ತಾತ್ಕಾಲಿಕ ಹಿನ್ನೆಲೆಯ “ದೈಹಿಕ” ಹಾಗೂ ಶಾಶ್ವತ ಹಿನ್ನಲೆಯ “ಮಾನಸಿಕ ಅಸ್ಪೃಶ್ಯತೆ” ಉಂಟುಮಾಡುವ “ಭಯೋತ್ಪಾದನೆ” ಗಳ ನಡುವಿನ ಸ್ವರೂಪ ಹಾಗೂ ಭಿನ್ನತೆ

ಈ ಭೂಮಿ ಮೇಲೆ ಸ್ವಚ್ಛಂದವಾಗಿ ಬದುಕಲು ಯಾರಿಗೂ ಯಾವ ಭಯವೂ ಇರಬಾರದು. ಕಾನೂನಾತ್ಮಕವಾಗಿ ಮನುಷ್ಯ ನೆಲದಲ್ಲಿ ತನ್ನ ಬದುಕಿನ ಜೀವನಕ್ಕೆ ಬೇಕಾದ ಮೂಲಭೂತ ಹಕ್ಕುಗಳನ್ನು ಪಡೆದುಕೊಂಡು ಎಲ್ಲ ಜನರನ್ನು ಪ್ರೀತಿಸುತ್ತ ಬದುಕಿದರೆ ಅದೇ ಆದರ್ಶ ದೇಶ. ಆದರೆ ಅದೇ ದೇಶದೊಳಗೆ ಜೀವನ ಹಾಗೂ ಬದುಕನ್ನು ಕೈಯಲ್ಲಿ ಹಿಡಿದುಕೊಂಡು ಜಾತಿ, ಜಾತಿ ಒಳಗಿನ ಅಸ್ಪೃಶ್ಯತೆಯ ಸಂಕೋಲೆಯಲ್ಲಿ ಸಿಲುಕಿ ಬದುಕುತ್ತಿದ್ದರೆ ನಿಜಾರ್ಥದಲ್ಲಿ ಇದು ಪ್ರತಿಕ್ಷಣದ ಭಯವನ್ನು ಉತ್ಪಾದನೆ ಮಾಡುವ ಭಯೋತ್ಪಾದನೆಯ ಸರಿ. ಇಂತಹ ಭಯೋತ್ಪಾದನೆಗೆ ಭಾರತ ಹೊರತಾದುದಲ್ಲ. ದೈಹಿಕ

-ಎನ್ ಚಿನ್ನಸ್ವಾಮಿ ಸೋಸಲೆ

ಭಾರತ-ಪಾಕಿಸ್ತಾನದ ಗಡಿ ಭಾಗದಲ್ಲಿ ಆಗುತ್ತಿರುವ ” ದೈಹಿಕ ” ಭಯೋತ್ಪಾದನೆಗಿಂತ – ಭಾರತದ ಒಳಗೆ ಶತಶತಮಾನಗಳಿಂದ ಆಗುತ್ತಿರುವ ಅಸ್ಪೃಶ್ಯತೆ ಎಂಬ ” ಮಾನಸಿಕ ” ಭಯೋತ್ಪಾದನೆ ಅತ್ಯಂತ ಹೆಚ್ಚು ಅಪಾಯಕಾರಿ. ದೈಹಿಕ

” ಅಸ್ಪೃಶ್ಯತೆ “ಎಂಬ ಭಯೋತ್ಪಾದನೆಗಿಂತ ಮತ್ತೊಂದು ಭಯೋತ್ಪಾದನೆ ಈ ನೆಲದಲ್ಲಿ ಇಲ್ಲ. ಇಂತಹ ಶಾಶ್ವತ ಭಯೋತ್ಪಾದನೆಗೆ ಈ ನೆಲದಲ್ಲಿ ಎರಡುವರೆ ಸಾವಿರ ವರ್ಷಗಳ ಇತಿಹಾಸವಿದೆ. ದೈಹಿಕ

ಭಾರತ ದೇಶದಲ್ಲಿ ಮೊಟ್ಟ ಮೊದಲ ಬಹುದೊಡ್ಡ ಭಯೋತ್ಪಾದನೆ ತಮ್ಮನ್ನು ತಾವೇ ಸ್ವ-ಪ್ರತಿಷ್ಠೆಯಿಂದ “ಸ್ಪೃಶ್ಯರು” ಎಂದು ಕರೆದುಕೊಂಡು, ಹೀಗೆ ಕರೆದುಕೊಂಡವರೇ ತಮ್ಮ ಸ್ವಾರ್ಥಕ್ಕಾಗಿ ನೀವು “ಅಸ್ಪೃಶ್ಯರು” ಎಂದು ಕರೆದು ಅವರಿಗೆ ಹಾಗೂ ಅವರ ಸ್ವಚ್ಛಂದ ಬದುಕಿಗೆ ಧಾರ್ಮಿಕ ಹಾಗೂ ಸಾಮಾಜಿಕ ಹಿನ್ನೆಲೆಯ ನಿರ್ಬಂಧಗಳನ್ನು ವಿಧಿಸಿದ್ದೆ ಈ ನೆಲದ ಮೊದಲ ಭಯೋತ್ಪಾದನೆ ಆಗಿದೆ. ದೈಹಿಕ

