆ ತಪ್ಪು ಮತ್ತು ಅಪಾಯಕಾರಿ. ಕೋಳಿಗಳಿಗೆ ಅನೇಕ ಔಷಧಿಗಳನ್ನು ಅವುಗಳ ಬೆಳವಣಿಗೆ ಹಂತದಿಂದ ಹಿಡಿದು ಮಾಂಸ ಅಥವಾ ಮೊಟ್ಟೆ ನೀಡುವುದನ್ನು ನಿಲ್ಲಿಸುವವರೆಗೂ ನೀಡುವುದು ಈ ಉಧ್ಯಮದಲ್ಲಿ ಬಹಳ ಸಾಮಾನ್ಯ. ಹಾಗೆಂದ ಮಾತ್ರ ಅವುಗಳಿಗೆ ನೀಡಿದ ಔಷಧಿಗಳೆಲ್ಲಾ ಮೊಟ್ಟೆಯಲ್ಲಿ ಮತ್ತು ಮಾಂಸದಲ್ಲಿ ಬಂದು ಬಿಡುತ್ತವೆ ಎಂಬುದೂ ಸಹ ಅಷ್ಟೇ ಮಿಥ್ಯ.
ಕೋಳಿಗಳಲ್ಲಿ ಎರಡು ವಿಧ. ಮಾಂಸದ ಕೋಳಿ (ಬ್ರಾಯ್ಲರ್) ಮತ್ತು ಮೊಟ್ಟೆ ಕೋಳಿ (ಲೇಯರ್). ಮಾಂಸದ ಕೋಳಿಯನ್ನು 5-7 ವಾರ ಬೆಳೆಸಿ ಸುಮಾರು 1.8-2.2 ಕಿಲೊ ತೂಕ ಬಂದೊಡನೆ ಮಾರಿ ಬಿಡಲಾಗುತ್ತದೆ. ಮೊಟ್ಟೆ ನೀಡುವ ಕೋಳಿಗಳು 17-18 ನೇ ವಾರದಲ್ಲಿ ಮೊಟ್ಟೆ ಇಡಲು ಪ್ರಾರಂಭಿಸಿ ಸುಮಾರು 72-78 ವಾರದ ವರೆಗೂ ಸಾಕಲ್ಪಟ್ಟು ನಂತರ ಮಾಂಸಕ್ಕಾಗಿ ಉಪಯೋಗಿಸಲ್ಪಡುತ್ತವೆ.
ಮಿಥ್ಯ 1: ಕೋಳಿಗೆ ಬೆಳವಣಿಗೆ ವೇಗವಾಗಿ ಬರಲು ಬೆಳವಣಿಗೆಯ ಹಾರ್ಮೋನು (“ಗ್ರೋತ್ ಹಾರ್ಮೋನ್”) ನೀಡುತ್ತಾರೆ.
ಇದು ಶುದ್ಧ ಅಸತ್ಯ. ಮಾಂಸದ ಕೋಳಿಗಳು ವೇಗವಾಗಿ ಬೆಳೆಯಲು ಉತ್ತಮ ಪೌಷ್ಟಿಕ ಆಹಾರ, ಪ್ರೊಬಯೋಟಿಕ್ಸ್ ಮತ್ತು ಕೆಲವೊಮ್ಮೆ ಜೀವನಿರೋಧಕಗಳನ್ನು ನೀಡುತ್ತಾರೆ. ಬೆಳವಣಿಗೆಯ ಹಾರ್ಮೋನು ನೀಡುವುದರಿಂದ ಬೆಳವಣಿಗೆ ಬರುವುದಿಲ್ಲ. ಹಾರ್ಮೋನು ನೀಡುವುದು ಅತ್ಯಂತ ದುಬಾರಿ. ಬೆಳವಣಿಗೆಯ ಹಾರ್ಮೋನನ್ನು ಸಹಸ್ರಾರು ಕೋಳಿಗಳಿಗೆ ನೀಡುವುದು ಕುಕ್ಕುಟ ಉಧ್ಯಮದಲ್ಲಿ ಕಷ್ಟ ಸಾಧ್ಯ ವಿಚಾರ. ಬೆಳವಣಿಗೆಯ ಹಾರ್ಮೋನನ್ನು ಬಾಯಿಯ ಮೂಲಕ ನೀಡಿದಾಗ ಯಾವುದೇ ಕಾರಣಕ್ಕೂ ದೇಹಕ್ಕೆ ಸೇರುವುದಿಲ್ಲ.
