ಮನಸ್ಸಿನ ಬಂಧನವನ್ನು ಕಳಚಿಕೊಳ್ಳಬೇಕಾಗಿದೆ

-ವೇಣುಗೋಪಾಲ್ ಟಿ ಎಸ್

ಇಂದು ಬಂಡವಾಳ ಅನ್ನೋದು ಎಲ್ಲಾ ಕ್ಷೇತ್ರಗಳನ್ನೂ ವ್ಯಾಪಿಸಿಕೊಂಡಿದೆ. ಕಾರ್ಖಾನೆಗಳು, ವಿಶ್ವವಿದ್ಯಾನಿಲಯಗಳು, ಮಾಧ್ಯಮಗಳು, ಆಸ್ಪತ್ರೆಗಳು ಎಲ್ಲವನ್ನೂ ನಿಯಂತ್ರಿಸುತ್ತಿದೆ. ಆದರೆ ಎಡಪಂಥೀಯ ಅರ್ಥಶಾಸ್ತ್ರಜ್ಞ ಯಾನಿಸ್ ವರೌಫಕಿಸ್ ಬಂಡವಾಳಶಾಹಿ ವ್ಯವಸ್ಥೆ ಸತ್ತಿದೆ ಅಂತ ಹೇಳುತ್ತಿದ್ದಾರೆ. ಇವರು ಕೆಲ ಕಾಲ ಗ್ರೀಸಿನ ವಿತ್ತ ಮಂತ್ರಿಗಳೂ ಆಗಿದ್ದರು. ಅದನ್ನೇ ಅವರು ತಮ್ಮ ಟೆಕ್ನೊ ಫ್ಯೂಡಲಿಸಂ ಪುಸ್ತಕದಲ್ಲಿ ಪ್ರಬಲವಾಗಿ ಪ್ರತಿಪಾದಿಸುತ್ತಿದ್ದಾರೆ. ಬಂಧನ

ಅಷ್ಟೇ ಅಲ್ಲ ಬಂಡವಾಳಶಾಹಿ ವ್ಯವಸ್ಥೆಯ ಮುಖ್ಯ ವಾಹಕವಾದ ಬಂಡವಾಳವೇ ಅದನ್ನುಕೊಂದಿದೆಅನ್ನುತ್ತಾರೆ. ಈಗ ಹೊಸ ಬಗೆಯ ಬಂಡವಾಳ ಕ್ಲೌಡ್‌ ಕ್ಯಾಪಿಟಲ್- ಮೇಘ ಬಂಡವಾಳ ಸೃಷ್ಟಿಯಾಗಿದೆ. ಅದು ಮೋಡದಲ್ಲಿಲ್ಲ. ಇಲ್ಲಿಇದೇ ಭೂಮಿಯ ಮೇಲೆ ಯಂತ್ರಗಳು, ಸರ್ವರ್‌ಗಳು, ಸಾಫ್ಟವೇರ್‌ಗಳು, ಅಲ್ಗರದಂಗಳು ಹೀಗೆ ಹಲವು ರೂಪಗಳಲ್ಲಿ ಕೃತಕ ಬುದ್ಧಿ ಮತ್ತೆ ನಮ್ಮನ್ನು ಆವರಿಸಿಕೊಳ್ಳುತ್ತಿದೆ. ಬಂಧನ

ಇವು ಕೈಗಾರಿಕಾ ಕ್ರಾಂತಿಯಲ್ಲಿ ಸೃಷ್ಟಿಯಾದ ಉಗಿ ಇಂಜಿನ್, ಮುಂತಾದ ಇತರ ಯಂತ್ರಗಳಂತಲ್ಲ. ಇವು ಇನ್ನೇನನ್ನೋ ತಯಾರಿಸುವುದಿಲ್ಲ. ಇವು ಮನುಷ್ಯನ ನಡತೆಯನ್ನು ಪ್ರಭಾವಿಸುತ್ತವೆ, ಮಾರ್ಪಡಿಸುತ್ತವೆ. ಅಮೆಜಾನ್‌ ಕಂಪೆನಿಯ ಅಲೆಕ್ಸಾ, ಆಪಲ್‌ ಕಂಪೆನಿಯ ಸಿರಿ ಇವೆಲ್ಲಾಇದೇ ಕೆಲಸ ಮಾಡುತ್ತಿವೆ. ಇವು ತುಂಬಾ ಅಪಾಯಕಾರಿ. ನಮ್ಮನ್ನು ತಿದ್ದುತ್ತಿವೆೆ. ನಮ್ಮನ್ನು ತರಬೇತು ಮಾಡುತ್ತಿದೆ. ನಮಗೆ ತರಬೇತಿ ನೀಡುವುದಕ್ಕಾಗಿ ನಾವು ಅದನ್ನು ತರಬೇತುಗೊಳಿಸುತ್ತೇವೆ. ಅದನ್ನು ತರಬೇತುಗೊಳಿಸುವ, ಅದರಿಂದ ತರಬೇತುಗೊಳ್ಳುವ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಾ ಹೋಗುತ್ತಿದೆ. ಬಂಧನ