ಇದನ್ನೂ ಓದಿ: ಹವಾಮಾನ ವೈಪರಿತ್ಯ ನಿರ್ವಹಣೆ ರೈತರಿಗೆ ದೊಡ್ಡ ಸವಾಲು: ಜಿ. ಪರಮೇಶ್ವರ

ಈ ಶಾಶ್ವತ ಭಯೋತ್ಪಾದನೆಯ ಮುಂದೆ ಇಂದು ಸಂಭವಿಸುತ್ತಿರುವ ತಾತ್ಕಾಲಿಕ ಭಯೋತ್ಪಾದನೆ ಲೆಕ್ಕಕ್ಕೆ ಇಲ್ಲ. ಭಾರತದ ನೆಲದಲ್ಲಿ ಇಂದು ಸಂಭವಿಸುತ್ತಿರುವ ಭಯೋತ್ಪಾದನೆಗೆ ಸಂವಿಧಾನಾತ್ಮಕ ಹಿನ್ನೆಲೆಯಿಂದ ಗಟ್ಟಿ ಮುಟ್ಟಾದ ಕಾನೂನು ಚೌಕಟ್ಟಿನ ಔಷಧಿ ಇದೆ. ಆ ಮೂಲಕ ಇದನ್ನು ಸಂಪೂರ್ಣವಾಗಿ ನಿರ್ಮೂಲನೆಯನ್ನು ಮಾಡಬಹುದು. ದೈಹಿಕ

ಆದರೆ, ಭಾರತದ ನೆಲದಲ್ಲಿ ಶತಶತಮಾನಗಳಿಂದ ಮಾನಸಿಕವಾಗಿ ಎರಡೂವರೆ ಸಾವಿರ ವರ್ಷಗಳಿಂದ ಜಾರಿಯಲ್ಲಿರುವ ಮಾನಸಿಕ ಭಯೋತ್ಪಾದನೆಗೆ ಯಾರು ಸಹ ಔಷಧಿಯನ್ನು ಕಂಡುಹಿಡಿದಿಲ್ಲ. ಸೂಕ್ತ ಸಂದರ್ಭದಲ್ಲಿ ಅನೇಕ ಮಹನೀಯರು ಔಷಧಿ ಕಂಡುಹಿಡಿದರೂ ಸಹ ಔಷಧಿ ಕಂಡು ಹಿಡಿದವರು ಹಾಗೂ ಅವರ ಔಷಧಿಯನ್ನು ಸಹ ತಮ್ಮ ಮಾನಸಿಕ ಭಯೋತ್ಪಾದನೆ ಒಳಗೆ ಸೇರಿಸಿಕೊಂಡು ಸಮಯಕ್ಕೆ ಸರಿಯಾಗಿ ತಮ್ಮ ಸಮಯ ಸಂದರ್ಭಕ್ಕೆ ತಕ್ಕಂತೆ ಬಳಸಿಕೊಂಡರು. ಈ ಹಿನ್ನೆಲೆಯಿಂದ ಈ ಮಹನೀಯರು ಕಂಡುಹಿಡಿದ ಔಷಧಿ Expire ಆಯ್ತು. ದೈಹಿಕ

ಅಸ್ಪೃಶ್ಯತೆ ಎಂಬ ಶಾಶ್ವತ ಮಾನಸಿಕ ಭಯೋತ್ಪಾದನೆ – ತನ್ನೊಳಗೆ ಅಸ್ಪೃಶ್ಯರಿಗೆ ಜೀವಿಸಲು ವಿಧಿಸಿದ ಮಾನವ ವಿರೋಧಿ ನೀತಿಗಳು ವಿಶ್ವದಲ್ಲಿ ಸಂಭವಿಸುವ ಇನ್ಯಾವುದೇ ಭಯೋತ್ಪಾದನೆಯ ಭೀಕರತೆಗಳನ್ನು ಮೀರಿಸುವಂಥದ್ದು ಎಂದು ಅಂಬೇಡ್ಕರ್ ಅವರೇ ಅನೇಕ ಸಂದರ್ಭದಲ್ಲಿ ಹೇಳಿದ್ದಾರೆ. ಈ ಮಾತನ್ನು ಅಂಬೇಡ್ಕರ್ ಅವರು ಕೆಲವು ಮೂಲಭೂತವಾದಿಗಳು ಕೇಳಿ – ನೋಡಿ ಹೇಳಿದ ರೀತಿಯದಲ್ಲ . ಬದಲಿಗೆ, ಸ್ವತಃ ಪಾರಂಪರಿಕವಾಗಿ ಈ ಭಾರತ ಸೃಷ್ಟಿ ಮಾಡಿದ ಅಸ್ಪೃಶ್ಯತೆಯ ಭಯೋತ್ಪಾದನೆಯಲ್ಲಿ ಸಿಲುಕಿ – ಅದರಿಂದಾದ ಕಷ್ಟ ನಷ್ಟಗಳನ್ನು ಅನುಭವಿಸಿ ಒಡಲಾಳದಿಂದ ಹೇಳಿದ ಮಾತು. ದೈಹಿಕ

ಅಸ್ಪೃಶ್ಯತೆ ಹಿನ್ನೆಲೆಯ ಭಯೋತ್ಪಾದನೆಯ ಮಟ್ಟ ಹೇಗಿತ್ತೆಂದರೆ – ನಮ್ಮ ಸ್ವಾರ್ಥ ಸಾಧನೆಗಾಗಿ ಇವರೇ ಸೃಷ್ಟಿ ಮಾಡಿದ “ಅಸ್ಪೃಶ್ಯರು ” ಎಂಬ ಈ ನೆಲ ಮೂಲ ಸಂಸ್ಕೃತಿಯ ಬೆವರಿನ ಜನರು ಮನುಷ್ಯನಾಗಿ ಜೀವಿಸಲು ಬೇಕಾದ ಮೂಲಭೂತ ಹಕ್ಕುಗಳನ್ನು ಶಾಶ್ವತವಾಗಿ ಧಾರ್ಮಿಕ ಹಾಗೂ ಸಾಮಾಜಿಕ ಹಿನ್ನೆಲೆಯ ಕಟ್ಟುಪಾಡುಗಳಿಂದ ಕಸಿದುಕೊಂಡದ್ದೆ ಭಾರತದ ಮೊದಲ ಭಯೋತ್ಪಾದನೆ. ಈ ಹಿನ್ನೆಲೆಯ ಭಯೋತ್ಪಾದನೆಯ ಚರಿತ್ರೆಗೆ ಭಾರತದಲ್ಲಿ ಸಾವಿರಾರು ವರ್ಷಗಳ ಇತಿಹಾಸ ಇದೆ. ದೈಹಿಕ

