“ಛಾವಾ” ಚಿತ್ರದ ಸುಳ್ಳುಗಳು

ಛಾವಾ ಎಂಬ ಚಿತ್ರ ಮಹಾರಾಷ್ಟ್ರದಲ್ಲಿ ತೆರೆಗೆ ಬಂದು ನಾಗಪುರದಲ್ಲಿ ಕೋಮು ದಳ್ಳುರಿಯ ಧೂಳೆಬ್ಬಿಸಿದೆ. ಮುಖ್ಯಮಂತ್ರಿ ಫಡ್ನವಿಸ್ ಅವರು ಈ ಛಾವಾ ಎಂಬ ಚಿತ್ರದ ಕಾರಣದಿಂದಲೇ ಕೋಮು ಗಲಭೆ ಆಗಿದೆ ಎಂಬುದನ್ನು ಒಪ್ಪಿದ್ದಾರೆ. ಹೀಗಿರುವಾಗಲೂ ಚಿತ್ರವನ್ನು ಪ್ರದರ್ಶನದಿಂದ ದೂರ ಇಡುವ ಅಥವಾ ಚಿತ್ರದಲ್ಲಿ ಬದಲಾವಣೆ ಮಾಡುವ ಮಾತು ಅವರಿಂದ ಬಂದಿಲ್ಲ. ಚಿತ್ರದ ತುಂಬಾ ಕೋಮು ದಳ್ಳುರಿ ಹರಡುವ ಸುಳ್ಳುಗಳು ಆಕರ್ಷಕ ಮುಖವಾಡಗಳ ಜೊತೆ ಬಂದಿವೆ ಎಂಬುದು ಈ ಚಿತ್ರದ ಮಹತ್ವ. ಛಾವಾ

-ಜಿ. ಎಸ್‌. ಮಣಿ

ಕೇಂದ್ರ ಹಾಗೂ ಹಲವು ರಾಜ್ಯಗಳಲ್ಲಿ ಅಧಿಕಾರ ಹಿಡಿದು ಗಟ್ಟಿಯಾಗಿರುವ ಬಿಜೆಪಿ ಮತ್ತು ಅದರ ಹಿಂದಿರುವ ಸಂಘ ಪರಿವಾರ ಸಾಮಾಜಿಕ ಹಿತದ ಕ್ರಮಗಳನ್ನು ಕೈಗೊಂಡು ಆರ್ಥಿಕ ಸಾಮಾಜಿಕ ಅಭಿವೃದ್ದಿ ಸಾಧಿಸುವ ಬದಲು ಹಿಂದುತ್ವದ ಹುಳುಗಳನ್ನು ಅಮಾಯಕ ಜನರ ತಲೆಯೊಳಗೆ ಬಿಡುತ್ತಿರುವುದು ಸ್ಪಷ್ಟ. ಕಲೆಯನ್ನೂ ಅವರು ಇಂತಹ ಸಮಾಜ ವಿಭಜಕ ಕಾರ್ಯಗಳಿಗೆ ವೇದಿಕೆಯಾಗಿ/ ಸಾಧನವಾಗಿ ಬಳಸಿಕೊಳ್ಳುತ್ತಿರುವುದು ದುರದೃಷ್ಟ ಎಂಬುದು ಒಂದು ಕಡೆಗಾದರೆ ಇಂತಹ ಅವರ ಕಾರ್ಯಗಳಿಗೆ ಪ್ರತಿರೋಧದ ಅವಶ್ಯಕತೆ ಇದೆ ಎಂಬುದು ಎಲ್ಲ ಶಾಂತಿ ಬಯಸುವ ಜನರ ಆಶಯವಾಗಿದೆ. ಇಂಥ ಜನ ಒಗ್ಗಟ್ಟಾಗಿ ಧ್ವನಿ ಎತ್ತುವ ಮತ್ತು ಕ್ರಿಯಾಶೀಲರಾಗುವ ಅನಿವಾರ್ಯತೆಯೂ ಇದೆ. ಛಾವಾ

ಕೋಮು ದಂಗೆಕೋರರ ಬಂಧನವಾಗಿಲ್ಲ. ಪೊಲೀಸರು ಕೋಮು ಘಟನೆಗಳ ನೋಡುಗರಾಗಿದ್ದರು, ಒಂದು ಕೊಮೀನ ವಿರುದ್ಧ ಆರ್ಥಿಕ ಬಹಿಷ್ಕಾರದ ಘೋಷಣೆ ಮಾಡಲಾಯಿತು ಇತ್ಯಾದಿಗಳೆಲ್ಲ ತೀವ್ರ ಆತಂಕದ ವಿಷಯಗಳು. ಛಾವಾ

