-ಜಿ.ಎನ್. ನಾಗರಾಜ್
ಸೀತಾರಾಮ್ ಯೆಚೂರಿ ಅವರು ಬಹಿರಂಗ ಸಭೆಗಳಲ್ಲಿ ಸಾಮಾನ್ಯವಾಗಿ ಒಂದು ಕತೆ ಹೇಳುತ್ತಿದ್ದರು. “ಒಬ್ಬರು ಇಡೀ ತಿಂಗಳು ದುಡಿದದ್ದರ ಸಂಬಳ ತೊಗೊಂಡು ಜೇಬಿನಲ್ಲಿಟ್ಟುಕೊಂಡು ಬಸ್ ಹತ್ತಿದರಂತೆ. ಬಸ್ನಲ್ಲಿ ವಿಪರೀತ ರಷ್ಷು. ರಷ್ ನಲ್ಲೇ ನುಗ್ಗಿ ಒಂದು ಕಡೆ ನಿಂತ್ರು. ಸ್ವಲ್ಪ ಹೊತ್ತಿನ ನಂತ್ರ ಟಿಕೆಟ್ ಟಿಕೆಟ್ ಅಂತ ಬಸ್ ಕಂಡಕ್ಟ್ರು ಬಂದ್ರು. ಇವರು ಟಿಕೆಟ್ ದುಡ್ಡು ಕೊಡಲು ಜೇಬಿಗೆ ಕೈ ಹಾಕಿದ್ರು. ಆದರೆ ಅಲ್ಲಿ ದುಡ್ಡೇ ಇಲ್ಲ! ಎಲ್ಲ ಮಾಯ!! ಬೆವರು
ಅವರಿಗೆ ಗಾಬರಿಯಾಯ್ತು. ‘ಅಯ್ಯೋ ನನ್ನ ಸಂಬಳ ಯಾರೋ ಹೊಡೆದುಬಿಟ್ಟವ್ರೆ’ ಅಂತ ಕಿರುಚಿದರು. ಕಂಡಕ್ಟ್ರು ಎದ್ರುಗೆ ನಿಂತೇ ಇದಾರೆ. ಕಂಡಕ್ಟ್ರ ಹತ್ರ ಸಂಬಳ ಕಾಣೆಯಾಗಿರುವುದನ್ನು ಹೇಳಿದ್ರು. ಆದ್ರೆ ಅವರೇನು ಮಾಡೋಕೆ ಸಾಧ್ಯ? ‘ಟಿಕೆಟ್ ತೊಗೊಳ್ಳಿ, ಇಲ್ಲ ಅಂದ್ರೆ ಇಳೀರಿ’ ಅಂದ್ರು. ಇವರು ಅಂಗಲಾಚಿದ್ರೂ ಕೇಳಲಿಲ್ಲ. ‘ಇಂತಾ ನಾಟಕ ಭಾಳಾ ನೋಡಿದ್ದೀನಿ ಇಳೀರಿ’ ಅಂದ್ರು. ಇವರಿಗೆ ಏನು ಮಾಡೋದು ತೋಚಲಿಲ್ಲ. ಇಳಿಯೋಕೆ ಹೊರಟ್ರು. ಆಗ ಬಸ್ನಲ್ಲಿ ಇದ್ದವನೊಬ್ಬ “ಇರಿ ಕಂಡಕ್ಟ್ರೆ, ಅವರ ಟಿಕೆಟ್ ಎಷ್ಟಾಗುತ್ತೆ ಹೇಳಿ, ನಾನು ಕೊಡ್ತೀನಿ. ಬೆವರು
ಅವರನ್ನ ಇಲ್ಲೇ ಇಳಿಸ್ದ್ರೆ ಏನು ಮಾಡ್ತಾರೆ? ದುಡ್ಡು ಕಳಕೊಂಡ್ರಂತೆ, ಮನೆ ಬೇರೆ ದೂರ ಇದೆ, ನಡಕೊಂಡು ಹೋಗೋಕಾದಾತಾ? ಅವರಿಗೆ ಟಿಕೆಟ್ ಕೊಡಿ” ಅಂತ ದುಡ್ಡು ಕೊಟ್ರು. ಇವರು, ಮನೆಗಾದ್ರೂ ಸೇರ್ತೀನಲ್ಲ ಅಂತಾ ಸಮಾಧಾನ ಪಟ್ಕೊಂಡು, “ಸ್ವಾಮಿ ನೀವು ದೇವ್ರಂಗೆ ಸರಿಯಾದ ಸಮಯದಲ್ಲಿ ಸಹಾಯ ಮಾಡಿದ್ರಿ. ತುಂಬಾ ಉಪಕಾರವಾಯ್ತು” ಅಂತಾ ದುಡ್ಡು ಕೊಟ್ಟವ್ರಿಗೆ ಕೈ ಮುಗಿದ್ರು. ಇಡೀ ಬಸ್ನಲ್ ಇದ್ದೋರೆಲ್ಲ, ದೇವ್ರಂತಾ ಮನಿಷ್ಯ ಅಂತಾ ಹೊಗಳಿದ್ರು. ಬೆವರು
ಇದನ್ನೂ ಓದಿ: ಎಚ್.ಡಿ. ಕುಮಾರಸ್ವಾಮಿ ಹಾಗೂ ನಿಖಿಲ್ ಕುಮಾರಸ್ವಾಮಿ ವಿರುದ್ಧ ದೂರು ದಾಖಲು
