ಬಹುಭಾಷಾ ಕವಿಗೋಷ್ಠಿ ಕುರಿತ ಸುದ್ದಿಯು ತಪ್ಪು ಶೀರ್ಷಿಕೆಯಡಿ ಪ್ರಕಟ; ಬರಗೂರು ರಾಮಚಂದ್ರಪ್ಪ ಸ್ಪಷ್ಟನೆ

ಬೆಂಗಳೂರು: ಸೆಂಟರ್‌ ಆಫ್‌ ಇಂಡಿಯನ್‌ ಟ್ರೇಡ್‌ ಯೂನಿಯನ್ಸ್‌ (ಸಿಐಟಿಯು) ವತಿಯಿಂದ ಡಿಸೆಂಬರ್‌ 24ರಂದು ಹಮ್ಮಿಕೊಂಡಿದ್ದ ಬಹುಭಾಷಾ ಕವಿಗೋಷ್ಠಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಚಲನಚಿತ್ರ ನಿರ್ದೇಶಕ ಹಾಗೂ ಸಾಹಿತಿ ಬರಗೂರು ರಾಮಚಂದ್ರಪ್ಪ ತಮ್ಮ ವಿಚಾರಗಳನ್ನು ಮಂಡಿಸಿದರು.

ಇದನ್ನು ಓದಿ: ಕವಿಗಳು, ಸಾಹಿತಿಗಳು ಕಾಲದ ದನಿಯಾಗುವುದು ಅತಿಮುಖ್ಯ: ಬರಗೂರು ರಾಮಚಂದ್ರಪ್ಪ

ಈ ಕಾರ್ಯಕ್ರಮದ ಕುರಿತು ಇಂದು ಪ್ರಜಾವಾಣಿ ದಿನಪತ್ರಿಕೆಯಲ್ಲಿ ಸುದ್ದಿಯೊಂದು ಪ್ರಕಟವಾಗಿದ್ದು, ಸುದ್ದಿಗೆ ನೀಡಲಾದ ಶೀರ್ಷಿಕೆ ಸಂಪೂರ್ಣ ತಪ್ಪಾಗಿದೆ ಎಂದು ಬರಗೂರು ರಾಮಚಂದ್ರಪ್ಪ ಅವರು ಪತ್ರ ಮುಖೇನ ತಮ್ಮ ಸ್ಪಷ್ಟನೆಯನ್ನು ನೀಡಿದ್ದಾರೆ. ಅದರ ಪೂರ್ಣ ವಿವರ ಕೆಳಗಿನಂತಿವೆ;

ಸತ್ಯ ಮತ್ತು ಸುಳ್ಳು : ಸ್ಪಷ್ಟನೆ

24.12.2022ರಂದು ನಾನು ಬಹುಭಾಷಾ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾಡಿದ ಭಾಷಣದ ವರದಿಗೆ ಸಂಪೂರ್ಣ ತಪ್ಪು ಶೀರ್ಷಿಕೆ ಕೊಡಲಾಗಿದೆ. ʻಸತ್ಯದ ಜಾಗದಲ್ಲಿ ಸುಳ್ಳನ್ನು ಇರಿಸುವ ಕೆಲಸ ಆಗಲಿʼʼ ಎಂಬ ಶೀರ್ಷಿಕೆಯು ನಾನು ಹೇಳಿದ್ದಕ್ಕೆ ಸಂಪೂರ್ಣ ತದ್ವಿರುದ್ಧವಾಗಿದೆ. ನಾನು ಹೇಳಿದ್ದು ಹೀಗೆ; ʻʻಇಂದು ಸುಳ್ಳುಗಳನ್ನೇ ಸತ್ಯವೆಂದು ಬಿಂಬಿಸುವ ಕಾಲದಲ್ಲಿ ನಾವಿದ್ದೇವೆ. ಸಾಹಿತಿಗಳಾದ ನಮಗೆ ಸತ್ಯವನ್ನು ತಿಳಿಸುವ ಹೊಣೆಗಾರಿಕೆಯಿದೆ. ಖ್ಯಾತ ಭಾಷಾ ವಿಜ್ಞಾನಿ, ಚಿಂತಕ ನೋಮ್‌ ಚಾಮ್‌ಸ್ಕಿ ಹೇಳಿದಂತೆ ನಾವು ಜನರಿಗೆ ಸತ್ಯವನ್ನು ತಿಳಿಸುವ ಮರ‍್ಯಾದಸ್ಥ ಮನುಷ್ಯರಾಗಬೇಕು.ʼʼ

ಇದನ್ನು ಓದಿ: ಸಿಐಟಿಯು ಅಖಿಲ ಭಾರತ ಸಮ್ಮೇಳನ ಅಂಗವಾಗಿ ಕಲಾ ಜಾಥಾ, ಬಹುಭಾಷಾ ಕವಿಗೋಷ್ಟಿ, ಚಿತ್ರಕಲೆ ರಚನೆ-ಕಿರುಚಿತ್ರ ಸ್ಪರ್ಧೆ

ನಾನು ಹೇಳಿದ ಮಾತುಗಳಲ್ಲಿ ಸತ್ಯ ಮತ್ತು ಸುಳ್ಳು ಪದಗಳನ್ನು ಅದಲು ಬದಲು ಮಾಡಿ ಶೀರ್ಷಿಕೆ ಕೊಡಲಾಗಿದೆ. ಓದುಗರು ತಿದ್ದಿ ಓದಿಕೊಳ್ಳಲು ಈ ಸ್ಪಷ್ಟನೆ ನೀಡುತ್ತಿದ್ದೇನೆ ಎಂದು ಬರೂಗೂ ರಾಮಚಂದ್ರಪ್ಪ ಅವತು ತಿಳಿಸಿದ್ದಾರೆ.

ಸಿಐಟಿಯು ಸಂಘಟನೆಯ ಅಖಿಲ ಭಾರತ ಸಮ್ಮೇಳನ 2023ರ ಜನವರಿ 18 ರಿಂದ 22ರವರೆಗೆ ಬೆಂಗಳೂರಿನಲ್ಲಿ ಜರುಗುತ್ತಿದ್ದು, ಅದರ ಪೂರ್ವಭಾವಿಯಾಗಿ ಬಹುಭಾಷಾ ಕವಿಗೋಷ್ಠಿಯನ್ನು ಬಸವನಗುಡಿ ನ್ಯಾಷನಲ್‌ ಕಾಲೇಜು ಹೆಚ್‌ ಎನ್‌ ಮಲ್ಟಿ ಮೀಡಿಯಾ ಸಭಾಂಗಣದಲ್ಲಿ ನಡೆಯಿತು. ಬಹುಭಾಷಾ ಕವಿಗೋಷ್ಠಿಯಲ್ಲಿ ಕವಿಗಳು ತಮ್ಮ ಕವಿತೆಗಳನ್ನು ವಾಚನ ಮಾಡಿದರು.

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

Donate Janashakthi Media

Leave a Reply

Your email address will not be published. Required fields are marked *