ಪ್ರಧಾನಿ ವಿಡಿಯೋ ವೈರಲ್ : ನಿಜಕ್ಕೂ ಟೆಲಿಪ್ರಾಂಪ್ಟರ್ ಕೈ ಕೊಟ್ಟಿದ್ದಾ! ಅಥವಾ ತಾಂತ್ರಿಕ ಸಮಸ್ಯೆಯಾ?

ನವದೆಹಲಿ : ವಿಶ್ವ ಆರ್ಥಿಕ ವೇದಿಕೆಯಲ್ಲಿ ಸೋಮವಾರದಂದು ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡುವ ವೇಳೆ ಉಂಟಾದ ಕೆಲವು ಅಡಚಣೆಗಳು ಈಗ ಸಿಕ್ಕಾಪಟ್ಟೆ ಟ್ರೋಲ್‌ ಆಗುತ್ತಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿಶ್ವ ಆರ್ಥಿಕ ವೇದಿಕೆಯಲ್ಲಿ ಸೋಮವಾರ ಭಾಷಣ ಮಾಡುತ್ತಿದ್ದ ಸಂದರ್ಭದಲ್ಲಿ ಟೆಲಿಪ್ರಾಂಪ್ಟರ್‌ ಕೈಕೊಟ್ಟಿದ್ದು, ಇದರಿಂದಾಗಿ ಪ್ರಧಾನಿ ಮೋದಿ ಒಮ್ಮೆ ಕಕ್ಕಾಬಿಕ್ಕಿ ಆಗಿದ್ದಾರೆ.ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಹಲವಾರು ಮಂದಿ ವ್ಯಂಗ್ಯವಾಡಿದ್ದಾರೆ.

ಟೆಲಿಪ್ರಾಪ್ಟರ್‌ ಕೈಕೊಟ್ಟ ಕಾರಣ ಮೋದಿ ಅವರು ಆ ಕಡೆ, ಈ ಕಡೆ ನೋಡುತ್ತಿರುವುದು, ತಮ್ಮ ಭಾಷಣದ ಲಿಖಿತ ರೂಪಕ್ಕಾಗಿ ಹುಡುಕಾಡುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿವೆ. ನಿನ್ನೆ ಟ್ವಿಟರ್‍ನಲ್ಲಿ ಮೋದಿ ಅವರ ಟೆಲಿಪ್ರಾಂಟರ್ ದುರ್ಗತಿ ನಂಬರ್ ಒನ್ ಟ್ರೆಂಡ್‍ನಲ್ಲಿತ್ತು. ಈ ಬಗ್ಗೆ ಕಾಂಗ್ರೆಸ್‍ನ ಹಲವು ನಾಯಕರು ತಮ್ಮ ಲೇವಡಿ ವ್ಯಕ್ತ ಪಡಿಸಿದ್ದಾರೆ.

ರಾಹುಲ್ ಗಾಂಧಿ ಅವರು, ಮೋದಿ ಅವರ ಹೆಸರು ಉಲ್ಲೇಖಿಸದೆ ಅಷ್ಟೊಂದು ಸುಳ್ಳನ್ನು ಟೆಲಿಪ್ರಾಂಟರ್ ಕೂಡ ಸಹಿಸಲಾಗಲಿಲ್ಲ ಎಂದು ವ್ಯಂಗ್ಯವಾಡಿದ್ದಲ್ಲದೆ, ಮೋದಿ ಅವರಿಗೆ ಟೆಲಿಪ್ರಾಂಟರ್‍ನಲ್ಲಿ ಲಿಖಿತ ಪ್ರತಿ ಕಾಣಿಸದ ಹೊರತಾಗಿ ಸ್ವಂತವಾಗಿ ಭಾಷಣ ಮಾಡಲು ಬರುವುದಿಲ್ಲ ಎಂದು ಹೇಳಿದ್ದ ತಮ್ಮದೇ ಹೇಳಿಕೆಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಕಾಂಗ್ರೆಸ್‍ನ ಹಲವು ನಾಯಕರು ಟೆಲಿಪ್ರಾಂಟರ್ ಪ್ರಸಂಗವನ್ನು ಮುಂದಿಟ್ಟುಕೊಂಡು ಮೋದಿ ಕಾಲೆಳೆದಿದ್ದಾರೆ.