ಚುಚ್ಚುಮದ್ದು ನೀಡುವುದು ಅಸಾಧ್ಯದ ಮಾತು. ದೇಹಕ್ಕೇ ಸೇರದ ಮೇಲೆ ಮಾಂಸದಲ್ಲಾಗಲಿ ಅಥವಾ ಮೊಟ್ಟೆಯಲ್ಲಾಗಲಿ ಬರುವ ಸಾಧ್ಯತೆಯೇ ಇಲ್ಲ. ಕಾರಣ ಇವುಗಳಿಂದ ಮನುಷ್ಯನ ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀರುವ ಸಾಧ್ಯತೆಯೇ ಇಲ್ಲ. ಹಾಗಿದರೆ ಅನೇಕ ಪತ್ರಿಕೆಗಳಲ್ಲಿ ದೊಡ್ಡ ಜನರೆನಿಸಿಕೊಂಡವರ ಬಾಯಲ್ಲಿ ಇಂತಹ ಮುತ್ತುಗಳು ಪಕ್ಕಾ ಅಸತ್ಯ.
ಮಿಥ್ಯ 2: ಔಷಧಿಗಳ ಪಳಿಯುಳಿಕೆಗಳು ಮೊಟ್ಟೆ/ಮಾಂಸದಲ್ಲಿ ಉಳಿದು ಮನುಷ್ಯರಲ್ಲಿ ತೊಂದರೆಯನ್ನುಂಟು ಮಾಡುತ್ತವೆ.
ಇದು ಹೇಳಿಕೊಳ್ಳುವಷ್ಟರ ಮಟ್ಟಿಗೆ ಸತ್ಯವಲ್ಲ. ಮೊಟ್ಟೆ ಕೋಳಿಗಳಿಗೆ ವೇಗದ ಬೆಳವಣಿಗೆ ಅವಶ್ಯಕತೆ ಇಲ್ಲ. ಅವು ಮೊಟ್ಟೆ ಇಡಲು ಅವಶ್ಯಕತೆ ಇದ್ದಷ್ಟು ಆಹಾರ ನೀಡಲಾಗುತ್ತದೆ. ಅವು ಯಾವುದೇ ಆಹಾರ, ಔಷಧಿ ನೀಡಿದರೂ ಒಮ್ಮೆಯೇ ಎರಡು ಮೊಟ್ಟೆ ನೀಡುವುದಿಲ್ಲ ಅಥವಾ ಜಾಸ್ತಿ ಮೊಟ್ಟೆ ಇಡುವುದಿಲ್ಲ. ಮೊಟ್ಟೆಗಳಲ್ಲಿ ಒಂದೊಮ್ಮೆ ಔಷಧ ಇದ್ದರೂ ಸಹ ಅದರ ಪ್ರಮಾಣ ಅತ್ಯಂತ ಕಡಿಮೆ ಪ್ರಮಾಣದಲ್ಲಿದ್ದು ವಿಶ್ವಮಟ್ಟದಲ್ಲಿ ನಿಗದಿಪಡಿಸಿದ ಪ್ರತಿ ದಿನ ಸೇವನೆಯ ಮಿತಿಯಲ್ಲಿಯೇ ಇರುತ್ತದೆ. ಮೊಟ್ಟೆಯನ್ನು ಬೇಯಿಸಿದಲ್ಲಿ ಅದು ಹೊರಟು ಹೋಗುತ್ತದೆ ಇಲ್ಲವೇ ಜಠರದ ಆಮ್ಲತೆಯಲ್ಲಿ ನಿಷ್ಕ್ರಿಯಗೊಳ್ಳುತ್ತದೆ. ಕಾರಣ ಇದು ಮನುಷ್ಯರಿಗೆ ಅಪಾಯ ತಂದ ಯಾವ ನಿದರ್ಶನಗಳೂ ಇಲ್ಲ.