ಇದನ್ನೂ ಓದಿ:  ಉತ್ತರ ಪ್ರದೇಶ| ಹಿಂಸಾಚಾರದಲ್ಲಿ ಮೃತಪಟ್ಟವರ ಸಂಖ್ಯೆ ನಾಲ್ಕಕ್ಕೆ ಏರಿಕೆ; ಇಂಟರ್ನೆಟ್ ಸ್ಥಗಿತ

ಅದು ನಮ್ಮಅಭಿರುಚಿಯನ್ನು ಪ್ರಭಾವಿಸುತ್ತದೆ. ನಮ್ಮಆದ್ಯತೆಯನ್ನು ರೂಪಿಸುತ್ತದೆ. ಅವುಗಳನ್ನು ಕೊಳ್ಳಲು ನೀವು ಯಾವುದೋ ಅಂಗಡಿಗೆ ಹೋಗಬೇಕಾಗಿಲ್ಲ. ಈಗಿರುವ ಮಾರುಕಟ್ಟೆಯ ಜಾಲವನ್ನು ಮೀರಿಕೊಂಡು ಅಮೆಜಾನ್ ವೇದಿಕೆಗಳ ಮೂಲಕ ಅದು ನಮಗೆ ಬೇಕಾದ್ದನ್ನುಒದಗಿಸುತ್ತದೆ. ಅದರ ಪರವಾಗಿ ನಾವು ಪ್ರಚಾರವನ್ನು ಮಾಡುತ್ತಿದ್ದೇವೆ. ಆ ಬಗ್ಗೆ ಮಾಹಿತಿಯನ್ನು, ವಿಡಿಯೋಗಳನ್ನು ಹಂಚಿಕೊಳ್ಳುತ್ತೇವೆ. ನಾವು ಈ ಮೇಘ ಬಂಡವಾಳವನ್ನು ಬೆಳೆಸುತ್ತಿದ್ದೇವೆ. ಅದಕ್ಕಾಗಿ ಅದು ನಮಗೆ ಬಿಡುಗಾಸನ್ನೂ ನೀಡುವುದಿಲ್ಲ. ನಾವು ಅದರ ಜೀತಗಾರರಾಗಿದ್ದೇವೆ. ಬಂಧನ

ಇದು ನಮ್ಮ ಗಮನವನ್ನು ಸೆಳೆದುಕೊಳ್ಳುತ್ತಿದೆ. ನಮ್ಮಲ್ಲಿ ಆಸೆಯನ್ನು ಸೃಷ್ಟಿಸುತ್ತಿದೆ. ನಮ್ಮ ಹೊಸ ಆಸೆಗಳ ಪೂರೈಕೆಗೆ ನಾವು ಸಾಂಪ್ರದಾಯಿಕ ಮಾರುಕಟ್ಟೆಯನ್ನು ಅವಲಂಬಿಸಬೇಕಾಗಿಲ್ಲ. ಅದು ನೇರವಾಗಿ ನಮಗೆ ಮಾರಾಟ ಮಾಡುತ್ತಿದೆ. ಕಾರ್ಮಿಕರು ತಮ್ಮಷ್ಟಕ್ಕೆ ಕಾರ್ಖಾನೆಗಳಲ್ಲಿ ದುಡಿಯುತ್ತಿರುತ್ತಾರೆ. ನಾವು ಅದಕ್ಕಾಗಿ ಪ್ರಚಾರ ಮಾಡುತ್ತಾ ಅದರ ಜೀತಗಾರರಾಗಿದ್ದೇವೆ. ಕಾರ್ಮಿಕರಿಂದ ಹಿಡಿದು ನಮ್ಮ ನಿಮ್ಮವರೆಗೆ ಎಲ್ಲರ ದುಡಿಮೆಯನ್ನುಅದುತನ್ನ ಲಾಭಕ್ಕೆ ಬಳಸಿಕೊಳ್ಳುತ್ತಿದೆ.