ಆದ್ರೆ ಸಂಬ್ಳ ಕಳಕೊಂಡ ಇವ್ರ ಮನಸ್ಸು ಸುಮ್ನಿರ್ಬೇಕಲ್ಲ. ಸಂಬ್ಳ ಹೇಂಗೆ ಹೊಡೆದ್ರು, ಏನಾಯ್ತು ಅಂತಾ ಯೋಚನೆ ಮಾಡ್ತಾ, ಸಂಬ್ಳ ತಗೊಂಡು ತಮ್ಮ ಆಫೀಸಿಂದ ಹೊರಟಾಗಿಂದ ಇಲ್ಲೀವರೆಗೆ ಏನಾಯ್ತು ಅಂತ ಜ್ಞಾಪಿಸ್ಕೋತಾ ಅವ್ರೆ. ಆಗ ಅವರ ಹಿಂದೇನೇ ದೂರ್ದಲ್ ಒಬ್ಬ ಬತ್ತಾ ಇದ್ದ, ಬಸ್ ವರೆಗೂ ಬಂದಾ ಅಂತ ನೆಪ್ಪಿಗ್ ಬಂತು. ಅವನೇನೆ ನಾನು ಸಂಬ್ಳ ತಗೊಂಡಿದ್ ನೋಡಿ ಹಿಂದೆ ಬಿದ್ದಿದ್ದಾ ಅಂತಾ ಕಾಣುತ್ತೆ. ಬಸ್ನಲ್ಲಿ ರಷ್ನಲ್ಲಿ ಹೊಡ್ದು ಬಿಟ್ಟವ್ನೆ. ಯಾರಿರಬೋದು ಅಂತಾ ಅವರಿವ್ರ ಮುಖ ನೋಡ್ತಾ ನೆನಪಿಸ್ಕೋತ ಅವ್ರೆ. ಅಷ್ಟರಲ್ಲೇ ಮುಂದಿನ ಸ್ಟಾಪು ಬಂತು. ಇವರಿಗೆ ದುಡ್ಡು ಕೊಟ್ಟ ಮನಿಷ್ಯಾ ಅವಸರದಲ್ ಇಳಿದೋದ. ಬಸ್ ಹೊರಡ್ತು. ಇವ್ರು ಅವನ ಕಡೆನೇ ನೋಡ್ತಾ ಯೋಚ್ನೇ ಮಾಡ್ತಾ ಇದ್ರು. ಬೆವ
ರು
ಆಗ ಅವರಿಗೆ ನನ್ನ ಹಿಂದೆ ನಿಂತಿದ್ದೋನು ಇವ್ನೇ ಅಲ್ವಾ, ಅದೇ ಬಟ್ಟೆ ಅಂತಾ ನೆನಪಿಸ್ಕೊಂಡು, ಬಸ್ನಲ್ಲಿದ್ದವ್ರಿಗೆ, ನೋಡಿ ನನ್ ಹಿಂದೆ ಒಬ್ರು ನಿಂತಿದ್ರು. ರಷ್ನಲ್ಲಿ ಮೇಲೆ ಬಿದ್ರು. ದುಡ್ ಕೊಟ್ರಲ್ಲಾ ಅವರಂಗೆ ಬಟ್ಟೆ, ನನ್ ಸಂಬ್ಳ ಇವರೇ ಹೊಡೆದಿರ್ಬೋದ ಅಂತಾ ಅನ್ಮಾನ ಅಂದ್ರು. ಇವರ ಪಕ್ಕ ನಿಂತಿದ್ದೋರು ಕೆಲವ್ರು, ಹೌದು, ಆ ಮನಿಷ್ಯ ಇವರ ಹಿಂದೆ ನಿಂತಿದ್ರು, ನಾನೂ ನೋಡ್ದೆ ಅಂದ್ರು. ಅವನೇ ಹೊಡೆದಿರ್ಬೋದಾ ಅಂತಾ ಅನ್ಮಾನ ಬಂತು. ಬಾಳಾ ಜನಕ್ಕೆ. ಇನ್ನೊಬ್ರು ಈ ಬಸ್ನಲ್ಲಿ ಇಂತಾವು ಆಗಾಗ್ಗೆ ಆಗ್ತಾ ಇರ್ತಾವೆ. ಎಪಿಎಂಸಿಯಿಂದ, ಪೇಟೆಯಿಂದ ದುಡ್ಡು ಇಸ್ಕೊಂಡು ಬಂದು ಬಸ್ ಹತ್ತಿರ್ತಾರಲ್ಲಾ, ಅವರೆನೇ ಹಿಂಬಾಲಿಸ್ಕೊಂಡು ಬಂದು ದುಡ್ಡು ಹೊಡಿದಿದಾರೆ ಅಂತಾ ವಾರಗಳ ಹಿಂದಿನ ಪ್ರಸಂಗ ನೆನಪಿಸ್ಕೊಂಡ್ರು. ಯಾರು ಟಿಕೆಟ್ ದುಡ್ ಕೊಟ್ನೋ ಅವನೇ ಇವರ ಸಂಬ್ಳ ಹೊಡೆದವ್ನೆ ಅಂತಾ ಜನ ಮಾತಾಡ್ಕೊಳ್ಳೋಕೆ ಶುರು ಮಾಡುದ್ರು. ಬಸ್ ನಲ್ಲೆಲ್ಲಾ ಅದೇ ಚರ್ಚೆ ಶುರುವಾಯ್ತು. ಬೆವರು
“ನೋಡ್ದಾ, ಇಡೀ ತಿಂಗ್ಳ ಸಂಬ್ಳ ಹೊಡ್ದು, ಭಾಳಾ ದೊಡ್ಮನಿಷ್ಯನ್ ತರಾ ಒಂದಿಷ್ಟು ದುಡ್ಡು ಕೊಟ್ಟ ಅಂದ್ ಕೂಡ್ಲೇ ದೇವ್ರಂತಾ ಮನಿಷ್ಯಾ, ಅಂಗೆ ಇಂಗೆ ಅಂತೆಲ್ಲ ಹೊಗಳಿ ಬಿಟ್ವಲ್ಲಾ. ಎಷ್ಟ್ ಸುಲಬ್ ವಾಗಿ ಮೋಸ ಹೋಗ್ತೀವಿ ಅಲ್ವಾ” ಅಂತಾ ಮಾತಾಡ್ ಕೊಂತಿದ್ರು. ಬೆವರು
ಇದನ್ನೂ ಓದಿ: ಮುಡಾ ಹಗರಣ: ಸಿಎಂ ಸಿದ್ಧರಾಮಯ್ಯಗೆ ಹೈಕೋರ್ಟ್ ನಿಂದ ನೋಟಿಸ್