ಮಿಥ್ಯ 3: ಕಂದು ಬಣ್ಣದ ಮೊಟ್ಟೆಗಳು ಮತ್ತು ನಾಟಿಕೋಳಿಗಳ ಮೊಟ್ಟೆಗಳು ಸಾವಯವ ಮತ್ತು ಜಾಸ್ತಿ ಪೌಷ್ಟಿಕ.
ಮೊಟ್ಟೆಯ ಬಣ್ಣವು ಅದನ್ನು ಇಡುವ ಕೋಳಿಯ ಮೇಲೆ ಅವಲಂಬಿತವಾಗಿದೆ. ರಾಸಾಯನಿಕ ಮುಕ್ತ ಆಹಾರ ತಿಂದು ಉತ್ಪಾದನೆಯಾದ ತತ್ತಿಗಳೆಲ್ಲಾ ಸಾವಯವವೇ ಸರಿ. ಬಣ್ಣದಲ್ಲಿನ ವ್ಯತ್ಯಾಸ ಹೊರತು ಪಡಿಸಿ ನಾಟಿಕೋಳಿಯ ಮೊಟ್ಟೆಯ ಪೌಷ್ಟಿಕಾಂಶಕ್ಕೂ ಮತ್ತು ಹೈಬ್ರಿಡ್ ಕೋಳಿ ಮೊಟ್ಟೆಯ ಪೌಷ್ಟಿಕಾಂಶಕ್ಕೂ ಯಾವುದೇ ವ್ಯತ್ಯಾಸ ಇಲ್ಲ. ಬದಲಾಗಿ ನಾಟಿ ಕೋಳಿಯ ಮೊಟ್ಟೆ ಜಾಸ್ತಿ ದುಬಾರಿ ಮತ್ತು ತೂಕ ಕಡಿಮೆ.
ಮಿಥ್ಯ 4: ಹಸಿ ತತ್ತಿ ಬೇಯಿಸಿದ ತತ್ತಿಗಿಂತ ಜಾಸ್ತಿ ಪೌಷ್ಟಿಕ.
ಹಸಿ ತತ್ತಿ ಬೇಯಿಸಿದ ತತ್ತಿಗಿಂತ ಜಾಸ್ತಿ ಪೌಷ್ಟಿಕವಲ್ಲ. ಬದಲಾಗಿ ಅದರಿಂದ ಸಾಲ್ಮೊನೆಲ್ಲಾ ಇತ್ಯಾದಿ ಕಾಯಿಲೆಗಳು ಹರಡುವ ಸಾಧ್ಯತೆ ಇದೆ. ತತ್ತಿಯನ್ನು ಬೇಯಿಸುವುದರಿಂದ ಬ್ಯಾಕ್ಟಿರಿಯಾಗಳು ನಾಶವಾಗಿ ಪ್ರೊಟೀನುಗಳು ಸುಲಭವಾಗಿ ಜೀರ್ಣವಾಗುತ್ತವೆ.
ಮಿಥ್ಯ 5 ನಾಟಿ ಮೊಟ್ಟೆಗಳು ಸಾವಯವ ಮತ್ತು ಹೈಬ್ರಿಡ್ ಕೋಳಿ ಮೊಟ್ಟೆಗಿಂತ ಪೌಷ್ಟಿಕ
ನಿಜವಲ್ಲ. ನಾಟಿಕೋಳಿಗಳ ಮೊಟ್ಟೆ ಗಾತ್ರದಲ್ಲಿ ಚಿಕ್ಕದು ಮತ್ತು ಪೌಷ್ಟಿಕ ಮಟ್ಟದಲ್ಲಿ ಹೈಬ್ರಿಡ್ ಕೋಳಿಗಿಂತ ಯಾವುದೇ ಪೌಷ್ಟಿಕಾಂಶ ಹೊಂದಿಲ್ಲ. ಅದರ ಪರಿಮಳ ಮತ್ತು ರುಚಿಯಲ್ಲಿ ಒಂದಿಷ್ಟು ವ್ಯತ್ಯಾಸ ಇರಬಹುದು ಅಷ್ಟೇ.
