‘ಭೂಮಿ ತಿರುಗಿಬಿದ್ದಿದೆ. ನಾವು ಆಕಳಿಸಿ ಮೈಮುರಿಯಬೇಕಿದೆ.- ಕೆ.ಎಸ್.ರವಿಕುಮಾರ್ ವಿಜ್ಞಾನ ಬರಹಗಾರ

ಹಾಸನ: ನಾವಿರುವ ಇಂದಿನ ಜಗತ್ತು ಕಳೆದ ಮೂರ್ನಾಲ್ಕು ವರುಷಗಳಿಂದ ಈಚೆಗಂತೂ ‘ಹೀಗೂ ಸಾಧ್ಯವೇ’ ಎಂದು ತಬ್ಬಿಬ್ಬುಗೊಳಿಸುವ ಬದಲಾವಣೆಗಳು ಒಂದೇಸಮನೆ ದಾಖಲಾಗುತ್ತಿವೆ. ಇದಕ್ಕೆಲ್ಲ ವಾತಾವರಣದಲ್ಲಿರಬೇಕಾದ ಅಗತ್ಯ ಪ್ರಮಾಣಕ್ಕಿಂತ ಹೆಚ್ಚಿಗೆ ಕಾರ್ಬನ್ (ಇಂಗಾಲ) ಅನ್ನು ನಾವು ಉತ್ಪಾದಿಸಿದ್ದೇ ಕಾರಣ. ಎಂದು ವಿಜ್ಞಾನ ಬರಹಗಾರ ಕೆ.ಎಸ್.ರವಿಕುಮಾರ್ ತಿಳಿಸಿದ್ದಾರೆ

ಅವರು ಇತ್ತೀಚೆಗೆ ನಗರದ ಬಿಜಿವಿಎಸ್ ಕಚೇರಿಯಲ್ಲಿ ಭಾರತ ಜ್ಞಾನ ವಿಜ್ಞಾನ ಜಿಲ್ಲಾ ಸಮಿತಿ ಆಯೋಜಿಸಿದ್ದ “ ಭೂಮಿ ಹುಟ್ದಬ್ಬದಲ್ಲಿ ಹವಾಮಾನ ಬದಲಾವಣೆ ಹೇಗೆ ಎದುರಿಸುವುದು” ಪಿಪಿಟಿ ಸಂವಾದದಲ್ಲಿ ವಿಷಯ ಮಂಡಿಸಿ ಮಾತನಾಡುತ್ತಿದ್ದರು.