ಛಾವಾ ಎಂಬ ಚಿತ್ರ ಶಿವಾಜಿ ಸಾವಂತ್ ಅವರು ಬರೆದ ಕಾದಂಬರಿಯನ್ನು ಕತೆಯಾಗಿ ಹೊಂದಿದೆ. ಛತ್ರಪತಿ ಶಿವಾಜಿಯ ನಂತರ ಆತನ ಮಗ ಸಂಭಾಜಿ ಮಹಾರಾಜ್ ಮೋಘಲರ ವಿರುಧ್ದ ಮರಾಠರ ಹೋರಾಟವನ್ನು ವೈಭವಿಕರಿಸಿ ತೋರಿಸುವ ಪ್ರಯತ್ನ. ವಿಕ್ಕಿ ಕೌಶಲ್, ಅಕ್ಷಯ್ ಖನ್ನ ಮತ್ತು ರಶ್ಮಿಕ ಮಂದಣ್ಣ ಅವರುಗಳನ್ನು ಮುಖ್ಯ ಪಾತ್ರಧಾರಿಗಳಾಗಿ ಹೊಂದಿರುವ ಚಿತ್ರ ಇದು. ಬಹು ಮುಖ್ಯವಾಗಿ ಮರಾಠರ ಶೌರ್ಯ ಮೋಘಲರ ಕ್ರೌರ್ಯಗಳನ್ನು ಎದುರು ಬದುರಾಗಿ ತೋರಿಸಿ ಹಿಂದುತ್ವವನ್ನು ವೈಭವೀಕರಿಸುವ ಉದ್ದೇಶ ಚಿತ್ರದಲ್ಲಿ ಮೂಡಿಸಲಾಗಿದೆ. ಛಾವಾ

ಇದನ್ನೂ ಓದಿ:  ​ಶೌಚಾಲಯ ಸ್ವಚ್ಛಗೊಳಿಸಲು ವಿದ್ಯಾರ್ಥಿಗಳನ್ನು ಬಳಸಿದರೆ ಎಫ್‌ಐಆರ್: ಶಿಕ್ಷಣ ಇಲಾಖೆಯ ಎಚ್ಚರಿಕೆ

ಅದಕ್ಕೆ ತಕ್ಕಂತೆ ತೆರೆಯ ಎಲ್ಲ ಆಯಾಮಗಳನ್ನು ಬಳಸಿಕೊಂಡು ಜನರಲ್ಲಿ ಹಿಂದುತ್ವದ ಭಾವನಾತ್ಮಕ ಅಲೆ ಎಬ್ಬಿಸಿ ರಾಜಕೀಯ ಲಾಭ ಪಡೆದುಕೊಳ್ಳುವ ಹುನ್ನಾರ ಕಲೆಯ ರೂಪದಲ್ಲೂ ಎದ್ದುಬಂದಿರುವುದು ಕಾಣುತ್ತದೆ. ನಾಗಪುರದಲ್ಲಿ ಕೋಮು ದಳ್ಳುರಿ ಹೊತ್ತಿ ಉರಿದು ಜನ ಜೀವನವನ್ನು ಅಲ್ಲೋಲ ಕಲ್ಲೋಲಗೊಳಿಸಿದ್ದು ಮತ್ತು ಅಂತಹ ಕಾರ್ಯಕ್ಕೆ ಗುಪ್ತ ಬೆಂಬಲ ನೀಡಿ ಪೋಷಿಸಿದ ಸರ್ಕಾರಿ ಯಂತ್ರದ ಸ್ಪಷ್ಟ ಒಲವು ಇಲ್ಲಿ ಕಾಣುತ್ತದೆ. ಈ ಚಿತ್ರದ ಸುಳ್ಳುಗಳನ್ನು ಇತಿಹಾಸಕಾರರು ಸ್ಪಷ್ಟವಾಗಿ ಗುರುತಿಸುತ್ತಾರೆ. ದುರಂತವೆಂದರೆ, ಹಿಂದುತ್ವದ ಅಜೇಂಡಾವನ್ನೇ ಇತಿಹಾಸದ ನಿಜ ರೂಪವೆಂದು ಬಿಂಬಿಸುವ ಇತಿಹಾಸಕಾರರೂ ಈಗ ತಯಾರಾಗಿ ಮುಂಚೂಣಿಯಲ್ಲಿ ಕಾಣಸಿಗುತ್ತಿರುವುದು. ಛಾವಾ

