ಇರಾನ್‌ನಲ್ಲಿ ಭಯೋತ್ಪಾದಕ ದಾಳಿ | 70 ಕ್ಕೂ ಹೆಚ್ಚು ಜನರ ಸಾವು

ಟೆಹ್ರಾನ್: 2020 ರಲ್ಲಿ ಅಮೆರಿಕಾದ ಡ್ರೋನ್ ದಾಳಿಯಲ್ಲಿ ಕೊಲ್ಲಲ್ಪಟ್ಟ ಇರಾನ್‌ನ ಅಗ್ರ ಕಮಾಂಡರ್ ಖಾಸೆಮ್ ಸುಲೈಮಾನಿ ಅವರ ಸ್ಮರಣಾರ್ಥವಾಗಿ ನಡೆದ ಸಮಾರಂಭದಲ್ಲಿ ‘ಭಯೋತ್ಪಾದಕ ದಾಳಿ’ ನಡೆದಿದ್ದು, ಎರಡು ಸ್ಫೋಟಗಳು ಸಂಭವಿಸಿದೆ. ಈ ದಾಳಿಯಲ್ಲಿ 70 ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದು, ಹಲವಾರು ಜನರು ಗಾಯಗೊಂಡಿದ್ದಾರೆ ಎಂದು ಇರಾನ್ ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.

ಆಗ್ನೇಯ ನಗರವಾದ ಕೆರ್ಮನ್‌ನಲ್ಲಿ ಸುಲೈಮಾನಿ ಅವರ ಸಮಾಧಿ ಮಾಡಿರುವ ಸ್ಮಶಾನದಲ್ಲಿ ವಾರ್ಷಿಕೋತ್ಸವದ ಕಾರ್ಯಕ್ರಮದ ವೇಳೆ ಈ ಘಟನೆ ನಡೆದಿದೆ. ಇರಾನ್‌ನ ಸರ್ಕಾರಿ ಟಿವಿ ಚಾನೆಲ್ ಮೊದಲ ಮತ್ತು ನಂತರ ಎರಡನೇ ಸ್ಫೋಟವನ್ನು ವರದಿ ಮಾಡಿದೆ.

ಇದನ್ನೂ ಓದಿ: ʼರಾಮಮಂದಿರ ಉದ್ಘಾಟನೆʼಗೆ ಹೋಗುವವರಿಗೆ ಸರ್ಕಾರ ರಕ್ಷಣೆ ನೀಡಬೇಕು; ಬಿ.ಕೆ ಹರಿಪ್ರಸಾದ್

“ಸ್ಫೋಟಗಳು ಭಯೋತ್ಪಾದಕ ದಾಳಿಯಿಂದ ಉಂಟಾದವು” ಎಂದು ಕೆರ್ಮನ್ ಪ್ರಾಂತ್ಯದ ಸ್ಥಳೀಯ ಅಧಿಕಾರಿ ಹೇಳಿದ್ದಾರೆ ಎಂದು ಸರ್ಕಾರಿ ಮಾಧ್ಯಮವು ವರದಿ ಮಾಡಿದೆ. ದಾಳಿಯಿಂದಾಗಿ 73 ಜನರು ಸಾವನ್ನಪ್ಪಿದ್ದಾರೆ ಮತ್ತು 170 ಜನರು ಗಾಯಗೊಂಡಿದ್ದಾರೆ ಎಂದು ಇರಾನ್‌ನ ತುರ್ತು ಸೇವೆಗಳ ವಕ್ತಾರ ಬಾಬಕ್ ಯೆಕ್ತಪರಸ್ಟ್ ಅವರು ಹೇಳಿದ್ದಾರೆ ಎಂದು ವರದಿಯಾಗಿದೆ.

“ಸ್ಮಶಾನಕ್ಕೆ ಹೋಗುವ ರಸ್ತೆಯಲ್ಲಿ ಹಲವಾರು ಗ್ಯಾಸ್ ಕ್ಯಾನಿಸ್ಟರ್‌ಗಳು ಸ್ಫೋಟಗೊಂಡವು” ಎಂದು ಅರೆ ಸರ್ಕಾರಿ ಮಾಧ್ಯಮವಾದ ನೂರ್‌ನ್ಯೂಸ್ ಈ ಹಿಂದೆ ಹೇಳಿತ್ತು. ಸುಲೈಮಾನಿ ಅವರ ಸಾವಿನ ದಿನದ ಆಚರಣೆಗಾಗಿ ನೂರಾರು ಇರಾನಿಯನ್ನರು ಜಮಾಯಿಸಿದ ಸಮಾರಂಭದಲ್ಲಿ ಇದು ನಡೆದಿದ್ದು, ಗಾಯಗೊಂಡ ಜನರಿಗೆ ರೆಡ್ ಕ್ರೆಸೆಂಟ್ ಕಾರ್ಯಕರ್ತರು ಸಹಾಯ ಮಾಡುವುದನ್ನು ಸರ್ಕಾರಿ ಟಿವಿ ಬಿತ್ತರಿಸಿದೆ. ಹೆಚ್ಚಿನ ಜನರು ಗಾಯಗೊಂಡಿದ್ದಾರೆ ಎಂದು ಇರಾನಿನ ಕೆಲವು ಸುದ್ದಿ ಸಂಸ್ಥೆಗಳು ಹೇಳಿವೆ.

“ನಮ್ಮ ಕ್ಷಿಪ್ರ ಪ್ರತಿಕ್ರಿಯೆ ತಂಡಗಳು ಗಾಯಾಳುಗಳನ್ನು ಸ್ಥಳಾಂತರಿಸುತ್ತಿವೆ … ಆದರೆ ಜನಸಂದಣಿಯ ಕಾರಣಕ್ಕಾಗಿ ರಸ್ತೆಗಳು ನಿರ್ಬಂಧಕ್ಕೆ ಒಳಗಾಗಿದೆ” ಎಂದು ಕೆರ್ಮನ್ ಪ್ರಾಂತ್ಯದ ರೆಡ್ ಕ್ರೆಸೆಂಟ್ ಮುಖ್ಯಸ್ಥ ರೆಜಾ ಫಲ್ಲಾಹ್ ಹೇಳಿದ್ದಾರೆ ಎಂದು ವರದಿಯಾಗಿದೆ.

ವಿಡಿಯೊ ನೋಡಿ: ಅಕ್ಷರದವ್ವ ಸಾವಿತ್ರಿಬಾಯಿ ಫುಲೆಯವರ ನೆನೆಯೋಣ Janashakthi Media

 

Donate Janashakthi Media

Leave a Reply

Your email address will not be published. Required fields are marked *