ತೇಜಸ್ವಿ ಸೂರ್ಯ ಹೇಳುವಂತೆ ಬೆಂಗಳೂರಲ್ಲಿ ಹಾಸಿಗೆ ಲಭ್ಯತೆ ಶೂನ್ಯಕ್ಕೆ ಇಳಿದಿಲ್ಲ

ಬೆಂಗಳೂರು: ಜನರ ಆರೋಗ್ಯದ ದೃಷ್ಠಿಯಿಂದ  ಮತ್ತು ಕೋವಿಡ್‌ ರೋಗದಿಂದ ಬಾಧಿತರಾಗಿರುವ ರಕ್ಷಣೆಗಾಗಿ ತೊಡಗಿಸಿಕೊಂಡಿರುವ ಬಿಬಿಎಂಪಿಯು ವತಿಯಿಂದ ಹಾಸಿಗೆಗಳ ಹಂಚಿಕೆ ವ್ಯವಸ್ಥೆಯ ತಂತ್ರಾಂಶದ ಮೂಲಕ ಹಂಚಿಕೆ ಮಾಡುವ ಹಾಸಿಗೆಗಳ ಸಂಖ್ಯೆ ಯಾವತ್ತೂ ಶೂನ್ಯಕ್ಕೆ ಇಳಿದಿಲ್ಲ ಎಂದು ಸ್ಪಷ್ಟಪಡಿದೆ.

ಸಂಸದ ತೇಜಸ್ವಿ ಸೂರ್ಯ ಮತ್ತು ಕೆಲವು ಎಂಎಲ್‌ಎ ಗಳು ದಿಢೀರ್‌ ಎಂದು ಸೋಮವಾರ ದಿಢೀರ್‌ ಎಂದು ಬಿಬಿಎಂಪಿ ದಕ್ಷಿಣ ವಲಯದ ವಾರ್‌ ರೂಂಗೆ ಧಾಳಿ ನಡೆಸಿ ಹಾಸಿಗೆ ಪಡೆಯಲು ರೋಗಿಗಳ ದುಡ್ಡು ಕೊಟ್ಟರೆ ಸಿಗುತ್ತೆ. ಹಾಸಿಗೆ ಹಂಚಿಕೆಯಲ್ಲಿ ಭಾರಿ ಅವ್ಯವಹಾರ ನಡೆದಿದೆ ಎಂದು ಹೇಳಿ ಧಾಳಿ ನಡೆಸಿದ್ದರು.

ಇದನ್ನು ಓದಿ: ಬಿಬಿಎಂಪಿ ಬೆಡ್‌ ಹಗರಣ : ಹಗರಣದ ಹಿಂದಿರುವವರು ಯಾರು?

ಆದರೆ, ಐಸಿಯು, ವೆಂಟಿಲೇಟರ್‌ ಸೌಲಭ್ಯ ಇರುವಂತಹ ಹಾಸಿಗೆಗಳ ಸಂಖ್ಯೆ ಶೂನ್ಯಕ್ಕೆ ಅಲ್ಲದಿದ್ದರೂ 10ಕ್ಕಿಂತ ಕಡಿಮೆ ಸಂಖ್ಯೆಗೆ ಇಳಿದ ಉದಾಹರಣೆಗಳಿವೆ. ಕೋವಿಡ್‌ ನಿವಾರಣೆಗಾಗಿ ಹಾಗೂ ಸಾಮಾನ್ಯ ಚಿಕಿತ್ಸೆಗಾಗಿ ನಗರದ ಆಸ್ಪತ್ರೆಗಳಲ್ಲಿ ಹಾಸಿಗೆಗಳ ಲಭ್ಯತೆ ಇದೆ. ಆದರೆ, ತುರ್ತು ಅಗತ್ಯ ಇರುವುದು ಐಸಿಯು ಹಾಗೂ ವೆಂಟಿಲೇಟರ್‌ ಸೌಲಭ್ಯ ಇರುವ ಹಾಸಿಗೆಗಳ ಕೊರತೆಯಿದೆ.