ಇಂತಹ ಸುಳ್ಳುಗಳ ಕೆಲವು ಮಜಲುಗಳನ್ನು ನಾವು ಕೆಳಗಿನಂತೆ ಕಾಣಬಹುದು

ಔರಂಗಜೇಬ್ ಹದಿನಾರು ಮತ್ತು ಹದಿನೇಳನೇ ಶತಮಾನಗಳಲ್ಲಿ ಆಗಿಹೋದ ಮೊಘಲ್ ದೊರೆ. ಈತ ಕ್ರೌರ್ಯ ಮೆರೆದಿರಬಹುದು. ಅಂದಿನ ದಿನಗಳಲ್ಲಿ ರಾಜರು ತಮ್ಮ ವೈರಿಗಳನ್ನು ಕ್ರೌರ್ಯದಿಂದಲೇ ಮುಗಿಸುವ ಕೆಲಸ ಮಾಡುತ್ತಿದ್ದರು ಎಂಬ ಐತಿಹಾಸಿಕ ಸತ್ಯವನ್ನು ನಾವು ಒಪ್ಪಿಕೊಂಡರೆ ಈ ವಿಷಯವನ್ನು ಇಂದಿನ ಸಮಾಜದಲ್ಲಿ ಕೋಮು ಅಶಾಂತಿಯನ್ನು ಹುಟ್ಟುಹಾಕುವ ಕೆಲಸ ಮಾಡುವವರ ರಾಜಕೀಯ ಸ್ವಾರ್ಥ ಸ್ಪಷ್ಟವಾಗಿ ನಮಗೆ ಕಾಣಿಸುತ್ತದೆ. ಇಂಥ ಕೆಲಸದ ಪರಿಣಾಮವೂ ನಾಗಪುರದಲ್ಲಿ ಕಂಡುಬಂದಿದೆ. ಔರಂಗಾಬಾದಿನಲ್ಲಿರುವ ಔರಂಗಜೇಬನ ಸಮಾಧಿಯನ್ನು ಒಡೆದು ಹಾಕಲು ತಯಾರಾಗಿ ನಿಂತ ಹಿಂದುತ್ವ ಪಡೆ ಇದರ ಮುಂದುವರಿದ ಪರಿಣಾಮ. ಅಷ್ಟೇ ಅಲ್ಲ ಔರಂಗಜೇಬನ ಒಳ್ಳೆಯ ಗುಣಗಳ ಬಗ್ಗೆ ಮಾತನಾಡಿದ ಸಮಾಜವಾದಿ ಪಕ್ಷದ ಶಾಸಕ ಅಸಿಮ್ ಆಜ್ಮಿ ಅವರನ್ನು ಸದನದಿಂದ ಹೊರಹಾಕಲಾಗಿದೆ.