ಈ ಇತಿಹಾಸ ಶತಶತಮಾನಗಳಿಂದಲೂ ನಿಂತಲ್ಲೇ ನಿಂತು ಮಡುಗಟ್ಟಿಕೊಂಡಿದೆ. ಸಾವಿರಾರು ವರ್ಷಗಳಿಂದ ನಿಂತಲ್ಲೇ ನಿಂತಿರುವ ಈ ಕೊಳಕು ನೀರು ಪ್ರಜಾಪ್ರಭುತ್ವ ಭಾರತದಲ್ಲಿ ತನ್ನ ಭೀಕರ ವಾಸನೆಯನ್ನು ಹೊರ ಚೆಲ್ಲುತಿದೆ. ಇದು ಹೊರ ಚೆಲ್ಲುತ್ತಿರುವ ಭೀಕರ ವಾಸನೆಯ ಭಯೋತ್ಪಾದನೆಯ ಭಕ್ತಿಯ ಮುಂದೆ ಈಗ ಸಂಭವಿಸುತ್ತಿರುವ ಭಯೋತ್ಪಾದನೆಗೆ ಶಕ್ತಿಯೇ ಇಲ್ಲ.

ಇಂದಿನ ಭಯೋತ್ಪಾದಕ ಚರಿತ್ರೆಗೆ ಸ್ವಾತಂತ್ರ್ಯ ನಂತರದ , ಭಾರತ ಪಾಕಿಸ್ತಾನ – ಬಾಂಗ್ಲಾದೇಶಗಳು ಇಬ್ಬಾಗಗೊಂಡ ನಂತರದ ಚರಿತ್ರೆ ಮಾತ್ರ ಇದೆ. ಆದರೆ “ಅಸ್ಪೃಶ್ಯತೆ” ಎಂಬ ಭಯೋತ್ಪಾದನಾ ಚರಿತ್ರೆಗೆ ಸಾಮ್ರಾಟರು – ರಾಜ ಮಹಾರಾಜರು – ಸಾಮಂತ ಅರಸರು – ಪಾಳ್ಳೇಗಾರರು – ವಿದೇಶದಿಂದ ಬಂದು ಈ ದೇಶವನ್ನು ಆಳ್ವಿಕೆ ಮಾಡಿದವರ ಬಹುದೊಡ್ಡ ಸಾರವೇ ಇದೆ. ಇವರೆಲ್ಲರೂ ಪರಾಕ್ರಮಿಗಳಾಗಿ ಸುವರ್ಣ ಯುಗದ ರಾಜ್ಯವನ್ನು ಕಂಡದ್ದು ಹಾಗೂ ಅನುಭವಿಸಿದ್ದು ದುಡಿಯುವ ಜನರನ್ನು ಅಸ್ಪೃಶ್ಯರನಾಗಿಸಿಯೇ ಹೊರತು- ಅವರನ್ನು ಮಾನವರಾಗಿ ಕಂಡು ಮಾನವನಿಗೆ ಬೇಕಾದ ಮೂಲಭೂತ ಹಕ್ಕುಗಳನ್ನು ನೀಡುವುದರ ಮೂಲಕವಲ್ಲ ಎಂಬ ಅಂಶವನ್ನು ಪ್ರತಿಯೊಬ್ಬರೂ ಮನಗಾಣ ಬೇಕಾಗಿದೆ.

ಭಾರತದ ಇತಿಹಾಸದಲ್ಲಿ ಸುವರ್ಣ ಯುಗ ಕಂಡ ಸಾಮ್ರಾಜ್ಯಗಳ ದೀಪದ ಬುಡ ಶಾಶ್ವತವಾಗಿ ಅಸ್ಪೃಶ್ಯತೆಯ ಭೀಕರ ಭಯೋತ್ಪಾದನೆಯಿಂದ ಕತ್ತಲಾಗಿತ್ತು ಎಂಬುದಕ್ಕೆ ಇದೇ ನಿದರ್ಶನ.

ಕುಡಿಯುವ ನೀರು, ವಾಸಿಸುವ ಮನೆ, ಉಣ್ಣುವ ಅನ್ನಕ್ಕೂ ಅಸ್ಪೃಶ್ಯತೆಯ ಕೊಳಕನ್ನು ಮೆತ್ತಿದ ಭಯೋತ್ಪಾದಕ ದೇಶ ನಮ್ಮ ಭಾರತ ದೇಶ.
ಬಹುದೊಡ್ಡ ದುಡಿಯುವ ಈ ನೆಲದ ಮೂಲನಿವಾಸಿ ಜನವರ್ಗಕ್ಕೆ ವಿದ್ಯೆಯನ್ನು ಶಾಶ್ವತವಾಗಿ ಕಲಿಯಬಾರದು ಎಂಬ ನಿರ್ಬಂಧವನ್ನು ಧಾರ್ಮಿಕ ಹಾಗೂ ಸಾಮಾಜಿಕ ಕಟ್ಟುಪಾಡುಗಳ ಹಿನ್ನೆಲೆಯಿಂದ ವಿಧಿಸಿದ್ದೆ ಈ ನೆಲದ ಶಾಶ್ವತವಾದ ಭಯೋತ್ಪಾದನೆ. ದೇವರ ಭಾಷೆ ಎಂದು ಕರೆಸಿಕೊಳ್ಳುವ ಸಂಸ್ಕೃತವನ್ನು ಕಲಿಯಬಾರದು, ಇವರೇ ಕಟ್ಟಿದ ದೇವಸ್ಥಾನದ ಒಳಗೆ ಪ್ರವೇಶ ಮಾಡಬಾರದು ಎಂದು ಅಸ್ಪೃಶ್ಯ ಜನಾಂಗಕ್ಕೆ ನಿರ್ಬಂಧನೆ ಹೇರಿದ್ದೆ ಬಹುದೊಡ್ಡ ಭಯೋತ್ಪಾದನೆ.