ಈ ಕತೆ ಹೇಳಿ ಸೀತಾರಾಮ್, ನೋಡಿ ಹೀಂಗೇ ಆಳುವ ಸರ್ಕಾರಗಳು, ಕಷ್ಟಪಟ್ಟು ದುಡಿದ ನಿಮ್ಮ ದುಡಿಮೆನೆಲ್ಲಾ ಹೊಡ್ದು ಆಮೇಲೆ ಚುನಾವ್ಣೆ ಬಂದಾಗ ಒಂದಿಷ್ಟು ದುಡ್ಡು ಹಂಚಿ ಅತ್ವಾ ದೇವಸ್ತಾನಕ್ಕೋ, ಕ್ರಿಕೆಟ್ ಟೀಮ್ಗೋ ಒಂದಿಷ್ಟು ದುಡ್ಡು ಕೊಟ್ತಾರೆ. ಅದನ್ ತಗೊಂಡು ಅಯ್ಯೋ ಎಷ್ಟು ಒಳ್ಳೇವ್ರು ಅನ್ಕೊಂಡು ಓಟು ಹಾಕ್ತೀರಿ. ನಿಮ್ ದುಡಿಮೇನೆ ಕದ್ದು ನಿಮ್ಗೆ ಅದ್ರಲ್ಲೇ ಒಂದಿಷ್ಡು ಎಸ್ದು ಮಾಡುವ ಮೋಸಕ್ಕೆ ಬಲಿ ಬೀಳ್ಬೇಡಿ ಅಂತಾ ಹೇಳ್ತಿದ್ರು. ಬೆವರು
ನೀತಿವಂತ ಬಂಡವಾಳಶಾಹಿ !!!
ರತನ್ ಟಾಟಾ ಬಗ್ಗೆ ಕಾರ್ಪೊರೇಟ್ ಒಡೆಯರು, ಆಳುವ ಪಕ್ಷಗಳ ರಾಜಕಾರಣಿಗಳು, ಮಾಧ್ಯಮಗಳು ‘ಅಂತಾ ದಾನಿ, ಇಷ್ಟೊಂದು ದಾನ ಮಾಡಿದ್ದಾರೆ’ ಅಂತಾ ಹೊಗಳು ಭಟ್ಟರಂತೆ ವಾಚಾಮಗೋಚರ ಹೊಗಳುವಾಗ ಈ ಕತೆ ನೆನಪಿಗೆ ಬಂತು. ಬೆವರು
ರತನ್ ಟಾಟಾ ಮಹಾದಾನಿ, ಎಷ್ಟೊಂದು ದಾನ ಮಾಡಿದ್ದಾರೆ. ಕೋವಿಡ್ ಗೆ ಸಾವಿರಾರು ಕೋಟಿ ಕೊಟ್ರು, ಕಲೆ, ಕ್ರೀಡೆಗಳಿಗೆ ಇಷ್ಟೊಂದು ದಾನ ಮಾಡಿದ್ದಾರೆ. ಚಲನ ಚಿತ್ರರಂಗದ ಮಹಾಮಹಿಮರೆಲ್ಲ ಸಾಲುಗಟ್ಟಿ ಸಂತಾಪ ಸೂಚಿಸಿದರು. ಬೆವರು
ಅವರು ದೊಡ್ಡ ಕೈಗಾರಿಕಾ ಸಾಮ್ರಾಜ್ಯ ಕಟ್ಟಿದವರು, ಟಾಟಾ ಸಾಮ್ರಾಜ್ಯ ಭಾರತದಿಂದ ಬೇರೆ ದೇಶಗಳ ಹಲವು ಕೈಗಾರಿಕೆಗಳನ್ನು ವಶಪಡಿಸಿಕೊಂಡು ವಿಶ್ವ ಮಟ್ಟದ ಸಾಮ್ರಾಜ್ಯವಾಗಿ ಮಾಡಿದವರು, ಭಾರತದ ಕೀರ್ತಿ ಮುಗಿಲಿಗೇರಿಸಿದವರು, ಹೊಸ ವಿಜ್ಞಾನ ಸಂಶೋಧನಾ ಸಂಸ್ಥೆಗಳನ್ನು ಸ್ಥಾಪಿಸಿದರು, ಹಾಗೇ, ಹೀಗೆ ಎಂಬ ಮುತ್ತುಗಳು ಏಕಸ್ವಾಮ್ಯ ಕಾರ್ಪೊರೇಟ್ ಮಾಧ್ಯಮಗಳವರ, ರಾಜಕಾರಣಿಗಳು ಮತ್ತು ಬಂಡವಾಳಶಾಹಿಗಳ ಬಾಯಿಂದ ಉದುರುತ್ತಿವೆ. ಬೆವರು
ಇದಕ್ಕೆ ನೀತಿವಂತ ಬಂಡವಾಳಶಾಹಿ (ಎಥಿಕಲ್ ಕ್ಯಾಪಿಟಲಿಸಂ) ಎಂದೂ ನಾಮಕರಣ ಮಾಡಿದ್ದಾರೆ!!! ಬೆವರು
ಇಂತಹ ನೀತಿವಂತರ ಎಲ್ಲ ಮಹಾದಾನ, ಮಹಾ ಕಾರ್ಯಗಳಿಗೆ ವಿನಿಯೋಗಿಸಿದ ಹಣದ ಮೂಲ ಏನು, ಅದು ಇವರ ಕೈಗೆ ಎಲ್ಲಿಂದ, ಹೇಗೆ ಬಂತು ಎಂಬ ಬಗ್ಗೆ ಒಬ್ಬರಿಂದಲೂ ತಿಳಿಯುತ್ತಿಲ್ಲ. ಮಾಧ್ಯಮಗಳು ನೇರ, ದಿಟ್ಟ, ನಿರಂತರವಾಗಿ ಜನರಿಗೆ ನಿಜ ಸಂಗತಿ ತಿಳಿಸಬೇಕಲ್ಲ, ಯಾವುದ್ಯಾವುದೋ ವಿಷಯಗಳ ಬಗ್ಗೆ ವಾರಗಟ್ಟಲೆ ತನಿಖಾ ವರದಿಗಳನ್ನು ಬಿತ್ತರಿಸುವವರು, ನಾನೇ ಮೊದಲು ಎಂದು ಬೀಗುವವರು ದೇಶದ ಈ ಅತ್ಯಂತ ಮುಖ್ಯ ವಿಷಯದಲ್ಲೇಕೆ ಮೌನ!