ಶಿವಾಜಿ ಮಹಾರಾಜನ ಮಗನಾದ ಸಂಭಾಜಿ ಮಹಾರಾಜನನ್ನು ಔರಂಗಜೇಬ ಯುದ್ಧದಲ್ಲಿ ಸೆರೆಹಿಡಿದು ಕ್ರೂರ ಹಿಂಸೆ ನೀಡಿ ಕೊಂದ ರೀತಿಯನ್ನು ಚಿತ್ರದ ಕೊನೆಯಲ್ಲಿ ಬಹು ದೊಡ್ಡದಾಗಿ ಬಿಂಬಿಸಿ (ನಲವತ್ತು ನಿಮಿಷಗಳ ಕಾಲ ಈ ಹಿಂಸೆಯನ್ನು ತೋರಿಸಲಾಗಿದೆ!!) ಕೋಮು ಭಾವನೆಗಳ ಬೆಂಕಿ ಹಚ್ಚಿ ಅದಕ್ಕೆ ತುಪ್ಪ ಎರೆಯುವ ಕೆಲಸ ಮಾಡಲಾಗಿದೆ. ಚಿತ್ರ ನೋಡಿದವರು ಮುಸ್ಲಿಂ ದ್ವೇಷಿಗಳಾಗಿ ರೂಪುಗೊಳ್ಳಲು ಬೇಕಾದ ಪೂರ್ತಿ ಭಾವನಾತ್ಮಕ ಕುಂಡವನ್ನು ಸೃಜಿಸಲಾಗಿದೆ. ಇಂತಹ ಹಿಂಸೆಯನ್ನು ಔರಂಗಜೇಬನ ಬ್ರಾಹ್ಮಣ ಸಲಹಾಕಾರರು ಮನುಸ್ಮೃತಿ ಆಧಾರದಲ್ಲಿ ಶಿಫಾರಸ್ಸು ಮಾಡಿದ್ದು ಎನ್ನಲಾಗುತ್ತಿದೆ. ಬ್ರಾಹ್ಮಣರು ತಮ್ಮ ತಪ್ಪಿತಸ್ಥ ಭಾವನೆಗಳನ್ನು ಮುಚ್ಚಿಹಾಕಲು ಇಂದು ಹಿಂದೂ- ಮುಸ್ಲಿಂ ದ್ವೇಷದ ಹಂದರ ರಚಿಸಿ ಪಾರಾಗಲು ನಡೆಸಿರುವ ಹುನ್ನಾರ ಇದು ಎನ್ನಲಾಗಿದೆ. ಛಾವಾ

ಎಲ್ಲೂ ಆಳವಾದ ವಿಶ್ಲೇಷಣೆ ಮತ್ತು ಸ್ಪಷ್ಟ ವಿವರಣೆ ಮುಂದಕ್ಕೆ ಬಾರದಂತೆ ತಡೆಯಲು ಇದು ಮುಖ್ಯ ಕಾರಣ ಎನ್ನಲಾಗುತ್ತಿದೆ. ಆಳ್ವಿಕೆಯಲ್ಲಿ ಇರುವ ಸರ್ಕಾರ ಇಂತಹ ವರ್ತನೆ ತೋರುವುದಕ್ಕೆ ಬೇರೆ ಕಾರಣಗಳು ಕಾಣುವುದಿಲ್ಲ. ಇದು ಯಾವ ರೀತಿಯ ಸ್ವಸ್ಥ ಸಮಾಜ ಕಟ್ಟಲು ಅವಶ್ಯ? ಔರಂಗಜೇಬ ಭಾರತೀಯನಾಗಿದ್ದ ಮತ್ತು ಈ ದೇಶದಲ್ಲೇ ಹುಟ್ಟಿ ಈ ದೇಶದಲ್ಲೇ ಮಡಿದ ಎಂಬುದು ವಾಸ್ತವ. ಆ ದಿನಗಳಲ್ಲಿ ಜಗತ್ತಿನ ಒಟ್ಟುತ್ಪಾದನೆಯ ಶೇ 24 ರಷ್ಟನ್ನು ಭಾರತ ಒಂದೇ ಕೊಡುತ್ತಿತ್ತು! ಛಾವಾ

ಎಲ್ಲಾ ರಾಜರುಗಳು ಅಂದಿನ ದಿನಗಳಲ್ಲಿ ಅಧಿಕಾರದಲ್ಲಿ ಉಳಿಯಲು ವಿರೋಧಿಗಳನ್ನು ನಿರ್ನಾಮ ಮಾಡುವ ರೀತಿಯಲ್ಲೇ ಆತನೂ ಮಾಡಿದ. ಆತ ಒಂದು ಕೈ ಹೆಚ್ಚೇ ವೈರಿ ಹಂತಕನಾಗಿದ್ದ/ ಕ್ರೂರಿಯಾಗಿದ್ದ ಎಂದುಕೊಳ್ಳೋಣ. ಆದರೆ, ಇಂತಹ ಕೃತ್ಯಗಳನ್ನು ಇಂದಿನ ಸಂದರ್ಭಗಳ ಚೌಕಟ್ಟಿನಲ್ಲಿ ತಂದು ಅವನ್ನು ಇನ್ನೂ ಬರ್ಬರಗೊಳಿಸಿ ಜನರ ಭಾವನೆಗಳನ್ನು ಕೆರಳಿಸಿ, ಅಂದು ಇಲ್ಲದೆ ಇದ್ದ ಹಿಂದೂ-ಮುಸ್ಲಿಂ ವೈಷಮ್ಯವನ್ನು ತೀವ್ರಗೊಳಿಸುವ ಕೆಲಸ ಹೇಯವಾದುದಲ್ಲವೇ?