ಅದರ ವೇದಿಕೆಯನ್ನು ಬಳಸಿಕೊಂಡಿದ್ದಕ್ಕಾಗಿ ತಯಾರಕರಿಂದ 40%ವರೆಗೆ ಬಾಡಿಗೆ ವಸೂಲಿ ಮಾಡುತ್ತಿದ್ದಾರೆ. ದೊಡ್ಡ ಉದ್ಯಮಿ ಹೆನ್ರಿ ಫೋಡ್, ಮುರ್ಡೊಕ್‌ ಇವೆಲ್ಲರಿಗಿಂತ ಈ ಅಮೆಜಾನ್‌ ಒಡೆಯ ಜೆಫ್ ಬೆಜೋಸ್ ಹೆಚ್ಚು ಪ್ರಬಲನಾಗಿದ್ದಾನೆ. ಆದರೆ ಅಮೆಜಾನ್‌ ಡಾಟ್‌ ಕಾಮ್‌ ಏಕಸ್ವಾಮ್ಯ ಉದ್ದಿಮೆಯಲ್ಲ. ಜೆಫ್‌ ಎಲ್ಲದರ ಒಡೆಯ. ಅದರೆ ಅವನು ಯಾವುದೇ ಫ್ಯಾಕ್ಟರಿಯ ಮಾಲಿಕನಲ್ಲ. ಹಾಗೆಯೇ ಅಮೆಜಾನ್ ಮಾರುಕಟ್ಟೆಯೂಅ ಲ್ಲ. ನಿಜ, ಅಲ್ಲೂ ಕೊಳ್ಳುವವರು, ಮಾರುವವರು ಇದ್ದಾರೆ. ಜೆಫ್‌ ತನ್ನ ಬಳಿ ಇರುವ ಅಲ್ಗರಿದಂ ಮೂಲಕ ಎಲ್ಲಾ ವ್ಯವಹಾರವನ್ನೂ ಮಾಡುತ್ತಾನೆ. ಅದರ ಮೂಲಕ ನೀವು ಯಾವ ಸರಕನ್ನು ಗಮನಿಸಬೇಕು, ಯಾವುದನ್ನು ಗಮನಿಸಬಾರದು ಅನ್ನುವುದನ್ನು ನಿರ್ಧರಿಸುತ್ತಾನೆ. ಬಂಧನ

ಈ ಅಲ್ಗರಿದಂಗೆ ನಿಮ್ಮ ಮನಸ್ಸು ಚೆನ್ನಾಗಿ ಅರ್ಥವಾಗಿದೆ. ಅದನ್ನು ಹೇಳಿಕೊಟ್ಟಿದ್ದೂ ನೀವೇ. ನಿಮಗೆ ಬೇಕಾದ್ದನ್ನು ಮಾರುವರೊಂದಿಗೆ ನಿಮಗೆ ಸಂಪರ್ಕಕಲ್ಪಿಸುತ್ತದೆ. ಮಾರುವವನ ಬಗ್ಗೆಯೂ ಅದಕ್ಕೆ ಪೂರ್ಣ ಮಾಹಿತಿ ಇದೆ. ಊಳಿಗಮಾನ್ಯ ವ್ಯವಸ್ಥೆಯಲ್ಲಿ ಗೇಣಿಗೆ ಜಮೀನು ಬಳಸಿಕೊಳ್ಳುತ್ತಿದ್ದಂತೆ ನಾವು ಹಾಗೂ ಸರಕು ಉತ್ಪಾದಕ ಅಮೆಜಾನ್‌ ಅಂತಹ ವೇದಿಕೆಗಳನ್ನು ಬಳಸಿಕೊಳ್ಳುತ್ತೇವೆ. ಅದಕ್ಕೆ ಬಾಡಿಗೆ ಅಥವಾ ಗೇಣಿತೆರುತ್ತೇವೆ. ಈ ವ್ಯವಹಾರದಲ್ಲಿ ಜೆಫ್40% ತನ್ನ ಜೋಬಿಗೆ ಸೇರಿಸಿಕೊಳ್ಳುತ್ತಾನೆ. ಬಂಧನ