ಪಿತ್ರಾರ್ಜಿತ ಆಸ್ತಿ ಇಲ್ಲದ ಕುಟುಂಬದಲ್ಲಿ ಹುಟ್ಟಿದ ರತನ್ ಟಾಟಾ
ರತನ್ ಟಾಟಾರವರ ವೈಯಕ್ತಿಕ ಸಂಪತ್ತು ಏಳು ಸಾವಿರ ಕೋಟಿ ಎಂದು ಹೇಳಲಾಗುತ್ತಿದೆ. ಹೇಳಿಕೊಳ್ಳುವಂತಹ ಯಾವುದೇ ಪಿತ್ರಾರ್ಜಿತ ಆಸ್ತಿಯ ಆಧಾರ ಇಲ್ಲದ ಕುಟುಂಬದಲ್ಲಿ ಹುಟ್ಟಿದ ಇವರಿಗೆ ಈ ಸಂಪತ್ತು ದೊರಕಲು ಆಧಾರವಾಗಿದ್ದೇ ಇವರು ಟಾಟಾ ಸಾಮ್ರಾಜ್ಯ ಸ್ಥಾಪಿಸಿದ ಜಮ್ ಶೇಟ್ಜಿ ಕುಟುಂಬಕ್ಕೆ ವಾರಸುದಾರರಿಲ್ಲದೆ, ಜಮ್ ಶೇಟ್ಜಿಯವರ ಮಗ ಪ್ರಸಿದ್ಧ ಜೆಆರ್ಡಿ ಟಾಟಾ ನಿಧನರಾದ ಬಳಿಕ ಅವರ ವಿಧವೆ ಪತ್ನಿ ಈ ರತನ್ ಟಾಟಾರವರನ್ನು ದತ್ತು ತೆಗೆದುಕೊಂಡರು. ಹೀಗೆ ಟಾಟಾ ಕೈಗಾರಿಕಾ ಸಾಮ್ರಾಜ್ಯಕ್ಕೆ ಉತ್ತರಾಧಿಕಾರಿಯಾದ ಮೇಲೆ ಇವರು ಅಪಾರ ಸಂಪತ್ತಿನ ಸಾಮ್ರಾಜ್ಯದ ಮುಖ್ಯಸ್ಥರಾದರು.
ಈ ಅಡಿಪಾಯದ ಮೇಲೆ ಈ ಸಾಮ್ರಾಜ್ಯವನ್ನು ವಿಸ್ತರಿಸಿದರು. ಇವರು ಮುಖ್ಯಸ್ಥರಾಗುವ ವೇಳೆಗೆ ಸರಿಯಾಗಿ ಟಾಟಾ ಬಂಡವಾಳಶಾಹಿಗಳ ಒತ್ತಡ, ಸ್ವತಃ ಈ ರತನ್ ಟಾಟಾರವರ ಒತ್ತಡವೂ ಸೇರಿದಂತೆ ಮನಮೋಹನ ಸಿಂಗ್ – ಪಿ.ವಿ.ನರಸಿಂಹರಾವ್ ರವರ ಜೋಡಿ ಭಾರತವನ್ನು ಜಾಗತೀಕರಣ, ಖಾಸಗೀಕರಣಕ್ಕೆ ತೆರೆದಿಟ್ಟಿತು. ಭಾರತದ ಅಪಾರ ಜನಸಾಮಾನ್ಯರನ್ನು ಸಂಕಟಕ್ಕೆ, ಮತ್ತಷ್ಟು ಹೆಚ್ಚಿದ ಶೋಷಣೆ, ದಮನ ಮಾಡುತ್ತಿರುವ ಈ ದುರ್ನೀತಿಗಳು ರತನ್ ಟಾಟಾ ಸಾಮ್ರಾಜ್ಯವನ್ನು ಮತ್ತಷ್ಟು ವೇಗವಾಗಿ ವಿಸ್ತರಿಸಲು ಮಹತ್ತರ ಅವಕಾಶ ನೀಡಿತು. ಈ ಕರಣಗಳು ಕೊನೆಗೆ ಇಂದಿನ ಕೋಮುವಾದಿ ಫ್ಯಾಸಿಸ್ಟ್ ರೀತಿಯ ದಬ್ಬಾಳಿಕೆಗೆ ದೂಡಿವೆ. ಜಾತ್ಯಾತೀತ ಭಾರತವನ್ನು ಬೆಂಬಲಿಸುತ್ತಿದ್ದ ಜಮ್ ಶೇಟ್ಜಿ ಕುಟುಂಬದ ಈ ವಾರಸುದಾರ ರತನ್ ಟಾಟಾರವರ ಕೊಡುಗೆಯೂ ಇದಕ್ಕೆ ಸೇರಿದೆ.
