2020ರಲ್ಲಿ ಆತ್ಮಹತ್ಯೆ ಮಾಡಿಕೊಂಡವರಲ್ಲಿ ದಿನಕೂಲಿ ಕಾರ್ಮಿಕರ ಆತ್ಮಹತ್ಯೆ ಪ್ರಮಾಣ ಶೇ 24.6

ನವದೆಹಲಿ: 2020ರಲ್ಲಿ ಆತ್ಮಹತ್ಯೆಯಿಂದ ಮರಣ ಹೊಂದಿರುವವರ ಪೈಕಿ ದಿನಕೂಲಿ ಕಾರ್ಮಿಕ ಆತ್ಮಹತ್ಯೆ ಪ್ರಮಾಣವು ಶೇಕಡಾ 24.6ಕ್ಕೆ ಏರಿದೆ. ಇದು 7 ವರ್ಷಗಳ ಹಿಂದೆ ಹೋಲಿಸಿದರೆ ಎರಡು ಪಟ್ಟು ಹೆಚ್ಚಾಗಿದೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ(ಎನ್‌ಸಿಆರ್‌ಬಿ)ದ ಅಂಕಿ ಅಂಶಗಳು ಹೇಳಿವೆ.

2020 ರಲ್ಲಿ ದೇಶದಲ್ಲಿ ನಡೆದ ಒಟ್ಟು 1,53,053 ಆತ್ಮಹತ್ಯೆಗಳಲ್ಲಿ ಗರಿಷ್ಠ 37,666 ಅಥವಾ ಶೇಕಡಾ 24.6 ದಿನಕೂಲಿ ಕಾರ್ಮಿಕರದ್ದು ಎಂದು ಅಂಕಿಅಂಶಗಳು ತೋರಿಸುತ್ತದೆ. ಇತ್ತೀಚಿನ ವರ್ಷಗಳಲ್ಲಿ ಆತ್ಮಹತ್ಯೆ ಮಾಡಿಕೊಳ್ಳವವರ ಪೈಕಿ ದಿನಕೂಲಿ ಕಾರ್ಮಿಕರ ಪಾಲು ತೀವ್ರವಾಗಿ ಏರಿಕೆಯಾಗುತ್ತಿದೆ.

2014 ರಲ್ಲಿ, ಒಟ್ಟು ಆತ್ಮಹತ್ಯೆ ಮಾಡಿದವರಲ್ಲಿ ದಿನಕೂಲಿ ಕಾರ್ಮಿಕ ಪಾಲು ಶೇಕಡಾ 12 ರಷ್ಟಿತ್ತು, ಇದು 2015 ರಲ್ಲಿ 17.8 ಶೇಕಡಾ, 2016 ರಲ್ಲಿ 19.2 ಶೇಕಡಾ, 2017 ರಲ್ಲಿ 22.1 ಶೇಕಡಾ, 2018 ರಲ್ಲಿ 22.4 ಶೇಕಡಾ ಮತ್ತು 2019 ರಲ್ಲಿ 23.4 ಶೇಕಡಾಕ್ಕೆ ಏರಿತು.

ಎನ್‌ಸಿಆರ್‌ಬಿಯ ಅಪಘಾತದ ಸಾವುಗಳು ಮತ್ತು ಆತ್ಮಹತ್ಯೆಗಳು 2020 ವರದಿ ಪ್ರಕಾರ ತಮಿಳುನಾಡಿನಲ್ಲಿ 6,495 ದಿನಕೂಲಿ ಕಾರ್ಮಿಕರು ಆತ್ಮಹತ್ಯೆಗೆ ಈಡಾಗಿದ್ದಾರೆ. ಅದೇ ವೇಳೆ ಮಧ್ಯಪ್ರದೇಶ (4,945), ಮಹಾರಾಷ್ಟ್ರ (4,176), ತೆಲಂಗಾಣ (3,831) ಮತ್ತು ಗುಜರಾತಿನಲ್ಲಿ 2,754 ದಿನಕೂಲಿ ಕಾರ್ಮಿಕರು ಆತ್ಮಹತ್ಯೆ ಮಾಡಿದ್ದಾರೆ.