ಅಸ್ಪೃಶ್ಯತೆಯ ಭಯಾನಕ ಭಯೋತ್ಪಾದನೆ ಹೇಗಿದೆ ಎಂದರೆ ನಾವೆಲ್ಲರೂ ನಮ್ಮ ಊರಿನ ಸರ್ಕಾರಿ ಶಾಲೆಯಲ್ಲಿ ಓದಿದವರು. ಊರಿನ ಸರ್ಕಾರಿ ಶಾಲೆಗೆ ಯಾವ್ಯಾವ ಕೇರಿಯಿಂದ ವಿದ್ಯಾರ್ಥಿಗಳು ಬರುತ್ತಾರೆ ಎಂಬ ಅರಿವು ಸ್ಪಷ್ಟವಾಗಿ ಎಲ್ಲಾ ಸಹಪಾಠಿಗಳಿಗೂ ಇದ್ದ ಕಾರಣ ಎಲ್ಲರ ಜಾತಿಯು – ಎಲ್ಲರಿಗೂ ತಿಳಿದಿತ್ತು. ಇಲ್ಲಿ ನೀನು ಯಾವ ಜಾತಿ ಎಂದು ಕೇಳುವ ಪ್ರಮೇಯವೇ ಬರುತ್ತಿರಲಿಲ್ಲ.

ಆದರೆ, ಇಂದು ಸರ್ಕಾರಿ ಶಾಲೆಗಳ ಸ್ವಚ್ಛಂದ ಬದುಕಿನ ಜೀವನ ಮುಗಿದು ಖಾಸಗಿ ಶಾಲೆಗಳ ಆರ್ಭಟ ಯಥೇಚ್ಛವಾಗಿ ಆರಂಭಗೊಂಡಿದೆ. ನಿಜ ಅರ್ಥದಲ್ಲಿ ಹೇಳಬೇಕೆಂದರೆ ಈಗ ಭಾರತ ನಿಂತಿರುವುದೇ ಖಾಸಗಿಯವರ ಕೈಯಲ್ಲಿ. ಖಾಸಗಿಯವರೇ ಈ ಭಾರತದಲ್ಲಿ ಪಾರಂಪರಿಕವಾಗಿ ಜಾತಿ ವ್ಯವಸ್ಥೆಯನ್ನು ಕಟ್ಟಿದವರು ಹಾಗೂ ಪೋಷಿಸಿದವರು. ಖಾಸಗಿ ಶಾಲೆಗಳಲ್ಲಿ ಬಲಿಷ್ಠ ಜಾತಿಯ ಮಕ್ಕಳು ತಮ್ಮ ಜಾತಿಯನ್ನು ಹೇಳಿಕೊಳ್ಳಲು ಪಡುತ್ತಿರುವ ಅಂಜಿಕೆ ಹಾಗೂ ಭಯ , ನನ್ನ ಜಾತಿ ಗೊತ್ತಾದರೆ ಮುಂದೆ ಆಗುವ ಅಸ್ಪೃಶ್ಯತೆ ಹಿನ್ನೆಲೆಯ ದುಷ್ಟ ಪರಿಣಾಮವನ್ನು ಎದುರಿಸುವ ಸನ್ನಿವೇಶದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವುದು ಬಹುದೊಡ್ಡ ಮಾನಸಿಕ ಭಯೋತ್ಪಾದನೆ. ವಿಜಾತದಲ್ಲಿ ಅಂಬೇಡ್ಕರ್ ಅವರು ಹೇಳಿದಂತೆ ಇವರು ತನ್ನ ತಾಯಿ ನೆಲದಲ್ಲಿಯೇ ಅನಾಥರಾಗಿದ್ದಾರೆ.

ಅಸ್ಪೃಶ್ಯತೆ ಎಂಬ ಕಳಂಕ ಈ ದೇಶದ ಮೂಲ ನಿವಾಸಿ ಜನವರ್ಗವನ್ನೇ ಅವರ ಸ್ವಂತಹ ನೆಲದಲ್ಲಿಯೇ ಅವರನ್ನೇ ನಿರ್ಗತಿಕರನ್ನಾಗಿ ಮಾಡಿದೆ. ನನ್ನ ಮಕ್ಕಳನ್ನು ಒಳಗೊಂಡಂತೆ ಈ ಭಾಗದಲ್ಲಿ ನನಗೆ ತಿಳಿದಿರುವ ಹಾಗೂ ನಮ್ಮ ಬಂಧು ಬಳಗದ ಅನೇಕ ದಲಿತ ಸಮುದಾಯದ ಖಾಸಗಿ ಶಾಲೆಯಲ್ಲಿ ಓದುವ ವಿದ್ಯಾರ್ಥಿ ವಿದ್ಯಾರ್ಥಿನಿಯರನ್ನು ಈ ಸಂಬಂಧ ನಾನು ಸಂದರ್ಶನ ಮಾಡಿ ಕೇಳಿದಾಗ ” ಅವರ ಭೌತಿಕ ಆಗ ಬೌದ್ಧಿಕ ಆಕ್ಟಿವಿಟೀಸ್ ಗೆ ಜಾತಿ ಎಂಬುವುದು ಹೇಗೆ ಬಹುದೊಡ್ಡ ಭಯೋತ್ಪಾದಕ ಶಕ್ತಿಯಾಗಿ ಕೆಲಸ ಮಾಡುತ್ತಿದೆ ಎಂಬುದನ್ನು ಮಾಹಿತಿ ಸಹಿತ ಪಡೆದುಕೊಂಡು ನನ್ನ ನೆಲದಲ್ಲಿ ನನ್ನ ಸ್ಥಿತಿಯನ್ನು ಕಂಡು ನಾಡಿನ ಬೆಳಕಾಗಬೇಕಾದ ನಮ್ಮ ವಿದ್ಯಾರ್ಥಿಗಳು ಎದುರಿಸುತ್ತಿರುವ ಮಾನಸಿಕ ಭಯೋತ್ಪಾದನೆ ಕಂಡು ಅತೀವ ಬೇಸರ ಗೊಂಡೆ “. ಈ ದೇಶದ ಸತ್ಪ್ರಜೆಗಳಾಗಿ, ಈ ರಾಷ್ಟ್ರದ ಅಭಿವೃದ್ಧಿಗೆ ಭದ್ರ ಬುನಾದಿಯಾಗಿ ನಿಲ್ಲಬೇಕಾದ ಇಂತಹ ಫಲವತ್ತಾದ ಸಸಿಗಳನ್ನು ಅಸ್ಪೃಶ್ಯತೆ ಸೊಸಿಯನ್ನೇ ತಿನ್ನುವ ಕೀಟಾಣುಗಳ ದಾಳಿಯ ಭಯೋತ್ಪಾದನೆ ಕುಗ್ಗಿಸುತ್ತಿದೆ.