ಮಿಥ್ಯ 6: ಕಂದು ಬಣ್ಣದ ಮೊಟ್ಟೆಗಳು ಮತ್ತು ನಾಟಿಕೋಳಿಗಳ ಮೊಟ್ಟೆಗಳು ಸಾವಯವ ಮತ್ತು ಜಾಸ್ತಿ ಪೌಷ್ಟಿಕ.
ಮೊಟ್ಟೆಯ ಬಣ್ಣವು ಅದನ್ನು ಇಡುವ ಕೋಳಿಯ ಮೇಲೆ ಅವಲಂಬಿತವಾಗಿದೆ. ರಾಸಾಯನಿಕ ಮುಕ್ತ ಆಹಾರ ತಿಂದು ಉತ್ಪಾದನೆಯಾದ ತತ್ತಿಗಳೆಲ್ಲಾ ಸಾವಯವವೇ ಸರಿ. ಬಣ್ಣದಲ್ಲಿನ ವ್ಯತ್ಯಾಸ ಹೊರತು ಪಡಿಸಿ ನಾಟಿಕೋಳಿಯ ಮೊಟ್ಟೆಯ ಪೌಷ್ಟಿಕಾಂಶಕ್ಕೂ ಮತ್ತು ಹೈಬ್ರಿಡ್ ಕೋಳಿ ಮೊಟ್ಟೆಯ ಪೌಷ್ಟಿಕಾಂಶಕ್ಕೂ ಯಾವುದೇ ವ್ಯತ್ಯಾಸ ಇಲ್ಲ. ಬದಲಾಗಿ ನಾಟಿ ಕೋಳಿಯ ಮೊಟ್ಟೆ ಜಾಸ್ತಿ ದುಬಾರಿ ಮತ್ತು ತೂಕ ಕಡಿಮೆ.
ಮಿಥ್ಯ 7: ತತ್ತಿಗಳಿಗೆ ಜೀವವಿದೆ ಮತ್ತು ಅದನ್ನು ತಿನ್ನುವುದು ಪ್ರಾಣಿಹತ್ಯೆ ಮಾಡಿದಂತೆ.
ಮೊಟ್ಟೆಯನ್ನು ಕೋಳಿಗಳು ಇಡೀ ವರ್ಷ ಗಂಡುಕೋಳಿಯ ಸಂಪರ್ಕವಿಲ್ಲದಿದ್ದರೂ ಸಹ ಇಡುತ್ತಲೇ ಇರುತ್ತವೆ. ಕಾರಣ ತತ್ತಿ ಏಕಕೋಶವನ್ನು ಹೊಂದಿದ್ದು ಇದಕ್ಕೆ ಜೀವ ಇರುವುದಿಲ್ಲ ಮತ್ತು ಇದನ್ನು ತಿನ್ನುವುದು ಜೀವ ಹತ್ಯೆಯಲ್ಲ.
ಮಿಥ್ಯ 8: ತತ್ತಿಯನ್ನು ತಿನ್ನುವುದರಿಂದ ದೇಹದ ಕೊಲೆಸ್ಟೆರೊಲ್ ಜಾಸ್ತಿಯಾಗಿ ಹೃದಯದ ತೊಂದರೆ ಜಾಸ್ತಿಯಾಗುತ್ತದೆ.
ತತ್ತಿಯನ್ನು ತಿನ್ನುವುದರಿಂದ ಕೊಲೆಸ್ಟೆರೋಲ್ ಅಥವಾ ಕೊಬ್ಬು ಜಾಸ್ತಿಯಾಗುವುದಿಲ್ಲ. ಮನುಷ್ಯನ ದೇಹಕ್ಕೆ ಒಂದಿಷ್ಟು ಪ್ರಮಾಣದಲ್ಲಿ ಕೊಲೆಸ್ಟೆರೊಲ್ ಅವಶ್ಯ.