ನಿಸರ್ಗ ತನ್ನ ಇರುವಿಕೆಯ ಸಹಜ ಲಕ್ಷಣಗಳನ್ನು ತೊರೆಯುತ್ತ ಅತಿರೇಕ ಎನ್ನಬಹುದಾದ ಬದಲಾವಣೆಗಳಿಗೆ ಸಿಲುಕಿದೆ. ಅತಿ ಮಳೆ, ಅತಿ ಮಂಜು, ಅತಿ ಚಳಿ, ಅತಿ ಬರ, ಅತಿ ತಾಪಗಳು ಹೀಗೆ ಒಂದಲ್ಲ ಒಂದು ನಮ್ಮ ನಿತ್ಯ ಬದುಕಿಗೆ ಅತಿರೇಕ ಎಂದು ನಮಗರಿವಾಗದಷ್ಟು ಸಹಜವೆಂಬಂತೆತ ತಳುಕುಹಾಕಿಕೊಳ್ಳುತ್ತಿವೆ. ಎಂದು ಹಲವಾರು ನೈಜ ಉದಾಹರಣೆಗಳ ಮೂಲಕ ವಿವಿರಿಸಿದ ಅವರು ಮನುಷ್ಯ ಪುಸಲಾವಣೆಯ ( (Human induced) ಹೆಚ್ಚುವರಿ ಕಾರ್ಬನ್ ವಾತಾವರಣದಲ್ಲಿ ಒಂದೇಸಮನೆ ದಟ್ಟೆಸಿ ಸೂರ್ಯನ ಶಾಖ ಮರಳಿ ಆಕಾಶ( Space )ಕ್ಕೆ ತಪ್ಪಿಸಿಕೊಂಡು ಹೋಗದಂತೆ ತಡೆಹಿಡಿದು ಹವಾಮಾನದ ಓರಣವನ್ನು ಹಾಳುಗೆಡವಿದ್ದೇ ಕಾರಣ ಎಂದು ವಿಶ್ಲೇಷಿಸಿದ ಅವರು. ಬಿಸಿಯಲೆಗಳು ತರುವ ಆರೋಗ್ಯದ ತೊಡಕುಗಳ ಬಗ್ಗೆ ನಮಗೆ ತಿಳಿವು ಇರಬೇಕಾದ್ದು ಅಗತ್ಯ. ಬರೀ ಸೆಕೆ ಎಂದು ಗೊಣಗಿಕೊಂಡು ಅವನ್ನು ಕಡೆಗಣಿಸುವಂತಿಲ್ಲ. ಬಿಸಿಯಲೆಗಳ ಹೊಡೆತಕ್ಕೆ ಸಿಲುಕಿದವರಲ್ಲಿ ರಕ್ತದೊತ್ತಡ ಏರುತ್ತದೆ. ಹೃದಯಾಘಾತದ ಸಾಧ್ಯತೆ ಹೆಚ್ಚುತ್ತದೆ. ‘ಬಿಸಿ ಹೊಡೆತ’( Heat stroke, Hyperthermia )ವನ್ನು ನಾವು ಎದುರಿಸುತ್ತೇವೆ. ಈಗಾಗಲೆ ಬೇರೆ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿರುವವರಲ್ಲಿ ಔಷಧಗಳು ಬಯಸಿದ ಕೆಲಸಮಾಡದೆ ಹೋಗಬಹುದು.