ಸರ್ಕಾರ ಪ್ರಣೀತ ಕೋಮು ದಳ್ಳುರಿ ಇದು ಎಂಬುದರಲ್ಲಿ ಸಂಶಯವೇ ಇಲ್ಲ. ಮುಂಬೈಯಿಯ ದೊಂಬಿವಿಲಿಯಲ್ಲಿ ವ್ಯಾಪಾರ ಬಹಿಷ್ಕಾರವನ್ನು ಮುಸ್ಲಿಮರ ಮೇಲೆ ಹೇರಲಾಗಿದೆ. ಸ್ವಸ್ಥ ಮನಸಿನ ಸರ್ಕಾರವೊಂದು ಆಢಳಿತದಲ್ಲಿ ಇರುವಲ್ಲಿ ಇಂಥ ಬಹಿಷ್ಕಾರ ಸಾಧ್ಯವಿಲ್ಲ. ಇದು ಕಾನೂನು ಬಾಹೀರವೂ ಹೌದು. ಪ್ರಜಾಸತ್ತೆ ಎನ್ನುವುದು ಎಲ್ಲಿ ಹೋಯಿತು ಎಂಬುದೇ ಪ್ರಶ್ನೆ. ಆರ್ ಎಸ್ ಎಸ್ ಮತ್ತು ಬಿ ಜೆ ಪಿ ಗಳು ಉತ್ತರ ನೀಡಬೇಕು.

ಅಧಿಕಾರದ ಮಾಧದಲ್ಲಿ ಇರುವ ಅವರಿಗೆ ಉತ್ತರದಾಯಿತ್ವವೇ ಇಲ್ಲ. ಬೆಲೆ ಏರಿಕೆ, ನಿರುದ್ಯೋಗ, ಬಡತನ, ಇತ್ಯಾದಿ ನೂರಾರು ಸಾಮಾಜಿಕ ಆರ್ಥಿಕ ಸಮಸ್ಯೆಗಳು ಸಾಮಾನ್ಯ ಜನರನ್ನು ಕಿತ್ತು ತಿನ್ನುತ್ತಿವೆ. ಬೇಜವಾಬ್ದಾರಿ ಸಂಸ್ಥೆಗಳು ಮತ್ತು ಸರ್ಕಾರ ಇಂಥ ಜನರನ್ನು ವಿಭಜಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುವ ಬರ್ಬರ ಕಾಯಕ ನಡೆಸುತ್ತಿವೆ. ಔರಂಗಜೇಬನ ಆಸ್ಥಾನಿಕ ಬ್ರಾಹ್ಮಣರು ಜನರ ಹೋರಾಟಗಳನ್ನು ಮುಚ್ಚಿಟ್ಟು ತಮಗೆ ಬೇಕಾದ ಕತನಗಳನ್ನು ಮುನ್ನೆಲೆಗೆ ತಂದರು.

ಬಂಗಾಳದಲ್ಲಿ ಮರಾಠಾ ಸೈನ್ಯ ಅತ್ಯಂತ ಕ್ರೂರ ಹಿಂಸೆ ನೀಡಿದ ಉದಾಹರಣೆಗಳಿವೆ. ಆದರೆ ಇದು ರಾಜಕೀಯವಾಗಿತ್ತು. ಕೋಮುವಾದವಾಗಿರಲಿಲ್ಲ. ಇಂದು ಇದನ್ನು ಕೋಮು ದ್ವೇಷವನ್ನಾಗಿಸಿ ಲಾಭ ಪಡೆದುಕೊಳ್ಳುವ ಸಾಹಸ ನಡೆಯುತ್ತಿದೆ.ಇದರೊಳಗೆ ಇನ್ನೊಂದು ಅಡಗಿರುವ ಆಯಾಮವನ್ನು ಗುರುತಿಸಬೇಕಾಗುತ್ತದೆ. ಅದೆಂದರೆ ಎಲ್ಲಿ ಹಿಂದೂ- ಮುಸ್ಲಿಂ ಎಂಬ ದ್ವೇಷದ್ವಯ ಸೃಸ್ಟಿಯಾದರೂ ಅದು ಸರ್ಕಾರ-ಮುಸ್ಲಿಂ ದ್ವೇಷವಾಗಿರುತ್ತದೆ ಎಂಬುದು!!  ರಕ್ಷಣೆ ನೀಡಬೇಕಾದ ಸರ್ಕಾರವೇ ದ್ವೇಷ ಸಾಧಿಸ ಹೊರಟರೆ ಅದರ ಪರಿಣಾಮ ಏನು? ಸಂವಿಧಾನದ ರಕ್ಷಣೆಯ ಜವಾಬ್ದಾರಿ ಎಲ್ಲಿಗೆ ಬಂದು ನಿಲ್ಲುತ್ತದೆ?

