ಶಿಕ್ಷಕರ ಅರ್ಹತಾ ಪರೀಕ್ಷೆ 2025 ಫಲಿತಾಂಶ ಬಿಡುಗಡೆ; 97,383 ಮಂದಿಗೆ ಅರ್ಹತೆ

ಬೆಂಗಳೂರು : ಶಿಕ್ಷಕರಾಗಬೇಕು ಎಂಬ ಆಸೆಯಿಂದ ಪರೀಕ್ಷೆ ಎದುರಿಸಿದ್ದ ಆಕಾಂಕ್ಷಿಗಳ ರಿಸಲ್ಟ್ ಹೊರಬಿದ್ದಿದೆ. ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ 2025ರ ಫಲಿತಾಂಶವನ್ನು ಡಿಸೆಂಬರ್‌ 24ರಂದು ಶಿಕ್ಷಣ ಇಲಾಖೆ ಅಧಿಕೃತವಾಗಿ ಬಿಡುಗಡೆ ಮಾಡಿದ್ದು, ಈ ಬಾರಿ ದಾಖಲೆ ಸಂಖ್ಯೆಯ ಅಭ್ಯರ್ಥಿಗಳು ಅರ್ಹತೆ ಪಡೆಯುವ ಮೂಲಕ ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ.

ಇದನ್ನೂ ಓದಿ: ವಾರ್ಡ್‌ಗಳ ಸಮಸ್ಯೆ ಬಗ್ಗೆ ದೂರು ನೀಡಲು ಕ್ಯೂಆರ್ ಕೋಡ್ ಸೌಲಭ್ಯ ಜಾರಿ: ದರ್ಶನ್ ಧ್ರುವನಾರಾಯಣ

ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಮಹೋನ್ನತ ಸಾಧನೆ ಮಾಡಿದ್ದಾರೆ. ಪತ್ರಿಕೆ-1 ಮತ್ತು ಪತ್ರಿಕೆ-2 ಸೇರಿ ಒಟ್ಟು 3,16,558 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಅವರಲ್ಲಿ 97,383 ಮಂದಿ ಶಿಕ್ಷಕರಾಗಲು ಅರ್ಹತೆ ಪಡೆದಿದ್ದಾರೆ.

ಇದು ರಾಜ್ಯದ TET ಇತಿಹಾಸದಲ್ಲೇ ಹೊಸ ದಾಖಲೆಯಾಗಿದ್ದು, ಕಳೆದ 2023ರಲ್ಲಿ 64,830 ಅಭ್ಯರ್ಥಿಗಳು ಅರ್ಹತೆ ಪಡೆದಿದ್ದೇ ಇಲ್ಲಿಯವರೆಗಿನ ದೊಡ್ಡ ಸಾಧನೆಯಾಗಿತ್ತು.

ಇದನ್ನೂ ನೋಡಿ: ಹಾವೇರಿ | ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಹಾಸ್ಟೆಲ್‌ ವಿದ್ಯಾರ್ಥಿನಿಯರು ಅಸ್ವಸ್ಥ Janashakthi Media

Donate Janashakthi Media

Leave a Reply

Your email address will not be published. Required fields are marked *