ಇದು ಇಂದು ಸರ್ಕಾರಿ ಕಚೇರಿಗಳಲ್ಲಿ ಹಾಗೂ ಖಾಸಗಿ ಕಂಪನಿಗಳಲ್ಲಿ ಯಥೇಚ್ಛವಾಗಿಯೇ ನಡೆಯುತ್ತಿದೆ . ಇಂತಹ ಮಾನಸಿಕ ಭಯೋತ್ಪಾದನೆಯ ಮುಂದೆ ಬೇರ್ಯಾವ ಭಯೋತ್ಪಾದನೆಯು ಸಮನಾಗದು. ಅಸ್ಪೃಶ್ಯತೆ ಎಂಬ ಭಯೋತ್ಪಾದನೆ ಈ ದೇಶದಲ್ಲಿ “ಬೆಳೆಯುವ ಪೈರು ಮೊಳಕೆಯಲ್ಲಿಯೇ ಚುಹುಟಿ ಹಾಕಿದಂತೆ ” ಎಂಬಂತ ಸ್ಥಿತಿಯನ್ನು ನಿರ್ಮಾಣ ಮಾಡುತ್ತದೆ. ಈ ನಲಿಯಿಂದ ಎಷ್ಟು ಜನರು ಹಾಗೂ ವಿದ್ಯಾರ್ಥಿಗಳು ತಮ್ಮ ಜಾತಿಯನ್ನು ಹೆಮ್ಮೆಯಿಂದ ಎದೆ ಹುಬ್ಬಿಸಿ ತಲೆಯೆತ್ತಿ ಹೇಳುವ ಬದಲು ತಲೆ ಯಾವುದೋ ಅಪರಾಧವನ್ನು ಮಾಡಿರುವ ರೀತಿಯಲ್ಲಿ ತಮ್ಮ ಜಾತಿಯನ್ನು ಮೆಲ್ಲ ಧ್ವನಿಯಲ್ಲಿ ಹೇಳಬೇಕಾಗಿದೆ. ಇನ್ನು ಮುಂದುವರೆದು ಸುಳ್ಳು ಜಾತಿಯನ್ನು ಹೇಳಿಕೊಂಡು ಬದುಕಬೇಕಾಗಿದೆ.

ಒಂದು ಮಾತನ್ನು ಹೇಳಲೇಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನಾತ್ಮಕ ಕೆಲವು ಮೂಲಭೂತ ಸೌಕರ್ಯಗಳನ್ನು ಪಡೆದುಕೊಳ್ಳಲು ಪರಿಶಿಷ್ಟ ಜಾತಿಗೆ ಸೇರ್ಪಡೆಗೊಳ್ಳದ ಕೆಲವು ಜನ ವರ್ಗ ಯಾವುದೇ ಮಾನ ಮರ್ಯಾದೆಗೆ ಅಂಜದೆ ಪರಿಶಿಷ್ಟ ಜಾತಿ ಎಂದು ಹೇಳಿಕೊಂಡು ಪ್ರಮಾಣಪತ್ರವನ್ನು ಪಡೆದುಕೊಳ್ಳಲು ಮುಂದಾಗುತ್ತಿದ್ದಾರೆ – ನಾವು ಸಹ ಮೂಲದಲ್ಲಿ ಪರಿಷ್ಟ ಜಾತಿ ಎಂದು ಹೇಳಿಕೊಳ್ಳಲು ತಮ್ಮ ಶಾಶ್ವತ ಕೊಳಕು ಮನಸ್ಸಿನ ಹಿನ್ನೆಲೆಯಿಂದ ಮುಂದಾಗುತ್ತಿದ್ದಾರೆ – ಆದರೆ ನಿಜ ಪರಿಶಿಷ್ಟ ಜಾತಿಯ ಜನ ತಮ್ಮ ಜಾತಿಯನ್ನು ಹೇಳಿಕೊಳ್ಳಲು ಇದರಿಂದ ಉಂಟಾಗುವ ಮಾನಸಿಕ ಭಯೋತ್ಪಾದನೆ ಹಿನ್ನೆಲೆಯಿಂದ ಹಿಂಜರಿಯುತ್ತಿದ್ದಾರೆ.