ಸಂಸದ ತೇಜಸ್ವಿ ಸೂರ್ಯ ಅವರು ಮಾತ್ರ ಧಾಳಿ ನಂತರದಲ್ಲಿ ಹಾಸಿಗೆ ವಿಚಾರದಲ್ಲಿ ದೊಡ್ಡ ಬದಲಾವಣೆಯಾಗಿದೆ ಎಂದು ಟ್ವೀಟ್‌ ಮಾಡಿದ್ದಾರೆ. ‘ಸರ್ಕಾರಿ ಕೋಟಾ ಮೂಲಕ ಹಂಚಿಕೆ ಮಾಡುವ ಹಾಸಿಗೆಗಳ ಲಭ್ಯತೆ ಸಂಖ್ಯೆ ಶೂನ್ಯ ಎಂದು ಬಿಬಿಎಂಪಿ ವೆಬ್‌ಸೈಟ್‌ ಇಂದು ಮಧ್ಯಾಹ್ನ ತೋರಿಸಿತ್ತು. ಈಗ ಅದು 1504 ಹಾಸಿಗೆಗಳು ಲಭ್ಯ ಎಂದು ತೋರಿಸುತ್ತಿದೆ. ವ್ಯವಸ್ಥೆ ಸುಧಾರಣೆ ಆಗುತ್ತಿದೆ…’ ಇದು ಅವರು ಮಂಗಳವಾರ ರಾತ್ರಿ 10 ಗಂಟೆ ಸುಮಾರಿಗೆ ಮಾಡಿದ್ದ ಟ್ವೀಟ್‌.

ಕೋವಿಡ್‌ ರೋಗಿಗಳಿಗೆ ಬಿಬಿಎಂಪಿ ಮೂಲಕ ಹಂಚಿಕೆ ಮಾಡುವ ದಂಧೆ ಬಯಲಿಗೆ ಎಳೆದ ಬಳಿಕ ವ್ಯವಸ್ಥೆ ಸುಧಾರಣೆ ಆಗಿದೆ ಎಂದು ತೋರಿಸಲು ಅವರು ಟ್ವೀಟ್‌ ಮಾಡಿದ್ದರು.

ಸಂಸದರ ಟ್ವೀಟ್‌ ಬಗ್ಗೆ ಪ್ರತಿಕ್ರಿಯಿಸಿದ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ, ‘ಪೋರ್ಟಲ್‌ ಪ್ರಕಾರ ಬಿಬಿಎಂಪಿ ವ್ಯಾಪ್ತಿಯಲ್ಲಿ ಒಟ್ಟು ಹಾಸಿಗೆಗಳ ಲಭ್ಯತೆ ಎಂದೂ ಸೊನ್ನೆಗೆ ಇಳಿದಿಲ್ಲ. ಆದರೆ, ಐಸಿಯು ಮತ್ತು ವೆಂಟಿಲೇಟರ್‌ ಸೌಲಭ್ಯ ಇರುವ ಹಾಸಿಗೆಗಳ ತೀವ್ರ ಕೊರತೆ ಇರುವುದು ನಿಜ’ ಎಂದು ಹೇಳಿದ್ದಾರೆ.

ಗೌರವ್ ಗುಪ್ತ ಅವರು ಮಂಗಳವಾರ ಮಧ್ಯಾಹ್ನ 11 ಗಂಟೆಗೆ ಮಾಡಿರುವ ಟ್ವೀಟ್‌ನಲ್ಲೂ ಒಟ್ಟು 2,015 ಹಾಸಿಗೆಗಳು ಹಂಚಿಕೆಗೆ ಲಭ್ಯ ಇವೆ ಎಂಬ ಮಾಹಿತಿ ಇತ್ತು.