ಟಾಟಾ ಸಾಮ್ರಾಜ್ಯ ಹುಟ್ಟಿದ್ದು, ಬೆಳೆದದ್ದು
ಹೀಗೆ ರತನ್ ಟಾಟಾರವರ ಮಹಾದಾನದ ಮೂಲವನ್ನು ಬಗೆಯುತ್ತಾ ಹೋದರೆ ಟಾಟಾ ಸಾಮ್ರಾಜ್ಯ ಹುಟ್ಟಿದ, ಬೆಳೆದ ಬಗೆಗಳನ್ನು ಬಗೆದು ನೋಡಬೇಕಾಗುತ್ತದೆ. ಈ ರೀತಿ ಬಗೆಯ ಹೊರಟಾಗ ಭಾರತದಲ್ಲಿ ಬ್ರಿಟನ್ ಮೊದಲಾದ ದೇಶಗಳಿಗಿಂತ ವಿಭಿನ್ನವಾಗಿ ಟಾಟಾರ ಬಂಡವಾಳ, ಒಟ್ಟಾರೆ ಭಾರತದ ಬಂಡವಾಳ ಉದ್ಭವವಾದ ರೀತಿ, ಸ್ವಾತಂತ್ರ್ಯಕ್ಕೆ ಮೊದಲು ಬ್ರಿಟಿಷರ ಈಸ್ಟ್ ಇಂಡಿಯಾ ಕಂಪನಿಯ, ನಂತರ ಬ್ರಿಟಿಷ್ ವಸಾಹತುಗಾರರ ಬಾಲ ಹಿಡಿದು ಬೆಳೆದ ಬಗೆ, ಸ್ವಾತಂತ್ರ್ಯ ಚಳುವಳಿಯಲ್ಲಿ ವಹಿಸಿದ ಪಾತ್ರ, ಭಾರತದ ಸ್ವಾತಂತ್ರ್ಯವನ್ನು, ಸ್ವಾತಂತ್ರ್ಯಾ ನಂತರದ ಭಾರತವನ್ನೇ ರೂಪಿಸುವ ಶಕ್ತಿಯಾಗಿ ಬೆಳೆದದ್ದು, ಭಾರತದ “ಅಭಿವೃದ್ಧಿ”ಗೆ ಇವರು ನಿರ್ದೇಶನ ಮಾಡಿದ್ದು ಮತ್ತೊಂದು ಪರ್ವ.
ಸ್ವಾತಂತ್ರ್ಯಾ ನಂತರದ ಭಾರತದ ಪ್ರಭುತ್ವ ಮತ್ತು ಟಾಟಾ ಬಂಡವಾಳಶಾಹಿ ಸಾಮ್ರಾಜ್ಯ ಪರಸ್ಪರ ಜೋಡಿಯಾಗಿ ಹೆಣೆದುಕೊಂಡ ರೀತಿ, ಅದರಿಂದ ಭಾರತದ ಸ್ವಾತಂತ್ರ್ಯ, ಪ್ರಜಾಪ್ರಭುತ್ವದ ಮೇಲೆ, ಕಾರ್ಮಿಕರು, ರೈತರು ಸಾಮಾನ್ಯ ಜನತೆಯ ಮೇಲೆ ಬೀರಿದ ವಿಪರೀತ ಪರಿಣಾಮ ಈ ಮಹಾಭಾರತ ಪರ್ವದ ತಿರುಳು. ಸಾರ್ವಜನಿಕ ಕೈಗಾರಿಕೆ ಮತ್ತಿತರ ಪ್ರಭುತ್ವ ಬಂಡವಾಳಶಾಹಿಯ ಬೆಳವಣಿಗೆಗೆ ಒತ್ತಾಯ ಹಾಕಿದ್ದು, ಈ ಸಾರ್ವಜನಿಕ ರಂಗದ ಮೇಲೆ ಸವಾರಿ ಮಾಡಿಕೊಂಡು ತಮ್ಮ ಸಾಮ್ರಾಜ್ಯ ವಿಸ್ತರಿಸಿದ್ದು, ಅಮೆರಿಕ ಮೊದಲಾದ ಸಾಮ್ರಾಜ್ಯಶಾಹಿ ಬಂಡವಾಳಿಗರ ಜೊತೆ ಸಹಚರ್ಯ, ಭಾರತದ ಮೊತ್ತ ಮೊದಲ ವಿಶ್ವಬ್ಯಾಂಕ್ ಸಾಲ ಪಡೆದ ಕಂಪನಿಯಾಗಿದ್ದು, ಪಂಚವಾರ್ಷಿಕ ಯೋಜನೆಗಳಿಗೆ ವಿರೋಧ, ಸಾರ್ವಜನಿಕ ರಂಗದ ಮೇಲೆ ಧಾಳಿ ಆರಂಭಿಸಿದ್ದು, ಬ್ಯಾಂಕ್ ರಾಷ್ಟ್ರೀಕರಣದಿಂದ ಪಡೆದ ಅಪಾರ ಪ್ರಯೋಜನ, ತುರ್ತು ಪರಿಸ್ಥಿತಿಗೆ ಬೆಂಬಲ, ಕಾರ್ಮಿಕರ ಮೇಲೆ ಶಿಸ್ತು ಹೇರಲು, ವೇತನ ಸ್ಥಗಿತಗೊಳಿಸಲು ಮಾಡಿದ ಒತ್ತಾಯ, ರೈತರು ಬೆಳೆಯಲು ಬೇಕಾದ ರಸಗೊಬ್ಬರ, ಕೀಟ ಮತ್ತು ರೋಗ ನಾಶಕಗಳು, ಯಂತ್ರಗಳು ಮೊದಲಾದ ಪರಿಕರಗಳನ್ನು ಒದಗಿಸುವಲ್ಲಿ, ಅವರು ಬೆಳೆದ ಬೆಳೆಗಳಿಗೆ ಸರಿಯಾದ ಬೆಲೆ ಸಿಗದಂತೆ ಮಾಡುವಲ್ಲಿ ಪಡೆದುಕೊಂಡ ದುರ್ಲಾಭ, ನಂತರ ಮೇಲೆ ಹೇಳಿದಂತೆ ಜಾಗತೀಕರಣ ನೀತಿಗಳಿಗಾಗಿ ಸರ್ಕಾರದ ಮೇಲೆ ಒತ್ತಾಯ, ಮತ್ತಿತರ ಸಂಗತಿಗಳನ್ನೆಲ್ಲ ಪರಿಶೋಧಿಸುವುದು ಅವಶ್ಯ.