ಇದು ಭಾರತ ಬಹುದೊಡ್ಡ ಪ್ರಮಾಣದಲ್ಲಿ ನಗರೀಕರಣಗೊಂಡ- ನಗರೀಕರಣ ಗೊಳ್ಳುತ್ತಿರುವ ನಂತರದ ಪ್ರಕ್ರಿಯೆ. ಗ್ರಾಮೀಣ ಭಾಗದಲ್ಲಿ ಇಂದಿಗೂ ಈ ಸಮಸ್ಯೆ ಇಲ್ಲ. ಏಕೆಂದರೆ ಗ್ರಾಮ “ಜಾತೀಯತೆಯನ್ನು ಪೋಷಿಸುವ – ರಕ್ಷಿಸುವ ಕೊಂಪಿಗಳು” ಎಂದು ಅಂಬೇಡ್ಕರ್ ಅವರೇ ಹೇಳಿರುವುದು ನಿಮಗೆ ತಿಳಿದಿರುವುದೇ ಆಗಿದೆ. ಗ್ರಾಮದಲ್ಲಿ ಯಾವ ಕೇರಿಯಲ್ಲಿ ಮಗು ಜನನ ಪಡೆಯುತ್ತದೆಯೋ, ತನ್ನ ಜನನದೊಂದಿಗೆ ಆ ಕೇರಿಯ ಜಾತಿಯನ್ನು ಅಂಟಿಸಿಕೊಂಡೆ ಹೊರಬರುತ್ತದೆ. ಈ ಹಿನ್ನೆಲೆಯಿಂದ ಮುಂದೆ ಈ ಜಾತಿ ವ್ಯವಸ್ಥೆಯ ಸಂಕೂಲಿನಿಂದ ಸ್ವಲ್ಪ ಪ್ರಮಾಣದಲ್ಲಿ ಇವರು ಮುಕ್ತರಾಗಬಹುದು ಆದರೆ, ನಗರ ಪ್ರದೇಶಗಳಲ್ಲಿ ವಾಸಿಸುವ ಇದೇ ಹಳ್ಳಿಗಾಡಿನ ದಲಿತ ಸಮುದಾಯದವರ ಬದುಕು ಇದಕ್ಕೆ ಬಹುದೊಡ್ಡ ವ್ಯತಿರಿಕ್ತವಾದದ್ದು. ಬಾಡಿಗೆ ಮನೆ ಪಡೆಯುವುದರಿಂದ ಮೊದಲಗೊಂಡು, ಮಕ್ಕಳನ್ನು ಶಾಲೆಗೆ ಸೇರಿಸಿ ಅವರನ್ನು ಪ್ರತಿಕ್ಷಣ ವಿದ್ಯಾಭ್ಯಾಸದಲ್ಲಿ ತೊಡಗಿಸುವವರೆಗೂ ಅಸ್ಪೃಶ್ಯತೆ ಎಂಬ ಜಾತಿ ವ್ಯವಸ್ಥೆಯು ಉಂಟುಮಾಡುವ ಭಯೋತ್ಪಾದನೆ ಬಹು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಇದು ಪ್ರಜಾಪ್ರಭುತ್ವ ಭಾರತದ ಬಹುದೊಡ್ಡ ದುರಂತ.

ಇಂತಹ ಭಯೋತ್ಪಾದನೆಯನ್ನು ಮೀರಿಸುವ ಭಯೋತ್ಪಾದನೆ ಈ ನೆಲದಲ್ಲಿ ಇನ್ನೆಂದಿಗೂ ಸಂಭವಿಸಲು ಸಾಧ್ಯವೇ ಇಲ್ಲ. ಏಕೆಂದರೆ ಇದು ಶಾಶ್ವತ ಮನಸ್ಸಿನ ಭಯೋತ್ಪಾದನೆ.

“ಅಸ್ಪೃಶ್ಯತೆ” ಗಿಂತ ಭೀಕರ ಭಯೋತ್ಪಾದನೆ ಈ ನಾಡಿನಲ್ಲಿ ಮತ್ತೊಂದು ಇಲ್ಲ. ಈಗ ನೆರೆ ರಾಷ್ಟ್ರಗಳಿಂದ ಆಗುತ್ತಿರುವ ಭಯೋತ್ಪಾದನೆಗಳು ತಾತ್ಕಾಲಿಕವಾದವುಗಳು. ಈ ಭಯೋತ್ಪಾದನೆ ನಿರ್ಮೂಲನೆಗೆ ಸಂವಿಧಾನಾತ್ಮಕವಾದ ನೀತಿ ನಿಯಮಗಳು ಇವೆ. ಅವುಗಳನ್ನು ಜಾರಿಗೊಳಿಸುವ ಮೂಲಕ ಶಾಶ್ವತವಾಗಿ ನಿರ್ಮೂಲನೆ ಮಾಡಿಕೊಳ್ಳಬಹುದು. ಮಾಡಿಕೊಳ್ಳೋಣ.