ಕೋವಿಡ್‌ ರೋಗಿಗಳಿಗೆ ಸರ್ಕಾರಿ ಕೋಟಾದಲ್ಲಿ ಹಂಚಿಕೆ ಮಾಡಲು ಸರ್ಕಾರಿ ವೈದ್ಯಕೀಯ ಕಾಲೇಜು, ಸರ್ಕಾರಿ ಆಸ್ಪತ್ರೆ, ಖಾಸಗಿ ವೈದ್ಯಕೀಯ ಕಾಲೇಜುಗಳು, ಖಾಸಗಿ ಆಸ್ಪತ್ರೆಗಳು, ಸರ್ಕಾರದ ಕೋವಿಡ್‌ ಆರೈಕೆ ಕೇಂದ್ರಗಳಲ್ಲಿ ಹಂಚಿಕೆಗೆ ಲಭ್ಯ ಇರುವ ಹಾಸಿಗೆಗಳ ವಿವರವನ್ನೂ ಟ್ವೀಟ್‌ನಲ್ಲಿ ಹಂಚಿಕೊಂಡಿದ್ದಾರೆ.

ಬಿಬಿಎಂಪಿ ವಾರ್‌ ರೂಂ ಮೂಲಕ ಹಾಸಿಗೆ ಹಂಚಿಕೆಯಲ್ಲಿ ಅವ್ಯವಹಾರದಲ್ಲಿ ತೊಡಗಿರುವ ಸಿಬ್ಬಂದಿಗಗಳ ಬಗ್ಗೆ ತನಿಖೆ ಕೈಗೊಳ್ಳಲು ಆಯುಕ್ತ ಗೌರವ್‌ ಗುಪ್ತ ಅವರು ಸಮಿತಿಯೊಂದನ್ನು ರಚಿಸಿದ್ದಾರೆ. ‘ಸಮಿತಿಯು ಪ್ರತಿಯೊಂದು ಪ್ರಕರಣಗಳನ್ನು ಆಳವಾಗಿ ಪರಿಶೀಲನೆ ನಡೆಸುತ್ತಿದೆ. ಈ ಕುರಿತು ಇನ್ನಷ್ಟು ವಿವರ ಸಂಗ್ರಹಿಸುತ್ತಿದೆ ಎಂದು ಗೌರವ್‌ ಗುಪ್ತ ಹೇಳಿದ್ದಾರೆ.

ಇದನ್ನು ಓದಿ: ತೇಜಸ್ವಿ ಸೂರ್ಯ ಇಷ್ಟಕ್ಕೆ ನಿಲ್ಲದೇ ಎಲ್ಲಾ ಸಂಸದರೊಟ್ಟಿಗೆ ಕೇಂದ್ರಕ್ಕೆ ಆಕ್ಸಿಜನ್‌ಗಾಗಿ ಬೇಡಿಕೆ ಇಡಲಿ: ಸಿದ್ದರಾಮಯ್ಯ