ಸ್ವಾತಂತ್ರ್ಯಾ ನಂತರದ ಭಾರತದಲ್ಲಿ ಅವರ ಪಾತ್ರ
ಅದೇ ಸಮಯದಲ್ಲಿ ಸ್ವಾತಂತ್ರ್ಯ ಪಡೆಯಲು ಅವರದೇ ರೀತಿಯ ಕೊಡುಗೆ ಇರುವಂತೆಯೇ ಸ್ವಾತಂತ್ರ್ಯಾ ನಂತರದ ಭಾರತದ ಪ್ರಜಾಪ್ರಭುತ್ವ ಹಕ್ಕುಗಳ ಮೇಲೆ ಫ್ಯಾಸಿಸ್ಟ್ ಧಾಳಿ ನಡೆಯುವುದರಲ್ಲಿ ಅವರ ಪಾತ್ರ ಇರುವಂತೆಯೇ, ಅದು ಇಲ್ಲಿಯವರೆಗೆ ಪ್ರಜಾಪ್ರಭುತ್ವವಾಗಿ ಉಳಿದಿರುವುದಕ್ಕೂ ಅವರ ಕೊಡುಗೆ ಇದೆ. ಭಾರತದಂತೆಯೇ ವಸಾಹತುಶಾಹಿಗಳಿಂದ ಹೊಸದಾಗಿ ಸ್ವಾತಂತ್ರ್ಯ ಪಡೆದ ದೇಶಗಳ ಕತೆ ನಂತರ ಏನಾಗಿದೆ ನೋಡಿ. ಅವುಗಳಲ್ಲಿ ಹಲ ಹಲವು ದೇಶಗಳು ಹಲವು ದಶಕಗಳ ಸರ್ವಾಧಿಕಾರ, ಮಿಲಿಟರಿ ದಬ್ಬಾಳಿಕೆ, ಅಮೆರಿಕ ಮೊದಲಾದವುಗಳ ಅಧೀನತೆಯನ್ನು ಸ್ವಾತಂತ್ರ್ಯ ಪಡೆದ ಕೆಲ ವರ್ಷಗಳಿಂದಲೇ ಅನುಭವಿಸುತ್ತಿವೆ. ಈ ಅಂಶವನ್ನೂ ಗಮನಿಸಬೇಕು.
ಒಟ್ಟಿನಲ್ಲಿ ಆಧುನಿಕ ಭಾರತದ ಚರಿತ್ರೆಯನ್ನೇ, ನಮಗೆ ಶಾಲೆಗಳಲ್ಲಿ ಉರು ಹೊಡಿಸಿದ ರೀತಿಗಿಂತ ಬೇರೆಯಾಗಿ, ದುಡಿಯುವ ಜನರ ಕಣ್ಣಿನಿಂದ ಪುನರ್ ರೂಪಿಸಬೇಕಾಗುತ್ತದೆ. ಮತ್ತೂ ಒಂದು ವಿಶೇಷ: ಬ್ರಿಟನ್ ಸಂಸತ್ ಸದಸ್ಯರಾಗಿ ಆಯ್ಕೆಯಾಗಿದ್ದ ಶಾಪುರ್ಜಿ ಸಕಲತ್ ವಾಲಾ ಎಂಬ ಕಮ್ಯೂನಿಸ್ಟ್, ಪಾಕಿಸ್ತಾನದ ಸ್ಥಾಪಕ ಮಹಮದಾಲಿ ಜಿನ್ನಾರ ಹೆಂಡತಿ ಕೂಡಾ ಟಾಟಾ ಕುಟುಂಬದ ಕುಡಿಗಳು.
ಟಾಟಾ ಬಂಡವಾಳದ ಉದ್ಭವ
ಪರ್ಷಿಯಾದಿಂದ ಹಲವು ಶತಮಾನಗಳ ಹಿಂದೆ ಬಂದು ಗುಜರಾತಿನಲ್ಲಿ ನೆಲಸಿದವರೇ ಪಾರ್ಸಿಗಳು. ಅವರಲ್ಲಿ ಹಲವರು ಹಡಗುಗಳ ಮೂಲಕ ಸಮುದ್ರ ಸಾರಿಗೆ, ವ್ಯಾಪಾರಗಳಲ್ಲಿ ತೊಡಗಿದ್ದರು. ಟಾಟಾ ಉದ್ಯಮ ಸಂಸ್ಥೆಗಳ ಸ್ಥಾಪಕ ಜಮ್ ಶೇಟ್ಜಿ ಟಾಟಾ ತಮ್ಮ ತಂದೆಯ ಹಡಗು ಸಾರಿಗೆ ವ್ಯಾಪಾರದಲ್ಲಿ ತೊಡಗಿಕೊಂಡರು. ಈ ವ್ಯಾಪಾರ ಭಾರತ, ಚೀನಾ, ಜಪಾನ್, ಅರಬ್ ದೇಶಗಳು, ಈಜಿಪ್ಟ್ ಆಫ್ರಿಕಾದ ದೇಶಗಳಿಗೆಲ್ಲ ವ್ಯಾಪಿಸಿತ್ತು.