ಬಂಡವಾಳಶಾಹಿ ವ್ಯವಸ್ಥೆಗೆ ಎರಡು ಆಧಾರಸ್ಥಂಬಗಳಿವೆ. ಒಂದು ಮಾರುಕಟ್ಟೆ, ಮತ್ತೊಂದು ಲಾಭ. ಕ್ಲೌಡ್‌ ಕ್ಯಾಪಿಟಲ್ ಬಂದ ಮೇಲೆ ಇವೆರಡೂ ಹಿಂದಕ್ಕೆ ಸರಿದಿವೆ. ಮಾರುಕಟ್ಟೆಯ ಬದಲು ಅಮೆಜಾನ್, ಆಲಿಬಾಬ ಅಂತಹ ಡಿಜಿಟಲ್ ವ್ಯಾಪಾರಿ ವೇದಿಕೆಗಳು ಸೃಷ್ಟಿಯಾಗಿವೆ. ಅವು ಮಾರುಕಟ್ಟೆಯಂತೆ ಕಾಣುತ್ತವೆ. ಆದರೆ ಮಾರುಕಟ್ಟೆಯಲ್ಲ. ಅವನ್ನು ವೇದಿಕೆಗಳು ಅಂತ ಕರೆಯಬಹುದು. ಊಳಿಗಮಾನ್ಯ ವ್ಯವಸ್ಥೆಯಲ್ಲಿ ಭೂಮಿಯ ಕೆಲಸವನ್ನುಅದು ಮಾಡುತ್ತದೆ. ಅಲ್ಲಿ ಜಮೀನುದಾರನ ಭೂಮಿಯನ್ನು ಬಳಸಿಕೊಂಡಿದ್ದಕ್ಕೆ ಗೇಣಿಯನ್ನುಕೊಡಬೇಕಿತ್ತು. ಈಗ ಕ್ಲೌಡ್‌ ಕ್ಯಾಪಿಟಲ್ ಬಳಸಿಕೊಂಡಿದ್ದಕ್ಕೆ ಬಾಡಿಗೆಯನ್ನುಕೊಡಲಾಗುತ್ತದೆ.

ಲಾಭದ ಬದಲು ಬಾಡಿಗೆ ಮೇಘೋದ್ಯಮದ ಆದಾಯದ ಮೂಲವಾಗಿದೆ. ಇವೆಲ್ಲಾ ಪ್ರಾರಂಭವಾಗಿದ್ದು1990ರಲ್ಲಿ ಬಂದ ಇಂಟರ್‌ನೆಟ್‌ ಬಂದಾಗಿನಿಂದ. ನಂತರ ಇಂಟರ್‌ನೆಟ್‌ ಅನ್ನು ದೊಡ್ಡ ಉದ್ದಿಮೆದಾರರು ಖಾಸಗೀಕರಣಗೊಳಿಸಿದರು. ಇದಕ್ಕೆ ತುಂಬಾ ಹಣ ಬೇಕಿತ್ತು. ಆಶ್ಚರ್ಯವೆಂದರೆ ಆ ಬಂಡವಾಳವನ್ನು ಒದಗಿಸಿದ್ದು ಜಿ7 ದೇಶಗಳ ಕೇಂದ್ರ ಬ್ಯಾಂಕುಗಳು. 2008ರಲ್ಲಿ ಜಗತ್ತಿನ ಹಣಕಾಸು ವ್ಯವಸ್ಥೆ ಬಿಕ್ಕಟ್ಟಿನಲ್ಲಿತ್ತು. ಆಗ ಈ ಕೇಂದ್ರ ಬ್ಯಾಂಕುಗಳು ತಮ್ಮ ದೇಶಗಳ ಸಂಕಷ್ಟದಲ್ಲಿದ್ದ ಬ್ಯಾಂಕುಗಳನ್ನು ಉಳಿಸುವುದಕ್ಕಾಗಿ 35 ಟ್ರಿಲಿಯನ್‌ ಡಾಲರ್ ಮೌಲ್ಯದ ಹಣವನ್ನು ಮುದ್ರಿಸಿದವು. ಬಂಧನ