ಬಿಬಿಎಂಪಿಯ ದಕ್ಷಿಣ ವಾರ್‌ ರೂಂನ ಸಿಬ್ಬಂದಿಗಳ ಹರಡಿರುವ ವದಂತಿಯ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯ ಆಯುಕ್ತರು, ‘ಕೋವಿಡ್‌ ವಾರ್‌ ರೂಂ ಸಿಬ್ಬಂದಿ ಎಲ್ಲ ತಾತ್ಕಾಲಿಕ ನೆಲೆಯಲ್ಲಿ ಕಂಪನಿಗಳಿಂದ ನಿಯುಕ್ತರಾದವರು. ಅವರನ್ನು ನೇಮಿಸುವುದು ಹಾಗೂ ಕೆಲಸದಿಂದ ತೆಗೆಯುವ ಬಗ್ಗೆ ವಲಯ ಮಟ್ಟದ ಅಧಿಕಾರಿಗಳೇ ನಿರ್ಧಾರ ಕೈಗೊಳ್ಳುತ್ತಾರೆ. ಅವರ ವಿರುದ್ಧ ಆಪಾದನೆಗಳ ಬಗ್ಗೆ ವಲಯ ಆಯುಕ್ತರಾದ ತುಳಸಿ ಮದ್ದಿನೇನಿ ಅವರು ಪರಿಶೀಲನೆ ಕೈಗೊಂಡಿದ್ದಾರೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಎಂಟು ವಲಯಗಳಲ್ಲಿ ಒಂದೊಂದು ವಾರ್‌ ರೂಂಗಳು ಕಾರ್ಯನಿರ್ವಹಿಸುತ್ತಿವೆ. ಕೋವಿಡ್‌ ಸೋಂಕಿತರಲ್ಲಿ ತೀವ್ರ ಉಸಿರಾಟ ಸಮಸ್ಯೆ ಇದ್ದವರಿಗೆ ಐಸಿಯು ಮತ್ತು ವೆಂಟಿಲೇಟರ್‌ ಹಾಸಿಗೆಗಳನ್ನು ಹಂಚಿಕೆ ಮಾಡಬೇಕು. ಬಿಬಿಎಂಪಿ ಕೋಟಾದಡಿ ಶೇ. 50ರಷ್ಟು ಹಾಸಿಗೆಗಳನ್ನು ಖಾಸಗಿ ಆಸ್ಪತ್ರೆಗಳಿಂದ ಪಡೆಯಬಹುದು.

ಬೊಮ್ಮನಹಳ್ಳಿ ವ್ಯಾಪ್ತಿಯ ವಾರ್‌ ರೂಂನಲ್ಲಿ ಶಾಸಕ ಸತೀಶ್‌ ರೆಡ್ಡಿ ಬೆಂಬಲಿಗರು ಒಳಪ್ರವೇಶಿಸಿ ತಮಗೆ ಬೇಕಾದವರಿಗೆ ಬಿಬಿಎಂಪಿ ಕೋಟಾದ ಐಸಿಯು ಹಾಸಿಗೆಗಳನ್ನು ಹಂಚಿಕೆ ಮಾಡುತ್ತಿದ್ದಾರೆ ಎಂಬ ಆರೋಪವೂ ಇದೆ. ಇದರ ನಡುವೆ ಕೋವಿಡ್‌ ನಿರ್ವಹಣೆಯಲ್ಲಿ ತೊಡಗಿರುವ ಐಎಎಸ್‌ ಅಧಿಕಾರಿ ಕೋವಿಡ್‌ ವಾರ್‌ ರೂಂಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಅನ್ಯ ವ್ಯಕ್ತಿಯೊಬ್ಬರು ಹಾಸಿಗೆಗಳನ್ನು ಬ್ಲಾಕ್‌ ಮಾಡುತ್ತಿರುವುದು ಕಂಡು ಬಂದಿದೆ. ತಕ್ಷಣ ಆ ವ್ಯಕ್ತಿಯನ್ನು ವಾರ್‌ ರೂಂನಿಂದ ಹೊರಗೆ ಕಳುಹಿಸಲಾಗಿದೆ. ಆತನೊಂದಿಗೆ ಶಾಸಕರ ಕೆಲವು ಬೆಂಬಲಿಗರು ವಾರ್‌ ರೂಂ ಮುಂದೆ ಗಲಾಟೆ ನಡೆದಿದೆ ಎಂಬುದು ಸಹ ತಿಳಿದು ಬಂದಿದೆ. ಶಾಸಕ ಸತೀಶ್‌ ರೆಡ್ಡಿ ಅವರು ಶಿಫಾರಸ್ಸು ಮಾಡುವವರಿಗೆ ಹಾಸಿಗೆಗಳನ್ನು ಒದಗಿಸಲು ನಿರಾಕರಿಸಿದರೆ ವಾರ್‌ ರೂಂ ಮತ್ತು ಆರೋಗ್ಯ ಸಿಬ್ಬಂದಿ ಬಾಯಿ ಮುಚ್ಚಿಸು ಪ್ರಯತ್ನಗಳು ನಡೆದಿದೆ ಎನ್ನಲಾಗಿದೆ.