ಚಿತ್ರದಲ್ಲಿ ಮರಾಠರಿಗೆ ಕೇಸರಿ ಉಡುಗೆ ಮತ್ತು ಮೊಘಲ್ ಸೈನಿಕರಿಗೆ ಹಸಿರು ಉಡುಗೆ ತೊಡಿಸಿ ಅಂದು ಇಲ್ಲದ ಇಂದಿನ ವಿನ್ಯಾಸಗಳನ್ನು ದುರುದ್ದೇಶಪೂರ್ವಕವಾಗಿ ಹೇರಲಾಗಿದೆ. ಅಷ್ಟೇ ಅಲ್ಲ. ಚಿತ್ರದಲ್ಲಿ ಒಬ್ಬ ದಳಪತಿ ತಾನು ಹಿಂದೂ ಎಂದು ಹೇಳಿಕೊಳ್ಳುತ್ತಾನೆ. ಆದರೆ ಅಂದಿನ ಸಂದರ್ಭದಲ್ಲಿ “ಹಿಂದೂ” ಎಂಬ ಭಾವನೆ ಮತ್ತು ಬಳಕೆ ಎರಡೂ ಇರಲಿಲ್ಲ ಎಂಬುದನ್ನು ಇತಿಹಾಸಕಾರರು ಎತ್ತಿ ತೋರಿಸಿದ್ದಾರೆ.

ಔರಂಗಜೇಬ ಹಿಂದೂಗಳ ದೇವಸ್ಥಾನಗಳನ್ನು ಒಡೆದು ಹಾಕಿದ ಎಂಬುದು ಇನ್ನೊಂದು ದೊಡ್ಡ ಆರೋಪ. ಇದು ಸ್ವಲ್ಪ ಮಟ್ಟಿಗೆ ನಿಜ. ಯಾಕೆಂದರೆ ಆತ ದೇವಸ್ಥಾನಗಳನ್ನು ದ್ವಂಸ ಮಾಡಿದ ವಿಷಯ ಇತಿಹಾಸದಲ್ಲಿ ಬರುತ್ತದೆ. ಆದರೆ ಆತ ನೂರಾರು ದೇವಸ್ಥಾನಗಳಿಗೆ  ಇನಾಮುಗಳನ್ನೂ ನೀಡಿದ್ದ ಎಂಬುದೂ ಇತಿಹಾಸದ ವಾಸ್ತವ. ಒಂದೇ ಮಾತಿನಲ್ಲಿ ಹೇಳುವುದಾದರೆ ಆತ ಆ ಕಾಲದ ಅರಸರು ಮಾಡುವ ಎಲ್ಲಾ ತರಹದ ಕೃತ್ಯಗಳನ್ನು ಮಾಡಿದ್ದ. ಆತ ಅಂದು ಇಂತಹ ಹೀನಾ ಕೃತ್ಯಗಳನ್ನು ಮಾಡಿದ್ದ. ಅದಕ್ಕಾಗಿಯೇ ನಾವು ಇಂದು ಇಂದಿನ ಮುಸ್ಲಿಮರ ಮೇಲೆ ಅಂತಹುದ್ದೇ ಕ್ರೌರ್ಯ ಮೇರೆಯಬೇಕು ಎಂದರೆ ಸಮಂಜಸವೆ ಎಂಬುದು ಇಂದಿನ ನಾಗರಿಕರನ್ನು ಕಾಡಬೇಕಾದ ಪ್ರಶ್ನೆ.