ಸರ್ಕಾರದ ಖರ್ಚನ್ನು ಉಳಿಸುವುದಕ್ಕೆ ಜನರಿಗೆ ನೀಡುತ್ತಿದ್ದ ಸೇವೆಗಳನ್ನು ಕಡಿತಗೊಳಿಸಿದವು. ಮುದ್ರಿಸಿದ ಹಣವನ್ನು ಶೇರುಗಳು, ಬಾಂಡುಗಳ ಇತ್ಯಾದಿ ಸ್ವತ್ತುಗಳಲ್ಲಿ ಹೂಡಲಾಯಿತು. ಕೇವಲ ದೊಡ್ಡ ತಂತ್ರಜ್ಞಾನದ ಉದ್ದಿಮೆಗಳ ಒಡೆಯರು ಮಾತ್ರತಮ್ಮ ಉದ್ದಿಮೆಗಳಲ್ಲಿ ಬಂಡವಾಳವನ್ನು ತೊಡಗಿಸಿದರು. ಉದಾಹರಣೆಗೆ ಫೇಸ್‌ಬುಕ್ಕಿನಲ್ಲಿ ತೊಡಗಿಸಿದ ಮುಕ್ಕಾಲು ಹಣ ಇಂತಹ ಕೇಂದ್ರಬ್ಯಾಂಕಿನ ಹಣದಿಂದ ಬಂತು. ಈ ಮೇಘೋದ್ಯಮದ ಒಡೆಯರು ಹೊಸ ಆಳುವ ವರ್ಗವಾದರು. ಬಂಧನ

ಈಗ ನಿಜವಾಗಿ ಅಧಿಕಾರವಿರುವುದು ಈ ಮೇಘೋದ್ಯಮದ ಮಾಲಿಕರ ಕೈಯ್ಯಲ್ಲಿ. ಹಳೆಯ ಕಾರ್ಖಾನೆಯ ಮಾಲಿಕರ ಬಳಿಯಲ್ಲ. ಅವರು ಕಾರ್ಮಿಕರ ದುಡಿಮೆಯಿಂದ ದುಡ್ಡು ಮಾಡಿಕೊಳ್ಳುತ್ತಿದ್ದಾರೆ. ಆದರೆ ಅಧಿಕಾರ ಇರುವುದು ಮೇಘೋದ್ಯಮಿಗಳ ಬಳಿ. ನಾವೆಲ್ಲಅದರ ಜೀತದಾಳುಗಳು. ಯಾನಿ ಹೇಳುವಂತೆ ನಾವು ಸಮಾಜವಾದಿಗಳು, ನಾವು ಹುಟ್ಟಿರುವುದೇ ಬಂಡವಾಳಶಾಹಿ ವ್ಯವಸ್ಥೆಯನ್ನುಕಿತ್ತೆಸೆಯುವುದಕ್ಕೆ ಅಂತ ಭಾವಿಸಿದ್ದೇವೆ. ಆದರೆ ಬಂಡವಾಳಶಾಹಿ ವ್ಯವಸ್ಥೆ ಸತ್ತಿದೆ. ಇವರ ಕೆಲಸವನ್ನು ಬಂಡವಾಳ ಮಾಡಿದೆ. ಈಗಿರುವುದು ಅವರು ಹೇಳುವಂತಹ ಬಂಡವಾಳಶಾಹಿ ವ್ಯವಸ್ಥೆಯಲ್ಲ.ಇದು ಹೊಸ ಕ್ಲೌಡ್ ಬಂಡವಾಳಶಾಹಿ ವ್ಯವಸ್ಥೆ.

ಬೆಜೊಸ್‌ ಇವರೆಲ್ಲ ಫೋರ್ಡ್ ತರಹದ ಬಂಡವಾಳಿಗರಲ್ಲ. ಅವರಿಗೆ ಏನನ್ನು ಉತ್ಪಾದಿಸುವುದರಲ್ಲಿಯೂ ಆಸಕ್ತಿಯಿಲ್ಲ. ಹಾಗಾಗಿ ಅವರ ಆದಾಯದ ಮೂಲ ಲಾಭವಲ್ಲ. ತಾನು ಸೃಷ್ಟಿಸಿದ ಅಮೆಜಾನ್, ಗೂಗಲ್‌ ಅಂತಹ ಹೊಸ ವೇದಿಕೆಗೆ ಹಿಂದೆ ಜಮೀನುದಾರರು ತಮ್ಮ ಭೂಮಿಗೆ ಗೇಣಿಗೆ ನೀಡಿಗೇಣಿ ವಸೂಲು ಮಾಡುತ್ತಿದ್ದಂತೆಯೇ ಇವರು ಬಾಡಿಗೆಯನ್ನು ವಸೂಲಿ ಮಾಡುತ್ತಿದ್ದಾರೆ. ಅದಕ್ಕೆಯಾನಿ ಇದನ್ನು ಟೆಕ್ನೊ ಫ್ಯೂಡಲಿಸಂ ಅಂತಕರೆಯುತ್ತಾರೆ.