ಇದನ್ನು ಓದಿ: ಚಾಮರಾಜನಗರ ‌ದುರಂತ ಮರೆ ಮಾಚಲು ತೇಜಸ್ವಿಯಿಂದ ಹೊಸ ತಂತ್ರ: ಹೆಚ್‌ಡಿಕೆ

ತೇಜಸ್ವಿ ಸೂರ್ಯ ದಾಳಿ ಮಾಡಿದ ಬಿಬಿಎಂಪಿ ದಕ್ಷಿಣ ವಾರ್ ರೂಂ ನಲ್ಲಿ 206 ಸಿಬ್ಬಂದಿಗಳಿದ್ದಾರೆ. ಸಂಸದರೂ ಮಾತ್ರ ಆರೋಪ ಮಾಡಿದ್ದು ಕೇವಲ 17 ಮುಸ್ಲಿಂ ಸಿಬ್ಬಂದಿಗಳು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಸೋಮವಾರ ವಾರ್‌ ರೂಂ ಧಾಳಿ ಸಂದರ್ಭದಲ್ಲಿ ಸಂಪೂರ್ಣವಾದ ಎಲ್ಲಾ ವಿವರಗಳನ್ನು ಹಂಚಿಕೊಳ್ಳದ ತೇಜಸ್ವಿ ಸೂರ್ಯ ಕೇವಲ ಕೆಲವು ವಿಚಾರಗಳನ್ನು ಹಂಚಿಕೊಂಡು ಇಡೀ ಘಟನೆಯ ದಿಕ್ಕು ತಪ್ಪಿಸಲು ಪ್ರಯತ್ನಿಸಿದ್ದಾರೆ.

ಹಾಸಿಗೆ ಬ್ಲಾಕ್‌ ಮಾಡುವ ಪ್ರಕರಣದಲ್ಲಿ ತಮ್ಮ ಹೆಸರನ್ನು ಸೇರಿಸಿ ಆರೋಪಗಳನ್ನು ಮಾಡುತ್ತಿರುವ ಬಗ್ಗೆ ಜಂಟಿ ಆಯುಕ್ತ (ಕಸ ನಿರ್ವಹಣೆ ) ಸರ್ಫರಾಜ್‌ ಖಾನ್‌ ಕೂಡ ಬೇಸರ ತೋಡಿಕೊಂಡಿದ್ದಾರೆ.

ಈ ಪ್ರಕರಣಕ್ಕೆ ಕೋಮು ಬಣ್ಣ ಹಚ್ಚಿರುವುದು ಮತ್ತು ಅದರಲ್ಲಿ ನನ್ನ ಹೆಸರು ಎಳೆದುತಂದಿರುವುದು ನೋವು ತಂದಿದೆ. ಕಷ್ಟದ ಸಮಯದಲ್ಲೂ ವಿಷವನ್ನು ಹರಡುತ್ತಿರುವ ಬಗ್ಗೆ ತನಿಖೆಯಾಗಬೇಕು. ಅಂತಹವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

‘ವಾರ್ ರೂಮ್‌ ನಿರ್ವಹಣೆಯಲ್ಲಿ ನನ್ನ ಯಾವುದೇ ಪಾತ್ರವಿಲ್ಲ. ಅಲ್ಲಿ ಕಾರ್ಯನಿರ್ವಹಿಸುವ ಯಾವ ವೈದ್ಯರೂ ನನಗೆ ಗೊತ್ತಿಲ್ಲ. ನನ್ನ ಕೆಲಸವೇನಿದ್ದರೂ ಕೋವಿಡ್‌ ಆರೈಕೆ ಕೆಂದ್ರಗಳ ನಿರ್ವಹಣೆ ಮತ್ತು ಕಸ ವಿಲೇವಾರಿ ಎಂದು ಸ್ಪಷ್ಟಪಡಿಸಿದ್ದಾರೆ.

