ಟ್ಯೂಷನ್​​ಗೆ ಹೋಗಿದ್ದ ಬಾಲಕಿ ಸಂಪ್​​ನಲ್ಲಿ ಹೆಣವಾಗಿ ಪತ್ತೆ

ಮಂಡ್ಯ: ನಿರ್ಮಾಣ ಹಂತದಲ್ಲಿರುವ ಕಟ್ಟಡದ ಸಂಪ್‌ನಲ್ಲಿ ಮಂಗಳವಾರ ಸಂಜೆ 10 ವರ್ಷದ ಬಾಲಕಿಯ ಶವ ಪತ್ತೆಯಾಗಿದೆ. ಪೊಲೀಸ್ ಅಧಿಕಾರಿಗಳು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ತನಿಖೆ ಆರಂಭಿಸಿದ್ದಾರೆ.

ಟ್ಯೂಷನ್ ಗೆ ಹೋಗಿದ್ದ ಬಾಲಕಿ ಶವವಾಗಿ ಪತ್ತೆಯಾಗಿರುವ ಘಟನೆ ಮಂಡ್ಯ ಜಿಲ್ಲೆ ಮಳವಳ್ಳಿ ಪಟ್ಟಣದ ಮೈಸೂರು ರಸ್ತೆಯಲ್ಲಿ ನಡೆದಿದೆ. 10 ವರ್ಷದ ಬಾಲಕಿ ನಿನ್ನೆ ಮಧ್ಯಾಹ್ನ ಟ್ಯೂಷನ್ ಗಾಗಿ ಮನೆಯಿಂದ ತೆರಳಿದ್ದಳು. ಆದರೆ ಸಂಜೆಯಾದರೂ ಬಾಲಕಿ ಮನೆಗೆ ವಾಪಸ್​ ಬಾರದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಹುಡುಕಾಟ ನಡೆಸಿದ್ದರು. ಈ ವೇಳೆ ಬಾಲಕಿಯ ಮೃತದೇಹ ಟ್ಯೂಷನ್ ನಡೆಸುತ್ತಿದ್ದ ನಿವಾಸದ ಹಿಂಭಾಗದಲ್ಲಿ ನಿರ್ಮಾಣವಾಗುತ್ತಿದ್ದ ಮನೆಯ ಸಂಪಿನಲ್ಲಿ ಪತ್ತೆಯಾಗಿದೆ.

ಅನುಮಾಸ್ಪದ ರೀತಿಯಲ್ಲಿ ಬಾಲಕಿ ಮೃತಪಟ್ಟಿದ್ದು, ಅತ್ಯಾಚಾರ ಮಾಡಿ ಬಳಿಕ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಮಳವಳ್ಳಿ ಟೌನ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಾಲಕಿಯ ಮೃತದೇಹವನ್ನು ಮಂಡ್ಯ ಮಿಮ್ಸ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ರವಾನೆ ಮಾಡಲಾಗಿದೆ. ಬಾಲಕಿಯ ಕುಟುಂಬಸ್ಥರ ಆಕ್ರಂದನದಲ್ಲಿ ಮುಗಿಲು ಮುಟ್ಟಿದೆ.

ಬಾಲಕಿಯ  ಟ್ಯೂಷನ್ ತರಗತಿಯ ಶಿಕ್ಷಕನನ್ನು 45 ವರ್ಷದ ಕಾಂತರಾಜು ಎಂದು ಗುರುತಿಸಲಾಗಿದ್ದು, ವಿಚಾರಣೆಗಾಗಿ ಪೊಲೀಸ್ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ.

ಮಂಡ್ಯ ಅಧೀಕ್ಷಕ ಪಿ ವೇಣುಗೋಪಾಲ್ ಮಾತನಾಡಿ, ಮೃತದೇಹ ಈಗಷ್ಟೇ ಪತ್ತೆಯಾಗಿದೆ; ಯಾವುದೇ ಕಾಮೆಂಟ್‌ಗಳನ್ನು ಮಾಡಲು ಇದು ತುಂಬಾ ಮುಂಚೆಯೇ ಇರುತ್ತದೆ. ನಾವು ತನಿಖೆಯನ್ನು ಪ್ರಾರಂಭಿಸಿದ್ದೇವೆ . ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದು, ಹೆಚ್ಚಿನ ತನಿಖೆಗಳು ನಡೆಯುತ್ತಿವೆ ಎಂದು ಹೇಳಿದರು.

Donate Janashakthi Media

Leave a Reply

Your email address will not be published. Required fields are marked *