ಫ್ಯಾಕ್ಟರಿಗಳಲ್ಲಿ ದುಡಿಯುತ್ತಿರುವ ಕಾರ್ಮಿಕರು ಹಾಗೂ ಅದರ ಸೇವೆಯನ್ನು ಬಳಸಿಕೊಳ್ಳುತ್ತಿರುವ ಮತ್ತು ಅದಕ್ಕಾಗಿ ಪುಕ್ಕಟೆ ದುಡಿಯುತ್ತಿರುವ ನಮ್ಮ ನಿಮ್ಮಂತಹವರನ್ನು ಬಳಸಿಕೊಂಡು ಅದು ಬೆಳೆಯುತ್ತಿದೆ. ಅಲ್ಗರಿದಂಗಳು ನಮ್ಮ ಮನಸ್ಸನ್ನು, ಆಸಕ್ತಿಯನ್ನು, ಅಭಿರುಚಿಯನ್ನು, ಚಿಂತನೆಯನ್ನು ಪ್ರಭಾವಿಸುತ್ತಿದೆ.

ನಿಜ, ಕಾರ್ಮಿಕರನ್ನು ಸಂಘಟಿಸುವುದು ಇಂದಿಗೂ ಅವಶ್ಯಕ. ಆದರೆ ಅದಕ್ಕೆ ಪ್ರತಿಯಾಗಿ ಮಾಧ್ಯಮಗಳ ಮೂಲಕ, ಅಮೆಜಾನ್ ಹಾಗೂ ಗೂಗಲ್‌ ಅಂತಹ ವೇದಿಕೆಗಳ ಮೂಲಕ ನಮ್ಮ ಮನಸ್ಸನ್ನು ತಿದ್ದುತ್ತಿರುವ ಕ್ಲೌಡ್‌ ಕ್ಯಾಪಿಟಲ್ ವಿರುದ್ಧ ಜನರನ್ನು ಸಂಘಟಿಸಬೇಕಾಗಿದೆ. ಒಂದೆಡೆ ನಮ್ಮೆಲ್ಲರ ಮನಸ್ಸನ್ನುತನ್ನ ಹಿತಾಸಕ್ತಿಗೆ ತಕ್ಕಂತೆ ರೂಪಿಸುವ, ಬಳಸಿಕೊಳ್ಳುವ ಕೆಲಸವನ್ನು ಅವು ಮಾಡುತ್ತಿವೆ. ಅದರಿಂದ ಬಿಡುಗಡೆಗೊಳ್ಳುವ ಕೆಲಸವನ್ನು ನಾವು ಮಾಡಬೇಕಾಗಿದೆ.

ಈಗ ನಮ್ಮ ಬುದ್ಧಿ ನಮ್ಮ ನಿಯಂತ್ರಣದಲ್ಲಿಇರಬೇಕಾದರೆ, ನಾವು ಮೇಘ ಬಂಡವಾಳಕ್ಕೆ ಸಾಮೂಹಿಕ ಒಡೆಯರಾಗಬೇಕು. ಆಗಷ್ಟೇ ಮನುಷ್ಯರ ಮನಸ್ಸನ್ನು ನಿಯಂತ್ರಿಸುತ್ತಿರುವ ವ್ಯವಸ್ಥೆಯಿಂದ ಬಿಡುಗಡೆ ಸಾಧ್ಯ. ಮನುಷ್ಯರಲ್ಲಿ ಕೂಡಿ ಬಾಳುವ ಮನಸ್ಥಿತಿ ಮೂಡುವುದಕ್ಕೆ ಸಾಧ್ಯ. ಕಾರ್ಮಿಕರೇ, ಮೇಘೋದ್ಯಮದ ಜೀತಗಾರರೇ ಒಂದಾಗೋಣ. ನಮ್ಮ ಮನಸ್ಸನ್ನು ಬಂಧಿಸಿರುವ ಸರಪಳಿಯನ್ನು ಬಿಟ್ಟು ನಮಗೆ ಕಳೆದುಕೊಳ್ಳುವುದಕ್ಕೆ ಏನೂ ಇಲ್ಲ.

ಇದನ್ನೂ ನೋಡಿ: ಸುಳ್ಳು ಆರೋಪ ಮೆಟ್ಟಿ ನಿಂತು ದಿಗ್ವಿಜಯ ಸಾಧಿಸಿದ್ದೇವೆ! ಹ್ಯಾಟ್ರಿಕ್ ಗೆಲುವಿಗೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ

Donate Janashakthi Media

Leave a Reply

Your email address will not be published. Required fields are marked *