ತತ್ತಿ ತಿನ್ನುವುದರಿಂದ ಜಾಸ್ತಿ ಕೊಲೆಸ್ಟಿರೋಲ್ ನೀಡಿದ ಹಾಗಾಗುವುದಿಲ್ಲ. ಅದನ್ನು ದೇಹವೇ ಉತ್ಪಾದಿಸುತ್ತದೆ. ಕೊಲೆಸ್ಟಿರಾಲ್ ಅಂಶವೇ ಇರದ ಆಹಾರವನ್ನು ಸೇವಿಸಿದರೂ ಸಹ ಕೊಲೆಸ್ಟಿರಾಲ್ ಉತ್ಪಾದನೆಯಾಗಿ ಹೃದಯದ ತೊಂದರೆಯಾದ ನಿದರ್ಶನಗಳು ಸಾಕಷ್ಟು ಇವೆ.
ಮಿಥ್ಯ 9: ತತ್ತಿಯ ಕವಚ ಹೊಟ್ಟೆಗೆ ಹೋದರೆ ಪ್ರಾಣಕ್ಕೆ ಅಪಾಯ.
ತತ್ತಿಯ ಗಟ್ಟಿಯಾದ ಕವಚ ಹೊಟ್ಟೆಗೆ ಹೋಗುವುದು ಅಗಾಗ್ಗೆ ಸಾಮಾನ್ಯ ಮತ್ತು ಇದರಿಂದ ಯಾವುದೇ ತೊಂದರೆ ಇಲ್ಲ.
ಮಿಥ್ಯ 10: ಗಂಡು ಮತ್ತು ಹೆಣ್ಣು ಕೋಳಿಗಳ ಸಂಪರ್ಕದಿ೦ದ ಫಲ ಹೊಂದಿದ ಮೊಟ್ಟೆ ಬಹಳ ಪೌಷ್ಟಿಕ
ಫಲ ಹೊಂದಿದ ಅಥವಾ ಫಲ ಹೊಂದಿರದ ಮೊಟ್ಟೆಗಳ ಪೌಷ್ಟಿಕಾಂಶಗಳಲ್ಲಿ ಒಂದಿಷ್ಟೂ ವ್ಯತ್ಯಾಸ ಇಲ್ಲ. ಫಲಹೊಂದಿದ ತತ್ತಿಗೆ ಕಾವು ನೀಡಿದರೆ ಮರಿ ಹೊರಬರುತ್ತದೆ ಅಷ್ಟೆ.
ಮಿಥ್ಯ 11: ಬೇಸಿಗೆಯಲ್ಲಿ ತತ್ತಿ ಸೇವಿಸಿದರೆ ದೇಹಕ್ಕೆ ಬಹಳ ಹೀಟಾಗುತ್ತದೆ
ಹೀಟಾಗುತ್ತದೆ, ಉಷ್ಣವಾಗುತ್ತದೆ ಅಥವಾ ಗರಮಿಯಾಗುತ್ತದೆ ಎಂಬುದೇ ಒಂದು ದೊಡ್ಡ ತಪುö್ಪ ಕಲ್ಪನೆ. ತತ್ತಿ ಮತ್ತು ಕೆಲವೊಂದು ಔಷಧಿ ಅಥವಾ ತರಕಾರಿ ಸೇವಿಸಿದರೆ ಹೀಟಾಗುತ್ತದೆ ಎಂಬುದು ತಪುö್ಪ ಕಲ್ಪನೆ. ಕೆಲವೊಂದು ಆಹಾರ, ಔಷಧಿ ಸೇವಿಸಿದಾಗ ಜಠರದಲ್ಲಿ ಆಮ್ಲತೆ ಜಾಸ್ತಿಯಾಗಿ ಕಸಿವಿಸಿಯಾಗಬಹುದು. ಇದನ್ನು ಹೀಟೆಂದು ಕರೆದರೆ ಇದಕ್ಕೂ ಹೀಟಿಗೂ ಯಾವುದೇ ಸಂಬ೦ಧವಿಲ್ಲ.
ಮಿಥ್ಯ 12: ಜಾಸ್ತಿ ತತ್ತಿ ಸೇವಿಸಿದರೆ ಮಕ್ಕಳಾಗಲು ತೊಂದರೆಯಿದೆ.