ವಾರ್‌ ರೂಂನಲ್ಲಿನ ಹಾಸಿಗೆ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಜಯನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದ್ದು ಸಿಸಿಬಿ ಪೊಲೀಸರು ಕೈಗೊಂಡು ಈಗಾಗಲೇ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಅಲ್ಲದೆ, ಆರೋಪದ ಕುರಿತು ಲೋಕಾಯುಕ್ತ ನ್ಯಾಯಮೂರ್ತಿ ಪಿ. ವಿಶ್ವನಾಥ ಶೆಟ್ಟಿ, ಸ್ವಯಂಪ್ರೇರಿತ ದೂರು ಕುರಿತು ದಾಖಲಿಸಿಕೊಂಡು ಲೋಕಾಯುಕ್ತ ಪೊಲೀಸರಿಂದ ತನಿಖೆಗೆ ಆದೇಶಿಸಿದ್ದಾರೆ.

ಇದನ್ನು ಓದಿ: ಉಸಿರಾಡೋಕ್ಕೆ ಕಷ್ಟ ಆಗುತ್ತೆ ಎಂದು ಫೋನ್‌ ಮಾಡಿದ್ದ ನವವಿವಾಹಿತ 2ತಾಸಲ್ಲೇ ಪ್ರಾಣಬಿಟ್ಟ

ರಾಜ್ಯ ಸರ್ಕಾರ ಇದೇ ಪ್ರಕರಣದ ಕುರಿತು ಸಿಸಿಬಿ ಪೊಲೀಸರಿಂದ ತನಿಖೆಗೆ ಆದೇಶಿಸಿದ್ದು, ಲೋಕಾಯುಕ್ತ ಪೊಲೀಸರೂ ಪ್ರತ್ಯೇಕವಾಗಿ ತನಿಖೆ ನಡೆಸಲಿದ್ದಾರೆ ಎಂದು ಲೋಕಾಯುಕ್ತರು ಆದೇಶಿಸಿದ್ದಾರೆ.

ರಾಜ್ಯ ಸರ್ಕಾರ ಮುಖ್ಯ ಕಾರ್ಯದರ್ಶಿ, ಆರೋಗ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ವೈದ್ಯಕೀಯ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಆರೋಗ್ಯ ಇಲಾಖೆ ಆಯುಕ್ತರು, ಬಿಬಿಎಂಪಿ ಆಡಳಿತಾಧಿಕಾರಿ, ಮುಖ್ಯ ಆಯುಕ್ತರು, ವಲಯ ಆಯುಕ್ತರು, ವಿಶೇಷ ಆಯುಕ್ತರು, ಹೆಚ್ಚುವರಿ ಆಯುಕ್ತರು, ಜಂಟಿ ಆಯುಕ್ತರು ಮತ್ತು ಆರೋಗ್ಯಾಧಿಕಾರಿಗಳು ಸೇರಿದಂತೆ 31 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಹಾಸಿಗೆ ದಂಧೆಗೆ ಸಂಬಂಧಿಸಿದಂತೆ ಪ್ರತಿಪಕ್ಷಗಳ ನಾಯಕರಾದ ಸಿದ್ದರಾಮಯ್ಯ, ಹೆಚ್‌ ಡಿ ಕುಮಾರಸ್ವಾಮಿ ಅವರುಗಳು ತೇಜಸ್ವಿ ಸೂರ್ಯ ಅವರ ಈ ನಾಟಕ ಕೇವಲ ಜನರ ದಿಕ್ಕು ತಪ್ಪಿಸುವುದಾಗಿದೆ. ಸರಕಾರದ ಕೋವಿಡ್‌ ನಿರ್ವಹಣೆಯಲ್ಲಿನ ವಿಫಲತೆಯನ್ನು ಮುಚ್ಚಿಕೊಳ್ಳಲು ಈ ರೀತಿಯಾಗಿ ಆಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *