ನವದೆಹಲಿ: ದೆಹಲಿಯಲ್ಲಿ ಗಾಳಿಯ ಗುಣಮಟ್ಟವೂ ತೀವ್ರ ಕಳಪೆ ಮಟ್ಟಕ್ಕೆ ಕುಸಿದಿದೆ ಸೋಮವಾರ ಕನಿಷ್ಠ ತಾಪಮಾನ 8.7 ಡಿಗ್ರಿ ಸೆಲ್ಸಿಯಸ್‌ಗೆ ಇಳಿದಿದ್ದು ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಹೇಳಿದೆ.
ಇದನ್ನೂ ಓದಿ : ಕೇರಳ | ಸ್ಥಳೀಯ ಸಂಸ್ಥೆ ಚುನಾವಣೆ : ಕುಟುಂಬದ ಮೂರು ಸಹೋದರಿಯರು ಸ್ಪರ್ದೆ
ಐದು ಮೇಲ್ವಿಚಾರಣಾ ಕೇಂದ್ರಗಳು ಗಾಳಿಯ ಗುಣಮಟ್ಟ ‘ಗಂಭೀರ’ವಾಗಿದೆ ಎಂದು ವರದಿ ನೀಡಿದ್ದು, 29 ಕೇಂದ್ರಗಳು 300 ರಿಂದ 400 ರ ನಡುವೆ ಎಕ್ಯೂಐ ಸೂಚ್ಯಂಕ ಅಂದರೆ ‘ಕಳಪೆ ಮಟ್ಟದಲ್ಲಿವೆ ಎಂದು ಸೂಚಿಸಿದೆ.
ಭಾರತೀಯ ಹವಾಮಾನ ಇಲಾಖೆ ಪ್ರಕಾರ, ಬೆಳಿಗ್ಗೆ 8.30 ರ ವೇಳೆಗೆ ಕನಿಷ್ಠ ತಾಪಮಾನ 8.7 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ಸಾಮಾನ್ಯಕ್ಕಿಂತ 3.6 ಡಿಗ್ರಿ ಕಡಿಮೆಯಾಗಿದೆ.
ಈ ಹಿಂದೆ 2022ರ ನ.29ರಂದು ಕನಿಷ್ಠ ತಾಪಮಾನ 7.3 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. 2023ರಲ್ಲಿ ಕನಿಷ್ಠ ಎಂದರೆ 9.2 ಡಿಗ್ರಿ ಸೆಲ್ಸಿಯಸ್ ಮತ್ತು 2024ರಲ್ಲಿ 9.5 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು.
ಇದನ್ನೂ ನೋಡಿ : JNU ವಿದ್ಯಾರ್ಥಿ ಸಂಘದ ಚುನಾವಣೆ | ಎಡ ವಿದ್ಯಾರ್ಥಿ ಒಕ್ಕೂಟ ಕ್ಲೀನ್ ಸ್ವೀಪ್ Janashakthi | #JNUSU |#LeftUnity