ಟೆಲಿಪ್ರಾಂಪ್ಟರ್‌ ಕೈಕೊಟ್ಟರೆ ಪ್ರಧಾನಿಗೆ ಮಾತನಾಡಲು ಬರುವುದಿಲ್ಲ ಎಂದು ಟ್ರಾಲ್‌ ಮಾಡುತ್ತಿದ್ದಾರೆ.
ರಾಹುಲ್‌ ಗಾಂಧಿಯ ಭಾಷಣವನ್ನು ಇದುವರೆಗೆ ಟ್ರಾಲ್‌ ಮಾಡುತ್ತಿದ್ದ ಮೋದಿ ಭಕ್ತರು ಇಂದು ಮೋದಿ ಭಾಷಣ ಅರ್ಧಕ್ಕೆ ಮೊಟಕುಗೊಂಡಿರುವುದರಿಂದ ಕಕ್ಕಾಬಿಕ್ಕಿಯಾಗಿದ್ದಾರೆ. ಕಾಂಗ್ರೆಸ್‌ ಐಟಿಸೆಲ್‌ ಮಾಡುತ್ತಿರುವ ಟ್ರಾಲ್ಗಳಿಗೆ ಉತ್ತರಿಸಲು ಸಾಧ್ಯವಾಗದೆ ಮೌನವಾಗಿದ್ದಾರೆ.

ಇದನ್ನು ಕೆಲವರು ಟೆಲಿಪ್ರಾಂಪ್ಟರ್‌ ಸಮಸ್ಯೆ ಎಂದರೆ ಕೆಲವರು ತಾಂತ್ರಿಕ ಸಮಸ್ಯೆಯಿಂದಾಗಿ ಹೀಗಾಯಿತು ಏನೂ ತೊಂದರೆ ಯಾಗಿಲ್ಲ ಪ್ರಧಾನಿ ತಡವರಿಸಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.

ಆದರೆ ನಿಜವಾಗಿ ನಡೆದದ್ದೇನು ? altnews.in ಈ ಬಗ್ಗೆ ಫ್ಯಾಕ್ಟ್ ಚೆಕ್ ಮಾಡಿ ಹೀಗೆ ವರದಿ ಮಾಡಿದೆ.

ವಿಶ್ವ ಆರ್ಥಿಕ ವೇದಿಕೆಯ ಆನ್ ಲೈನ್ ಕಾರ್ಯಕ್ರಮದಲ್ಲಿ ನಿಜವಾಗಿ ನಡೆದದ್ದೇನು ಎಂದು ತಿಳಿದುಕೊಳ್ಳಲು ಈ ಸಮಸ್ಯೆ ಉಂಟಾದ ಕ್ಷಣದವರೆಗಿನ ಬೆಳವಣಿಗೆಗಳನ್ನು ಮೊದಲು ತಿಳಿದುಕೊಳ್ಳಬೇಕು.

ಡಬ್ಲ್ಯು ಇ ಎಫ್ ಕಾರ್ಯಕ್ರಮದಲ್ಲಿ ಪ್ರಧಾನಿ ಮಾಡಿದ ಆನ್ ಲೈನ್ ಭಾಷಣ Narendra Modi , Doordarshan National ಹಾಗೂ World Economic Forum ಈ ಮೂರು ಯೂಟ್ಯೂಬ್ ಚಾನಲ್ ಗಳಲ್ಲಿ ಲಭ್ಯವಿದೆ. DD ಮತ್ತು WEF ನ ಚಾನಲ್ ಗಳಲ್ಲಿರುವ ವಿಡಿಯೋದಲ್ಲಿ ಮಾತ್ರ ಈ ಸಮಸ್ಯೆ ಕಾಣುತ್ತಿದೆ, ನರೇಂದ್ರ ಮೋದಿ ಯವರ ಯೂಟ್ಯೂಬ್ ಚಾನಲ್ ನಲ್ಲಿ ಇದು ಕಾಣುತ್ತಿಲ್ಲ.

DD ವಿಡಿಯೋದಲ್ಲಿ ಪ್ರಧಾನಿ ಮೋದಿ ಆಗಲೇ 6 ನಿಮಿಷ ಮಾತಾಡಿದ್ದು ಇದೆ. ಆದರೆ WEF ಚಾನಲ್ ನಲ್ಲಿ ಈ ಭಾಗ ಇಲ್ಲ. ನಿಜವಾಗಿ WEF ನ ಮೊದಲ 8 ನಿಮಿಷ ಖಾಲಿ ಇದೆ. ಬಳಿಕ ಪ್ರಾರಂಭವಾಗುವಾಗ ಪ್ರಧಾನಿ ಮೋದಿ ಆಗಲೇ ಭಾಷಣದ ಅರ್ಧ ಭಾಗ ಮುಗಿಸಿದಂತೆ ಕಾಣುತ್ತದೆ. ಇದರಿಂದ ಅಲ್ಲೇನೋ ತಾಂತ್ರಿಕ ಸಮಸ್ಯೆ ಆಗಿತ್ತು ಎಂದು ಆಲ್ಟ್ ನ್ಯೂಸ್ ವರದಿ ಮಾಡಿದೆ.

Donate Janashakthi Media

Leave a Reply

Your email address will not be published. Required fields are marked *