ನಾಲ್ವರು ಸೈನಿಕರಿಗೆ ಗುಂಡಿಕ್ಕಿ ಕೊಂದ ಯೋಧನ ಬಂಧನ

ಚಂಡೀಗಡ : ಪಂಜಾಬ್‌ನ ಬತಿಂಡಾ ಮಿಲಿಟರಿ ಸ್ಟೇಷನ್‌ನಲ್ಲಿ ಕದ್ದ ರೈಫಲ್‌ನಿಂದ ನಾಲ್ವರು ಸೈನಿಕರಿಗೆ ಗುಂಡಿಕ್ಕಿ ಕೊಂದ ಆರೋಪದ ಮೇಲೆ ಗುನ್ನರ್ ದೇಸಾಯಿ ಸಿಂಗ್ ಎಂಬ ಯೋಧನೊಬ್ಬನನ್ನು ಬಂಧಿಸಲಾಗಿದೆ.

ಹತ್ಯೆ ನಡೆದ ಪಂಜಾಬ್‌ನ ಮಿಲಿಟರಿ ಸ್ಟೇಷನ್‌ನಲ್ಲಿ ಇಬ್ಬರು ವ್ಯಕ್ತಿಗಳು ಗನ್ ಹಿಡಿದಿದ್ದನ್ನು ಮತ್ತು ಒಂದು ಕೊಡಲಿಯನ್ನು ಅಲ್ಲಿ ನೋಡಿದ್ದೆ ಎಂದು ಯೋಧ ಮೊದಲಿಗೆ ಸುಳ್ಳು ಹೇಳಿದ್ದ. ಬಳಿಕ, ತಾನೇ ಕೊಂದಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಬತಿಂಡಾ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಗುಲ್ನೀತ್ ಸಿಂಗ್ ಖುರಾನಾ ಹೇಳಿದ್ದಾರೆ. ಹತ್ಯೆಗೆ ಯೋಧ ಕೊಟ್ಟ ಕಾರಣದ ಬಗ್ಗೆ ಪ್ರತಿಕ್ರಿಯಿಸಿದ ಎಸ್‌ಪಿ ಖುರಾನಾ, ಆ ಕುರಿತ ಮಾಹಿತಿ ಮಾಧ್ಯಮಗಳ ಮುಂದೆ ಬಹಿರಂಗಪಡಿಸಲು ಸಾಧ್ಯವಿಲ್ಲ. ಆದರೆ, ಯೋಧ ಇತರೆ ಸೈನಿಕರ ಜೊತೆ ಶತ್ರುತ್ವ ಹೊಂದಿದ್ದ ಎಂದಷ್ಟೆ ತಿಳಿಸಿದ್ದಾರೆ.

ಮುಖ ಮತ್ತು ತಲೆಗೆ ಬಟ್ಟೆ ಕಟ್ಟಿಕೊಂಡಿದ್ದ ಇಬ್ಬರು ಅಪರಿಚಿತರು ಗುಂಡಿನ ದಾಳಿ ನಡೆಸಿ ಬ್ಯಾರಕ್‌ಗಳಿಂದ ಹೊರಬರುತ್ತಿದ್ದದ್ದನ್ನು ಕಂಡೆ ಎಂದು ಯೋಧ ಮೋಹನ್ ಏಪ್ರಿಲ್ 14ರಂದು ಹೇಳಿದ್ದ. ಬಳಿಕ, ಪದೇ ಪದೇ ತನ್ನ ಹೇಳಿಕೆಯನ್ನು ಬದಲಿಸಿದ್ದ ಎಂದು ಎಸ್‌ಎಸ್‌ಪಿ ಖುರಾನಾ ಹೇಳಿದ್ದಾರೆ.

ಇದನ್ನೂ ಓದಿ : ಮಹಾರಾಷ್ಟ್ರ: ವಿದ್ಯುತ್ ಖಾಸಗೀಕರಣ ವಿರುದ್ಧ ಹೋರಾಟದಲ್ಲಿ ಮಹತ್ವದ ವಿಜಯ

ಬಳಿಕ, ವಿಚಾರಣೆ ವೇಳೆ ಸೇನೆಯ ಶಸ್ತ್ರಾಸ್ತ್ರ ಘಟಕದ ಗುನ್ನರ್ ದೇಸಾಯಿ ಮೋಹನ್, ಹತ್ಯೆ ನಡೆಸಿರುವ ಬಗ್ಗೆ ತಪ್ಪೊಪ್ಪಿಕೊಂಡಿದ್ದಾನೆ. ಘಟನೆಗೂ ಎರಡು ದಿನ ಮುನ್ನ INSAS ರೈಫಲ್ ಹಾಗೂ 28 ಸುತ್ತು ಗುಂಡು ಕಳುವಾಗಿದ್ದವು. ತನಿಖೆ ವೇಳೆ ಅದೇ ರೈಫಲ್ ಮತ್ತು ಕಾಟ್ರಿಡ್ಜ್‌ಗಳನ್ನು ಬಳಸಿ ಸೈನಿಕರ ಹತ್ಯೆ ನಡೆದಿರುವುದು ದೃಢಪಟ್ಟಿದೆ.

Donate Janashakthi Media

Leave a Reply

Your email address will not be published. Required fields are marked *