2ನೇ ತರಗತಿಯ ವಿದ್ಯಾರ್ಥಿಗೆ 150 ಛಡಿಯೇಟು ನೀಡಿದ ಶಿಕ್ಷಕ; ಪ್ರಕರಣ ದಾಖಲು

ಲಕ್ನೋ: ಗೊಂಡಾ ಜಿಲ್ಲೆಯ ಖಾಸಗಿ ಶಾಲಾ ಶಿಕ್ಷಕನೋರ್ವನ ವಿರುದ್ಧ ಮನೆಗೆಲಸವನ್ನು ಪೂರ್ಣಗೊಳಿಸದ್ದಕ್ಕಾಗಿ 2ನೇ ತರಗತಿಯ ವಿದ್ಯಾರ್ಥಿಗೆ 150 ಛಡಿಯೇಟುಗಳನ್ನು ನೀಡಿದ ಆರೋಪದಡಿ ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಶಿಕ್ಷೆಯಿಂದ ಬಾಲಕನ ಕಾಲುಗಳಿಗೆ ತೀವ್ರ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ವಿದ್ಯಾರ್ಥಿ

ಕರ್ನೈಲ್‌ಗಂಜ್‌ನಲ್ಲಿ ಈ ಘಟನೆ ನಡೆದಿದ್ದು, ಎಂಆರ್‌ಜಿ ಸ್ಕೂಲ್‌ನ ಇಂಗ್ಲಿಷ್ ಶಿಕ್ಷಕ ಪ್ರಖರ ಸಿಂಗ್ ಆರೋಪಿ ಎಂದು ಗುರುತಿಸಲಾಗಿದೆ.

ಇದನ್ನೂ ಓದಿ: ಸ್ಟೀಲ್ ಕಾರ್ಖಾನೆ ವಿಸ್ತರಣೆ ವಿರೋಧಿಸಿ ಹೋರಾಟ; ಫೆ. 24ರಂದು ಕೊಪ್ಪಳ ಬಂದ್‌!

ಬಾಲಕ ಕುಂಟುತ್ತ ಮನೆಗೆ ಮರಳಿದಾಗ ಆತನ ಶರೀರದ ಮೇಲೆ ಗಾಯಗಳನ್ನು ಕಂಡು ಕುಟುಂಬ ಸದಸ್ಯರು ಆಘಾತಗೊಂಡಿದ್ದರು. ವಿಚಾರಿಸಿದಾಗ ಶಿಕ್ಷಕ ತನಗೆ ಥಳಿಸಿದ್ದನ್ನು ಬಾಲಕ ತಿಳಿಸಿದ್ದ.

ಈ ಬಗ್ಗೆ ಪೋಲಿಸರಿಗೆ ದೂರನ್ನು ಸಲ್ಲಿಸಿರುವ ಬಾಲಕನ ತಂದೆ, ಸಿಂಗ್ ತನ್ನ ಮಗನಿಗೆ 150 ಸಲ ಛಡಿಯಿಂದ ಹೊಡೆದಿದ್ದು, ಈ ವಿಷಯವನ್ನು ಯಾರಿಗಾದರೂ ಹೇಳಿದರೆ ಮತ್ತೆ ಥಳಿಸುವುದಾಗಿ ಬೆದರಿಕೆಯೊಡ್ಡಿದ್ದ. ತನ್ನ ಮಗನ ಬಾಯಿ ಮುಚ್ಚಿಸಲು ಆತ ಬಿಸ್ಕಟ್‌ಗಳನ್ನೂ ನೀಡಿದ್ದ ಎಂದು ಆರೋಪಿಸಿದ್ದಾರೆ.

ಶಾಲೆಯ ಆಡಳಿತವು ಪ್ರಖರ್ ಸಿಂಗ್‌ನನ್ನು ಸೇವೆಯಿಂದ ವಜಾಗೊಳಿಸಿದೆ. ಪೋಲೀಸರು ಆರೋಪಿ ಶಿಕ್ಷಕನ ವಿರುದ್ಧ ಕಾನೂನು ಕ್ರಮವನ್ನು ಆರಂಭಿಸಿದ್ದು, ತನಿಖೆಯು ಪ್ರಗತಿಯಲ್ಲಿದೆ.

ಇದನ್ನೂ ನೋಡಿ: ಯುಡಿಆರ್‌ನಲ್ಲಿ ಹೂತ ಸತ್ಯಗಳು, ಎಫ್‌ಐಆರ್‌ನಲ್ಲಿ ಹೊರಬರಲಿವೆಯೇ? Janashakthi Media

Donate Janashakthi Media

Leave a Reply

Your email address will not be published. Required fields are marked *