ಇದನ್ನು ಓದಿ :-ಪಹಲ್‍ಗಾಂಮ್ ಹತ್ಯಾಕಾಂಡಕ್ಕೆ ಸಿಪಿಐ(ಎಂ) ಬಲವಾದ ಖಂಡನೆ

ನಮ್ಮ ದೇಹದ ತಾಪ ಹೊರಗಿನ ತಾಪದೇರಿಕೆಗೆ ಹೊಂದಿಕೆಯಾಗದೆ ಒಂದು ಹಂತದಲ್ಲಿ ನಮಗೆ ಷಾಕ್ ಆಗಬಹುದು. ಮುಖ್ಯ ಅಂಗಗಳು ಕೈಕೊಟ್ಟು ಕೋಮಾಕ್ಕೆ ಜಾರಬಹುದು. ದೇಹದ ನೀರೆಲ್ಲ ಬೇಗಬೇಗ ಬೆವರಾಗಿ ಹೊರಹರಿದು ನೀರಿನ ಕೊರತೆ ತೀವ್ರ ಕಾಡಬಹುದು. ಎಂದು ಎಚ್ಚರಿಸಿ ಈ ಎರೆಡು ತಿಂಗಳಲ್ಲಿ ಬಿಸಿ ಅಲೆಯ ಹೊಡೆತ ಮಾನವ ಹಾಗೂ ಇತರೆ ಜೀವಿಗಳು ತಪ್ಪಿಸಿಕೊಳ್ಳಲು ಕೈಗೊಳ್ಳಬೇಕಾದ ಕ್ರಮಗಳನ್ನು ಸರಳವಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಇನ್ನೋರ್ವ ಸಂಪನೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಕ್ಲಿಯರಿನ್ ಸಂಸ್ಥೆಯ ನಿರ್ದೆಶಕ ಚಂದ್ರಶೇಖರ್ ಮಾತನಾಡಿ ಭವಿಷ್ಯದಲ್ಲಿ ಬಿಸಿ ಅಲೆಯ ತಾಪ ಕಡಿಮೆ ಮಾಡಲು ಸ್ಥಳೀಯವಾಗಿ ಕೈಗೊಳ್ಳುವ ಕ್ರಮದ ಬಗ್ಗೆ ತಿಳಿಸಿ ನಗರಗಳೀಗ ಬಿಸಿನಡುಗಡ್ಡೆಯಾಗತ್ತಿವೆ ಮನೆಗಳಲ್ಲೇ ಘನತ್ಯಾಜ್ಯ ನಿರ್ವಹಣೆ ಮಾಡಿ ಅಂಗಳ ಕೃಷಿ ಮಾಡುವ ಅಭ್ಯಾಸ ರೂಢಿಗತ ಮಾಡಿಕೊಳ್ಳಬೇಕು, ಮನೆ ಮುಂದೆ ಕನಿಷ್ಠ ಎರೆಡಾದರೂ ಗಿಡನೆಟ್ಟುಳಿಸಬೇಕು, ತಾರಸಿ ಮನೆ ಬಿಸಿಯಾಗದಂತೆ ಶೇಡ್ ನಿರ್ಮಿಸಿಕೊಳ್ಳಬೇಕು, ನಗರದೊಳಗೆ ನೀರು ಶೇಖರಿಸುವ ಕೆರೆ ಅಥವ ಹೊಂಡದ ವ್ಯವಸ್ಥೆ ಕಡ್ಡಾಯ ಮಾಡಿಕೊಳ್ಳಲೇ ಬೇಕು ಎಂದು ಬಹಳ ಪರಿಣಾಮಕಾರಿಯಾಗಿ ತಿಳಿಸಿ ಭೂಮ್ತಾಯಿಯ ಕೋಪ ಆರಿಸಲು ನಾವು ಊರನ್ನು ಸ್ವಚ್ಛವಾಗಿಡುವಲ್ಲಿ ಹಾಗೂ ಕೆರೆ-ಕಟ್ಟೆ ರಕ್ಷಿಸಲು ತೊಡಗಿಸಿಕೊಳ್ಳಲೇ ಬೇಕು ಎಂದು ತಿಳಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ವಿಶ್ವಪಥ ಚಾನೆಲ್‌ನ ಪ್ರಧಾನ ಸಂಪಾದಕ ಆರ್.ಪಿ.ವೆಂಕಟೇಶಮೂರ್ತಿ ಮಾತನಾಡಿ ಭೂತಾಪಮಾನವನ್ನು ಕಡಿಮೆ ಮಾಡಲು ಸಾಧ್ಯವಿಲ್ಲ ಆದರೆ ಅದರ ಏರಿಕೆದರ ಹೆಚ್ಚಾಗದಂತೆ ನಿಯಂತ್ರಣ ಮಾಡಬಹುದು ಅದಕ್ಕೆ ಬೇಕಾಗಿರುವುದು ರಾಜಕೀಯ ಇಚ್ಚಾಶಕ್ತಿ ಹಾಗೂ ಜನರ ಒತ್ತಡ ಎಂದು ತಿಳಿಸಿ ದೊಡ್ಡ ಪ್ರಮಾಣದಲ್ಲಿ ಜನಾಂದೋಲನ ಮಾಡಲೇ ಬೇಕಿದೆ ಎಮದ ಅವರು 2017ರ ಪ್ಯಾರಿಸ್ ಒಪ್ಪಂದ ಹಸಿರುಮನೆ ಅನಿಲಗಳನ್ನು ಕಡಿಮೆ ಮಾಡಲೇ ಬೇಕಿದೆ ಎಂದು ತಾಕೀತು ಮಾಡಿದೆ ಅದಕ್ಕೆ ನಾವು ಕೂಡ ಸಹಿ ಹಾಕಿದ್ದೇವೆ, ಅದಕ್ಕಾಗಿ ಹಸಿರು ಶಕ್ತಿಕಡೆ ಮುಖಮಾಡಲೇ ಬೇಕಾದ ಅನಿವಾರ್ಯತೆಯಿಂದ ಅಲ್ಪಸ್ವಲ್ಪ ಪ್ರಯತ್ನಗಳಾಗುತ್ತಿವೆ ನಿಜ ಆದರೆ ಇತ್ತೀಚೆಗೆ ನಮ್ಮಪ್ರಧಾನಿಗಳು 100ದಶಲಕ್ಷ ಟನ್ ಕಲ್ಲಿದ್ದಲು ಉತ್ಪತ್ತಿ ಮಾಡಿದ್ದೇವೆ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ, ಈ ಕಡೆ ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಮ್ಮ ಉದ್ಯೋಗ ಹಾಗೂ ಆರ್ಥಿಕತೆ ಕಲ್ಲಿದ್ದಲ ಉತ್ಪಾದನೆಯಿಂದಲೇ ಆಗುತ್ತಿರುವುದು ಹಾಗಾಗಿ ನಾವು ಅದರ ಬಳಕೆ ಹಾಗೂ ಉತ್ಪತ್ತಿಯನ್ನು ಕಡಿಮೆ ಮಾಡುವುದಿಲ್ಲ ಎಂದು ಹೇಳಿ ಪ್ಯಾರಿಸ್ ಒಪ್ಪಂದಕ್ಕೆ ಸಹಿಹಾಕಿಲ್ಲ, ಇವರ ಮಾತನ್ನೇ ನಮ್ಮ ಪ್ರಧಾನಿಗಳು ಸಮರ್ಥೀಸುತ್ತಿರುವುದು ವಿಷಾಧನೀಯ ಎಂದರು.