ಇದನ್ನೂ ಓದಿ: ಸ್ವಚ್ಛ ಭಾರತದ ಆಶಯವೂ ತಳಮಟ್ಟದ ವಾಸ್ತವವೂ ಉದಾತ್ತ ಧ್ಯೇಯದೊಂದಿಗೆ ಆರಂಭವಾದ ಅಭಿಯಾನಕ್ಕೆ ಇನ್ನೂ ಕಾಯಕಲ್ಪ ನೀಡಬೇಕಿದೆ
ಬ್ರಿಟಿಷರು 1820ರಿಂದ ಚೀನಾದ ಜನತೆಗೆ ವಿಷವುಣಿಸಲು ಅಫೀಮು ವ್ಯಾಪಾರ ಆರಂಭಿಸಿದ್ದರು. ಅದರಿಂದ ಮಿತಿ ಮೀರಿದ ಲಾಭ (ಕೇವಲ ೨೫೦ ರೂ. ಬೆಲೆಯ ಅಫೀಮನ್ನು 1200 ರೂ.ನಿಂದ 2000 ರೂ.ಗೂ ಹೆಚ್ಚು ಬೆಲೆಗೆ ಮಾರುವ ಮೂಲಕ) ದೊರೆಯುತ್ತಿತ್ತು. ಬ್ರಿಟಿಷರ ಅಧೀನದ ಈ ಅಫೀಮು ವ್ಯಾಪಾರದಲ್ಲಿ ಟಾಟಾ, ಬಿರ್ಲಾ ಮೊದಲಾದ ಹಲವರು ಸೇರಿಕೊಂಡರು.
ಭಾರತದಲ್ಲಿ ಅಫೀಮು ಬೆಳೆಸಿ ಚೀನಾದಲ್ಲಿ ಮಾರಿ. . .
ಟಾಟಾರವರ ಸಮುದ್ರ ಸಾರಿಗೆ ವ್ಯಾಪಾರ, ಆ ವೇಳೆಗಾಗಲೇ ಅವರು ಹಾಂಗ್ಕಾಂಗ್, ಶಾಂಘೈ ಗಳಲ್ಲಿ ಗೋದಾಮುಗಳು ಉಪಯುಕ್ತವಾದವು. ಈ ಅಫೀಮು ವ್ಯಾಪಾರ ಮೂರು ದೇಶಗಳ ನಡುವಣ ತ್ರಿಕೋನ ಅಕ್ರಮ ವ್ಯಾಪಾರವಾಗಿತ್ತು. ಭಾರತದಲ್ಲಿ ಅಫೀಮು ಬೆಳೆಸಿ ಚೀನಾದಲ್ಲಿ ಮಾರಿ, ಅಲ್ಲಿಯ ಟೀ, ರೇಷ್ಮೆ ಇತ್ಯಾದಿಗಳನ್ನು ಪಡೆದು ಯುರೋಪಿಗೆ ಸಾಗಿಸಿ ದುರ್ಲಾಭ ಮಾಡಿಕೊಳ್ಳುವ ವ್ಯಾಪಾರ. ಭಾರತದಲ್ಲಿ ಬಿಹಾರ, ಬನಾರಸ್ ಮೊದಲಾದ ಬ್ರಿಟಿಷರ ಆಡಳಿತದ ಪ್ರದೇಶಗಳಲ್ಲಿ, ಮಧ್ಯಪ್ರದೇಶ, ರಾಜಸ್ಥಾನ, ಮಹಾರಾಷ್ಟçದ ಸಂಸ್ಥಾನಗಳಲ್ಲಿ ಬ್ರಿಟಿಷರು ಒತ್ತಾಯ ಹೇರಿ ಅಫೀಮು ಬೆಳೆಸುತ್ತಿದ್ದರು. ಇದರ ಅಪಾರ ಲಾಭ ರೈತರಿಗೇನೂ ಸಿಗದಿದ್ದರೂ ಅಂದು ಈ ಪ್ರದೇಶಗಳಲ್ಲಿ ಆಹಾರದ ಕೊರತೆಗೆ, ಕ್ಷಾಮಗಳಿಗೆ ಕಾರಣವಾಗಿತ್ತು.
ಇದರ ವಿರುದ್ಧ ಝಾನ್ಸಿ ರಾಣಿ, ತಾತ್ಯಾಟೋಪಿ ಮೊದಲಾದ ಸಿಪಾಯಿ ದಂಗೆಯ ನಾಯಕರು ಸಿಡಿದೆದ್ದಿದ್ದರು. ಚೀನಾದಲ್ಲಂತೂ ಅಫೀಮು ಮಾದಕ ವ್ಯಸನ ಕೋಟ್ಯಾಂತರ ಜನರ ಬದುಕು ಮತ್ತು ಆರೋಗ್ಯ ಮೂರಾಬಟ್ಟೆಯಾಗುವಂತೆ ಮಾಡಿತ್ತು. ಚೀನಾದ ಅಂದಿನ ಸಾಮ್ರಾಟರು ಇದನ್ನು ಬಹಿಷ್ಕರಿಸಿದಾಗ ಬ್ರಿಟಿಷರು ಅವರ ಮೇಲೆ ಅಫೀಮು ಯುದ್ಧ (ಒಪಿಯಮ್ ವಾರ್) ಎಂದೇ ಪ್ರಸಿದ್ಧವಾದ ಯುದ್ಧ ಹೂಡಿ ಚೀನಾವನ್ನು ಸೋಲಿಸಿದರು.