ಔರಂಗಜೇಬ ಅಕಬರ್ ತಂದ ಆಢಳಿತ ಸುಧಾರಣೆಗಳನ್ನು ಮುಂದುವರೆಸಿದ. ಅಕಬರನ ಆಢಳಿತದಲ್ಲಿ ಶೇ 21 ರಷ್ಟು ಹಿಂದುಗಳಿದ್ದರೆ ಔರಂಗಜೇಬನ ಆಢಳಿತದಲ್ಲಿ ಶೇ 33 ರಷ್ಟು ಹಿಂದುಗಳಿದ್ದರು.

ಅರಸರುಗಳ ಕೆಲ ನೀತಿಗಳು ಒಳ್ಳೆಯದಿರುತ್ತಿದ್ದವು. ಕೆಲ ನೀತಿಗಳು ಕೆಟ್ಟದಿರುತ್ತಿದ್ದವು. ಇವುಗಳ ವ್ಯತ್ಯಾಸಗಳನ್ನು ಇಂದಿನ ನಾವು ಅರಿತಿರಬೇಡವೆ?

ಔರಂಗಜೇಬ ಸುಮಾರು ಐವತ್ತು ವರ್ಷಗಳ ಕಾಲ ಆಢಳಿತ ನಡೆಸಿದ. ಕಾಲದಿಂದ ಕಾಲಕ್ಕೆ ನೀತಿಗಳು ಸ್ಥಿತಿಗಳಿಗೆ ತಕ್ಕಂತೆ ಬದಲಾದವು. ಎಲ್ಲ ಅಧಿಕಾರಸ್ಥರ ರೀತಿ ಅದಾಗಿತ್ತು. ಆತ ಮುಸ್ಲಿಮರನ್ನೂ ಶಿಕ್ಷೆಗೆ ಒಳಪಡಿಸಿದ. ಇಂದಿನ ಮೌಲ್ಯಗಳ ಕಣ್ಣಿನಿಂದ ಅಂದಿನ ಕ್ರಿಯೆಗಳನ್ನು ಅಳೆಯುವುದು ಸಮಂಜಸ ರೀತಿಯಲ್ಲ.

ಔರಂಗಜೇಬ ಟೋಪಿಗಳನ್ನು ಹೆಣೆಯುತ್ತಿದ್ದ. ಆತ ಹೀಗೆ ಟೋಪಿ ಹೆಣೆದು ಆರ್ಜಿಸಿದ ಹಣ 15 ರೂ ಗಳಷ್ಟಿತ್ತು. ತನ್ನ ಸಮಾಧಿಯನ್ನು ಈ ಹಣದಿಂದಲೇ ಕಟ್ಟಬೇಕು ಎಂದು ಆತ ಹೇಳಿದ್ದ. ಆದ್ದರಿಂದ ಆತನ ಸಮಾಧಿ ಅತ್ಯಂತ ಸರಳವಾದದ್ದು. ಬ್ರಿಟಿಷರ ಕಾಲದಲ್ಲಿ ಈ ಸಮಾಧಿಯನ್ನು ನೋಡಿದ ಲಾರ್ಡ್ ಕರ್ಜನ್ ಅವನ ಸಮಾಧಿಯನ್ನು ಆಕರ್ಷಕವಾಗಿ ಕಟ್ಟಿಸಿದ. ಇದು ಕೆಲ ವಿಷಯಗಳಲ್ಲಿ ಆತನಿಗೆ ಇದ್ದ ಸರಳತೆಯ ಕತೆ ಹೇಳುತ್ತದೆ.

1857 ರ ಸ್ವಾತಂತ್ರ್ಯ ಸಂಗ್ರಾಮದ ನಂತರ ಬ್ರಿಟಿಷರು ಈ ಯುದ್ದದಲ್ಲಿ ಹೋರಾಡಿದ ದೊಡ್ಡ ಸಂಖ್ಯೆಯ ಮುಸ್ಲಿಮರಿಗೆ ಗಂಭೀರ ಶಿಕ್ಷೆ ವಿಧಿಸಿದರು. ಹಿಂದೂ ವ್ಯಾಪಾರಸ್ಥರು ಬ್ರಿಟಿಷರಿಗೆ ಹಣಕಾಸಿನ ಸಹಾಯ ನೀಡಿದ್ದರು. ವಸಾಹತುಷಾಹಿ ಬ್ರಿಟಿಷರು ಕೋಮು ವೈಷಮ್ಯದ ಕಿಡಿಯನ್ನು ಆಗಲೇ ಹೊತ್ತಿಸಿದ್ದರು ಎಂಬುದನ್ನು ಇತಿಹಾಸಕಾರರು ಎತ್ತಿ ಹೇಳುತ್ತಾರೆ.