ಎನ್‌ಸಿಆರ್‌ಬಿ ವತಿಯಿಂದ ‘ಆಕಸ್ಮಿಕ ಸಾವುಗಳು ಮತ್ತು ಆತ್ಮಹತ್ಯೆ’ ಡೇಟಾದಲ್ಲಿ ದಿನಕೂಲಿ ಕಾರ್ಮಿಕರನ್ನು ವರ್ಗೀಕರಿಸಲು 2014ರಲ್ಲಿ ಪ್ರಾರಂಭಿಸಲಾಗಿತ್ತು.

ಎನ್‌ಸಿಆರ್‌ಬಿ ವರದಿಯು ಆತ್ಮಹತ್ಯೆಗಳನ್ನು ಒಂಬತ್ತು ವರ್ಗಗಳಾಗಿ ವಿಂಗಡಿಸುತ್ತದೆ. ದಿನಕೂಲಿ ಕಾರ್ಮಿಕರು , ಗೃಹಿಣಿಯರು ಮತ್ತು ಕೃಷಿ ವಲಯದಲ್ಲಿ ತೊಡಗಿರುವ ವ್ಯಕ್ತಿಗಳನ್ನು ಹೊರತುಪಡಿಸಿ, ಸಾವುಗಳನ್ನು ವೃತ್ತಿಪರರು/ವೇತನದಾರರು, ವಿದ್ಯಾರ್ಥಿಗಳು, ಸ್ವಯಂ ಉದ್ಯೋಗಿಗಳು, ನಿವೃತ್ತ ವ್ಯಕ್ತಿಗಳು ಮತ್ತು ಇತರ ವ್ಯಕ್ತಿಗಳ ಅಡಿಯಲ್ಲಿ ಪಟ್ಟಿ ಮಾಡಲಾಗಿದೆ.

ಎಲ್ಲಾ ಗುಂಪುಗಳಲ್ಲಿ, ದಿನಕೂಲಿ 2020ರಲ್ಲಿ ಒಟ್ಟು ಆತ್ಮಹತ್ಯೆ ಮಾಡಿದವರ ಪೈಕಿ ವೃತ್ತಿ-ವಾರು ದೊಡ್ಡ ಗುಂಪನ್ನು ಹೊಂದಿದ್ದಾರೆ. ಅವರನ್ನು ‘ಗೃಹ ಪತ್ನಿ’ (14.6%), ಸ್ವಯಂ ಉದ್ಯೋಗಿಗಳು (11.3%), ನಿರುದ್ಯೋಗಿಗಳು (10.2) ವೇತನದಾರರು (9.7%), ವಿದ್ಯಾರ್ಥಿಗಳು (8%), ರೈತರು/ಕೃಷಿಕರು (7%) ಮತ್ತು ನಿವೃತ್ತ ವ್ಯಕ್ತಿಗಳು (1%). ಅದೇ ರೀತಿಯಲ್ಲಿ ಶೇಕಡಾ 13.4 ರಷ್ಟು ಆತ್ಮಹತ್ಯೆಗಳನ್ನು ‘ಇತರ ವ್ಯಕ್ತಿಗಳು’ ಎಂದು ವರ್ಗೀಕರಿಸಲಾಗಿದೆ.

ಆತ್ಮಹತ್ಯೆಗಳಲ್ಲಿ ನಿರುದ್ಯೋಗಿಗಳ ಪ್ರಮಾಣವು 2019 ರಲ್ಲಿ ಶೇಕಡಾ 10.1 ರಿಂದ ಶೇಕಡಾ 10.2 ಕ್ಕೆ ಸ್ವಲ್ಪ ಏರಿದೆ, ಇದು ಸತತ ಎರಡನೇ ವರ್ಷಕ್ಕೆ ಎರಡಂಕಿಯಲ್ಲಿ ಮುಂದುವರೆದಿದೆ. ಈ ಡೇಟಾವು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಗಳ ವೃತ್ತಿಯನ್ನು ಮಾತ್ರ ಚಿತ್ರಿಸುತ್ತದೆ ಮತ್ತು ಆತ್ಮಹತ್ಯೆಯ ಕಾರಣದ ಬಗ್ಗೆ ಯಾವುದೇ ಸಂಬಂಧವನ್ನು ಹೊಂದಿಲ್ಲ, ”ಎಂದು ವರದಿ ಉಲ್ಲೇಖಿಸುತ್ತದೆ.

Donate Janashakthi Media

Leave a Reply

Your email address will not be published. Required fields are marked *