ಸಾಂಸ್ಕೃತಿಕ ಲೋಕದ ಮುಖ್ಯ ಉಸಿರು ಸಮುದಾಯ: ಬರಗೂರು

ಬೆಂಗಳೂರು: ರೋಚಕತೆ, ರೋಮಾಂಚನ ಉಂಟು ಮಾಡುತ್ತಿದ್ದ ಕಾಲದಲ್ಲಿ ಸೈದ್ಧಾಂತಿಕ ಸಂಚಲನವನ್ನು ಉಂಟು ಮಾಡಿದ ಹೆಮ್ಮೆ ಸಮುದಾಯ ಸಂಘಟನೆಯದ್ದು ಎಂದು ಹಿರಿಯ ಸಾಹಿತಿ ನಾಡೋಜ ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟರು. ಸಾಂಸ್ಕೃತಿಕ

ಬೆಂಗಳೂರಿನ ಸಂಸ ಬಯಲು ರಂಗಮಂದಿರದಲ್ಲಿ ಜರುಗಿದ ಸಮುದಾಯ ಸಾಂಸ್ಕೃತಿಕ ಸಂಘಟನೆಯ ಸುವರ್ಣ ಉತ್ಸವ ಹಾಗೂ ಮನುಷ್ಯತ್ವದೆಡೆಗೆ ಸಮುದಾಯ ಜಾತಾವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇದು ಆದ್ಯತೆಗಳು ಪಲ್ಲಟವಾಗುತ್ತಿರುವ ಕಾಲ. ಸಂಘಟನೆಗಳು ವಿಘಟನೆಗೊಂಡಿರುವ ಕಾಲ. ಇಂತಹ ಸಂದರ್ಭದಲ್ಲಿ ಸಮುದಾಯ ಸಂಘಟನೆ ಏಳು ಬೀಳುಗಳನ್ನು ಕಂಡರೂ ಸ್ಪಷ್ಟ ಸೈದ್ಧಾಂತಿಕತೆಯನ್ನು ಜತನವಾಗಿ ಕಾಪಾಡಿಕೊಂಡಿದೆ ಎಂದರು.

ಇದನ್ನೂ ಓದಿ: ಕಳೆದ 1000 ವರ್ಷಗಳಲ್ಲಿ ಭಾರತದಲ್ಲಿ ನೂತನ ಆವಿಷ್ಕಾರಗಳು ಶೂನ್ಯವೇ?

ಸಾಮಾಜಿಕ ಶ್ರೇಣೀಕರಣ, ಧಾರ್ಮಿಕ ಧೃವೀಕರಣ ಹಾಗೂ ಆರ್ಥಿಕ ಕೇಂದ್ರೀಕರಣದ ಕಾಲ. ಮಾನವೀಯತೆಯ ಜಾಗದಲ್ಲಿ ಮತೀಯತೆ ಹಾಗೂ ಮಠೀಯತೆ ಆಕ್ರಮಿಸಿಕೊಂಡಿದೆ. ಮನುಷ್ಯತ್ವದ ಮೌಲ್ಯದ ಮೇಲೆ ಅತ್ಯಾಚಾರ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ಮನುಷ್ಯತ್ವದ ಎರಡು ಕಣ್ಣುಗಳಾದ ಸೌಹಾರ್ದತೆ ಹಾಗೂ ಸಮಾನತೆಯನ್ನು ಕಾಪಾಡಬೇಕಿದೆ ಎಂದರು.

ಸಮುದಾಯ_ 50 ರ ಗೌರವ ಅಧ್ಯಕ್ಷರಾದ, ವಿಶ್ರಾಂತ ನ್ಯಾಯಮೂರ್ತಿಗಳಾದ ಎಚ್ ಎನ್ ನಾಗಮೋಹನ ದಾಸ್ ಅವರು ಮಾತನಾಡಿ ಇಂದಿನ ಸಾಮಾಜಿಕ ಸನ್ನಿವೇಶದಲ್ಲಿ ಸಮುದಾಯದ ಪಾತ್ರ ಮಹತ್ವವಾಗಿದೆ. ನಮ್ಮ ರಾಜ್ಯದಲ್ಲಿ ಸೌಹಾರ್ದ ವಾತಾವರಣ ನೆಲೆಸುವ ನಿಟ್ಟಿನಲ್ಲಿ ಸಮುದಾಯ ಕೊಟ್ಟ ಕೊಡುಗೆ ಅಪಾರ. ಇಂತಹ ಸಾಂಸ್ಕೃತಿಕ ಎಚ್ಚರದ ಸಂಘಟನೆಯೊಂದಿಗೆ ಎಲ್ಲರೂ ಕೈ ಜೋಡಿಸಬೇಕು ಎಂದರು.

ಸ್ವಾಗತ ಸಮಿತಿಯ ಅಧ್ಯಕ್ಷರಾದ, ಸಾಹಿತಿ ಅಗ್ರಹಾರ ಕೃಷ್ಣಮೂರ್ತಿ ಸಮುದಾಯ ನಡೆದು ಬಂದ ದಾರಿಯನ್ನು ವಿವರಿಸಿದರು. ರಂಗ ಹಿರಿಯರಾದ ಪ್ರಸನ್ನ, ವಿಜಯಮ್ಮ, ಸಿ ವೀರಣ್ಣ ಮುಂತಾದವರನ್ನು ಸನ್ಮಾನಿಸಲಾಯಿತು. ಸಮುದಾಯದ ರಾಜ್ಯ ಸಮಿತಿ ಅಧ್ಯಕ್ಷ ಎಚ್ ಜನಾರ್ಧನ, ಕಾರ್ಯದರ್ಶಿ ಶಶಿಧರ ಕುಮಾರ್, ಸಿ ಕೆ ಗುಂಡಣ್ಣ, ಬಂಜಗೆರೆ ಜಯಪ್ರಕಾಶ್, ರವೀಂದ್ರನಾಥ ಸಿರಿವರ, ಬಿ ಆರ್ ಮಂಜುನಾಥ್ ಅವರು ಉಪಸ್ಥಿತರಿದ್ದರು.

ಬೆಳಗ್ಗೆ ಹಮ್ಮಿಕೊಳ್ಳಲಾಗಿದ್ದ ಕಲಾ ಶಿಬಿರವನ್ನು ಕರ್ನಾಟಕ ಲಲಿತಕಲಾ ಅಕಾಡೆಮಿಯ ಅಧ್ಯಕ್ಷರಾದ ಪ ಸ ಕುಮಾರ್ ಅವರು ಉದ್ಘಾಟಿಸಿದರು. ನಾಡಿನ ಮಹತ್ವದ ಕಲಾವಿದರು ಶಿಬಿರದಲ್ಲಿ ಭಾಗವಹಿಸಿದ್ದರು.

ಇದನ್ನೂ ನೋಡಿ: ಸಮುದಾಯ 50| ಉದ್ಘಾಟನಾ ಕಾರ್ಯಕ್ರಮ ; ಸದ್ಭಾವನಾ ಗೀತೆ | ರಂಗ ಗೌರವ

Donate Janashakthi Media

Leave a Reply

Your email address will not be published. Required fields are marked *