ಕಾರ್ಯಕ್ರಮದ ಪ್ರಸ್ತಾವನೆ ಮಾಡಿದ ಬಿಜಿವಿಎಸ್-ಶಿಕ್ಷಣ ಉಪಸಮಿತಿ ಸಂಚಾಲಕಿ ಕೆ.ವಿ.ಕವಿತಾ ಮಾತನಾಡಿ ಏಪ್ರಿಲ್-ಮೆ ತಿಂಗಳಲ್ಲಿ ಬಿಸಿ ಅಲೆಗ¼ ಪ್ರಮಾಣ ಏರಿಕೆಯಾಗಿ ಅತಿಸೆಖೆ ಭೂಮಿಯನ್ನು ಆವರಿಸುತ್ತಿದೆ, ಹಾಸನದ ತಾಪಮಾನ 40ದಾಟಬಹುದು ಎಂದು ಕೂಡ ಹೇಳಿದ್ದಾರೆ ಇಂತಹ ಸಂದರ್ಬದಲ್ಲಿ ಜಿಲ್ಲಾವಾಸಿಗಳ ಆರೋಗ್ಯದಲ್ಲಿ ಏರುಪೇರು ಆಗುವ ಸಂಭವ ಹೆಚ್ಚಿರುವುದರಿಂದ ಜನರಿಗೆ ಹವಾಮಾನದ ಕುರಿತು ಪ್ರಾಥಮಿಕ ತಿಳುವಳಿಕೆ ನೀಡಿ ಅತಿಸೆಖೆಯಿಂದ ತಪ್ಪಿಸಿಕೊಳ್ಳಲು ಏನು ಮಾಡಬೇಕು ಏನು ಮಾಡಬಾರದು ಎನ್ನುವ ಬೀದಿ ಸಂವಾದ ನಡಿಸಿ ಜನಜಾಗೃತಿ ಮೂಡಿಸಲು ಬಿಜಿವಿಎಸ್ ಈ ಆಂದೋಲನ ಹಮ್ಮಿಕೊಳ್ಳಲು ಯೋಜನೆ ರೂಪಿಸಿ ಅಗತ್ಯ ಸಂವಾದ ಪರಿಕರಗಳನ್ನು ಸಿದ್ಧಪಡಿಸಿ ತರಬೇತಿ ನೀಡಿ ಸಂಪನ್ಮೂಲ ವ್ಯಕ್ತಿಗಳನ್ನು ರೂಪಿಸಿದೆ.

ಆದರೆ ಈ ಆಂದೋಲನ ಬಿಜಿವಿಎಸ್ ಒಂದೇ ನಡೆಸಲು ಸಾಧ್ಯವಿಲ್ಲ ಸರಕಾರಿ ಸಂಸ್ಥೆಗಳು ಹಾಗೂ ಇತರೆ ಸ್ಥಳೀಯ ಸ್ವಯಂ ಸೇವಾ ಸಂಸ್ಥೆಗಳು ಜೊತೆಗೂಡಬೇಕು ಈ ಹಿನ್ನಲೆಯಲ್ಲಿ ಇಂದು ಹಾಸನ ಜಿಲ್ಲೆಯ 20ಕ್ಕೂ ಅಧಿಕ ಸ್ವಯಂಸೇವಾ ಸಂಸ್ಥೆಗಳು ಇಂದು ಜೊತೆಗೂಡಿರುವುದು ಸಂತಸ ಎಂದರು.