ಆದರೆ ಅಸ್ಪೃಶ್ಯತೆ ಸೃಷ್ಟಿ ಮಾಡಿದ – ಮಾಡುವ ಹಾಗೂ ಮಾಡುತ್ತಿರುವ ಭಯೋತ್ಪಾದನೆ ಸಂವಿಧಾನದ ಚೌಕಟ್ಟನ್ನು ಮೀರಿ ಅಸಂವಿಧಾನಾತ್ಮಕ ಚೌಕಟ್ಟಿನ ಒಳಗೆ ಮೆರೆಯುತ್ತಿರುವ ಶಾಶ್ವತವಾದ ಅಜ್ಞಾನದ ಭಯೋತ್ಪಾದನೆ ಯಾಗಿದೆ . ಈ ಭಯೋತ್ಪಾದನೆ ನಿರ್ಮೂಲನೆ ಮಾಡಲು ನಾವೆಲ್ಲರೂ ಭಾರತೀಯರಾಗಿ ಭಾರತವನ್ನು ಇಂದು ಆಳ್ವಿಕೆ ಮಾಡುತ್ತಿರುವ ಸಂವಿಧಾನದ ಚೌಕಟ್ಟಿನ ಪ್ರಜೆಗಳಾಗಿ ಒಗ್ಗಟ್ಟಾಗಿ ಹೊರ ಬಂದಾಗ ಮಾತ್ರ ಇಂತಹ ಅಸ್ಪೃಶ್ಯತಾ ಭಯೋತ್ಪಾದನೆಯನ್ನು ತಡೆಗಟ್ಟಬಹುದು. ಅಸ್ಪೃಶ್ಯತೆ ನಿವಾರಣೆ ಮಾಡಿದ ಸಂವಿಧಾನವನ್ನೇ ಒಪ್ಪದ – ಅಸ್ಪೃಶ್ಯತಾ ನಿವಾರಣ ಕಾನೂನನ್ನು ಜಾರಿಗೆ ತಂದಿದ್ದೆ ಈ ಸಂವಿಧಾನ ಎಂಬ ಕಾರಣಕ್ಕಾಗಿ ಅದನ್ನೇ ಬದಲಾವಣೆ ಮಾಡಬೇಕು ಎಂದು ಹೇಳುವ ಅಬೌದ್ಧಿಕ ಭಯೋತ್ಪಾದಕರ ಸಂದರ್ಭದಲ್ಲಿ ನಾವು ಇಂದು ಇದ್ದೇವೆ. ಭಾರತ ಮೊದಲು ಮನಸ್ಸಿನ ಅಸ್ಪೃಶ್ಯತೆಯ ಭಯೋತ್ಪಾದನೆಯನ್ನು ಶಾಶ್ವತವಾಗಿ ನಿರ್ಮೂಲನೆ ಮಾಡಿಕೊಂಡರೆ ಈಗ ಎದುರಾಗುತ್ತಿರುವ ದೈಹಿಕ ಭಯೋತ್ಪಾದನಾ ಚಟುವಟಿಕೆಗಳನ್ನು ಶಾಶ್ವತ ನಿರ್ಮೂಲನೆಗೆ ಮುಂದಾಗಬಹುದು. ಇದು ಸಂವಿಧಾನಾತ್ಮಕವಾಗಿ ಮಾತ್ರ ಸಾಧ್ಯ.

ನೆರೆಯ ದೇಶದವರು ಭಾರತದ ಮೇಲೆ ಭಯೋತ್ಪಾದನಾ ಚಟುವಟಿಕೆಯನ್ನು ಮಾಡುತ್ತಿರುವುದು ಭಾರತದೊಳಗೆ ಶತಶತಮಾನಗಳಿಂದ ಇರುವ ಇಂತಹ ಶಾಶ್ವತ ಭಯೋತ್ಪಾದನೆಗಳನ್ನು ಸೂಕ್ಷ್ಮವಾಗಿ ಮನ ಗಂಡಿಯೇ ಎಂಬುವುದನ್ನು ನಾವು ತಿಳಿಯಬೇಕಾಗಿದೆ. ಏಕೆಂದರೆ ಪಾಕಿಸ್ತಾನವು ಸಹ ಎರಡುವರೆ ಸಾವಿರ ವರ್ಷಗಳವರೆಗೆ ಭಾರತದ ಅವಿಭಾಜ್ಯ ಅಂಗವೇ ಆಗಿತ್ತು. ಭಾರತದ ಒಳಗಿನ ಸಾಮಾಜಿಕ ಸಂರಕ್ಷಣೆಯನ್ನು ಪಾಕಿಸ್ತಾನಕ್ಕೆ ಪ್ರತ್ಯೇಕವಾಗಿ ತಿಳಿಸುವ ಅವಶ್ಯಕತೆ ಇಲ್ಲ. ಭಾರತದಂತೆ ಅಸ್ಪೃಶ್ಯತೆ ಇಲ್ಲದ ಚೈನಾ ಅಥವಾ ನೆರೆಯ ರಾಷ್ಟ್ರಗಳಾಗಲಿ ಇಂಥ ಭಯೋತ್ಪಾದನೆಗೆ ಅವಕಾಶವೇ ಇಲ್ಲ. ಇಂತಹ ಮಾನಸಿಕ ಭಯೋತ್ಪಾದನೆ ಈ ನೆಲದಲ್ಲಿ ಎಲ್ಲಿಯವರೆಗೆ ಇರುತ್ತದೆಯೋ ಅಲ್ಲಿಯವರೆಗೂ ಸಹ ಇವತ್ತು ನಡೆಯುತ್ತಿರುವ ಹಾಗೆ ಅನೇಕ ದೈಹಿಕ ಭಯೋತ್ಪಾದನೆಗಳು ನಡೆಯುತ್ತಲೇ ಇರುತ್ತದೆ. ನಾವು ಇಂತಹ ಭಯೋತ್ಪಾದನೆಗಳಿಗೆ ಧರ್ಮದ ಹಿನ್ನೆಲೆಯ ಬಣ್ಣದ ಲೇಪವನ್ನು ಬಳಿದು ಉತ್ತರ ಹುಡುಕುತ್ತೇವೆಯೇ ಹೊರತು – ವಾಸ್ತವದ ಹಿನ್ನೆಲೆಯ ವಸ್ತುನಿಷ್ಠವಾದ ಉತ್ತರವನ್ನು ಹುಡುಕುವುದೇ ಇಲ್ಲ.

ಕಡೆಯದಾಗಿ ಒಂದೇ ಮಾತು… ಭಾರತದಲ್ಲಿ ದೈಹಿಕ ಭಯೋತ್ಪಾದನೆಗಿಂತ ಮಾನಸಿಕ ಭಯೋತ್ಪಾದನೆ ಬಹು ಅಪಾಯಕಾರಿ. ಈ ಹಿನ್ನೆಲೆಯಿಂದ ಭಾರತದ ಒಳಗೆ ಇರುವ ಮನಸ್ಸಿನ ಭಯೋತ್ಪಾದನೆಯನ್ನು ನಾವೆಲ್ಲರೂ ನಿರ್ಮೂಲನೆ ಮಾಡೋಣ. ಸಮ ಸಮಾಜದ ಗಟ್ಟಿ ಭಾರತವನ್ನು ಕಟ್ಟೋಣ. ಇಂತಹ ನೂರಾರು ದೈಹಿಕ ಭಯೋತ್ಪಾದಕರನ್ನು ಒಗ್ಗಟ್ಟಿನಿಂದ ಎದುರಿಸಿ ನಿರ್ಮೂಲನೆ ಮಾಡೋಣ. ಸಂವಿಧಾನದ ಹಿನ್ನೆಲೆಯಲ್ಲಿ ಭದ್ರ ಭಾರತವನ್ನು ಕಟ್ಟಿ ಪ್ರಪಂಚದಲ್ಲೇ ಬಲಿಷ್ಠ ರಾಷ್ಟ್ರವನ್ನಾಗಿಸೋಣ.

