ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಪ್ಪು ಪಟ್ಟಿ ಧರಿಸಿ ಪ್ರತಿಭಟಿಸಿ ಕೆಲಸ ನಿರ್ವಹಣೆ ಮಾಡಿದ ಶಿಕ್ಷಕರು

ಹಗರಿಬೊಮ್ಮನಹಳ್ಳಿ: ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಇಲ್ಲಿನ ಪಿಎಂ ಶ್ರೀ ಸಮಾಹಿ ಪ್ರಾ ಶಾಲೆಯ ಶಿಕ್ಷಕರು ಕೂಡಾ ಜನವರಿ 8ರಂದು ತಮ್ಮ ರಟ್ಟೆಗೆ ಕಪ್ಪು ಪಟ್ಟಿ ಧರಿಸಿ ಕರ್ತವ್ಯ ನಿರ್ವಹಿಸಿ ಪ್ರತಿಭಟಿಸಿದರು.‌

ಅಖಿಲ ಭಾರತ ಶಿಕ್ಷಕರ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ( AIJACTO) ಈ ಪ್ರತಿಭಟನೆಗೆ ಕರೆ ನೀಡಿತ್ತು. ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ( KSPSTA), ಭಾರತ ಶಾಲಾ ಶಿಕ್ಷಕರ ಒಕ್ಕೂಟ ( STFI) ಸೇರಿದಂತೆ ದೇಶದ ಮಟ್ಟದ ಹದಿಮೂರು ಸಂಘಟನೆಗಳು AIJACTOದಲ್ಲಿ ಸೇರಿವೆ.

ಇದನ್ನೂ ಓದಿ: ಬಿಕ್ಲು ಶಿವ ಪ್ರಕರಣ: ಬೈರತಿ ಬಸವರಾಜ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ – ಸರ್ಕಾರ ಹೈಕೋರ್ಟ್‌ಗೆ ಮನವಿ

ಪ್ರತಿಭಟನೆಯ ಪ್ರಮುಖ ಬೇಡಿಕೆಗಳು

1. ಶಿಕ್ಷಕರಿಗೆ ಟಿಇಟಿ ತೇರ್ಗಡೆ ಕಡ್ಡಾಯ ಕುರಿತು 2025ರ ಸೆಪ್ಟೆಂಬರ್ ಒಂದರಂದು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ಪುನರ್ ಪರಿಶೀಲನೆ ನಡೆಸಬೇಕು.

2. ವಿವಿಧ ಹೆಸರುಗಳಲ್ಲಿ ಶಾಲೆಗಳ ವಿಲೀನ ಹಾಗೂ ಮುಚ್ಚುವಿಕೆಯನ್ನು ಕೈ ಬಿಡಬೇಕು.

3. NPS/UPS/CPS ಯೋಜನೆಗಳನ್ನು ರದ್ದು ಮಾಡಿ OPS ಮರುಸ್ಥಾಪನೆ ಮಾಡಬೇಕು.

4. ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು.

ಗುತ್ತಿಗೆ ಹೊರ ಗುತ್ತಿಗೆ , ಅಥಿತಿ ಶಿಕ್ಷಕರ ಸೇವೆ ಖಾಯಂ ಮಾಡಬೇಕು. ‌ ವಿಧಾನ ಪರಿಷತ್ ಚುನಾವಣೆಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಿಗೂ ಮತದಾನಕ್ಕೆ ಅವಕಾಶ ನೀಡಬೇಕು ಎನ್ನುವುದು ಸೇರಿದಂತೆ ಹಲವಾರು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಇಂದಿನ ಪ್ರತಿಭಟನೆ ನಡೆಯುತ್ತಿದೆ ಎಂದು ಶಾಲಾ ಶಿಕ್ಷಕರನ್ನು ಉದ್ದೇಶಿಸಿ ಮಾತನಾಡಿದ ಇದೇ ಶಾಲೆಯ ಶಿಕ್ಷಕ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಹಗರಿಬೊಮ್ಮನಹಳ್ಳಿ ತಾಲೂಕು ಘಟಕದ ಮಾಜಿ ಅಧ್ಯಕ್ಷ ಹಾಗೂ ಭಾರತ ಶಾಲಾ ಶಿಕ್ಷಕರ ಒಕ್ಕೂಟ( STFI)ದ ಮಾಜಿ ಕೇಂದ್ರ ಸಮಿತಿ ಸದಸ್ಯ ಹಾಗೂ ಅಖಿಲ ಕರ್ನಾಟಕ ರಾಜ್ಯ ಸರಕಾರಿ ನೌಕರರ ಒಕ್ಕೂಟದ ರಾಜ್ಯ ಉಪಾಧ್ಯಕ್ಷ ರಂಗನಾಥ ಹವಾಲ್ದಾರ್ ಶಿಕ್ಷಕರನ್ನು ಉದ್ದೇಶಿಸಿ ಮಾತನಾಡುತ್ತಾ ಹೇಳಿದರು.

ಇದನ್ನೂ ನೋಡಿ: ನಮ್ಮ ಆಹಾರ: ತಪ್ಪು ಒಪ್ಪುಗಳು| ಡಾ. ಎನ್.ಬಿ. ಶ್ರೀಧರ Janashakthi Media

Donate Janashakthi Media

Leave a Reply

Your email address will not be published. Required fields are marked *