ಇಂದು ಮುಸ್ಲಿಮರನ್ನು ದೈತ್ಯೀಕರಿಸಿ ಅವರ ವಿರುದ್ದ ಹಿಂದುಗಳನ್ನು ಎತ್ತಿ ಕಟ್ಟುವ ಕೆಲಸ ನಡೆಯುತ್ತಿದೆ. ಈ ದಿಸೆಯಲ್ಲಿ ಹಲವು ಚಿತ್ರಗಳು ನಿರ್ಮಾಣಗೊಂಡು ತೆರೆಗೆ ಬರುತ್ತಿವೆ. ದೊಡ್ಡ ಪ್ರಮಾಣದಲ್ಲಿ ಹಣ ಗಳಿಸುವ ಜೊತೆಗೆ ಕೋಮು ವಿಷವನ್ನು ಅವು ದೇಶದಾದ್ಯಂತ ಹರಡುತ್ತಿವೆ. ಸಾಮಾಜಿಕ ಸ್ವಾಸ್ಥ್ಯ ಹಾಳುಗೆಡವುವ ಇಂಥ ಚಿತ್ರಗಳ ವಿರುದ್ಧ ಧ್ವನಿ ಎತ್ತುವ ಮತ್ತು ತಿಳುವಳಿಕೆ ಮೂಡಿಸುವ ಜವಾಬ್ದಾರಿ ನಾಗರಿಕ ಸಮಾಜಕ್ಕೆ ಇದೆ.

ಔರಂಗಜೇಬ ಬಿಜಾಪುರದ ಅದಿಲ್ ಶಾಹಿ ಮತ್ತು ಗೋಲ್ಕೊಂಡದ ಕುತುಬ್ ಶಾಹಿ ರಾಜರುಗಳನ್ನೂ ನಿರ್ನಾಮ ಮಾಡುವ ಕೆಲಸ ಮಾಡಿದ. ಎರಡೂ ಮುಸ್ಲಿಂ ರಾಜರ ಸರ್ಕಾರಗಳಾಗಿದ್ದವು ಎಂಬುದನ್ನೂ ಗಮನಿಸಬೇಕು!

ಇನ್ನೂ ಒಂದು ಮುಖ್ಯ ಗಮನಿಸಬೇಕಾದ ಸಂಗತಿ ಎಂದರೆ, ಸಂಭಾಜಿ ಮಹಾರಾಜನ ಮಗ, ಔರಂಗಜೇಬನ ಸಮಾಧಿಗೆ ಗೌರವ ತೋರಲು ಬರಿಗಾಲಿನಿಂದ ನಡೆದು ಹೋಗಿ ಚಾದರ್ ಹೊದೆಸಿ ಬಂದನೆಂಬುದು!!

ಇತಿಹಾಸಕಾರರಿಂದ ಹೀಗೊಂದು ಸೂಕ್ಷ್ಮ ಪ್ರಶ್ನೆಯೂ ಬಂದಿದೆ. ಅದೇನೆಂದರೆ, ಇಂದಿನ ಮುಖ್ಯಮಂತ್ರಿಯ ಪೂರ್ವಜರು ಔರಂಗಜೆಬನನ್ನು ಕಂಡು ಕ್ರೌರ್ಯವನ್ನು ಮಾಡಬಾರದೆಂದು ಮಾತುಕತೆ ಆಡಿದ್ದರೆ? ಇಂತಹ ಪ್ರಶ್ನೆಗಳಿಗೆ ಸಮಂಜಸ ಉತ್ತರ ಬರುವುದಿಲ್ಲ. ಆದರೆ ಸ್ವ ವಿಮರ್ಶೆಯ ಅವಶ್ಯಕತೆ ಇವರಿಗೆ ಇದೆಯಲ್ಲವೇ?

ಇದನ್ನೂ ನೋಡಿ: ಪಿಚ್ಚರ್‌ ಪಯಣ – 155 | ಕಾಡುವ ವಲಸಿಗ ಫಿಲಂಗಳು – ವಸಂತರಾಜ್‌ ಎನ್‌.ಕೆ Janashakthi Media

Donate Janashakthi Media

Leave a Reply

Your email address will not be published. Required fields are marked *