ಅಸ್ಪೃಶ್ಯತೆ ನಿರ್ಮೂಲನೆ ಹಾಗೂ ಸಮ ಸಮಾಜದ ಹಿನ್ನೆಲೆಯಿಂದ ಮಾನವನ ಸಂಪತ್ತು ವೃದ್ಧಿಯಾಗಿಸಿದ ದೇಶವೇ ಶ್ರೀಮಂತ ದೇಶವೇ ಹೊರತು – ಮಾನವ ಹಾಗೂ ಮಾನವನ ವರಮಾನ ಹಾಗೂ ಸಂಪತ್ತನ್ನು ಕುಂಟಿತಗೊಳಿಸಿ, ಸಾಮಾಜಿಕ ಹಿನ್ನೆಲೆಯಿಂದ ಅವನ ಮೂಲಭೂತ ಹಕ್ಕುಗಳನ್ನು ಕಸಿದುಕೊಂಡು ಶಾಶ್ವತ ಅಸ್ಪೃಶ್ಯತರನ್ನಾಗಿಸಿ ಇವುಗಳೆಲ್ಲದರ ಮೇಲೆ ಕೇವಲ ವರ್ಣ ರಂಜಿತ ಭೌತಿಕ ಭಾರತವನ್ನು ಕಟ್ಟಿದರೆ ಅದು ಗಟ್ಟಿತನದ ರಾಷ್ಟ್ರ ಆಗುವುದಿಲ್ಲ.

ಈ ಮಾದರಿಯದ್ದು ತಳಪಾಯ ಗಟ್ಟಿಯಿಲ್ಲದೆ ಹೊರಗೆ ನಮ್ಮೆಲ್ಲರಿಗೂ ಕಾಣುತ್ತಿರುವ ಸುಂದರ ಕಟ್ಟಡದ ಲಕ್ಷಣ ದಂತೆಯೇ ಸರಿ. ಇಂತಹ ಕಟ್ಟಡಗಳ ಆಯಸ್ಸು ಏನು ಎಂಬುದು ತಮಗೆಲ್ಲ ತಿಳಿದಿರುವುದೇ ಆಗಿದೆ.

ಈ ಹಿನ್ನಲೆಯಿಂದ ನಾವೆಲ್ಲರೂ ಭಾರತೀಯರಾಗಿ – ಅಂಬೇಡ್ಕರವರು ಭಾರತ ಹಾಗೂ ಭಾರತೀಯರಾಗಿ ಒಡಲಾಳದಿಂದ ಪ್ರಪಂಚಕ್ಕೆ ಮಾದರಿಯಾಗುವ ರೀತಿಯಲ್ಲಿ ಗಟ್ಟಿತನದಿಂದ ಬರೆದಿರುವ ಸಂವಿಧಾನದ ಅಡಿಯಲ್ಲಿ ಭಾರತವನ್ನು ಗಟ್ಟಿತನದಿಂದ ಕಟ್ಟಬೇಕಾಗಿದೆ. ಅಜ್ಞಾನದ ಅಸ್ಪೃಶ್ಯತೆ ಎಂಬ ಭೀಕರ ಭಯೋತ್ಪಾದನೆಯನ್ನು ಸಂವಿಧಾನ ಎಂಬ ಅಸ್ತ್ರದಿಂದ ಸಂಪೂರ್ಣವಾಗಿ ನಿರ್ಮೂಲನೆ ಮಾಡಬೇಕಾಗಿದೆ. ಸಂವಿಧಾನದ ಕಾನೂನುಗಳ ಮುಂದೆ ಯಾವುದೇ ಭಯೋತ್ಪಾದಕರ ” ಗನ್ನು” ಹಾಗೂ “ಬಾಂಬು” ಗಳು ನಿಸ್ಕ್ರಿಯಗೊಳ್ಳುತ್ತವೆ ಎಂಬ ಸತ್ಯವನ್ನು ಸಾರಿ ಸಾರಿ ಹೇಳಬೇಕಾಗಿದೆ.

ಅಸ್ಪೃಶ್ಯತೆ ಎಂಬ ಶಾಶ್ವತ ಮಾನಸಿಕ ಭಯೋತ್ಪಾದನೆಯನ್ನು ಈ ದೇಶದಲ್ಲಿ ಶಾಶ್ವತವಾಗಿ ನಿರ್ಮೂಲನೆ ಮಾಡಬೇಕಾಗಿದೆ. ಆಗ ಭಾರತವೇ ಸಂಪೂರ್ಣ ಶ್ರೀಮಂತಿಕೆಯ ಸಮಸಮಾಜ ಹಿನ್ನೆಲೆಯ “ಸ್ಪೃಶ್ಯ” ರಾಷ್ಟ್ರವಾಗುತ್ತದೆ.

ಇದನ್ನೂ ನೋಡಿ: ವಚನಾನುಭವ 28| ಒಲಿದವರ ಕೊಲುವಡೆ ಮಸೆದ ಕೂರಲಗೇಕೆ? ಗಜೇಶ ಮಸಣಯ್ಯ Janashakthi Media

Donate Janashakthi Media

Leave a Reply

Your email address will not be published. Required fields are marked *