ಈ ವ್ಯಾಪಾರವನ್ನು ದಾದಾಭಾಯಿ ನವರೋಜಿಯಂತಹ ಭಾರತ ಭಾರತದಲ್ಲಿ ಅಫೀಮು ಬೆಳೆಸಿ ಸ್ವಾತಂತ್ರ್ಯದ ಮೊದಲ ಹೋರಾಟಗಾರರು, ಅನೇಕ ಬ್ರಿಟಿಷ್ ಮಾನವೀಯವಾದಿಗಳು ಖಂಡಿಸಿದರು. ಪ್ರತಿಭಟನೆಗಳನ್ನೇ ನಡೆಸಿದರು. ಆದರೆ ಟಾಟಾರಂತಹ ಹಲವು ವ್ಯಾಪಾರಿಗಳಿಗೆ ಅದರಿಂದ ದೊರಕುತ್ತಿದ್ದ ಲಾಭವನ್ನು ರಕ್ಷಿಸಲು ದೊಡ್ಡದಾಗಿ ಹಿಂದೂ ಸಂಸ್ಕೃತಿಯ ಬಗ್ಗೆ, ನೈತಿಕತೆಯ ಬಗ್ಗೆ ಮಾತಾಡುತ್ತಿದ್ದ ತಿಲಕರು, ಸುಧಾರಣಾವಾದಿ ಎಂ.ಜಿ.ರಾನಡೆಯವರು, ಬ್ಯಾನರ್ಜಿ ಮೊದಲಾದವರು ಅಫೀಮು ವ್ಯಾಪಾರ ನಿಲ್ಲಿಸಬಾರದು, ಅದರಿಂದ ಭಾರತಕ್ಕೆ ನಷ್ಟ, ಭಾರತದ ಬಜೆಟ್ಗೆ ಬಹು ದೊಡ್ಡ ಆದಾಯದ ಮೂಲ ಎಂದು ವಾದಿಸುತ್ತಾ ಬ್ರಿಟಿಷ್ ಸರ್ಕಾರಕ್ಕೆ, ಈಸ್ಟ್ ಇಂಡಿಯಾ ಕಂಪನಿಗೆ ಬೆಂಬಲ ನೀಡಿದರು. ಅಂದು ಭಾರತೀಯ ಬಜೆಟ್ಗೆ ಎರಡನೇ ಅತ್ಯಂತ ದೊಡ್ಡ ಆದಾಯ ದೊರಕುತ್ತಿದ್ದುದು ಅಫೀಮು ವ್ಯಾಪಾರದಿಂದ.
ಈ ಅಂಶವೇ ಅದರಲ್ಲಿ ತೊಡಗಿದವರಿಗೆ ಎಷ್ಟು ಲಾಭವಾಗಿರಬಹುದು ಎಂಬುದನ್ನು ಸೂಚಿಸುತ್ತದೆ. ಮತ್ತೂ ಒಂದು ವಿಶೇಷವೆಂದರೆ ಮಧ್ಯ ಭಾರತದಲ್ಲಿ ಬೆಳೆಯುತ್ತಿದ್ದ ಅಫೀಮು ಹೆಚ್ಚು ಗುಣಮಟ್ಟದ್ದಾಗಿತ್ತು. ಎರಡರಷ್ಟು ಬೆಲೆ ಸಿಗುತ್ತಿತ್ತು. ಇದು ರಾಜರ ಸಂಸ್ಥಾನಗಳಲ್ಲಿ ಬೆಳೆಯಲಾಗುತ್ತಿದ್ದುದರಿಂದ ಬ್ರಿಟಿಷರ ಕಣ್ಣು ತಪ್ಪಿಸಿ ಗೋವಾದ ಮೂಲಕ ಸಾಗಿಸಿ, ಬ್ರಿಟಿಷರು ಹೊಡೆದುಕೊಳ್ಳುತ್ತಿದ್ದ ಅತಿ ಲಾಭವನ್ನು ತಾವೇ ಪಡೆದುಕೊಳ್ಳುವ ದಾರಿಯನ್ನೂ ಹಿಡಿಯುತ್ತಿದ್ದರು. ಇದರಿಂದ ಟಾಟಾರಂತಹ ಮುಂಬಯಿ ಭಾಗದಲ್ಲಿದ್ದ ಅಫೀಮು ವ್ಯಾಪಾರಿಗಳಿಗೆ ಅತಿ ಹೆಚ್ಚು ಲಾಭವಾಗುತ್ತಿತ್ತು. ಹೀಗೆ ಅತಿ ಹೆಚ್ಚು ಬಂಡವಾಳ ಶೇಖರವಾಯಿತು. ಮುಂದೆ ಅಫೀಮು ವ್ಯಾಪಾರದಲ್ಲಿ ಲಾಭ ಕಡಿಮೆಯಾಗತೊಡಗಿದಾಗ ಭಾರತದ, ಈಜಿಪ್ಟಿನ ಹತ್ತಿಯನ್ನು ಚೀನಾ ಮೊದಲಾದ ದೇಶಗಳಿಗೆ ಮಾರಿ ಅಲ್ಲಿಂದ ಟೀ, ರೇಷ್ಮೆ ತಂದು ಲಾಭ ಮಾಡಿಕೊಂಡರು.
(ಮುಂದುವರೆಯುತ್ತದೆ.)
ಇದನ್ನೂ ನೋಡಿ: ಮರಕುಂಬಿ ಪ್ರಕರಣದ ತೀರ್ಪು :ನ್ಯಾಯಾಂಗದ ಮೇಲಿನ ನಂಬಿಕೆಯನ್ನು ಉಳಿಸಿದೆ – ಆರ್ ಕೆ ದೇಸಾಯಿ Janashakthi Media