ಇದನ್ನು ಓದಿ :-3 ತಿಂಗಳಲ್ಲಿ ಜಿಲ್ಲಾ – ತಾಲೂಕು ಪಂಚಾಯಿತಿ ಚುನಾವಣೆ: ಡಾ. ಶರಣ್ ಪ್ರಕಾಶ್ ಪಾಟೀಲ್

ಇದೇ ಸಂದರ್ಭದಲ್ಲಿ ಹವಾಮಾನ ವೈಪರೀತ್ಯ, ಬಿಸಿ ಅಲೆ, ಎಚ್ಚರಿಕೆ ಕುರಿತ ಶೈಕ್ಷಣಿಕ ಪೋಸ್ಟರ್ ಹಾಗೂ ಎಜುಟೈನ್ಮೆಂಟ್ ವಿಡಿಯೋ ಬಿಡುಗಡೆ ಮಾಡಲಾಯಿತು. ಹಿರಿಯ ಕಲಾವಿದ ಭೂಗೋಳ ರಕ್ಷಿಸುವ ಗೀತೆ ಬರೆದು ಹಾಡಿದರು, ವಿದ್ಯಾರ್ಥಿನಿ ಅನಿಶಾ ಮೈಕಲ್ ಜಾಕ್ಸನ್ ಭೂಮಿ ರಕ್ಷಿಸುವ ಕುರಿತು 80-90ರ ದಶಕದಲ್ಲೇ ರಚಿಸಿ ಹಾಡಿದ್ದ ಹಾಡನ್ನು ಸೊಗಸಾಗಿ ಹಾಡಿದರು.

ಕಾರ್ಯಕ್ರದಲ್ಲಿ ಹಸಿರುಭೂಮಿ ಪ್ರತಿಷ್ಠಾನ, ರೆಡ್‌ಕ್ರಾಸ್, ಸ್ಕೌಟ್ ಅಂಡ್ ಗೈಡ್ಸ್, ಕೆ.ಪಿ.ಆರ್.ಎಸ್, ಸಿ.ಐ.ಟಿ.ಯು, ರೋಟರಿ-ಲಯನ್ಸ್, ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ, ಎಸ್.ಎಫ್.ಐ-ಡಿ.ವೈ.ಎಫ್.ಐ, ಚಿತ್ಕಲಾ ಫಂಡೇಶನ್ನಿನ ಪ್ರತಿನಿಧಿಗಳು ಹಾಗೂ ಬಿಜಿವಿಎಸ್ ಜಿಲ್ಲಾ ಹಾಗೂ ತಾಲ್ಲೂಕಿನ ಸದಸ್ಯರು ಭಾಗವಹಿಸಿ ಸಂವಾದ ನಡೆಸಿ ಕ್ರಿಯಾ ಯೋಜನೆ ರೂಪಿಸಿದರು.

ಕಾರ್ಯಕ್ರದ ನಿರೂಪಣೆಯನ್ನು ಬಿಜಿವಿಎಸ್ ಜಿಲ್ಲಾ ಖಜಾಂಚಿ ರವೀಶ್ ಮಾಡಿದರು, ಜಿಲ್ಲಾ ಕಾರ್ಯದರ್ಶಿ ಚಿನ್ನೇನಹಳ್ಳಿಸ್ವಾಮಿ ಮೊದಲಿಗೆ ಸ್ವಾಗತಿಸಿ ಕಡೆಯಲ್ಲಿ ಬಿಜಿವಿಎಸ್ ಸದಸ್ಯ ಅಹಮದ್ ಹಗರೆ ವಂದಿಸಿದರು.

Donate Janashakthi Media

Leave a Reply

Your email address will not be published. Required fields are marked *