ಇದೆಲ್ಲಾ ಶುದ್ಧ ಸುಳ್ಳು. ಅಸಲಿನಲ್ಲಿ ತತ್ತಿಯ ಮೂಲದ ಪ್ರೊಟೀನ್ ಸೇವಿಸಿದರೆ ಪ್ರಜನನ ಕ್ರಿಯೆ ಜಾಸ್ತಿಯಾಗಬಹುದೇ ಹೊರತು ಪುರುಷತ್ವಕ್ಕೂ ಯಾವುದೇ ತೊಂದರೆ ಇಲ್ಲ.
ಮಿಥ್ಯ 14: ಔಷಧಿಗಳ ಪಳಿಯುಳಿಕೆಗಳು ಕೋಳಿಗಳ ಮೊಟ್ಟೆಯಲ್ಲಿ ಉಳಿದು ಮನುಷ್ಯರಲ್ಲಿ ತೊಂದರೆಯನ್ನು೦ಟು ಮಾಡುತ್ತವೆ.
ಇದು ಹೇಳಿಕೊಳ್ಳುವಷ್ಟರ ಮಟ್ಟಿಗೆ ಸತ್ಯವಲ್ಲ. ಮೊಟ್ಟೆ ಕೋಳಿಗಳಿಗೆ ವೇಗದ ಬೆಳವಣಿಗೆ ಅವಶ್ಯಕತೆ ಇಲ್ಲ. ಅವು ಮೊಟ್ಟೆ ಇಡಲು ಅವಶ್ಯಕತೆ ಇದ್ದಷ್ಟು ಆಹಾರ ನೀಡಲಾಗುತ್ತದೆ. ಅವು ಯಾವುದೇ ಆಹಾರ, ಔಷಧಿ ನೀಡಿದರೂ ಒಮ್ಮೆಯೇ ಎರಡು ಮೊಟ್ಟೆ ನೀಡುವುದಿಲ್ಲ ಅಥವಾ ಜಾಸ್ತಿ ಮೊಟ್ಟೆ ಇಡುವುದಿಲ್ಲ. ಮೊಟ್ಟೆಗಳಲ್ಲಿ ಒಂದೊಮ್ಮೆ ಔಷಧ ಇದ್ದರೂ ಸಹ ಅದರ ಪ್ರಮಾಣ ಅತ್ಯಂತ ಕಾರಣ ಈ ರೀತಿಯ ಸುದ್ಧಿಗಳನ್ನು ನಂಬದೇ ವೈಜ್ಞಾನಿಕ ಆಧಾರದಲ್ಲಿ ಎಲ್ಲವನ್ನು ಪರಾಂಭರಿಸಿ ನೋಡುವುದು ಒಳ್ಳೆಯದು.
ದೊಡ್ಡವರು ಹೇಳಿದ ಮಾತ್ರಕ್ಕೆ ಅಥವಾ ಮಾಧ್ಯಮಗಳಲ್ಲಿ ಬಂದ ಮಾತ್ರಕ್ಕೆ ಸುಳ್ಳು ಸತ್ಯವಾಗುವುದಿಲ್ಲ. ಆದರೆ ಈ ಕಾಲದ ಸಾಮಾಜಿಕ ಜಾಲತಾಣದಲ್ಲಿ ಸಹಸ್ರಾರು ಸುದ್ಧಿಗಳಲ್ಲಿ ಯಾವುದು ಸತ್ಯ ಯಾವುದು ಮಿಥ್ಯ ಎಂಬುದನ್ನು ತಿಳಿಯುವ ಮತ್ತು ಅದನ್ನು ತಜ್ಞರ ಮೂಲಕ ಸತ್ಯದ ಒರೆಗೆ ಹಚ್ಚುವ ತಾಳ್ಮೆ ಅಗತ್ಯ.
ಇದನ್ನೂ ನೋಡಿ: ಧರ್ಮಸ್ಥಳ ಪ್ರಕರಣ : ಕೊಂದವರು ಯಾರು? ಅಭಿಯಾನವನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ – ಜ್ಯೋತಿ ಎ Janashakthi
